For Quick Alerts
ALLOW NOTIFICATIONS  
For Daily Alerts

ಡಾರ್ಕ್‌ಸರ್ಕಲ್ ಹೋಗಲಾಡಿಸಲು ನೀವೇ ಈ ಕ್ರೀಮ್ ಮಾಡಿ ಬಳಸಿ

|

ಮೊಗದ ಸೌಂದರ್ಯದಲ್ಲಿ ಕಣ್ಣಿನ ಪಾತ್ರ ಬಹಳ ದೊಡ್ಡದು. ಆದರೆ ಇಂದಿನ ಒತ್ತಡದ ಜೀವನವು ನಮಗೆ ಕಣ್ಣಿನ ಸುತ್ತಲೂ ಡಾರ್ಕ್ ಸರ್ಕಲ್, ಊತವನ್ನು ನೀಡುತ್ತದೆ. ಇದು ನಮ್ಮ ಸೌಂದರ್ಯವನ್ನು ಕುಗ್ಗಿಸಲು ಕಾರಣವಾಗುವುದು ಎಂದರೆ ತಪ್ಪಾಗಲ್ಲ. ಹಾಗಾಗಿ ನಮ್ಮ ಕಣ್ಣನ್ನು ಈ ಸಮಸ್ಯೆಗಳಿಂದ ಮುಕ್ತವಾಗಿಡಿಸಿಕೊಳ್ಳುವುದು ತುಂಬಾ ಮುಖ್ಯ.

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಜೀನವಶೈಲಿಯನ್ನ ಸ್ವಲ್ಪ ಬದಲಾಯಿಸಿಕೊಂಡು, ಕಣ್ಣಿನ ಕ್ರೀಮ್ ಗಳನ್ನ ಬಳಕೆ ಮಾಡಬೇಕು. ಮಾರುಕಟ್ಟೆಯಲ್ಲಿ ದೊರಕುವ ರಾಸಾಯನಿಕಯುಕ್ತ ಕ್ರೀಮ್ ಗಳಿಗಿಂತ, ನೀವೇ ಸ್ವತಃ ಮನೆಯಲ್ಲಿಯೇ ತಯಾರಿಸಿದ ಕ್ರೀಮ್ ಗಳ ಹೆಚ್ಚು ಸುರಕ್ಷಿತವಾಗಿರುತ್ತವೆ. ಆದ್ದರಿಂದ ನಾವಿಂದು ಅಂತಹ ಕಣ್ಣಿನ ಕ್ರೀಮ್ ಗಳ ಬಗ್ಗೆ ವಿವರಣೆ ನೀಡಲಿದ್ದೇವೆ.

ನೀವೇ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಕಣ್ಣಿನ ಕ್ರೀಮ್ ಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಅಲೋವೆರಾ ಮತ್ತು ರೋಸ್ ವಾಟರ್ ಐ ಕ್ರೀಮ್:

ಅಲೋವೆರಾ ಮತ್ತು ರೋಸ್ ವಾಟರ್ ಐ ಕ್ರೀಮ್:

ನಿಮ್ಮ ಕಣ್ಣುಗಳಿಗೆ ತಯಾರಿಸಬಹುದಾದ ಸುಲಭವಾದ DIY ಕ್ರೀಮ್‌ಗಳಲ್ಲಿ ಇದು ಒಂದಾಗಿದ್ದು, ಪಿಗ್ಮೆಂಟೇಶನ್, ಕಣ್ಣುಗಳ ಕೆಳಗಿರುವ ಕಪ್ಪು ಕಲೆಗಳನ್ನು ಕಡಿಮೆಮಾಡಲು ಸಹಾಯ ಮಾಡುತ್ತದೆ. ಮಾತ್ರವಲ್ಲದೆ ಈ ನೈಸರ್ಗಿಕ ಕ್ರೀಮ್ ನಿಮ್ಮ ಕಣ್ಣುಗಳನ್ನು ಸೂಪರ್ ಹೈಡ್ರೇಟ್ ಆಗಿಡುವಂತೆ ಮಾಡುತ್ತದೆ.

ಇದಕ್ಕಾಗಿ ನಿಮಗೆ ಮಿಕ್ಸಿಂಗ್ ಬೌಲ್, ಅಲೋವೆರಾ ಜೆಲ್, ರೋಸ್ ವಾಟರ್ ಮತ್ತು ವಿಟಮಿನ್ ಇ ಕ್ಯಾಪ್ಸೂಲ್ ಗಳ ಬೇಕು. 2 ಟೀಸ್ಪೂನ್ ಅಲೋವೆರಾ ಜೆಲ್ ತೆಗೆದುಕೊಂಡು ಅದಕ್ಕೆ 2 ವಿಟಮಿನ್ ಇ ಕ್ಯಾಪ್ಸುಲ್ಗಳನ್ನು ಹಾಕಿ ಮಿಶ್ರಣ ಮಾಡಿ. ಕ್ರೀಮ್ ಸ್ವಲ್ಪ ತೆಳ್ಳಗಾಗಲು ಅದಕ್ಕೆ ಕೆಲವು ಹನಿ ರೋಸ್ ವಾಟರ್ ಮತ್ತು ತೆಂಗಿನ ಎಣ್ಣೆಯನ್ನು ಸೇರಿಸಿ, ಸ್ವಲ್ಪ ಸಮಯ ಬಿಡಿ. ನಂತರ ಇದನ್ನು ನಿಮ್ಮ ಕಣ್ಣುಗಳ ಕೆಳಗೆ ಹಚ್ಚಿ, ಸ್ವಲ್ಪ ಹೊತ್ತು ಮಸಾಜ್ ಮಾಡಿ, ಮರುದಿನ ಬೆಳಿಗ್ಗೆ ನಿಮ್ಮ ಮುಖವನ್ನು ತೊಳೆಯಿರಿ.

ಶಿಯಾ ಬೆಣ್ಣೆ ಮತ್ತು ಕ್ಯಾಮೊಮೈಲ್ ಕ್ರೀಮ್:

ಶಿಯಾ ಬೆಣ್ಣೆ ಮತ್ತು ಕ್ಯಾಮೊಮೈಲ್ ಕ್ರೀಮ್:

ತ್ವಚೆಯನ್ನು ಹೈಡ್ರೇಟಿಂಗ್ ನೈಸರ್ಗಿಕ ಪದಾರ್ಥಗಳಲ್ಲಿ ಇವುಗಳು ಪ್ರಮುಖವಾಗಿವೆ. ಶಿಯಾ ಬೆಣ್ಣೆ ಮತ್ತು ಕ್ಯಾಮೊಮೈಲ್ ನಿಮ್ಮ ಕಣ್ಣುಗಳಡಿ ಇರುವ ಶುಷ್ಕತೆ, ತುರಿಕೆ, ಸೂಕ್ಷ್ಮತೆಯನ್ನು ಕಡಿಮೆ ಮಾಡಿ, ತಂಪಾಗಿಡುವಂತೆ ಮಾಡುತ್ತದೆ.

ಈ ಅದ್ಭುತವಾದ ಕಣ್ಣಿನ ಕ್ರೀಮ್ ತಯಾರಿಸಲು ನಿಮಗೆ 1 ಟೀ ಚಮಚ ಶಿಯಾ ಬೆಣ್ಣೆ ಮತ್ತು 12 ಹನಿ ಶುದ್ಧ ಕ್ಯಾಮೊಮೈಲ್ ಸಾರಭೂತ ತೈಲ ಬೇಕಾಗುತ್ತದೆ. ಒಂದು ಬಾಣಲೆಯಲ್ಲಿ ಶಿಯಾ ಬೆಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಕ್ಯಾಮೊಮೈಲ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ತಣ್ಣಗಾಗಲು ಬಿಡಿ. ಇದನ್ನು ಕಣ್ಣುಗಳ ಕೆಳಗೆ ಹಚ್ಚಿಕೊಳ್ಳಿ. ನೋವು ಮತ್ತು ತುರಿಕೆಯಿಂದ ತಕ್ಷಣದ ಪರಿಹಾರವನ್ನು ನೀವು ಗಮನಿಸಬಹುದು.

ಸೌತೆಕಾಯಿ ಮತ್ತು ಪುದೀನಾ ಕ್ರೀಮ್:

ಸೌತೆಕಾಯಿ ಮತ್ತು ಪುದೀನಾ ಕ್ರೀಮ್:

ಸೌತೆಕಾಯಿಯು ಸಾಕಷ್ಟು ನೀರಿನಾಶವನ್ನು ಹೊಂದಿದ್ದು, ಇದರಿಂದ ತಯಾರಿಸಿದ ಈ ಕ್ರೀಮ್ ಕಣ್ಣುಗಳಲ್ಲಿನ ಎಲ್ಲಾ ನೋವು ಮತ್ತು ಒತ್ತಡವನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಇದರ ಹೊರತಾಗಿ ಪುದೀನಾವು ಉತ್ತಮವಾದ ಶೀತಕವಾಗಿದ್ದು ಚರ್ಮವನ್ನು ಫ್ರೆಶ್ ಮಾಡುವ ಗುಣಗಳಿಂದ ಸಮೃದ್ಧವಾಗಿದೆ. ಜೊತೆಗೆ ಡಾರ್ಕ್ ಸರ್ಕಲ್ ಗಳನ್ನು ನಿವಾರಿಸಿ, ಕಣ್ಣಿನ ಊತವನ್ನು ಕಡಿಮೆ ಮಾಡುವುದು.

ಇದಕ್ಕಾಗಿ ಮಿಕ್ಸಿಗೆ ಎರಡೂ ಪದಾರ್ಥಗಳನ್ನು ರೋಸ್ ವಾಟರ್ ಮತ್ತು ಒಂದು ಟೀಚಮಚ ಹಸಿ ಹಾಲಿನೊಂದಿಗೆ ಬೆರೆಸಿ, ನಂತರ ಅದನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ, ಕೆಲವು ಹನಿ ಆಲಿವ್ ಎಣ್ಣೆಯನ್ನು ಸೇರಿಸಿ, ಮಿಕ್ಸ್ ಮಾಡಿ. ಈ ಕ್ರೀಮ್ ನ್ನು ನಿಮ್ಮ ಕಣ್ಣುಗಳ ಕೆಳಗೆ ಹಚ್ಚಿ, ಚೆನ್ನಾಗಿ ಮಸಾಜ್ ಮಾಡಿ, ಅದನ್ನು ಹೀರಿಕೊಳ್ಳ ಲು ಬಿಡಿ.

English summary

DIY Eye Cream Recipes in Kannada

Here we talking about DIY Eye Cream Recipes in Kannada, read on
X
Desktop Bottom Promotion