For Quick Alerts
ALLOW NOTIFICATIONS  
For Daily Alerts

ಕೊರೊನಾ ಸಮಯದಲ್ಲಿ ಟ್ಯಾಟೂ: ಬೇಕೆ? ಬೇಡವೇ?

|

ನಮ್ಮಲ್ಲಿ ಹಚ್ಚೆ ಹಾಕಿಸಿಕೊಳ್ಳುವ ಪದ್ಧತಿ ಬಹಳ ಹಿಂದಿನಿಂದ ಜಾರಿಯಲ್ಲಿದೆ. ಹೆಚ್ಚಾಗಿ ಹಳ್ಳಿಗಾಡಿನ ಪ್ರದೇಶಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುವ ಪದ್ಧತಿ ಸದಾ ಜೀವಂತವಾಗಿರುತ್ತದೆ ಎಂಬ ಮಾತಿದೆ. ಆಧುನಿಕ ಕಾಲದ ನಗರ ಪ್ರದೇಶದ ಜನರ ಅಭಿಪ್ರಾಯದಲ್ಲಿ ಇದು ಟ್ಯಾಟೂ ಎಂಬ ಪದವಾಗಿ ಬದಲಾಗಿದೆ. ಹಚ್ಚೆ ಹಾಕಿಸಿಕೊಳ್ಳುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳು ಉಂಟಾಗುತ್ತವೆ ಎಂದು ಹಿರಿಯರು ಆಗಾಗ ಹೇಳುತ್ತಿರುತ್ತಾರೆ.

Is It Safe to Get a Tattoo Amid COVID-19 Pandemic? Know Risks and Safety Measures

ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ ಬೇರೆ ದೇಶದಲ್ಲೂ ಈಗಿನ ಜನರ ಜೀವನ ಶೈಲಿಗೆ ತಕ್ಕಂತೆ ವಿವಿಧ ಬಗೆಯ ವಿನ್ಯಾಸಗಳನ್ನು ಒಳಗೊಂಡ ಟ್ಯಾಟೂಗಳು ಜನರ ಮೈ ಮೇಲೆ ಪ್ರದರ್ಶನಗೊಳ್ಳುತ್ತವೆ. ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಟ್ಯಾಟೂ ಹಾಕಿಸಿಕೊಳ್ಳುವ ಇಂಗಿತ ಕೆಲವರು ವ್ಯಕ್ತಪಡಿಸುತ್ತಾರೆ.

ಕೊರೊನ ಎಂಬ ಮಹಾಮಾರಿ ಬಂದಾಗಿನಿಂದ ಪ್ರಪಂಚದಾದ್ಯಂತ ಸಾಕಷ್ಟು ಉದ್ಯಮಗಳು ವ್ಯವಹಾರವಿಲ್ಲದೆ ನೆಲ ಕಚ್ಚಿವೆ. ಅದರಲ್ಲಿ ಟ್ಯಾಟೂ ಉದ್ಯಮ ಕೂಡ ಒಂದು. ಇಡೀ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಈ ಉದ್ಯಮವನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಜನರಿಗೆ ಇವರ ಬಳಿ ಈಗ ಹೋಗಲು ತುಂಬಾ ಭಯವಾಗುತ್ತಿದೆ. ಇದಕ್ಕೂ ಕೂಡ ಕೊರೋನಾನೆ ಕಾರಣ.

ಏಕೆಂದರೆ ಟ್ಯಾಟೂ ಹಾಕಿಸಿಕೊಳ್ಳುವ ಸಂದರ್ಭದಲ್ಲಿ ಅವರು ಚುಚ್ಚುವ ಸೂಜಿ ನೇರವಾಗಿ ಚರ್ಮದ ಒಳ ಹೊಕ್ಕು ಒಳಗಿನ ರಕ್ತದ ಹರಿವಿನ ಜೊತೆಗೆ ಸಂಪರ್ಕ ಸಾಧಿಸುತ್ತದೆ. ಅಪ್ಪಿ ತಪ್ಪಿ ಈ ಸಮಯದಲ್ಲಿ ಸೂಜಿಗಳು ಸ್ಯಾನಿಟೈಸ್ ಆಗಿರದೆ ಇದ್ದರೆ ಮತ್ತು ಒಂದು ವೇಳೆ ಸೂಜಿಗಳ ಮೇಲೆ ಕೊರೊನಾ ಸೋಂಕುಕಾರಕ ಸೂಕ್ಷ್ಮಾಣುಗಳು ಇದ್ದರೆ ನೇರವಾಗಿ ದೇಹ ಪ್ರವೇಶ ಮಾಡಿ ಒಬ್ಬ ಆರೋಗ್ಯವಂತ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ಮಲಗುವಂತೆ ಮಾಡುತ್ತವೆ. ಹಾಗಾಗಿ ಇಂದು ನಮ್ಮ ಆರೋಗ್ಯದ ಜವಾಬ್ದಾರಿ ನಮ್ಮದು.

ಈಗಲೂ ಕೂಡ ನಗರ ಪ್ರದೇಶಗಳಲ್ಲಿ ಟ್ಯಾಟೂ ಉದ್ಯಮಗಳು ಮೊದಲಿನಷ್ಟು ಇಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಮತ್ತೊಮ್ಮೆ ತಮ್ಮ ಕಾರ್ಯ ನಿರ್ವಹಣೆಯಲ್ಲಿ ತೊಡಗಿಕೊಂಡಿವೆ. ಜನರಿಗೆ ಲಾಕ್ಡೌನ್ ಸಮಯದಲ್ಲಿ ಟ್ಯಾಟೂ ಹಾಕಿಸಿಕೊಳ್ಳುವ ತವಕವಿದ್ದರೂ ಸಾಧ್ಯವಾಗದೆ ಸುಮ್ಮನೆ ಮನೆಯಲ್ಲಿರಬೇಕಾಗಿತ್ತು. ಆದರೆ ಈಗ ಅದಕ್ಕೆ ಅವಕಾಶಗಳು ಲಭ್ಯವಾಗುತ್ತಿವೆ. ಹಾಗೆಂದು ಆತುರ ಪಡುವುದು ಬೇಡ. ಟ್ಯಾಟೂ ಹಾಕಿಸಿಕೊಳ್ಳಲು ತೆರಳುವ ಮುಂಚೆ ಕೆಲವು ಸಂಗತಿಗಳ ಕಡೆಗೆ ನೀವು ಗಮನ ಹರಿಸಬೇಕಾಗುತ್ತದೆ.

ಟ್ಯಾಟೂ ಹಾಕಿಸಿಕೊಳ್ಳುವ ಮುಂಚೆ ಸುರಕ್ಷತೆಯ ದೃಷ್ಟಿಯಿಂದ ನೀವು ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕಾ ಕ್ರಮಗಳು

ಟ್ಯಾಟೂ ಹಾಕಿಸಿಕೊಳ್ಳುವ ಮುಂಚೆ ಸುರಕ್ಷತೆಯ ದೃಷ್ಟಿಯಿಂದ ನೀವು ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕಾ ಕ್ರಮಗಳು

ನಿಮ್ಮ ಮನೆಯ ಹತ್ತಿರವಿರುವ ಟ್ಯಾಟೂ ಪಾರ್ಲರ್ ಗಳ ಬಗ್ಗೆ ಮೊದಲು ಮಾಹಿತಿ ಕಲೆ ಹಾಕಿ. ಅಂದರೆ ಟ್ಯಾಟೂ ಪಾರ್ಲರ್ ತೆರೆದು ಎಷ್ಟು ತಿಂಗಳು ಅಥವಾ ವರ್ಷಗಳಾಗಿವೆ, ಅದರಲ್ಲಿ ಕೆಲಸ ಮಾಡುವ ಮಂದಿ ಬಹಳ ಚೆನ್ನಾಗಿ ಅನುಭವ ಪಡೆದಿದ್ದಾರೆಯೇ, ಈಗಿನ ಕೊರೊನ ಸಂಕಷ್ಟದ ಕಾಲದಲ್ಲಿ ಅವರು ಎಲ್ಲಾ ಬಗೆಯ ಮುನ್ನೆಚ್ಚರಿಕಾ ಕ್ರಮಗಳನ್ನು ಹಾಗೂ ಸರ್ಕಾರಿ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ಇತರರಿಂದ ಮಾಹಿತಿ ಕಲೆ ಹಾಕಿ. ಒಂದು ವೇಳೆ ನಿಮಗೆ ಮಾಹಿತಿ ಕೊರತೆ ಆಗಿದೆ ಎನಿಸಿದ ಪಕ್ಷದಲ್ಲಿ ಸ್ವತಃ ನೀವೇ ಒಂದು ಬಾರಿ ಹೋಗಿ ಅಲ್ಲಿರುವಂತಹ ಸಿಬ್ಬಂದಿಗಳು ಕೆಲಸ ಮಾಡುವ ರೀತಿಯನ್ನು ಗಮನಿಸಬಹುದು. ಅಲ್ಲಿರುವ ಪ್ರತಿಯೊಬ್ಬರೂ ತಮ್ಮ ಕೈಗಳಿಗೆ ಗ್ಲೋವ್ಸ್ ಧರಿಸಿದ್ದಾರೆಯೇ ಎಂಬುದನ್ನು ಮೊದಲಿಗೆ ಖಾತ್ರಿ ಪಡಿಸಿಕೊಳ್ಳಿ.

ಸ್ವಚ್ಚತೆ

ಸ್ವಚ್ಚತೆ

  • ಟ್ಯಾಟೂ ಪಾರ್ಲರ್ ನಲ್ಲಿ ಸ್ಯಾನಿಟೇಷನ್ ನಿಯಮಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ತಿಳಿದುಕೊಳ್ಳಿ ಮತ್ತು ಟ್ಯಾಟೂ ಹಾಕಲು ಬಳಸುವ ಸೂಜಿಗಳಿಗೆ ಸ್ಯಾನಿಟೇಶನ್ ಮಾಡುತ್ತಾರೆಯೇ ಎಂಬ ಬಗ್ಗೆ ರುಜುವಾತು ಮಾಡಿಕೊಳ್ಳಿ
  • ಯಾವುದೇ ಕಾರಣಕ್ಕೂ ಹೆಚ್ಚು ಜನಜಂಗುಳಿಯಿಂದ ಕೂಡಿರುವ ಟ್ಯಾಟೂ ಪಾರ್ಲರ್ ಗಳಿಗೆ ಭೇಟಿ ನೀಡಬೇಡಿ. ಹೆಚ್ಚು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕಡಿಮೆ ಜನರಿಗೆ ಆದ್ಯತೆ ಕೊಡುವ ಟ್ಯಾಟೂ ಪಾರ್ಲರ್ ಗಳು ನಿಮ್ಮ ಮೊದಲನೆಯ ಆದ್ಯತೆಯಾಗಿರಲಿ. ಏಕೆಂದರೆ ಕಾರಣ ನಿಮಗೆ ಗೊತ್ತಿದೆಯಲ್ಲ - ಅದುವೇ ಕೊರೊನ.
  • ಸಮಯ ನಿಗದಿ

    ಸಮಯ ನಿಗದಿ

    • ಅಪಾಯಿಂಟ್ಮೆಂಟ್ ಪದ್ಧತಿಯನ್ನು ಅನುಸರಿಸುತ್ತಿರುವ ಟ್ಯಾಟೂ ಪಾರ್ಲರ್ ಗಳು ನಿಮ್ಮ ನೆಚ್ಚಿನ ಟ್ಯಾಟೂ ತಾಣವಾಗಿರಲಿ. ಏಕೆಂದರೆ ಮೊದಲಾದರೆ ಕೊರೊನ ಭಯ ಇಲ್ಲದಿರುವುದರಿಂದ ಟ್ಯಾಟೂ ಪಾರ್ಲರ್ ಗೆ ಹೋಗಿ ಸರತಿ ಸಾಲಿನಲ್ಲಿ ಇತರರ ಜೊತೆ ಆರಾಮವಾಗಿ ಮಾತನಾಡಿಕೊಂಡು ಕುಳಿತು ನಂತರ ನಿಮ್ಮ ಸರದಿ ಬಂದಾಗ ಟ್ಯಾಟೂ ಹಾಕಿಸಿಕೊಳ್ಳಬಹುದಿತ್ತು. ಆದರೆ ಈಗ ಸಂಪೂರ್ಣ ಚಿತ್ರಣವೇ ತಲೆ ಕೆಳಗಾಗಿ ಹೋಗಿದೆ. ಹಾಗಾಗಿ ಟ್ಯಾಟೂ ಹಾಕಿಸಿಕೊಳ್ಳಲು ನಿಮ್ಮ ಸರದಿಗಾಗಿ ಮನೆಯಿಂದಲೇ ಒಂದು ಅಪಾಯಿಂಟ್ಮೆಂಟ್ ಸಮಯವನ್ನು ಕಡ್ಡಾಯವಾಗಿ ತೆಗೆದುಕೊಳ್ಳಿ.
    • ಸಾಧ್ಯವಾದಷ್ಟು ಬೆಳಗಿನ ಸಮಯದಲ್ಲಿ ಮೊಟ್ಟ ಮೊದಲನೆಯ ಕಸ್ಟಮರ್ ನೀವೇ ಆಗಿರುವಂತೆ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಿ. ಇದರಿಂದ ತೊಂದರೆ ಬಹಳ ಕಡಿಮೆ.
    • ನೀವು ಹಾಕಿಸಿಕೊಳ್ಳಲು ಬಯಸುವ ನಿಮ್ಮ ಆಯ್ಕೆಯ ಟ್ಯಾಟೂ ವಿನ್ಯಾಸವನ್ನು ನೀವು ಟ್ಯಾಟೂ ಪಾರ್ಲರ್ ಗೆ ಹೋಗುವ ಒಂದು ದಿನ ಮುಂಚೆಯೇ ಪಾರ್ಲರ್ ಸಿಬ್ಬಂದಿಗೆ ಕಳುಹಿಸಿ ಮತ್ತು ನಿಮ್ಮ ಆಯ್ಕೆಯ ವಿನ್ಯಾಸದಲ್ಲಿ ಯಾವುದಾದರೂ ಬದಲಾವಣೆಗಳು ನಿಮ್ಮ ಕೋರಿಕೆಯಾಗಿದ್ದಲ್ಲಿ ಅವುಗಳನ್ನು ಫೋನಿನಲ್ಲಿ ಮೊದಲೇ ಅವರೊಂದಿಗೆ ಚರ್ಚಿಸಿ ಅವರಿಗೆ ತಿಳಿಸಿ ಹೇಳಿ. ಇದರಿಂದ ಅವರಿಗೂ ಕೂಡ ನಿಮಗೆ ಬೇಕಾದ ಟ್ಯಾಟೂ ವಿನ್ಯಾಸದ ಬಗ್ಗೆ ಯಾವುದೇ ಗೊಂದಲಗಳಿರುವುದಿಲ್ಲ ಮತ್ತು ನೀವು ಅಲ್ಲಿಗೆ ಹೋದಾಗ ನಿಮಗೂ ಅವರಿಗೆ ಮತ್ತೊಮ್ಮೆ ಎಲ್ಲವನ್ನೂ ತಿಳಿಸಿ ಹೇಳಬೇಕಾದ ಸಂದರ್ಭ ಒದಗಿ ಬರುವುದು ತಪ್ಪುತ್ತದೆ. ಇದರಿಂದ ಬಹಳ ಬೇಗನೆ ನೀವು ನಿಮ್ಮ ಮನೆಗೆ ಸುರಕ್ಷಿತವಾಗಿ ಹಿಂದಿರುಗಬಹುದು.
    • ಸ್ಯಾನಿಟೈಸ್

      ಸ್ಯಾನಿಟೈಸ್

      • ಟ್ಯಾಟೂ ಪಾರ್ಲರ್ ನಲ್ಲಿ ಇರುವ ಮತ್ತು ನೀವು ಕುಳಿತುಕೊಳ್ಳಲು ಹೋಗುವ ಸೀಟ್ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆಯೇ ಎಂಬುದನ್ನು ಹೊರಡುವ ಮುಂಚೆ ಮತ್ತೊಮ್ಮೆ ಖಾತ್ರಿ ಪಡಿಸಿಕೊಳ್ಳಿ. ಯಾವುದೇ ಕಾರಣಕ್ಕೂ ನಿಮ್ಮ ಮನಸ್ಸಿನಲ್ಲಿ "ಅವರು ಸುರಕ್ಷತೆ ಕಾಪಾಡಿಕೊಂಡಿರುತ್ತಾರೆ" ಎಂಬ ತಾತ್ಸಾರ ಭಾವನೆ ಬೇಡ.
      • ಮನೆಯಿಂದ ಹೊರಡುವಾಗ ಮಾಸ್ಕ್ ಧರಿಸಿ ಹೊರಡಿ ಮತ್ತು ಟ್ಯಾಟೂ ಪ್ರಕ್ರಿಯೆ ನಡೆಯುವಾಗ ಕೂಡ ನಿಮ್ಮ ಮುಖದ ಮಾಸ್ಕ್ ತೆಗೆಯಬೇಡಿ. ಜೊತೆಗೆ ನಿಮಗೆ ಟ್ಯಾಟೂ ಹಾಕುವ ಸಿಬ್ಬಂದಿ ಕೂಡ ಮಾಸ್ಕ್ ಧರಿಸಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಿ. ಮನೆಯಿಂದ ಹೊರಡುವಾಗ ನೀವು ಒಮ್ಮೆ ಧರಿಸಿದ ನಿಮ್ಮ ಮುಖದ ಮಾಸ್ಕ್ ಅನ್ನು ಕೇವಲ ನೀವು ಮನೆಗೆ ಮತ್ತೆ ಹಿಂದಿರುಗಿ ಬಂದ ನಂತರವೇ ತೆಗೆಯತಕ್ಕದ್ದು.
      • ನಿಮಗೆ ಟ್ಯಾಟೂ ಹಾಕಲು ಬಳಸುವ ಸೂಜಿಗಳು ಹೊಚ್ಚ ಹೊಸದಾಗಿರಬೇಕು ಮತ್ತು ನಿಮ್ಮ ಕಣ್ಣೆದುರಿಗೆ ಅವುಗಳನ್ನು ಸ್ಟೆರಿಲೈಸ್ ಮಾಡಬೇಕು. ಹಾಗಾಗಿ ಇದರ ಬಗ್ಗೆ ಅತಿ ಹೆಚ್ಚು ಗಮನ ವಹಿಸಿ. ಸೋಂಕು ಹರಡುವ ಸಾಧ್ಯತೆ ಇರುವ ಅತ್ಯಂತ ಪ್ರಮುಖ ಘಟ್ಟ ಇದು.
      • ನೀವು ಮನೆ ಬಿಟ್ಟ ತಕ್ಷಣ ನೇರವಾಗಿ ಟ್ಯಾಟೂ ಪಾರ್ಲರ್ ಗೆ ಹೊರಡಿ. ಮಧ್ಯದಲ್ಲಿ ಅಲ್ಲಲ್ಲಿ ನಿಂತು ನಿಮಗೆ ಇಷ್ಟವಾದ ವಸ್ತುಗಳನ್ನು ಕೊಳ್ಳುವುದು ಅಥವಾ ತಿಂಡಿ ತಿನಿಸುಗಳನ್ನು ತಿನ್ನುವುದು ಇತ್ಯಾದಿ ಅಭ್ಯಾಸಗಳನ್ನು ಈ ಸಮಯದಲ್ಲಿ ಅಪ್ಪಿ ತಪ್ಪಿಯೂ ಮಾಡಬೇಡಿ.
      • ಮಾಸ್ಕ್ ಮರೆಯದಿರಿ

        ಮಾಸ್ಕ್ ಮರೆಯದಿರಿ

        • ಎಲ್ಲಾ ಕಡೆಯೂ ಮತ್ತೊಮ್ಮೆ ಎರಡನೇ ಬಾರಿಗೆ ಹೆಚ್ಚಾಗುತ್ತಿರುವ ಕೊರೋನಾದ ಈ ಸಂದರ್ಭದಲ್ಲಿ ನಿಮ್ಮ ಬಗ್ಗೆ ನೀವು ಸಾಕಷ್ಟು ಜಾಗ್ರತೆ ವಹಿಸಬೇಕು. ಮನೆಯಿಂದ ಹೊರ ಹೋದ ಸಂದರ್ಭದಲ್ಲಿ ನಿಮ್ಮ ಬಳಿ ಒಂದು ಚಿಕ್ಕ ಸ್ಯಾನಿಟೈಸರ್ ಬಾಟಲ್ ಅವಶ್ಯವಾಗಿ ಇರುವುದು ಒಳ್ಳೆಯದು. ಇದರ ಜೊತೆಗೆ ಯಾವುದೇ ಕಾರಣಕ್ಕೂ ಮೂಗು ಹಾಗೂ ಬಾಯಿ ಮುಚ್ಚಿಕೊಳ್ಳುವಂತೆ ಮುಖಕ್ಕೆ ಧರಿಸಿದ ಮಾಸ್ಕ್ ಅನ್ನು ಯಾವುದೇ ಸಂದರ್ಭದಲ್ಲಿ ಪಕ್ಕಕ್ಕೆ ಸರಿಸಬೇಡಿ.
        • ಮನೆಯ ಹೊರಗಡೆ ಮತ್ತು ಟ್ಯಾಟೂ ಪಾರ್ಲರ್ ನಲ್ಲಿ ಸಹ ಜನಜಂಗುಳಿಯಿಂದ ಆದಷ್ಟು ದೂರವಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ.
        • ಅಂತಿಮವಾಗಿ, ನಮ್ಮ ದೇಶ ಸಂಪೂರ್ಣವಾಗಿ ಕೊರೊನ ಮುಕ್ತವಾಗುವವರೆಗೂ ನಿಮ್ಮ ಟ್ಯಾಟೂ ಹಾಕಿಸಿಕೊಳ್ಳುವ ಅಭಿಪ್ರಾಯವನ್ನು ಇನ್ನೂ ಸ್ವಲ್ಪ ದಿನಗಳ ಕಾಲ ಮುಂದೂಡಿದರೂ ಪರವಾಗಿಲ್ಲ, ನೀವು ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿ ನಿಮ್ಮ ಮನೆಯವರ ಜೊತೆ ಖುಷಿಯಾಗಿ ಇರಬೇಕೆಂಬುದೇ ನಮ್ಮ ಆಶಯ.
English summary

Is It Safe to Get a Tattoo Amid COVID-19 Pandemic? Know Risks and Safety Measures

Here we are discussing about Is It Safe to Get a Tattoo Amid COVID-19 Pandemic? Know Risks and Safety Measures. We tell you what safety measures you must be taking at all times, before you go to get yourself inked. Read more.
X
Desktop Bottom Promotion