For Quick Alerts
ALLOW NOTIFICATIONS  
For Daily Alerts

ಜಿಂಕೆ ಕಣ್ಣಿನ ಸೌಂದರ್ಯದಿಂದ ಮಿಂಚಬೇಕೆ, ಇಲ್ಲಿದೆ ಟ್ರಿಕ್ಸ್

|

ಕೊರೋನಾ ಕಾರಣದಿಂದ ಹೆಚ್ಚಿನವರಿಗೆ ಮನೆಯಿಂದಲೇ ಕೆಲಸ. ಇದರಿಂದ ಹೆಚ್ಚು ಕಾಲ ಡೆಸ್ಕಟಾಪ್ ಪರದೆಯನ್ನೇ ನೋಡುವಂತಹ ಪರಿಸ್ಥಿತಿ. ಇನ್ನೂ ಮನೆಯಲ್ಲಿ ಬಿಡುವಿರುವವರು ಇಡೀ ದಿನ ಒಟಿಟಿ ಮೂಲಕ ಮನರಂಜನೆ ಪಡೆಯುತ್ತಿದ್ದಾರೆ. ನಿರಂತರವಾಗಿ ಮೊಬೈಲ್, ಕಂಪ್ಯೂಟರ್ ಪರದೆಗಳನ್ನು ನೋಡುತ್ತಿರುವುದರಿಂದ ನಮ್ಮ ಕಣ್ಣುಗಳು ಒಣಗಿ ಕಳೆಗುಂದಿವೆ.

ಆದರೆ ಚಿಂತೆ ಬೇಡ, ಹೇಗೂ ಮನೆಯಲ್ಲಿಯೇ ಇರುವುದರಿಂದ ನಿಮ್ಮ ಅಡುಗೆ ಮನೆಯ ಸಾಮಾಗ್ರಿಗಳನ್ನು ಬಳಸಿ ನಿಮ್ಮ ಕಣ್ಣಿನಲ್ಲಿ ಕಾಂತಿ ಹೊಮ್ಮುವಂತೆ ಮಾಡಬಹುದು. ಅದೇಗೆ ಅಂತ ಯೋಚನೆ ಮಾಡ್ತಾ ಇದೀರಾ? ಈ ಸ್ಟೋರಿ ನೋಡಿ.

ಹೊಳೆಯುವಂತಹ ಕಣ್ಣುಗಳನ್ನು ಪಡೆಯಲು ಕೆಲವೊಂದು ಹೋಮ್ ಮೇಡ್ ಟಿಪ್ಸ ಗಳನ್ನು ಈ ಕೆಳಗೆ ನೀಡಲಾಗಿದೆ:

ಗ್ರೀನ್ ಟೀ ಬ್ಯಾಗ್:

ಗ್ರೀನ್ ಟೀ ಬ್ಯಾಗ್:

ನೀವು ಗ್ರೀನ್ ಟೀ ಪ್ರಿಯರಾಗಿದ್ದರೆ, ಅವುಗಳನ್ನು ಬಳಸಿದ ನಂತರ, ಆ ಚೀಲಗಳನ್ನು ಎಸೆಯಬೇಡಿ. ಆ ಬ್ಯಾಗ್ ಗಳನ್ನು ಪ್ರತಿ ಬಾರಿ ಬಳಸಿದ ನಂತರ ಫ್ರಿಜ್ನಲ್ಲಿ ಇರಿಸಿ ಮತ್ತು ಅವು ತಣ್ಣಗಾದ ನಂತರ ಹೊರತೆಗೆಯಿರಿ. ಈಗ ನಿಮ್ಮ ಕಣ್ಣುಗಳನ್ನು ಮುಚ್ಚಿ, ನಿಮ್ಮ ಕಣ್ಣುಗಳ ಮೇಲೆ ಆ ತಣ್ಣನೆಯ ಗ್ರೀನ್ ಟೀ ಬ್ಯಾಗ್ ಗಳನ್ನು ಇಟ್ಟು ವಿಶ್ರಾಂತಿ ಪಡೆಯಿರಿ. 2011 ರ ಅಧ್ಯಯನದ ಪ್ರಕಾರ, ಗ್ರೀನ್ ಟೀಯಲ್ಲಿ ಬಹಳ ಶಕ್ತಿಯುತವಾದ ಪಾಲಿಫಿನಾಲ್ ಇದ್ದು, ಅದನ್ನು ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ (ಇಜಿಸಿಜಿ) ಎಂದು ಕರೆಯಲಾಗುತ್ತದೆ, ಇದು ಕಾರ್ನಿಯಾದ ಜೀವಕೋಶಗಳ ಮೇಲೆ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಪರಿಣಾಮಗಳನ್ನು ಬೀರುತ್ತದೆ.

ರೋಸ್ ವಾಟರ್:

ರೋಸ್ ವಾಟರ್:

ಈ ರೋಸ್ ವಾಟರ್ ಸೌಂದರ್ಯ ಪ್ರೇಮಿಗಳ ಆಲ್ ಟೈಮ್ ಫೇವರೆಟ್ ವಸ್ತುವಾಗಿದೆ. ಆರೋಗ್ಯದಿಂದ ಹಿಡಿದು, ಸೌಂದರ್ಯ ವರ್ಧಕವಾಗಿ ಕೆಲಸ ಮಾಡುವ ರೋಸ್ ವಾಟರ್ ಕಣ್ಣಿಗೂ ಬಹಳ ಸಹಕಾರಿ. ಹತ್ತಿ ಉಂಡೆಯನ್ನು ರೋಸ್ ವಾಟರ್ ನಲ್ಲಿ ಅದ್ದಿ, ಅದನ್ನು ನಿಮ್ಮ ಕಣ್ಣುಗಳ ಮೇಲೆ ಇರಿಸಿ. ಡಲ್ ಕಣ್ಣುಗಳಿಗೆ ಚಿಕಿತ್ಸೆ ನೀಡಲು ರೋಸ್ ವಾಟರ್ ಅಗ್ಗದ ಜೊತೆಗೆ ಉತ್ತಮ ಪರಿಹಾರವಾಗಿದೆ.

ಸೌತೆಕಾಯಿ:

ಸೌತೆಕಾಯಿ:

ನಿಮಗೆಲ್ಲ ತಿಳಿದಿರುವ ಹಾಗೆ, ಸೌತೆಕಾಯಿ ಕಣ್ಣನ ಆರೋಗ್ಯವನ್ನು ಕಾಪಾಡಲು ಬಹಳ ಸಹಕಾರಿ. ಹೊಳೆಯುವ. ಪ್ರಕಾಶಮಾನವಾದ ಕಣ್ಣುಗಳಿಗಾಗಿ, ನಿಮ್ಮ ದಣಿದ ಕಣ್ಣುಗಳ ಮೇಲೆ ಸೌತೆಕಾಯಿ ಚೂರುಗಳನ್ನು ಇರಿಸಿ ಮತ್ತು 15 ನಿಮಿಷಗಳ ನಂತರ ಅವುಗಳನ್ನು ತೆಗೆಯಿರಿ. ಹೀಗೆ ಮಾಡುವುದರಿಂದ ದೀರ್ಘಕಾಲದ ಕೆಲಸದಿಂದ ನಿಮ್ಮ ಕಣ್ಣಿಗಾದ ಸುಸ್ತು ದೂರವಾಗಿ, ಕೂಲ್ ಅನುಭವ ಆಗುತ್ತದೆ.

ನೀರು ಕುಡಿಯಿರಿ:

ನೀರು ಕುಡಿಯಿರಿ:

ನಿಮ್ಮ ಕಣ್ಣು ಸುಂದರವಾಗಲು ಉತ್ತಮ ಪರಿಹಾರವೆಂದರೆ ಕನಿಷ್ಠ ದಿನಕ್ಕೆ 8-10 ಗ್ಲಾಸ್ ನೀರನ್ನು ಕುಡಿಯುವುದು. ನಿರು ಕುಡಿಯುವುದು ಎಲ್ಲದಕ್ಕೂ ಮುಖ್ಯವಾಗಿದೆ. ಸಂಪೂರ್ಣ ಆರೋಗ್ಯವನ್ನು ಕಾಪಾಡಲು ಉತ್ತಮ ಪ್ರಮಾಣದಲ್ಲಿ ನೀರು ಕುಡಿಯುವುದು ಮುಖ್ಯವಾಗಿದೆ. ದೇಹದಲ್ಲಿ ನೀರಿನಾಂಶ ಕಡಿಮೆ ಆಗುವುದರಿಂದಲೇ ಎಲ್ಲಾ ಸಮಸ್ಯೆಗಳು ಉದ್ಭವವಾಗುವುದು. ಆದ್ದರಿಂದ ಹೆಚ್ಚೆಚ್ಚು ನೀರು ಕುಡಿಯಿರಿ.

ಸ್ಟ್ರಾಬೆರಿ:

ಸ್ಟ್ರಾಬೆರಿ:

ಸ್ಟ್ರಾಬೆರಿಗಳಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿವೆ. ನೀವು ಅವುಗಳನ್ನು ಫ್ರಿಜ್ ನಲ್ಲಿ ಇರಿಸಿ ತಿಂದಾಗ ನಿಮ್ಮ ಬಾಯಿ ಮತ್ತು ನಿಮ್ಮ ಕಣ್ಣುಗಳಿಗೆ ದೈವಿಕ ಅನುಭವ ನಿಡುತ್ತದೆ. ಅಂದರೆ ತಂಪಾದ ಅನುಭವದೊಮದಿಗೆ ರಿಲಾಕ್ಸ್ ಅನುಭವವನ್ನು ನಿಮಗೆ ನೀಡುತ್ತದೆ. ಆದ್ದರಿಂದ ಸ್ಟ್ರಾಬೆರಿಯನ್ನು ಸೇವಿಸಿ.

English summary

Hacks to Get Those Twinkling Eyes in Kannada

Here we talking about Hacks to get those twinkling eyes in Kannada, read on
Story first published: Tuesday, May 4, 2021, 9:30 [IST]
X