For Quick Alerts
ALLOW NOTIFICATIONS  
For Daily Alerts

ಒಣಕೂದಲನ್ನು ಚಳಿಗಾಲದಲ್ಲಿ ಹೀಗೆ ನೋಡಿಕೊಳ್ಳಿ

By Deepak M
|

ಒಣ ಕೂದಲಿಗೆ ಚಳಿಗಾಲದಲ್ಲಿ ಆರೈಕೆ ಮಾಡಲು ಸಲಹೆಗಳು.

ಚಳಿಗಾಲ ಬಂತು, ಸುಸ್ವಾಗತ ಹೇಳಿ ಚಳಿಗಾಲಕ್ಕೆ ಗಡ ಗಡ ಎಂದು ನಡುಗುತ್ತ!!. ಚಳಿಗಾಲವು ಮೂರು ಕಾಲಗಳಲ್ಲಿಯೇ ಅತ್ಯಂತ ಆಹ್ಲಾದಕರವಾದ ಕಾಲ. ಈ ಕಾಲದಲ್ಲಿ ನಾವು ಬೆವರುವಂತಿಲ್ಲ, ನೆನೆದು ಮುದ್ದೆಯಾಗುವಂತಿಲ್ಲ ಆದರು ಸಮಸ್ಯೆಗಳು ನಮ್ಮ ಬೆನ್ನನ್ನು ಹತ್ತದೆ ಬಿಡುವುದಿಲ್ಲ. ಚರ್ಮ ಒಡೆಯುವುದು, ಕೂದಲು ಒಣಗಿ ಹೋಗುವುದು ಮುಂತಾದ ಸಮಸ್ಯೆಗಳು ನಮ್ಮನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ಕೆಲವರಂತು ಚಳಿಗಾಲವೆಂದರೆ ಸಾಕು ದಿಗಿಲು ಪಡುತ್ತಾರೆ. . ಚಳಿಗಾಲದ ಚುಮು ಚುಮು ಚಳಿಯನ್ನು ಪ್ರೀತಿಯಿಂದ ಒಪ್ಪಿಕೊಳ್ಳುವ ನೀವು, ಈ ಕಾಲದಲ್ಲಿ ಉಂಟಾಗುವ ಕೂದಲಿನ ಸಮಸ್ಯೆಗಳಿಗೆ ಚಳಿಯನ್ನು ಧೂಷಿಸದೆ ಬಿಡುವುದಿಲ್ಲ.

ಡಿಸೆಂಬರ್ ಬಂತು, ಇನ್ನೇಕೆ ತಡ ತುಂಬಾ ದಿನಗಳಿಂದ ಬಳಸದೆ ಈ ಚಳಿಗಾಲಕ್ಕೆ ತೆಗೆದಿಟ್ಟಿರುವ ವುಲ್ಲನ್ ಸ್ವೆಟರ್ ಹೊರತೆಗೆಯಿರಿ, ಕೈಗೆ ಗವಸು, ಕಾಲಿಗೆ ಸಾಕ್ಸ್, ಕುತ್ತಿಗೆಯನ್ನು ಮುಚ್ಚುವ ಮಫ್ಲರ್ ಸುತ್ತಿ. ಇಷ್ಟು ಮಾಡಿದರು ನಿಮ್ಮ ಕೂದಲು ಒಣಗುವುದನ್ನು ನಿಮಗೆ ತಡೆಯಲು ಆಗುವುದಿಲ್ಲ. ಏಕೆಂದರೆ ಚಳಿಗಲದಲ್ಲಿ ಉಷ್ಣಾಂಶವು ಏರು ಪೇರಾಗುತ್ತಿರುತ್ತದೆ. ಋತುಗಳು ಯಾವುದೇ ಆಗಿರಲಿ ಅವುಗಳು ನಿಮ್ಮ ತ್ವಚೆ ಮತ್ತು ಕೂದಲಿನ ಮೇಲೆ ತಮ್ಮದೇ ಆದ ಪ್ರಭಾವವನ್ನು ಬೀರುವುದರಲ್ಲಿ ಹಿಂದೇಟು ಹಾಕುವುದಿಲ್ಲ. ಚಳಿಗಾಲದ ಅವಧಿಯಲ್ಲಿ ಕೂದಲಿಗೆ ಅವಶ್ಯಕವಾಗಿರುವ ಮೊಯಿಶ್ಚರೈಸ್ ದೊರೆಯುವುದಿಲ್ಲ. ಹಾಗಾಗಿ ಕೂದಲು ಮತ್ತು ಕೂದಲಿನ ಬುಡಗಳು ಸಮಸ್ಯೆಗಳಿಂದ ಬಳಲುತ್ತವೆ. ಇಂತಹ ಸಮಸ್ಯೆಗಳಿಂದ ವಿಮುಕ್ತಿಯನ್ನು ಹೊಂದಲು ನಾವು ನಿಮಗಾಗಿ ಕೆಲವೊಂದು ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದೇವೆ. ಓದಿ ತಿಳಿದುಕೊಳ್ಳಿ, ನಿಮ್ಮ ಕೂದಲ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.

1. ಎಣ್ಣೆಗಳ ವಿಚಾರದಲ್ಲಿ ಜಾಗರೂಕರಾಗಿರಿ.

1. ಎಣ್ಣೆಗಳ ವಿಚಾರದಲ್ಲಿ ಜಾಗರೂಕರಾಗಿರಿ.

ನಿಮ್ಮ ಒಣಕೂದಲಿಗೆ ಅತ್ಯಗತ್ಯವಾದ ಎಣ್ಣೆಯನ್ನು ಖರೀದಿಸಿಕೊಳ್ಳಿ. ಚಳಿಗಾಲದ ಸಮಯದಲ್ಲಿ ನಿಮಗೇನಾದರು ಒಣಕೂದಲಿನ ಸಮಸ್ಯೆ ಉದ್ಭವಿಸಿದರೆ, ತೆಂಗಿನ ಕಾಯಿ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ರಾತ್ರಿ ಕೂದಲಿಗೆ ಹಚ್ಚಿ. ಇದರಿಂದ ನಿಮ್ಮ ಕೂದಲಿಗೆ ಅಗತ್ಯವಾದ ಮೊಯಿಶ್ಚರೈಸರ್ ದೊರೆಯುತ್ತದೆ.

2. ಟ್ರಿಮ್ ಮಾಡಿ

2. ಟ್ರಿಮ್ ಮಾಡಿ

ಚಳಿಗಾಲದಲ್ಲಿ ಚರ್ಮ ಒಡೆಯುವುದಲ್ಲದೆ, ಕೂದಲು ಸಹ ಒಡೆಯುತ್ತದೆ. ಅದಕ್ಕಾಗಿ ಇರುವ ಉತ್ತಮ ಪರಿಹಾರವೆಂದರೆ ಕೂದಲನ್ನು ಟ್ರಿಮ್ ಮಾಡುವುದು. ಇದರಿಂದಾಗಿ ನಿಮ್ಮ ಕೂದಲು ನೋಡಲು ಆಕರ್ಷಕವಾಗುವುದಷ್ಟೇ ಅಲ್ಲದೆ ಆರೋಗ್ಯಕರವು ಆಗುತ್ತದೆ. ಇದರ ಇನ್ನೊಂದು ಉಪಯೋಗವೆಂದರೆ, ಇನ್ನು ಮುಂದೆ ಕೂದಲು ಒಡೆಯುವುದು ತಪ್ಪುತ್ತದೆ.

3. ಬೇಡವೇ ಬೇಡ.

3. ಬೇಡವೇ ಬೇಡ.

ಕೂದಲಿಗೆ ಬಣ್ಣ, ಐರನಿಂಗ್, ಸ್ಟ್ರೀಕಿಂಗ್ ಇತ್ಯಾದಿ ಬೇಡವೇ ಬೇಡ. ಇದು ಸಹ ಚಳಿಗಾಲದಲ್ಲಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಇದೆಲ್ಲವು ನಿಮ್ಮ ಕೂದಲಿಗೆ ಮಾರಕ ಎಂಬುದನ್ನು ಮರೆಯಬೇಡಿ. ಅದಕ್ಕಾಗಿ ಈ ಚಳಿಗಾಲದಲ್ಲಿ ಇವು ಯಾವುದು ನಿಮ್ಮ ಕೂದಲಿನ ಅಕ್ಕ ಪಕ್ಕಕ್ಕು ಸಹ ಸುಳಿಯಬಾರದು ಎಚ್ಚರ!.

4. ನಿಮ್ಮ ಕಿರೀಟವನ್ನು ಧರಿಸಿ

4. ನಿಮ್ಮ ಕಿರೀಟವನ್ನು ಧರಿಸಿ

ಚಳಿಗಾಲದಲ್ಲಿ ನಿಮ್ಮ ತಲೆಯನ್ನು ಮುಚ್ಚಿಕೊಳ್ಳುವುದು ಅತ್ಯಗತ್ಯ. ಸ್ಕಾರ್ವ್ಸ್ ಅಥವಾ ವುಲನ್ ಟೋಪಿಯನ್ನು ಧರಿಸಿ. ನಿಮ್ಮ ತಲೆಗೆ ಸ್ಕಾರ್ಫ್ ಧರಿಸುವಾಗ ಎಚ್ಚರವಹಿಸಿ, ಯಾವುದೇ ಕಾರಣಕ್ಕು ನಿಮ್ಮ ತಲೆಗೆ ರಕ್ತ ಸಂಚಾರ ನಿರ್ಬಂಧಿಸುವಂತಹ ಟೋಪಿ ಅಥವಾ ಸ್ಕಾರ್ಫ್ ಗಳು ಬೇಡ. ಇದು ಸಹ ನಿಮ್ಮ ಕೂದಲ ಆರೋಗ್ಯವನ್ನು ಕಾಪಾಡುತ್ತದೆ ಎಂದು ತಿಳಿದಿರಲಿ.

5.ಶಾಂಪೂವನ್ನು ಬಳಸಬೇಡಿ

5.ಶಾಂಪೂವನ್ನು ಬಳಸಬೇಡಿ

ಒಂದು ವೇಳೆ ನಿಮಗೆ ಪ್ರತಿದಿನವು ಶಾಂಪೂವನ್ನು ಹಾಕಿಕೊಳ್ಳುವ ಅಭ್ಯಾಸವಿದ್ದರೆ, ಚಳಿಗಾಲದಲ್ಲಿ ಶಾಂಪೂವನ್ನು ಬಳಸುವುದನ್ನು ತಡೆಯುವುದು ಉತ್ತಮ. ಪ್ರತಿದಿನವು ಶಾಂಪೂವನ್ನು ಹಾಕುವುದರಿಂದ ನಿಮ್ಮ ಕೇಶವು ಒಣಗುವುದು ಸಾಮಾನ್ಯವಾಗುತ್ತದೆ. ಹಾಗಾಗಿ ಈ ಚಳಿಗಾಲದಲ್ಲಿ ಆದಷ್ಟು ಕಡಿಮೆ ಶಾಂಪೂವನ್ನು ಬಳಸುವುದು ಉತ್ತಮ.

6. ಅತ್ಯುತ್ತಮ ಕೇಶಕ್ಕಾಗಿ ಕಂಡೀಶನಿಂಗ್ ಮಾಡಿ

6. ಅತ್ಯುತ್ತಮ ಕೇಶಕ್ಕಾಗಿ ಕಂಡೀಶನಿಂಗ್ ಮಾಡಿ

ಚಳಿಗಾಲದಲ್ಲಿ ಕೇಶದ ಆರೋಗ್ಯವನ್ನು ಉಳಿಸಿಕೊಳ್ಳಲು ಇರುವ ಅತ್ಯುತ್ತಮ ಮಾರ್ಗ ಕಂಡೀಶನ್ ಮಾಡುವುದು. ಇದು ಚಳಿಗಾಲದಲ್ಲಿ ಕೂದಲಿಗೆ ಅತ್ಯುತ್ತಮ ರಕ್ಷಾ ಕವಚದಂತೆ ಕಾರ್ಯ ನಿರ್ವಹಿಸುತ್ತದೆ. ಅದಕ್ಕಾಗಿ ಪ್ರತಿ ಬಾರಿ ನೀವು ಕೂದಲನ್ನು ತೊಳೆದಾಗಲು ಕಂಡೀಶನ್ ಮಾಡುವುದನ್ನು ಮರೆಯಬೇಡಿ. ಅದರಲ್ಲು ನೀವು ಸ್ವಾಭಾವಿಕವಾಗಿ ಕಂಡೀಶನ್ ಮಾಡಬೇಕೆಂದಾದಲ್ಲಿ, ತೆಂಗಿನ ಹಾಲು ಅತ್ಯುತ್ತಮ ಕಂಡೀಶನರ್ ಆಗಿರುತ್ತದೆ.

7. ಒದ್ದೆ ಕೂದಲನ್ನು ಕಟ್ಟಬೇಡಿ.

7. ಒದ್ದೆ ಕೂದಲನ್ನು ಕಟ್ಟಬೇಡಿ.

ಚಳಿಗಾಲದಲ್ಲಿ ತಲೆಗೆ ಸ್ನಾನ ಮಾಡಿಸಿ, ಅದನ್ನು ಒಣಗಿಸುವುದು ತಲೆನೋವಿನ ವಿಷಯವೇ ಸರಿ. ಅದರಲ್ಲು ಕೂದಲನ್ನು ಬಾಚಿ ಜಡೆ ಹಾಕುವ ಮುನ್ನ ಒಮ್ಮೆ ಯೋಚಿಸಿ. ಈ ಚಳಿಗಾಲದಲ್ಲಿ ಒದ್ದೆ ಕೂದಲನ್ನು ಕಟ್ಟಿ ಜಡೆ ಹಾಕುವುದಕ್ಕಿಂತ, ಹಾಗೆಯೇ ಒಣಗಲು ಬಿಡುವುದು ಉತ್ತಮ.

8. ನಿಮ್ಮ ಕೂದಲಿನ ಹೊಳಪನ್ನು ಹಿಂಪಡೆಯುವುದು

8. ನಿಮ್ಮ ಕೂದಲಿನ ಹೊಳಪನ್ನು ಹಿಂಪಡೆಯುವುದು

ಚಳಿಗಾಲದಲ್ಲಿ ನಿಮ್ಮ ಕೂದಲಿನ ಹೊಳಪು ಮತ್ತು ಗಾಳಿಯಲ್ಲಿ ಹಾರಾಡುವ ಗುಣವನ್ನು ಕಳೆದುಕೊಳ್ಳುತ್ತದೆ. ಅದಕ್ಕಾಗಿ ಈ ಕಾಲದಲ್ಲಿ ನಿಮ್ಮ ಕೂದಲಿನ ಬುಡಕ್ಕೆ ಸ್ವಲ್ಪ ಜೇನು ತುಪ್ಪವನ್ನು ಹಚ್ಚಿ, ಸ್ವಲ್ಪ ಹೊತ್ತು ಬಿಡಿ. ಈ ಸಮಸ್ಯೆ ಪರಿಹಾರವಾಗುತ್ತದೆ.

9. ತಲೆ ಹೊಟ್ಟಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ

9. ತಲೆ ಹೊಟ್ಟಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ

ಚಳಿಗಾಲದಲ್ಲಿ ನಿಮ್ಮ ಕೂದಲಿಗೆ ತಲೆ ಹೊಟ್ಟಿನ ಸಮಸ್ಯೆಯು ಕಾಡಬಹುದು. ಇದೇನಾದರು ಹೆಚ್ಚಾಗಿ ನಿಮಗೆ ಕಾಟ ಕೊಡಲು ಶುರು ಮಾಡಿದರೆ, ನಿಂಬೆ ರಸ ಮತ್ತು ಅಗತ್ಯವಾದ ಎಣ್ಣೆಯನ್ನು ಹಾಕಿ, ಸಮಸ್ಯೆ ಪರಿಹಾರವಾಗುತ್ತದೆ. ಈ ಚಳಿಗಾಲದಲ್ಲಿ ನಿಮ್ಮ ಕೂದಲನ್ನು ಡೆಂಡ್ರಫ್‍ನಿಂದ ಆದಷ್ಟು ದೂರವಿಡಿ.

10. ಗುಂಗುರು ಗುಂಗುರು

10. ಗುಂಗುರು ಗುಂಗುರು

ಚಳಿಗಾಲದ ಚಳಿಯನ್ನು ನೀವು ಎಷ್ಟೇ ಆಸ್ವಾದಿಸಿದರು ವಾತಾವರಣವು ನಿಮ್ಮ ಕೂದಲನ್ನು ಗುಂಗುರು ಮಾಡಿ ಬಿಡುತ್ತದೆ. ಇದಕ್ಕೆ ಕಾರಣ ನಿಮ್ಮ ಕೂದಲು ಒಣ ಕೂದಲಾಗಿ ಪರಿವರ್ತನೆಯಾದುದೇ ಆಗಿದೆ. ಈ ಗುಂಗುರುತನವನ್ನು ಹೋಗಲಾಡಿಸಿಕೊಳ್ಳಲು ಒಂದು ಒಳ್ಳೆಯ ಬ್ರಷ್ ಅನ್ನು ಬಳಸಿ.

ಈ ಮೇಲಿನ ಸಲಹೆಗಳನ್ನು ಪಾಲಿಸಿ ನಿಮ್ಮ ಕೂದಲ ಆರೋಗ್ಯವನ್ನು ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಿ.

English summary

Hair care tips for dry hair in winter

It is that time of the year again, welcome winter!! Winter is a time which is pleasant and also a time of problems. It is that time of the year in which your skin becomes dry, hair becomes dry and hence care becomes imperative.
Story first published: Tuesday, December 10, 2013, 10:47 [IST]
X
Desktop Bottom Promotion