For Quick Alerts
ALLOW NOTIFICATIONS  
For Daily Alerts

ಒರಟು ಕೂದಲನ್ನು ಮೃದುವಾಗಿಸಬೇಕೆ?

|
Tips To Get Soft Hair
ಕೂದಲು ಗುಂಗುರು ಇರಲಿ, ನೇರವಾಗಿ ಇರಲು ಮೃದುವಾಗಿ, ಹೊಳಪಿನಿಂದ ಕೂಡಿದ್ದರೆ ಮಾತ್ರ ಆಕರ್ಷಕವಾಗಿ ಕಾಣುವುದು. ಆದರೆ ಕೂದಲು ನಾರಿನ ರೀತಿ ಒರಟಾಗಿ ಇದ್ದರೆ ಅಂತಹ ಕೂದಲನ್ನು ಬಾಚಲು ತುಂಬಾ ಕಷ್ಟ ಮತ್ತು ಬೇಗನೆ ಸಿಕ್ಕಾಗುವುದು. ಅಲ್ಲದ ಇಂತಹ ಕೂದಲು ಬೇಗನೆ ಬೆಳೆಯುವುದಿಲ್ಲ ಕೂಡ.

ಕೂದಲು ಒರಟಾಗಿದ್ದರೆ ನೈಸರ್ಗಿವಾಗಿ ಸಿಗುವ ಕೆಲವು ವಸ್ತುಗಳನ್ನು ಹಚ್ಚಿದರೆ ಸಾಕು ಕೂದಲು ಮೃದುವಾಗುವುದು ಮತ್ತು ಹೊಳಪನ್ನು ಪಡೆಯುತ್ತದೆ. ಕೂದಲಿನ ಅಂದ ಹೆಚ್ಚಿಸುವ ಆ ನೈಸರ್ಗಿಕ ವಸ್ತುಗಳು ಯಾವುವು ಎಂದು ತಿಳಿಯಲು ಮುಂದೆ ನೋಡಿ.

1. ಲೋಳೆಸರ: ಲೋಳೆಸರ ಕೂದಲಿಗೆ ತುಂಬಾ ಒಳ್ಳೆಯದು. ಇದನ್ನು ತಲೆಗೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ಸ್ನಾನ ಮಾಡಬೇಕು ಅಥವಾ ಶ್ಯಾಂಪೂ ಜೊತೆ ಸ್ವಲ್ಪ ಲೋಳೆಸರ ಸೇರಿಸಿ ತಲೆ ತೊಳೆಯಬೇಕು. ಈ ರೀತಿ ಮಾಡುತ್ತಾ ಬಂದರೆ ಕೂದಲು ಹೊಳಪನ್ನು ಪಡೆಯುತ್ತದೆ.

2. ಸೇಬಿನ ರಸ: ಒಂದು ಸೇಬನ್ನು ಸ್ವಲ್ಪ ಗಟ್ಟಿಯಾಗಿ ನುಣ್ಣನೆ ಮಿಕ್ಸಿಯಲ್ಲಿ ಆಡಿಸಬೇಕು. ನಂತರ ಆ ರಸವನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಬೇಕು. ಈ ರೀತಿ ವಾರದಲ್ಲಿ 2-3 ಬಾರಿ ಮಾಡಬೇಕು. ಈ ರೀತಿ ಕೂದಲಿನ ಆರೈಕೆ ಮಾಡುತ್ತಾ ಬಂದರೆ ಕೂದಲು ಮೃದುವಾಗುವುದು ಮತ್ತು ಹೊಳಪನ್ನು ಪಡೆಯುತ್ತದೆ.

3. ಎಣ್ಣೆ, ನಿಂಬೆರಸ, ಮೊಸರು: ಸಾಸಿವೆ ಎಣ್ಣೆಗೆ ಸ್ವಲ್ಪ ನಿಂಬೆರಸ ಮತ್ತು ಸ್ವಲ್ಪ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಈ ಮಿಶ್ರಣವನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಮೃದುವಾದ ಸೋಪು ಹಾಕಿ ತಲೆ ತೊಳೆಯಬೇಕು. ಈ ರೀತಿ ಮಾಡಿದರೆ ಕೂದಲು ಮೃದುವಾಗುವುದರ ಜೊತೆ ಬೇಗನೆ ಉದ್ದ ಬೆಳೆಯುತ್ತದೆ.

4. ಎಣ್ಣೆ ಮತ್ತು ಮೊಟ್ಟೆ: ಒಂದು ಅಥವಾ ಎರಡು ಮೊಟ್ಟೆಯ ಬಿಳಿ ಹಾಕಿ ಅದಕ್ಕೆ 2 ಚಮಚ ಆಲೀವ್ ಎಣ್ಣೆ ಹಾಕಿ ಮಿಶ್ರಣ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆಸ್ನಾನ ಮಾಡಬೇಕು. ನಂತರ ಮೃದುವಾದ ಶ್ಯಾಂಪೂ ಹಚ್ಚಿ ತಲೆ ತೊಳೆಯಬೇಕು. ಈ ರೀತಿ ಮಾಡಿದರೆ ಕೂದಲಿಗೆ ಅಗತ್ಯದ ಪ್ರೊಟೀನ್ ದೊರೆಯುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯುವುದು.

5. ಬಾದಾಮಿ ಎಣ್ಣೆ: ಬಾದಾಮಿ ಎಣ್ಣೆಯಿಂದ ಪ್ರತಿನಿತ್ಯ ಮಸಾಜ್ ಮಾಡಿದರೆ ಕೂದಲು ತನ್ನ ಒರಟುತನವನ್ನು ಕಳೆದುಕೊಳ್ಳುತ್ತದೆ.

ಈ ವಿಧಾನಗಳಲ್ಲಿ ಯಾವುದಾದರೂ ಒಂದು ವಿಧಾನವನ್ನು ಪಾಲಿಸುತ್ತಾ ಬಂದರೆ ಸಾಕು ಕೂದಲು ಆಕರ್ಷಕವಾಗಿ ಕಾಣುವುದು.

English summary

Tips To Get Soft Hair | Tips For Hair Care | ಮೃದುವಾದ ಕೂದಲನ್ನು ಪಡೆಯಲು ಕೆಲ ಸಲಹೆಗಳು | ಕೂದಲಿನ ಆರೈಕೆಗೆ ಕೆಲ ಸಲಹೆಗಳು

We use lots of chemical shampoo to get silky hair, but chemical is not healthy for hair. You can make your healthy hair silky at home if you follow these easy beauty tips.
X
Desktop Bottom Promotion