For Quick Alerts
ALLOW NOTIFICATIONS  
For Daily Alerts

ಮಾಡ್ರರ್ನ್‌ ಮಹಿಳೆ ತಿಳಿಯಲೇಬೇಕಾದ ಅಜ್ಜಿ ಕಾಲದ ಸೌಂದರ್ಯ ಗುಟ್ಟು

|

ರವಿವರ್ಮನ ಕುಂಚದ ಕಲೆಯಾಗಿ ಮೂಡಿಬಂದಂತಹ ಭಾರತೀಯ ನಾರಿಯ ಸೌಂದರ್ಯಕ್ಕೆ ವಿಶ್ವದ ಬೇರೆ ಯಾವ ಮಹಿಳೆಯೂ ಸರಿಸಾಟಿಯಲ್ಲ. ಆಕೆಯಲ್ಲಿರುವಂತಹ ನಾಚಿಕೆ, ಚಾಂಚಲ್ಯ, ಮುಗುಳುನಗು ಹಾಗೂ ಮಂದಹಾಸವು ಸೌಂದರ್ಯಕ್ಕೆ ಮೆರಗು ನೀಡುವುದು. ನಮ್ಮ ಹಿರಿಯ ಕವಿಗಳು ಕೂಡ ನಾರಿಯರ ಸೌಂದರ್ಯವನ್ನು ಹೊಗಳದಿರುವುದು ಕಡಿಮೆ. ಇಷ್ಟಕ್ಕೆಲ್ಲಾ ಕಾರಣ ಆಕೆಯಲ್ಲಿನ ಸೌಂದರ್ಯ.

ಆದರೆ ಯಾವ ಸೌಂದರ್ಯ ಉತ್ಪನ್ನಗಳು ಇಲ್ಲದಂತಹ ಸಂದರ್ಭದಲ್ಲಿ ಅವರು ತಮ್ಮ ಸೌಂದರ್ಯಕ್ಕೆ ಹೇಗೆ ಮೆರಗು ಕೊಡುತ್ತಿದ್ದರು ಎನ್ನುವುದು ಎಲ್ಲರನ್ನು ಕಾಡುವಂತಹ ಪ್ರಶ್ನೆ. ಹೀಗಿನ ಕಾಲದಲ್ಲಿ ನಿಮಗೆ ದಿನಕ್ಕೊಂದು ಸೌಂದರ್ಯವರ್ಧಕ ಉತ್ಪನ್ನಗಳು ಮಾರುಕಟ್ಟೆಗೆ ಬರುವುದು. ಇದನ್ನು ಖರೀದಿ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಸಾಕು. ಅದು ಮುಖಕ್ಕೆ ಕಾಂತಿ ನೀಡುವುದು ಎಂದು ಎಲ್ಲರೂ ಭಾವಿಸಿಕೊಂಡಿರುವರು. ಆದರೆ ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಈ ಉತ್ಪನ್ನಗಳು ನೈಸರ್ಗಿಕವಾಗಿಲ್ಲ ಮತ್ತು ಹಲವಾರು ರೀತಿಯ ರಾಸಾಯನಿಕಗಳಿಂದ ತಯಾರಿ ಮಾಡಿರುವರು. ಹೀಗಾಗಿ ಇದನ್ನು ಬಳಸಿದರೂ ಅದು ಮುಂದೆ ಚರ್ಮಕ್ಕೆ ದೊಡ್ಡ ಮಟ್ಟದಲ್ಲಿ ಹಾನಿ ಉಂಟು ಮಾಡುವುದು.

ಇದನ್ನು ತಡೆಯಲು ಈ ಲೇಖನದಲ್ಲಿ ಆಧುನಿಕ ಮಹಿಳೆಗಾಗಿ ಪುರಾತನ ಸೌಂದರ್ಯ ಉತ್ಪನ್ನಗಳ ರಹಸ್ಯವನ್ನು ಹೇಳಿಕೊಡಲಿದ್ದೇವೆ. ಇದನ್ನು ತಿಳಿಯಲು ಮುಂದಾಗಿ...

1. ಬೇವು

1. ಬೇವು

ಬಾಯಿಗೆ ತುಂಬಾ ಕಹಿಯಾದರೂ ಇದು ಹಲವಾರು ರೀತಿಯ ಔಷಧೀಯ ಗುಣ ಹೊಂದಿದೆ. ಇದು ಆರೋಗ್ಯಕ್ಕೆ ಮಾತ್ರವಲ್ಲದೆ, ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುವುದು. ಬೇವಿನ ಮರದ ಪ್ರತಿಯೊಂದು ಭಾಗವು ತುಂಬಾ ಉಪಯೋಗಕಾರಿ ಆಗಿರುವುದು. ಇದನ್ನು ಬಳಸಿಕೊಳ್ಳುವ ವಿಧಾನ ಹೇಗೆ ಎಂದು ತಿಳಿಯಿರಿ.

ಬೇವಿನ ಸೌಂದರ್ಯ ಲಾಭಗಳು

* ಮೊಡವೆ ನಿವಾರಣೆ ಮಾಡಲು

ಸ್ವಲ್ಪ ಬೇವಿನ ಎಲೆಗಳನ್ನು ತೆಗೆದುಕೊಳ್ಳಿ ಮತ್ತು ಅದನ್ನು ನೀರಿಗೆ ಹಾಕಿ ಕುದಿಸಿ.

ಈ ನೀರಿನಲ್ಲಿ ಹತ್ತಿ ಉಂಡೆ ಅದ್ದಿಕೊಳ್ಳಿ ಮತ್ತು ಇದನ್ನು ಮುಖಕ್ಕೆ ಉಜ್ಜಿಕೊಳ್ಳಿ.

* ಮುಖದಲ್ಲಿರುವಂತಹ ಹೆಚ್ಚುವರಿ ಎಣ್ಣೆಯಂಶ ತೆಗೆಯಲು ಬೇವು-ಮೊಸರು ಅಥವಾ ಬೇವು-ಸೌತೆಕಾಯಿ ಫೇಸ್ ಪ್ಯಾಕ್ ನ್ನು ಬಳಸಬಹುದು.

* ಒಣ ಚರ್ಮಕ್ಕಾಗಿ

ಒಣ ಚರ್ಮದ ಸಮಸ್ಯೆಯಿದ್ದರೆ ಆಗ ನೀವು ಸ್ವಲ್ಪ ಬೇವಿನ ಹುಡಿ ಮತ್ತು ಕೆಲವು ಹನಿ ದ್ರಾಕ್ಷಿ ಬೀಜದ ಎಣ್ಣೆ ಹಾಕಿಕೊಳ್ಳಿ.

ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ.

ಇದರ ಬಳಿಕ ತಣ್ಣೀರಿನಿಂದ ತೊಳೆಯಿರಿ.

* ಕೂದಲಿನ ಸಮಸ್ಯೆಗೆ

ಬೇವಿನ ಎಣ್ಣೆ ಬಳಸಿಕೊಂಡು ಕೂದಲಿನ ಬುಡಕ್ಕೆ ಮಸಾಜ್ ಮಾಡಿ.

ತಲೆಹೊಟ್ಟು ನಿವಾರಣೆ ಮಾಡಲು ಬೇವಿನ ಹುಡಿಗೆ ನೀರು ಹಾಕಿ ಮತ್ತು ಅದನ್ನು ಕೂದಲಿಗೆ ಹೆಚ್ಚಿಕೊಳ್ಳಿ. ಒಂದು ಗಂಟೆ ಕಾಲ ಹಾಗೆ ಬಿಡಿ ಮತ್ತು ಬಳಿಕ ಶಾಂಪೂ ಹಾಕಿ ಕೂದಲು ತೊಳೆಯಿರಿ.

2. ಕೇಸರಿ

2. ಕೇಸರಿ

ಸೌಂದರ್ಯವರ್ಧಕ ವಿಧಾನದಲ್ಲಿ ಕೇಸರಿ ತುಂಬಾ ದುಬಾರಿ ಕ್ರಮವಾಗಿದೆ. ಆದರೆ ಇದಕ್ಕೆ ಹಾಕಿದ ಹಣ ಖಂಡಿತವಾಗಿಯೂ ನಿಮಗೆ ವ್ಯರ್ಥವಾಗದು ಎಂದು ನೀವು ಗಮನದಲ್ಲಿಟ್ಟುಕೊಳ್ಳಿ.

ಕೇಸರಿಯ ಸೌಂದರ್ಯ ಲಾಭಗಳು

ಟ್ಯಾನ್ ತೆಗೆಯಲು ನೆರವಾಗುವುದು

ತ್ವಚೆಗೆ ಕಾಂತಿ ನೀಡಲು ನೆರವಾಗುವುದು

ಕೇಸರಿ ದಳಗಳನ್ನು ತೆಗೆದುಕೊಂಡು ಹಾಲಿಗೆ ಹಾಕಿ 30 ನಿಮಿಷ ಕಾಲ ಅದ್ದಿಡಿ.

ಈ ಮಿಶ್ರಣಕ್ಕೆ ಒಂದು ಚಮಚ ಶ್ರೀಗಂಧದ ಹುಡಿ ಹಾಕಿ.

ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15-20 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ತೊಳೆಯಿರಿ.

3. ಜೇನುತುಪ್ಪ

3. ಜೇನುತುಪ್ಪ

ಬಾಯಿಗೆ ತುಂಬಾ ಸಿಹಿ ಹಾಗೂ ಹಲವಾರು ಆರೋಗ್ಯ ಗುಣಗಳನ್ನು ಹೊಂದಿರುವಂತಹ ಜೇನುತುಪ್ಪವನ್ನು ಹಲವಾರು ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ. ಕೈಗೆಟಕುವ ಬೆಲೆಯಲ್ಲಿ ಸಿಗುವ ಇದು ಅದ್ಭುತವಾದ ಹೈಡ್ರೇಟ್ ಗುಣವನ್ನು ಹೊಂದಿದೆ.

ಜೇನುತುಪ್ಪದ ಸೌಂದರ್ಯ ಲಾಭಗಳು

ಸುಟ್ಟ ಕಲೆಗಳ ನಿವಾರಣೆ

ಸುಟ್ಟ ಗಾಯಗಳಿಗೆ ಜೇನುತುಪ್ಪ ಹಚ್ಚಬಹುದು. ಇದು ನಂಜುನಿರೋಧಕ ಮತ್ತು ಶಮನಕಾರಿ ಗುಣ ಹೊಂದಿದೆ.

ಸುಟ್ಟ ಗಾಯಕ್ಕೆ ಯಾವಾಗಲೂ ಜೇನುತುಪ್ಪ ಹಚ್ಚುತ್ತಲಿದ್ದರೆ ಆಗ ಕಲೆಯು ತುಂಬಾ ಕಡಿಮೆ ಆಗುವುದು.

ಸುಂದರ ತ್ವಚೆ ನೀಡುವುದು

ಜೇನುತುಪ್ಪವನ್ನು ಹಾಲಿನ ಕೆನೆ, ಶ್ರೀಗಂಧ, ಕಡಲೆಹಿಟ್ಟು ಮತ್ತು ರೋಸ್ ತೈಲದ ಜತೆಗೆ ಮಿಶ್ರಣ ಮಾಡಿ ಫೇಸ್ ಪ್ಯಾಕ್ ತಯಾರಿಸಿಕೊಳ್ಳಿ.

ಈ ಮಾಸ್ಕ್ ನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.

ಮುಖದಲ್ಲಿ ಇದು ಹಾಗೆ ಒಣಗಲಿ ಮತ್ತು ಸ್ವಲ್ಪ ಸಮಯ ಬಿಟ್ಟು ಇದನ್ನು ಕಿತ್ತುಹಾಕಿ. ಇದು ಮುಖದಲ್ಲಿರುವಂತಹ ಕಲ್ಮಷ ದೂರ ಮಾಡುವುದು ಮತ್ತು ತ್ವಚೆಯು ಮೃದು ಹಾಗೂ ಸುಂದರವಾಗುವಂತೆ ಮಾಡುವುದು.

4. ನೆಲ್ಲಿಕಾಯಿ

4. ನೆಲ್ಲಿಕಾಯಿ

ಕಾಡು ನೆಲ್ಲಿಕಾಯಿ ಎಂದರೆ ಅದರಲ್ಲಿ ಅದ್ಭುತ ಆರೋಗ್ಯ ಗುಣಗಳು ಇವೆ ಎಂದು ಹೇಳಲಾಗುತ್ತದೆ. ಆದರೆ, ಇಂದಿನ ದಿನಗಳಲ್ಲಿ ಕಾಡು ನೆಲ್ಲಿಕಾಯಿ ಸಿಗುವುದು ಕಡಿಮೆ. ನೆಲ್ಲಿಕಾಯಿಯಲ್ಲಿ ಇರುವಂತಹ ವಿಟಮಿನ್ ಸಿ ಆರೋಗ್ಯ ಕಾಪಾಡಲು ನೆರವಾಗುವುದು.

ನೆಲ್ಲಿಕಾಯಿ ಲಾಭಗಳು

* ಕೂದಲು ಉದುರುವಿಕೆ ತಗ್ಗಿಸುವುದು

ಎರಡು ಚಮಚ ನೆಲ್ಲಿಕಾಯಿ ಹುಡಿ ಅಥವಾ ರಸ ತೆಗೆದುಕೊಳ್ಳಿ.

ಇಷ್ಟೇ ಪ್ರಮಾಣದಲ್ಲಿ ಲಿಂಬೆರಸವನ್ನು ಇದಕ್ಕೆ ಹಾಕಿಕೊಳ್ಳಿ.

ಸರಿಯಾಗಿ ಮಿಶ್ರಣ ಮಾಡಿ ಮತ್ತು ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ.

ಇದು ಒಣಗಲು ಬಿಡಿ ಮತ್ತು ಬಿಸಿ ನೀರಿನಿಂದ ತೊಳೆಯಿರಿ.

* ಕೂದಲಿಗೆ ಪೋಷಣೆ ನೀಡಲು ನೆರವು

ನೆಲ್ಲಿಕಾಯಿ, ಸೋಪ್ ನಟ್(ರೀಥಾ) ಮತ್ತು ಶಿಕಾಕಾಯಿಯನ್ನು ಕಬ್ಬಿಣದ ಪಾತ್ರೆಯಲ್ಲಿ ಹಾಕಿ ಕುದಿಸಿ.

ರಾತ್ರಿ ಇದನ್ನು ತೆಗೆದು ಬದಿಗಿಡಿ.

ಮರುದಿನ ಬೆಳಗ್ಗೆ ಇದನ್ನು ಸೋಸಿಕೊಂಡು ಅದನ್ನು ಶಾಂಪೂ ಹಾಗೆ ಬಳಸಿ.

5. ಮುಲ್ತಾನಿ ಮಟ್ಟಿ

5. ಮುಲ್ತಾನಿ ಮಟ್ಟಿ

ಅನಾದಿ ಕಾಲದಿಂದಲೂ ಬಳಸಿಕೊಂಡು ಬಂದಿರುವಂತಹ ಸೌಂದರ್ಯವರ್ಧಕವೆಂದರೆ ಅದು ಮುಲ್ತಾನಿ ಮಟ್ಟಿ. ಇದು ನೈಸರ್ಗಿಕ ಸ್ಕ್ರಬ್ ಮತ್ತು ಚರ್ಮವನ್ನು ಶುದ್ಧೀಕರಿಸುವುದು.

ಮುಲ್ತಾನಿ ಮಿಟ್ಟಿಯ ಆರೋಗ್ಯ ಲಾಭಗಳು

ಮೊಡವೆ ಕಲೆಗಳ ನಿವಾರಣೆಗೆ ನೆರವಾಗುವುದು

ಬೇಕಾದಷ್ಟು ಪ್ರಮಾಣದ ಮುಲ್ತಾನಿ ಮಟ್ಟಿ ತೆಗೆದುಕೊಳ್ಳಿ ಮತ್ತು ಇದನ್ನು ಟೊಮೆಟೊ ರಸದ ಜತೆಗೆ ಮಿಶ್ರಣ ಮಾಡಿ.

ಇದಕ್ಕೆ ಒಂದು ಚಿಟಿಕೆ ಅರಶಿನ ಮತ್ತು ಶ್ರೀಗಂಧದ ಹುಡಿ ಹಾಕಿ ಮತ್ತು ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ.

* ಕಲೆ ನಿವಾರಿಸಲು ನೆರವಾಗುವುದು

ಸ್ವಲ್ಪ ಪುದೀನಾ ಎಲೆಗಳು ಮತ್ತು ಮೊಸರನ್ನು ಮುಲ್ತಾನಿ ಮಟ್ಟಿ ಜತೆಗೆ ಮಿಶ್ರಣ ಮಾಡಿ.

ಇದನ್ನು ಪೇಸ್ಟ್ ಹಾಗೆ ಮಾಡಿಕೊಳ್ಳಿ.

ಕಪ್ಪು ಕಲೆಗಳ ಮೇಲೆ ಇದನ್ನು ಹಚ್ಚಿಕೊಳ್ಳಿ.

ಅರ್ಧ ಗಂಟೆ ಹಾಗೆ ಬಿಟ್ಟು ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

6. ಅರಿಶಿನ

6. ಅರಿಶಿನ

ಅರಿಶಿನ ಎನ್ನುವುದು ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ. ಭಾರತೀಯರು ಇದನ್ನು ತುಂಬಾ ಪವಿತ್ರ ಎಂದು ಭಾವಿಸುವರು ಮತ್ತು ದೇವರ ಕಾರ್ಯಗಳಲ್ಲಿ ಇದು ಹೆಚ್ಚು ಬಳಕೆ ಆಗುವುದು.

ಅರಿಶಿನದ ಸೌಂದರ್ಯ ಲಾಭಗಳು

* ಸ್ಟ್ರೆಚ್ ಮಾರ್ಕ್ ನಿವಾರಿಸುವುದು

ಕಡಲೆಹಿಟ್ಟು ಮತ್ತು ಮೊಸರಿನ ಜತೆಗೆ ಅರಿಶಿನ ಮಿಶ್ರಣ ಮಾಡಿ.

ಇದನ್ನು ಸ್ಟ್ರೆಚ್ ಮಾರ್ಕ್ಸ್‌ ಇರುವ ಜಾಗಕ್ಕೆ ಹಚ್ಚಿಕೊಳ್ಳಿ.

ಅರಿಶಿನದಲ್ಲಿನ ಗುಣಗಳು ಸ್ಟ್ರೆಚ್ ಮಾರ್ಕ್ಸ್ ಅನ್ನು ನಿವಾರಿಸುವುದು.

* ನೆರಿಗೆ ಕಡಿಮೆ ಮಾಡುವುದು

ಅಕ್ಕಿ ಹುಡಿ, ಹಸಿ ಹಾಳು ಮತ್ತು ಟೊಮೆಟೊ ರಸ ತೆಗೆದುಕೊಳ್ಳಿ.

ಇದನ್ನು ಅರಿಶಿನ ಜತೆಗೆ ಮಿಶ್ರಣ ಮಾಡಿ ಪೇಸ್ಟ್ ಮಾಡಿ.

ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಹಾಗೆ ಒಣಗಲು ಬಿಡಿ.

* ಒಡೆದ ಪಾದಗಳಿಗೆ

ಅರಿಶಿನದ ಜತೆಗೆ ಹರಳೆಣ್ಣೆ ಮತ್ತು ತೆಂಗಿನೆಣ್ಣೆ ಮಿಶ್ರಣ ಮಾಡಿ.

ಸ್ನಾನಕ್ಕೆ ಮೊದಲು ಈ ಮಿಶ್ರಣವನ್ನು ಒಡೆದ ಪಾದಗಳಿಗೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ.

7. ಶ್ರೀಗಂಧ

7. ಶ್ರೀಗಂಧ

ಇದು ತುಂಬಾ ಪವಿತ್ರ ಹಾಗೂ ದುಬಾರಿ. ಶ್ರೀಗಂಧವನ್ನು ದೇವಸ್ಥಾನಗಳಲ್ಲಿ ಪ್ರಸಾದವನ್ನಾಗಿ ಬಳಸಲಾಗುತ್ತದೆ. ಇದರಲ್ಲಿ ನಂಜುನಿರೋಧಕ ಗುಣವಿದೆ ಮತ್ತು ಚರ್ಮದಲ್ಲಿನ ರಕ್ತಸಂಚಾರಕ್ಕೆ ಕೂಡ ಇದು ನೆರವಾಗುವುದು.

ಶ್ರೀಗಂಧದಲ್ಲಿ ಇರುವ ಸೌಂದರ್ಯ ಲಾಭಗಳು

* ಚರ್ಮಕ್ಕೆ ಇದು ಕಾಂತಿ ನೀಡುವುದು.

ಬಾದಾಮಿ ಹುಡಿ ಜತೆಗೆ ಶ್ರೀಗಂಧವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

ಈ ಮಿಶ್ರಣಕ್ಕೆ ಹಸಿ ಹಾಲು ಹಾಕಿ.

ಎಲ್ಲವನ್ನು ಮಿಶ್ರಣ ಮಾಡಿಕೊಂಡು ಮುಖಕ್ಕೆ, ಕೈಗಳು ಮತ್ತು ಕಾಲುಗಳಿಗೆ ಸ್ನಾನಕ್ಕೆ ಮೊದಲು ಹಚ್ಚಿಕೊಳ್ಳಿ.

ಇದು ಚರ್ಮಕ್ಕೆ ಕಾಂತಿ ನೀಡುವುದು.

ಶ್ರೀಗಂಧವನ್ನು ಹಸಿ ಹಾಲಿನ ಜತೆಗೆ ಮಿಶ್ರಣ ಮಾಡಿ.

ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಕಾಲ ಹಾಗೆ ಬಿಡಿ.

ಇದರ ಬಳಿಕ ನೀರಿನಿಂದ ತೊಳೆಯಿರಿ.

8. ತುಳಸಿ

8. ತುಳಸಿ

ಪೂಜ್ಯನೀಯವಾಗಿರುವಂತಹ ತುಳಸಿಯನ್ನು ಹಿಂದೂಗಳು ಪ್ರತಿಯೊಂದು ಮನೆಯ ಮುಂದೆ ನೆಡುವರು. ತುಳಸಿಯಲ್ಲಿ ಮುಕ್ಕೋಟಿ ದೇವರುಗಳು ನೆಲೆಸುವರು ಎನ್ನುವ ನಂಬಿಕೆಯಿದೆ. ತುಳಸಿಯು ನೈಸರ್ಗಿಕವಾಗಿ ಸೌಂದರ್ಯ ವರ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ತುಳಸಿಯ ಸೌಂದರ್ಯ ಲಾಭಗಳು

* ಮೊಡವೆ ನಿವಾರಣೆ ಮತ್ತು ಚರ್ಮಕ್ಕೆ ಪೋಷಣೆ

ಸ್ವಲ್ಪ ತುಳಸಿ ಎಲೆಗಳನ್ನು ತೆಗೆದುಕೊಂಡು ಅದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ.

ಇದಕ್ಕೆ ಹಾಲು ಹಾಕಿ ಮತ್ತು ಮುಖಕ್ಕೆ ಹಚ್ಚಿಕೊಳ್ಳಿ.

* ಹಲ್ಲುಗಳನ್ನು ಬಿಳಿಯಾಗಿಸುವುದು

ಸ್ವಲ್ಪ ತುಳಸಿ ಎಲೆ ತೆಗೆದುಕೊಳ್ಳಿ.

ಇದನ್ನು ಒಣಗಿಸಿ ಹುಡಿ ಮಾಡಿಟ್ಟುಕೊಳ್ಳಿ.

ಇದಕ್ಕೆ ಕಿತ್ತಳೆ ಸಿಪ್ಪೆ ಹುಡಿ ಹಾಕಿ ಮತ್ತು ಪೇಸ್ಟ್ ಮಾಡಿ.

ಈ ಪೇಸ್ಟ್ ನಿಂದ ಹಲ್ಲುಜ್ಜಿಕೊಳ್ಳಿ.

9. ಮೊಸರು

9. ಮೊಸರು

ಮೊಸರಿನಲ್ಲಿ ಇರುವಂತಹ ಸತುವಿನ ಅಂಶವು ಸೌಂದರ್ಯವರ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಮೊಸರಿನ ಆರೋಗ್ಯ ಲಾಭಗಳು

* ಚಳಿಗಾಲದಲ್ಲಿ ಒಣ ಕೂದಲಿನ ನಿವಾರಣೆಗೆ ನೆರವಾಗುವುದು

ಎರಡು ಮೊಟ್ಟೆ ತೆಗೆದುಕೊಳ್ಳಿ ಮತ್ತು 2 ಚಮಚ ಬಾದಾಮಿ ಎಣ್ಣೆ

ಅರ್ಧ ಕಪ್ ಮೊಸರಿಗೆ ಇವೆರಡನ್ನು ಹಾಕಿ ಮಿಶ್ರಣ ಮಾಡಿ.

ಈ ಪೇಸ್ಟ್ ಅನ್ನು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ ಮತ್ತು ಪ್ಲಾಸ್ಟಿಕ್ ಕ್ಯಾಪ್ ಹಾಕಿ ತಲೆ ಮುಚ್ಚಿಕೊಳ್ಳಿ.

ಇದರಿಂದ ಕೂದಲಿಗೆ ಪೋಷಣೆ ಸಿಗುವುದು.

30 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ಶಾಂಪೂ ಹಾಕಿ ತೊಳೆಯಿರಿ.

* ಕೂದಲನ್ನು ರೇಷ್ಮೆಯಂತಾಗಿಸುವುದು

ಲಿಂಬೆರಸ, ಮೊಟ್ಟೆ ಮತ್ತು ಜೇನುತುಪ್ಪ ಮಿಶ್ರಣ ಮಾಡಿ ಪೇಸ್ಟ್ ಮಾಡಿ.

ಇದಕ್ಕೆ ಮೊಸರು ಹಾಕಿಕೊಂಡು ಮಿಶ್ರಣ ಮಾಡಿದ ಬಳಿಕ ಕೂದಲಿಗೆ ಹಚ್ಚಿ.

30 ನಿಮಿಷ ಬಿಟ್ಟು ಕೂದಲು ತೊಳೆಯಿರಿ.

10. ಕಡಲೆಹಿಟ್ಟು

10. ಕಡಲೆಹಿಟ್ಟು

ಹೆಚ್ಚಾಗಿ ಪ್ರತಿಯೊಂದು ಅಡುಗೆ ಮನೆಯಲ್ಲೂ ಲಭ್ಯವಿರುವಂತಹ ಕಡಲೆಹಿಟ್ಟಿನಲ್ಲಿ ಹಲವಾರು ಸೌಂದರ್ಯವರ್ಧಕ ಗುಣಗಳು ಇವೆ.

ಕಡಲೆಹಿಟ್ಟಿನ ಸೌಂದರ್ಯ ಲಾಭಗಳು

* ಬೊಕ್ಕೆಗಳ ನಿವಾರಣೆ

ಬೇಕಾದಷ್ಟು ಸೌತೆಕಾಯಿ ರಸ ತೆಗೆದುಕೊಳ್ಳಿ ಮತ್ತು ಇದಕ್ಕೆ ಕಡಲೆಹಿಟ್ಟನ್ನು ಮಿಶ್ರಣ ಮಾಡಿ.

ಈ ಮಿಶ್ರಣವನ್ನು ಬಾಧಿತ ಪ್ರದೇಶಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.

20 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ತೊಳೆಯಿರಿ.

* ಇದು ಚರ್ಮದ ಕಾಂತಿಗೆ ನೆರವಾಗುವುದು

4-5 ಬಾದಾಮಿಯ ಹುಡಿ ತೆಗೆದುಕೊಳ್ಳಿ, ಲಿಂಬೆರಸ ಮತ್ತು ಒಂದು ಚಮಚ ಹಾಲು.

ಎಲ್ಲವನ್ನು ಕಡಲೆಹಿಟ್ಟಿನ ಜತೆಗೆ ಮಿಶ್ರಣ ಮಾಡಿ ಪೇಸ್ಟ್ ಮಾಡಿ.

ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 30 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ.

ಸುಂದರ ತ್ವಚೆ ಹಾಗೂ ರೇಷ್ಮೆಯಂತಹ ಕೂದಲು ಪಡೆಯಲು ನೀವು ಮನೆಯಲ್ಲೇ ಸಿಗುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಳ್ಳಬಹುದು. ಆದರೆ ಇದು ಫಲಿತಾಂಶ ನೀಡಲು ಸ್ವಲ್ಪ ಸಮಯ ತೆಗೆದುಕೊಳ್ಳುವ ಕಾರಣ ತಾಳ್ಮೆ ಮುಖ್ಯ.

English summary

Incredible Beauty Secrets of Ancient India That Every Modern Woman Must Know

Here we are discussing about incredible beauty secrets of ancient india that every modern woman must know. Read more. India is known for its natural beauty. And the following are ten ingredients which come from the very laps of mother nature. Here are the incredible Ancient Indian Beauty Secrets that every modern women must know.
Story first published: Saturday, February 1, 2020, 11:15 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X