For Quick Alerts
ALLOW NOTIFICATIONS  
For Daily Alerts

ಐಬ್ರೋ ಥ್ರೆಡ್ಡಿಂಗ್ ವೇಳೆ ಆಗುವ ನೋವನ್ನು ಕಡಿಮೆ ಮಾಡಲು ಈ ಟಿಪ್ಸ್‌ ಟ್ರೈ ಮಾಡಿ

|

ಹೆಣ್ಣಿನ ಅಂದ ಕಣ್ಣಿನಲ್ಲಿದೆ ಎಂಬ ಮಾತಿನಂತೆ, ಸುಂದರವಾದ ಕಣ್ಣುಗಳು ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ, ತಕ್ಷಣಕ್ಕೇ ಇತರರನ್ನು ಆಕರ್ಷಿಸುತ್ತವೆ. ಕಣ್ಣಿನ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಹುಬ್ಬುಗಳ ಪಾತ್ರ ಮಹತ್ವದ್ದೇ.. ದಪ್ಪ ಮತ್ತು ಉದ್ದವಾದ ಹುಬ್ಬುಗಳಿಂದ ಮುಖ ಅರಳುವುದರಲ್ಲಿ ಯಾವುದೇ ಸಂಶಯವಿಲ್ಲ.

ಹುಬ್ಬುಗಳಿಗೆ ಆಕಾರ ನೀಡಲು, ಮಹಿಳೆಯರು ಸಾಮಾನ್ಯವಾಗಿ ಥ್ರೆಡ್ಡಿಂಗ್ ಮಾಡಿಸಿಕೊಳ್ಳುತ್ತಾರೆ. ಇದನ್ನು ಮಾಡುವಾಗ ಸಾಕಷ್ಟು ನೋವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಕೆಲವರ ಚರ್ಮವು ತುಂಬಾ ಸೂಕ್ಷ್ಮವಾಗಿರುವುದರಿಂದ, ಹುಬ್ಬನ್ನು ದಾರದಿಂದ ಎಳೆಯುವಾಗ ತ್ವಚೆ ಕೆಂಪು ಬಣ್ಣಕ್ಕೆ ತಿರುಗುತ್ತದೆ ಜೊತೆಗೆ ಜೊತೆಗೆ ಕಣ್ಣುಗಳಲ್ಲಿ ಊತವೂ ಕಂಡುಬರುತ್ತದೆ. ಆದರೆ ಕೆಲವು ಸಲಹೆಗಳನ್ನು ಅಳವಡಿಸಿಕೊಂಡರೆ, ಥ್ರೆಡಿಂಗ್ ಸಮಯದಲ್ಲಿ ನೋವನ್ನು ನಿವಾರಿಸಬಹುದು. ಅದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.

ಹುಬ್ಬು ಥ್ರೆಡಿಂಗ್ ಅಥವಾ ಐಬ್ರೋಸ್ ಮಾಡುವ ಸಮಯದಲ್ಲಿ ನೋವನ್ನು ತಪ್ಪಿಸುವುದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಟಾಲ್ಕಂ ಪೌಡರ್ ಬಳಸಿ:

ಟಾಲ್ಕಂ ಪೌಡರ್ ಬಳಸಿ:

ಪಾರ್ಲರ್ ನಲ್ಲಿ ಥ್ರೆಡ್ ಮಾಡುವ ಮುನ್ನ ಹುಬ್ಬುಗಳಿಗೆ ಪೌಡರ್ ಹಚ್ಚಿ. ದಾರದಿಂದ ಉಂಟಾಗುವ ನೋವನ್ನು ಹುಬ್ಬುಗಳಿಗೆ ಪೌಡರ್ ಹಚ್ಚುವುದರಿಂದ ಕಡಿಮೆ ಮಾಡಬಹುದು. ನೋವಿನಿಂದಾಗಿ ನೀವು ಐ ಬ್ರೋಸ್ ಥ್ರೆಡಿಂಗ್ ಮಾಡಿಕೊಳ್ಳಲು ಹಿಂಜರಿಯುತ್ತಿದ್ದರೆ, ಮುಂದಿನ ಬಾರಿ ಮೊದಲು ಹುಬ್ಬುಗಳ ಮೇಲೆ ಟಾಲ್ಕಂ ಪೌಡರ್ ಹಚ್ಚಿದರೆ ಅದು ನೋವನ್ನು ಕಡಿಮೆ ಮಾಡುತ್ತದೆ.

ಐಸ್‌ಕ್ಯೂಬ್‌ನಿಂದ ಮಸಾಜ್:

ಐಸ್‌ಕ್ಯೂಬ್‌ನಿಂದ ಮಸಾಜ್:

ಹುಬ್ಬು ಥ್ರೆಡಿಂಗ್ ಮಾಡಿ, ಹುಬ್ಬುಗಳ ಸುತ್ತ ಐಸ್ ಕ್ಯೂಬ್‌ಗಳಿಂದ ಮಸಾಜ್ ಮಾಡುವುದರಿಂದ ನೋವನ್ನು ಕಡಿಮೆ ಮಾಡಬಹುದು. ಹುಬ್ಬುಗಳ ಸುತ್ತ ಐಸ್‌ನಿಂದ ಮಸಾಜ್ ಮಾಡುವುದರಿಂದ ಥ್ರೆಡ್ ಮಾಡುವಾಗ ನೋವು ಉಂಟಾಗುವುದಿಲ್ಲ. ನಿಮಗೆ ಬೇಕಾದರೆ, ಥ್ರೆಡ್ ಮಾಡುವಾಗ, ಆ ಸ್ಥಳದಲ್ಲಿ ಹೆಚ್ಚು ನೋವು ಬರದೇ ಇರಲು, ಆ ಪ್ರದೇಶವನ್ನು ಬಲವಾಗಿ ವಿಸ್ತರಿಸಿ.

ಅಲೋವೆರಾ ಜೆಲ್‌ನಿಂದ ಮಸಾಜ್:

ಅಲೋವೆರಾ ಜೆಲ್‌ನಿಂದ ಮಸಾಜ್:

ಅನೇಕ ಬಾರಿ ಮಹಿಳೆಯರು ಹುಬ್ಬು ಶೇಪ್ ಮಾಡಿದ ನಂತರ ಉರಿ ಅನುಭವಿಸುತ್ತಾರೆ. ಆದ್ದರಿಂದ ಕಿರಿಕಿರಿ ಮತ್ತು ಚರ್ಮದ ಮೇಲಾದ ಕೆಂಪು ಬಣ್ಣವನ್ನು ಕಡಿಮೆ ಮಾಡಲು ಅಲೋವೆರಾ ಜೆಲ್ ಅನ್ನು ಬಳಸಬಹುದು. ಅಲೋವೆರಾ ಜೆಲ್ ಅನ್ನು ಬಳಸುವುದರಿಂದ ಹುಬ್ಬಿನ ಉರಿ ಕಡಿಮೆಯಾಗುತ್ತದೆ. ಜೊತೆಗೆ ಕಣ್ಣುಗಳ ಸುತ್ತ ಊತ ಇರುವುದಿಲ್ಲ.

ಚೂಯಿಂಗ್ ಗಮ್ ಅನ್ನು ಅಗಿಯಿರಿ:

ಚೂಯಿಂಗ್ ಗಮ್ ಅನ್ನು ಅಗಿಯಿರಿ:

ಹುಬ್ಬು ಥ್ರೆಡಿಂಗ್ ನೋವನ್ನು ತಪ್ಪಿಸಲು, ನಿಮ್ಮ ಹುಬ್ಬುಗಳನ್ನು ಶೇಪ್ ಮಾಡುವಾಗ ಚೂಯಿಂಗ್ ಗಮ್ ಅಗಿಯಿರಿ. ಥ್ರೆಡಿಂಗ್ ಸಮಯದಲ್ಲಿ ಚೂಯಿಂಗ್ ಗಮ್ ನೋವನ್ನು ಅಗಿಯುವುದರಿಂದ ಹುಬ್ಬುಗಳ ಮೇಲಾಗುವ ನೋವನ್ನು ಕಡಿಮೆ ಮಾಡುತ್ತದೆ.

ಮಾಯಿಶ್ಚರೈಸರ್ ಹಚ್ಚಿ:

ಮಾಯಿಶ್ಚರೈಸರ್ ಹಚ್ಚಿ:

ಥ್ರೆಡಿಂಗ್ ಮಾಡುವ ಮೊದಲು ಮಾಯಿಶ್ಚರೈಸರ್ ಹಚ್ಚುವುದರಿಂದ ನಿಮ್ಮ ಹುಬ್ಬಿನ ಕೂದಲು ತೇವವಾಗಿ, ಮೃದುವಾಗುತ್ತದೆ, ಕೀಳಲು ಸುಲಭವಾಗುತ್ತದೆ. ಥ್ರೆಡ್ ಮಾಡಿದ ನಂತರ, ಆ ಪ್ರದೇಶದ ಮೇಲೆ ಕೆಲವು ಹನಿ ಮಾಯಿಶ್ಚರೈಸರ್ ಅನ್ನು ಹಚ್ಚಬೇಕು. ಇದರಿಂದ ಆ ಪ್ರದೇಶವು ಕೂಲ್ ಆಗಿ, ಕಿರಿಕಿರಿ, ಉರಿ ಎಲ್ಲವೂ ನಿಧಾನವಾಗಿ ಶಮನಗೊಳ್ಳುತ್ತದೆ.

English summary

How to Reduce the Pain of Eyebrow Threading in Kannada

Here we talking about How to Reduce the Pain of Eyebrow Threading in Kannada, read on
Story first published: Thursday, October 7, 2021, 17:46 [IST]
X
Desktop Bottom Promotion