For Quick Alerts
ALLOW NOTIFICATIONS  
For Daily Alerts

ಹೋಳಿ ಆಡುವ ಮುನ್ನ ಹಾಗೂ ನಂತರ ತ್ವಚೆಯ ಆರೈಕೆ ಹೀಗಿರಲಿ

|

ನಾವೆಲ್ಲರೂ ಎದುರುನೋಡುತ್ತಿದ್ದ ಬಣ್ಣಗಳ ಹಬ್ಬವಾದ ಹೋಳಿ ಬಂದೇ ಬಿಡ್ತು! ಇದನ್ನು ಎಲ್ಲರೊಂದಿಗೆ ಆಚರಿಸುವಾಗ ಇನ್ನಿಲ್ಲದಷ್ಟು ಸಂತೋಷವಾಗುತ್ತದೆ, ಖುಷಿಯಾಗುತ್ತದೆ, ಆ ಎಲ್ಲಾ ಬಣ್ಣಗಳೊಂದಿಗೆ ಆಟವಾಡುವುದು, ಅದರಲ್ಲೂ ವಿಶೇಷವಾಗಿ ನಮ್ಮ ಕುಟುಂಬ ಸದಸ್ಯರು ದೂರದ ಸ್ಥಳಗಳಿಂದ ಬಂದು ಒಟ್ಟಿಗೆ ಸೇರಿದಾಗ ಮತ್ತು ಎಲ್ಲರೂ ಒಟ್ಟಿಗೆ ಹೋಳಿ ಆಟವಾಡಲು ಬಂದಾಗ ನಮ್ಮ ರಂಗಿನ ಹಬ್ಬಕ್ಕೆ ಇನ್ನಷ್ಟು ಮೆರಗು ಬರುತ್ತದೆ.

how to take care your skin before holi

ಹೋಳಿ ಒಂದು ಮೋಜು ನೀಡುವಂತಹ ಆಟವಾಗಿದ್ದರೂ ಕೂಡ, ನಮ್ಮಲ್ಲಿ ಬಹಳಷ್ಟು ಜನರು ಹೋಳಿ ಆಡಲು ತುಂಬಾ ಹಿಂಜರಿಯುತ್ತಾರೆ, ಹೋಳಿಯಿಂದಾಗಿ ನಮ್ಮ ಚರ್ಮ ಮತ್ತು ಕೂದಲಿಗೆ ಉಂಟಾಗುವ ಪರಿಣಾಮಗಳೇ ಇದಕ್ಕೆ ಕಾರಣ. ಹೋಳಿ ಸಮಯದಲ್ಲಿ ಬಳಸುವ ಕಠಿಣ ಬಣ್ಣಗಳು ನಮ್ಮ ಚರ್ಮವನ್ನು ಶುಷ್ಕ ಮತ್ತು ಒಣಗಿಸುತ್ತವೆ. ಮತ್ತು ತ್ವಚೆಯಿಂದ ಎಣ್ಣೆ ಅಂಶವನ್ನು ಸಂಪೂರ್ಣವಾಗಿ ಹೀರಿಬಿಡುತ್ತದೆ.

ಇಡೀ ಕುಟುಂಬವು ನೀವು ಆನಂದಿಸುವಾಗ ನಿಮಗೆ ಕೊನೆಯಲ್ಲಿ ನಿಮ್ಮ ಚರ್ಮ ಹಾಳಾಗುವುದರ ಬಗ್ಗೆಯೇ ಚಿಂತೆ! ಹಾಗಾಗಿ ನಿಮಗಾಗಿ ನಾವು ಕೆಲವು ಮಾಹಿತಿಗಳನ್ನು ನೀಡುತ್ತಿದ್ದೇವೆ. ಇದರಿಂದ ನೀವು ಯಾವುದೇ ಹಾನಿಯಾಗದಂತೆ ನಿಮ್ಮ ಸಂತೋಷವನ್ನು ಅನುಭವಿಸಬಹುದು.

ಹೋಳಿ ಬಣ್ಣಗಳು ಕೆಲವು ದಿನಗಳವರೆಗೆ ನಿಮ್ಮ ಚರ್ಮಕ್ಕೆ ಅಂಟಿಕೊಂಡಿರುವ ಸಾಧ್ಯತೆಗಳಿವೆ, ಆದರೆ ನಾವು ನೀಡುವ ಕೆಲವು ಸಲಹೆಗಳು, ನಿಮ್ಮ ತ್ವಚೆಯಲ್ಲಿ ಬಣ್ಣಗಳ ಅಂಟಿಕೊಳ್ಳುವುದನ್ನು ತಪ್ಪಿಸಲು ಸಹಾಯಮಾಡುತ್ತವೆ. ನೈಸರ್ಗಿಕ ಅಥವಾ ಗಿಡಮೂಲಿಕೆಗಳ ಬಣ್ಣಗಳನ್ನು ನೀವು ಬಳಸಿದರೆ ಅದು ತ್ವಚೆಗೆ ಅಂಟಿಕೊಂಡರೆ ಒಳ್ಳೆಯದೆ! ಆದರೆ ಕಡು ವರ್ಣದ್ರವ್ಯಗಳನ್ನು ಹೊಂದಿರುವ ಶಾಶ್ವತ ಬಣ್ಣಗಳನ್ನು, ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಖಂಡಿತವಾಗಿಯೂ ಬಳಸಬೇಡಿ. ಅವುಗಳಲ್ಲಿ ಹೆಚ್ಚಿನ ಪ್ರಮಾಣದ ರಾಸಾಯನಿಕವಿರುವುದರಿಂದ ಮುಖವನ್ನು ಶುಷ್ಕ ಗೊಳಿಸಬಹುದು, ದದ್ದುಗಳು ಮತ್ತು ಗುಳ್ಳೆಗಳಿಗೆ ಕಾರಣವಾಗಬಹುದು.

ಆದ್ದರಿಂದ ಸೌಮ್ಯ ಬಣ್ಣಗಳನ್ನು ಬಳಸಿ. ಅದರಲ್ಲೂ ಗಿಡಮೂಲಿಕೆಗಳಿಂದ ತಯಾರಿಸಿದ್ದ ಬಣ್ಣಗಳಾದರೆ ಇನ್ನೂ ಒಳ್ಳೆಯದು. ನಿಮ್ಮ ತ್ವಚೆಯನ್ನು ಹೋಳಿಗೆ ಹೇಗೆ ಸಿದ್ಧಗೊಳಿಸಬೇಕೆಂಬುದಕ್ಕೆ ಇಲ್ಲಿದೆ ಸಲಹೆಗಳು!

1. ಪೂರ್ಣ ಉದ್ದದ ಬಟ್ಟೆಗಳನ್ನು ಧರಿಸಿ

1. ಪೂರ್ಣ ಉದ್ದದ ಬಟ್ಟೆಗಳನ್ನು ಧರಿಸಿ

ಹೋಳಿ ಆಡುವಾಗ ನಿಮ್ಮ ಚರ್ಮದ ಹೆಚ್ಚಿನ ಭಾಗಗಳನ್ನು ಸಾಧ್ಯವಾದಷ್ಟು ಮುಚ್ಚಿಕೊಳ್ಳಲು ಪ್ರಯತ್ನಿಸಿ. ಇದು ನಿಮ್ಮ ದೇಹದ ಭಾಗಗಳಿಗೆ ನೇರವಾಗಿ ಬಣ್ಣಗಳು ತಗುಲದಂತೆ ತಡೆಯುತ್ತದೆ. ಚಲನಚಿತ್ರಗಳಲ್ಲಿ ಜನರು ಹೋಳಿ ಆಡುವಾಗ ಸಣ್ಣ ಬಟ್ಟೆಗಳನ್ನೇ ಧರಿಸುವುದನ್ನು ನಾವು ನೋಡುತ್ತೇವೆ. ಆದರೆ ವಾಸ್ತವವಾಗಿ ಇದು ಸರಿಯಲ್ಲ. ಏಕೆಂದರೆ ಇದು ನಿಮ್ಮ ಚರ್ಮದ ಹೆಚ್ಚಿನ ಭಾಗಗಳನ್ನು ಕಠಿಣ ಬಣ್ಣಗಳಿಗೆ ಒಡ್ಡುತ್ತದೆ. ಇದು ತ್ವಚೆಗೆ ಸಮಸ್ಯೆಯನ್ನು ಉಂಟುಮಾಡಬಹುದು. ಹಾಗಾಗಿ ಬಿಗಿಯಾಗಿರದ, ಪೂರ್ಣ ತೋಳಿನ ಹತ್ತಿಯಂತಹ ತಿಳಿ ಬಟ್ಟೆಯನ್ನೇ ಹೋಳಿ ಆಡುವಾಗ ಧರಿಸಿ.

2. ತೈಲಗಳನ್ನು ಬಳಸಿ

2. ತೈಲಗಳನ್ನು ಬಳಸಿ

ನೀವು ಹೋಳಿ ಆಡಲು ಹೊರಡುವ ಮೊದಲು, ನಿಮ್ಮ ದೇಹದ ಎಲ್ಲಾ ಭಾಗಗಳ ಮೇಲೆ ಎಣ್ಣೆಯನ್ನು ಲೇಪಿಸಿ ಕೇವಲ ಹೊರಗೆ ಕಾಣಿಸುವ ತ್ವಚೆಗೆ ಮಾತ್ರವಲ್ಲ, ಸಂಪೂರ್ಣ ನಿಮ್ಮ ಮೈಗೆ ಎಣ್ಣೆಯನ್ನು ಹಚ್ಚಿಕೊಳ್ಳಿ. ತೈಲವು ಚರ್ಮವನ್ನು ಜಿಡ್ಡಿನಿಂದ ಇರುವಂತೆ ಮಾಡುತ್ತದೆ ಮತ್ತು ಯಾವುದೇ ಬಣ್ಣಗಳು ನಿಮ್ಮ ಚರ್ಮದಿಂದ ಇಳಿಯದಂತೆ ತಡೆಯುತ್ತದೆ. ತೈಲವು ನಿಮ್ಮ ಚರ್ಮ ಮತ್ತು ಕಠಿಣ ಬಣ್ಣಗಳ ನಡುವೆ ತಡೆಗೋಡೆಯಂತೆ ಕಾರ್ಯನಿರ್ವಹಿಸುತ್ತದೆ. ಈ ಸಲಹೆಯನ್ನು ಖಂಡಿತವಾಗಿ ಪಾಲಿಸಿ, ನಿಮ್ಮ ಮುಖ ಮತ್ತು ದೇಹದಲ್ಲಿ ಬಣ್ಣಗಳು ತೊಳೆದ ನಂತರವೂ ಉಳಿಯುವುದಿಲ್ಲ ಎಂದು ನೀವೇ ಕಂಡುಕೊಳ್ಳುವಿರಿ. ಇದಕ್ಕಾಗಿ ತೆಂಗಿನಕಾಯಿ ಅಥವಾ ಆಲಿವ್ ಎಣ್ಣೆಯಂತಹ ದಪ್ಪ ಎಣ್ಣೆಯನ್ನು ಬಳಸುವಂತೆ ಬಳಸಿ. ಏಕೆಂದರೆ ಈ ತೈಲಗಳು ನಿಮ್ಮ ತ್ವಚೆಯನ್ನು ಸುಲಭವಾಗಿ ಶುಷ್ಕಗೊಳಿಸುವುದಿಲ್ಲ.

3. ಪೆಟ್ರೋಲಿಯಂ ಜೆಲಿ

3. ಪೆಟ್ರೋಲಿಯಂ ಜೆಲಿ

ಬಣ್ಣಗಳು ನಿಮ್ಮ ತುಟಿಯ ಮೇಲೂ ಪರಿಣಾಮ ಬೀರುವುದನ್ನು ತಡೆಯಲು ನಿಮ್ಮ ತುಟಿಗಳಿಗೆ ದಪ್ಪವಾದ ಪೆಟ್ರೋಲಿಯಂ ಜೆಲಿಯನ್ನು ಅಂದರೆ ಲಿಪ್ ಬಾಮ್ ಬಳಸಿ. ನಿಮ್ಮ ಕುತ್ತಿಗೆಯ ಹಿಂಭಾಗ, ಕಿವಿಗಳ ಹಿಂಭಾಗ ಮತ್ತು ನಿಮ್ಮ ಬೆರಳುಗಳ ನಡುವೆ ಎಣ್ಣೆ ಹಚ್ಚಲು ತಪ್ಪಿಹೋಗಿರಬಹುದು ಹಾಗಾಗಿ ಇಂಥ ಸ್ಥಳಗಳಲ್ಲಿ ಪೆಟ್ರೋಲಿಯಂ ಜೆಲಿಯನ್ನು ಹಚ್ಚಿ. ಪೆಟ್ರೋಲಿಯಂ ಜೆಲಿ ತುಂಬಾ ದಪ್ಪವಾದ ವಿನ್ಯಾಸವನ್ನು ಹೊಂದಿದೆ ಹಾಗಾಗಿ ಹೋಳಿ ಆಡಲು ಹೊರಡುವಾಗ ತುಟಿಗೆ ಲಿಪ್ ಬಾಮ್ ಹಚ್ಚಲು ನಾವು ಸೂಚಿಸುತ್ತೇವೆ.

4. ಹೈಡ್ರೇಶನ್ (ಶುಷ್ಕತೆ)

4. ಹೈಡ್ರೇಶನ್ (ಶುಷ್ಕತೆ)

ನೀವು ಹೋಳಿ ಆಡುವಾಗ ನಿಮ್ಮ ದೇಹವನ್ನು ಹೈಡ್ರೀಕರಿಸುವುದು ಬಹಳ ಮುಖ್ಯ. ನೀರು ಕುಡಿಯಲು ಆಟವಾಡುವುದನ್ನು ನಿಲ್ಲಿಸಿ ಹಿಂತಿರುಗಿ ಬರಲು ಉದಾಸೀನ ಮಾಡುವ ಸಾಕಷ್ಟು ಜನರು ಈ ಸಲಹೆಯನ್ನು ಹೆಚ್ಚಾಗಿ ನಿರ್ಲಕ್ಷಿಸುತ್ತಾರೆ. ಜನರು ಆಗಾಗ ನೀರು ಕುಡಿಯುವುದನ್ನು ಮರೆಯುತ್ತಾರೆ. ಆದರೆ, ಬಣ್ಣಗಳು ನಿಮ್ಮ ಚರ್ಮವನ್ನು ಒಣಗಿಸಲು ಅನುಕೂಲವಾಗುವ ನಿಮ್ಮ ದೇಹದ ಶುಷ್ಕತೆಗೆ ಅವಕಾಶ ಮಾಡಿಕೊಡಬೇಡಿ. ನೀವೇ ನಿಮ್ಮ ದೇಹವನ್ನು ಹೈಡ್ರೇಟ್ ಮಾಡಲು ನೆನಪಿಲ್ಲದಿದ್ದರೆ, ನಿಮ್ಮ ಚರ್ಮವು ಇನ್ನಷ್ಟು ಒಣಗುತ್ತದೆ, ಇದರಿಂದ ಬಣ್ಣಗಳು ಚರ್ಮಕ್ಕೆ ಅಂಟಿಕೊಳ್ಳುವುದು ಸುಲಭವಾಗುತ್ತದೆ.

5. ಸೂರ್ಯ ಕಿರಣಗಳಿಂದ ರಕ್ಷಣೆ

5. ಸೂರ್ಯ ಕಿರಣಗಳಿಂದ ರಕ್ಷಣೆ

ನಿಮ್ಮ ದೇಹವು ಬಟ್ಟೆಯಿಂದ ಮುಚ್ಚಲ್ಪಡುತ್ತದೆ ಎಂದು ನೀವು ಭಾವಿಸಿ ಸನ್ಸ್ಕ್ರೀನ್ ಗಳನ್ನು ಬಳಸುವುದನ್ನು ನಿರ್ಲಕ್ಷಿಸಬೇಡಿ. ಹೋಳಿ ಸಮಯದಲ್ಲಿ ಚರ್ಮವು ಕಳೆಗುಂದುವುದು, ಕಂದು ಬಣ್ಣಕ್ಕೆ ತಿರುಗುವುದು ತುಂಬಾ ಸುಲಭ. ಹಾಗಾಗಿ ಇದರಿಂದ ರಕ್ಷಣೆ ಪಡೆಯಲು ಎಸ್ಪಿಎಫ್ ಉತ್ಪನ್ನಗಳನ್ನು ಬಳಸಿ ಮತ್ತು ನೀವು ಯಾವುದೇ ಎಣ್ಣೆಯನ್ನು ಲೇಪಿಸಿಕೊಳ್ಳುವ ಮೊದಲು ಸನ್ ಸ್ಕ್ರೀನ್ ಕ್ರೀಮ್ ಗಳನ್ನು ಬಳಸಿ, ಏಕೆಂದರೆ ತೈಲಗಳು, ಸೂರ್ಯನ ಕಿರಣಕ್ಕೆ ಸನ್ಸ್ಕ್ರೀನ್ ನಿಮ್ಮ ಚರ್ಮದಿಂದ ಹೀರಲ್ಪಡುವುದನ್ನು ತಡೆಯುತ್ತವೆ. ಹೆಚ್ಚಿನ ಹಾಗೂ ಉತ್ತಮ ಫಲಿತಾಂಶಗಳಿಗಾಗಿ ಎಸ್ಪಿಎಫ್ 30 ಅಥವಾ ಅದಕ್ಕಿಂತ ಹೆಚ್ಚಿನದಾದ ಸನ್ಸ್ಕ್ರೀನ್ ಗಳನ್ನೇ ಬಳಸಿ.

6. ತೈಲಗಳು ಮತ್ತು ಸನ್ಸ್ಕ್ರೀನ್ ಬಳಸುವ ಮೊದಲು ನಿಮ್ಮ ಮುಖವನ್ನು ತೊಳೆಯಿರಿ

6. ತೈಲಗಳು ಮತ್ತು ಸನ್ಸ್ಕ್ರೀನ್ ಬಳಸುವ ಮೊದಲು ನಿಮ್ಮ ಮುಖವನ್ನು ತೊಳೆಯಿರಿ

ನೀವು ಎಣ್ಣೆ ಅಥವಾ ಸನ್ಸ್ಕ್ರೀನ್ ಹಾಕುವ ಮೊದಲು ನಿಮ್ಮ ಮುಖವನ್ನು ಸಾಧ್ಯವಾದಷ್ಟು ಸ್ವಚ್ಛವಾಗಿರಿಸಿಕೊಳ್ಳಿ, ಮುಖದ ಮೇಲೆ ಈಗಾಗಲೇ ಕೊಳೆ ಮತ್ತು ಧೂಳಿದ್ದರೆ ಚರ್ಮವು ಇನ್ನಷ್ಟು ಹಾನಿಯಾಗುವ ಸಾಧ್ಯತೆ ಹೆಚ್ಚು.

7. ಕ್ಲೆನ್ಸಿಂಗ್ ಆಯಿಲ್ (ಶುದ್ಧೀಕರಣ ತೈಲ) ಅಥವಾ ಬಾಮ್ ಬಳಸಿ

7. ಕ್ಲೆನ್ಸಿಂಗ್ ಆಯಿಲ್ (ಶುದ್ಧೀಕರಣ ತೈಲ) ಅಥವಾ ಬಾಮ್ ಬಳಸಿ

ಹೋಳಿಯ ನಂತರ ತ್ವಚೆಯಿಂದ ಬಣ್ಣಗಳನ್ನು ತೆಗೆದುಹಾಕಲು ಸಾಬೂನು ಬಳಸದಿರುವುದು ಉತ್ತಮ, ಏಕೆಂದರೆ ಬಣ್ಣಗಳಿಂದಾಗಿ ಈಗಾಗಲೇ ಶುಷ್ಕವಾಗಿರುವ ಚರ್ಮದ ಮೇಲೆ ಸಾಬೂನು ನಿಜವಾಗಿಯೂ ಕಠಿಣ ಪರಿಣಾಮ ಬೀರುತ್ತದೆ. ಸೋಪಿನಲ್ಲಿರುವ ಕ್ಷಾರವು ನಿಮ್ಮ ತ್ವಚೆಯನ್ನು ಇನ್ನಷ್ಟು ಒಣಗಿಸುತ್ತದೆ. ನಿಮ್ಮ ಮುಖದಿಂದ ಬಣ್ಣಗಳನ್ನು ತೆಗೆಯಲು ಮೊದಲ ಹಂತವಾಗಿ ಕ್ಲೆನ್ಸಿಂಗ್ ಆಯಿಲ್ ನ್ನು ಅಥವಾ ಬಾಮ್ ನ್ನು ಬಳಸಿ. ಅತಿಯಾದ ಮೇಕಪ್ ತೆಗೆಯಲು ಇವುಗಳನ್ನು ಬಳಸಲಾಗುತ್ತದೆ, ಹಾಗೂ ಇವು ನಿಮ್ಮ ತ್ವಚೆಯನ್ನು ಕೂಡ ರಕ್ಷಿಸುತ್ತವೆ. ಇದರಿಂದಾಗಿ ನಿಮ್ಮತ್ವಚೆಯಲ್ಲಿರುವ ಎಣ್ಣೆ ಅಂಶವನ್ನು ತೆಗೆಯದೆ ಬಣ್ಣಗಳನ್ನು ನಿಮ್ಮ ಮುಖದಿಂದ ಸ್ವಚ್ಛಗೊಳಿಸಬಹುದು.

8. ಎಫ್ಫೋಲಿಯೇಶನ್ ಮಾಡದಿರಿ

8. ಎಫ್ಫೋಲಿಯೇಶನ್ ಮಾಡದಿರಿ

ನಿಮ್ಮ ಮುಖದ ಮೇಲೆ ಬಣ್ಣಗಳು ಉಳಿದಿರುವುದು ನಿಮಗೆ ಬೇಜಾರಿನ ವಿಷಯ! ಆದರೆ ನಿಮ್ಮ ಚರ್ಮವನ್ನು ಹೆಚ್ಚು ಎಫ್ಫೋಲಿಯೇಟ್ ಮಾಡುವುದು ಅಥವಾ ಉಜ್ಜುವುದು ಒಳ್ಳೆಯದಲ್ಲ. ಏಕೆಂದರೆ ಮ್ಖವನ್ನು ಸ್ಕ್ರಬ್ಬಿಂಗ್ ಮಾಡುವುದು ಅಥವಾ ಉಜ್ಜುವುದು ಈ ಸಮಯದಲ್ಲಿ ನಿಮ್ಮ ಚರ್ಮಕ್ಕೆ ಹಾನಿ ಮಾಡಬಹುದು. ಏಕೆಂದರೆ ಚರ್ಮವು ಈಗಾಗಲೇ ಸೂಕ್ಷ್ಮವಾಗಿರುತ್ತದೆ. ನಿಮ್ಮ ತ್ವಚೆಯಿಂದ ಬಣ್ಣ ಹೋಗುವವರೆಗೆ ಕ್ಲೆನ್ಸಿಂಗ್ ಆಯಿಲ್ ಅಥವಾ ಬಾಮ್ ಗಳನ್ನೆ ಬಳಸಿ.

9. ತೇವಾಂಶ

9. ತೇವಾಂಶ

ನಿಮ್ಮ ಚರ್ಮವನ್ನು ತೇವಗೊಳಿಸಿ. ನಿಮ್ಮ ಮುಖದ ಮೇಲೆ ಮಾತ್ರವಲ್ಲ, ಬದಲಿಗೆ ನಿಮ್ಮ ಸಂಪೂರ್ಣ ದೇಹಕ್ಕೆ ತೇವಾಂಶ ಬೇಕು. ತೇವಾಂಶವು ನಿಮ್ಮ ತ್ವಚೆಯಲ್ಲಿ ಉಳಿಯುವಂತೆ ಮಾಡುವ ಹೈಲುರಾನಿಕ್ ಆಮ್ಲವನ್ನು ಹೊಂದಿರುವ ಫೇಸ್ ಕ್ರೀಮ್ ಬಳಸಿ, ಈ ಆಮ್ಲವು ಪರಿಸರದಿಂದ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ನಿಮ್ಮ ತ್ವಚೆಯನ್ನು ತೇವಾಂಶಭರಿತವಾಗಿಸುತ್ತದೆ. ಬಣ್ಣಗಳು ನಿಮ್ಮ ಚರ್ಮವನ್ನು ಹೇಗೆ ಒಣಗಿಸುತ್ತದೆಯೋ ಅಷ್ಟೇ, ನಿಮ್ಮ ಚರ್ಮವನ್ನು ತೇವಾಂಶಯುಕ್ತ ವನ್ನಾಗಿಸುವುದು ಅತ್ಯಗತ್ಯ. ನಿಮ್ಮ ಚರ್ಮಕ್ಕೆ ಗರಿಷ್ಠ ತೇವಾಂಶವನ್ನು ಒದಗಿಸುವ, ಶಿಯಾ ಬಟರ್ ಅಥವಾ ಕೋಕೋ ಬಟರ್ ನ್ನುಹೊಂದಿರುವ ಮಾಯಿಶ್ಚರೈಸರ್ಸ್ ಗಳನ್ನು ಬಳಸಿ.

10. ನಿಮ್ಮ ತ್ವಚೆಗೆ ಕೊಂಚ ವಿರಾಮ ನೀಡಿ

10. ನಿಮ್ಮ ತ್ವಚೆಗೆ ಕೊಂಚ ವಿರಾಮ ನೀಡಿ

ಕೆಲವು ದಿನಗಳವರೆಗೆ ನಿಮ್ಮ ತ್ವಚೆಗೆ ಮೇಕಪ್ ಅಥವಾ ತುಂಬಾ ಕಠಿಣವಾದದ್ದೇನನ್ನೂ ಹಚ್ಚಬೇಡಿ. ನಿಮ್ಮ ಚರ್ಮವು ಹಾನಿಯಿಂದ ಸುಧಾರಿಸಿಕೊಳ್ಳಲು ಮತ್ತು ಅದರ ತೇವಾಂಶವನ್ನು ಮರಳಿ ಪಡೆಯಲು ಸ್ವಲ್ಪ ಸಮಯ ಬೇಕಾಗುತ್ತದೆ. ನಿಮ್ಮ ಚರ್ಮಕ್ಕೆ ಅಂಟಿಕೊಂಟ ಬಣ್ಣಗಳು ಸಂಪೂರ್ಣ ಹೋಗಲಿ, ತದನಂತರ ನಿಮ್ಮ ತ್ವಚೆಗೆ ನಿಮ್ಮ ದಿನನಿತ್ಯದ ಮೇಕಪ್ ಮಾಡಿಕೊಳ್ಳಬಹುದು.

ನೀವು ಹೋಳಿಯನ್ನು ಸಂತೋಷದಿಂದ ಆಚರಿಸುತ್ತಿರುತ್ತೀರಿ, ವರ್ಷಕ್ಕೊಮ್ಮೆ ಬರುವ ಈ ಹೋಳಿ ತುಂಬಾ ಮಜವಾಗಿರುತ್ತದೆ. ಇಂತಹ ಸಮಯದಲ್ಲಿ ನೀವು ನಿಮ್ಮ ತ್ವಚೆಯ ಬಗ್ಗೆ ಚಿಂತಿಸಬಾರದು ಎಂಬುದು ನಮ್ಮ ಸಲಹೆ. ಹೀಗಾಗಿ ಮೇಲಿನ ಸಲಹೆಗಳನ್ನು ಪಾಲಿಸಿ ಹೋಳಿಯನ್ನು ಆಡಿ.

English summary

Holi 2020: How To Take Care Of Your Skin Before And After Holi

Here we are discussing about how to take care of your skin before and after holi. While the entire family is enjoying the last thing you want to do is be a spoilsport and keep worrying about your skin. We have some tips for you so that you can avoid that from happening. Read more.
X
Desktop Bottom Promotion