For Quick Alerts
ALLOW NOTIFICATIONS  
For Daily Alerts

ಶುಷ್ಕ ತ್ವಚೆ ತಡೆಗಟ್ಟುವ ನೈಸರ್ಗಿಕ ಸ್ಕ್ರಬ್‌

|

ಚಳಿಗಾಲದಲ್ಲಿ ನಮ್ಮ ದೇಹದ ಚರ್ಮದ ಒಣಗುವಿಕೆ ಬಹಳ ಸಾಮಾನ್ಯ ಸಂಗತಿಯಾಗಿರುವುದು. ನಿಧಾನವಾಗಿ ಸುತ್ತಲಿನ ವಾತಾವರಣ ಬದಲಾದಂತೆ ನಮ್ಮ ದೇಹದ ಮೇಲಿನ ಚರ್ಮದ ವಿನ್ಯಾಸ ಕೂಡ ಬದಲಾಗುತ್ತದೆ. ನೀವು ಸ್ವತಃ ಎಣ್ಣೆಯ ಚರ್ಮವನ್ನು ಹೊಂದಿದ್ದರೂ ಸಹ, ಚಳಿಗಾಲದ ತಣ್ಣನೆಯ ಗಾಳಿ ನಿಮ್ಮ ದೇಹದ ಚರ್ಮದ ತೇವಾಂಶವನ್ನು ಆರಿಸಿ ಚರ್ಮದಲ್ಲಿ ನೀರಿನ ಅಂಶದ ಕೊರತೆಯನ್ನು ಉಂಟಾಗಿಸಿ ಚರ್ಮವನ್ನು ಒಣಗುವಂತೆ ಮಾಡುತ್ತದೆ. ಜೊತೆಗೆ ಚಳಿಗಾಲದ ಸಮಯದಲ್ಲಿ ನಮ್ಮ ದೇಹದ ಚರ್ಮದಲ್ಲಿ ಕೆರೆತ ಉಂಟಾಗಿ, ಅಲ್ಲಲ್ಲಿ ಕಲೆಗಳು ಮೂಡಿ ಚರ್ಮ ಕೆಂಪನೆಯ ಬಣ್ಣಕ್ಕೆ ತಿರುಗುತ್ತದೆ. ಜೊತೆಗೆ ಚರ್ಮದ ಮೇಲೆ ಸತ್ತ ಜೀವಕೋಶಗಳು ಶೇಖರಣೆಗೊಂಡು ಚರ್ಮದ ಮೇಲಿನ ಸಣ್ಣ ಸಣ್ಣ ರಂಧ್ರಗಳನ್ನು ಮುಚ್ಚಿ ಹಾಕಿ ಚರ್ಮಕ್ಕೆ ಬಹಳಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತವೆ.

 body scrub in winter

ಆದರೆ ಇನ್ನು ಮುಂದೆ ಆ ಭಯ ಬೇಡ. ಕೆಲವೊಂದು ಹೈಡ್ರಾಟಿಂಗ್ ಬಾಡಿ ಸ್ಕ್ರಬ್ ಗಳನ್ನು ಉಪಯೋಗಿಸುವುದರಿಂದ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಇದರಿಂದ ಚರ್ಮ ಸಂಬಂಧಿತ ಕಲೆಗಳನ್ನು ಮತ್ತು ವ್ಯಾಧಿಗಳನ್ನು ದೂರ ಮಾಡಿ ನಯವಾದ ಮತ್ತು ತೇವಾಂಶವಿರುವ ಚರ್ಮವನ್ನು ಒದಗಿಸುತ್ತದೆ. ಇನ್ನೊಂದು ಒಳ್ಳೆಯ ಸುದ್ದಿ ಎಂದರೆ ನಿಮಗೆ ಇಷ್ಟವಾಗುವ ಬಾಡಿ ಸ್ಕ್ರಬ್ ಗಳನ್ನು ನಿಮ್ಮ ಅಡುಗೆ ಮನೆಯ ಕೆಲವು ಪದಾರ್ಥಗಳಿಂದ ನೀವೇ ತಯಾರು ಮಾಡಬಹುದು. ಇಲ್ಲಿ ನೀವೇ ಸ್ವತಃ ತಯಾರು ಮಾಡಿಕೊಳ್ಳಬಹುದಾದಂತಹ ಬಾಡಿ ಸ್ಕ್ರಬ್ ಗಳನ್ನು ಬಳಸಿ, ಚಳಿಗಾಲದ ಸಂದರ್ಭದಲ್ಲಿ ನಿಮ್ಮ ಒಣ ಚರ್ಮವನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂದು ತಿಳಿಸಿ ಕೊಡುತ್ತೇವೆ.

1. ಕಾಫಿ ಮತ್ತು ತಾಜಾ ತೆಂಗಿನ ಎಣ್ಣೆಯ ಸ್ಕ್ರಬ್

1. ಕಾಫಿ ಮತ್ತು ತಾಜಾ ತೆಂಗಿನ ಎಣ್ಣೆಯ ಸ್ಕ್ರಬ್

ಈ ಸ್ಕ್ರಬ್ ನಿಮ್ಮ ಚರ್ಮಕ್ಕೆ ನೀರಿನ ತೇವಾಂಶವನ್ನು ಒದಗಿಸಿ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಕಾಫಿಯಲ್ಲಿರುವ ಕೆಫಿನ್ ಅಂಶ ನಮ್ಮ ಚರ್ಮವನ್ನು ಫ್ರೀ ರಾಡಿಕಲ್ ಪ್ರಭಾವದಿಂದ ಉಂಟಾಗುವ ಹಾನಿಯನ್ನು ತಪ್ಪಿಸಿ, ನಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಸುಗಮಗೊಳಿಸಿ, ಚರ್ಮವನ್ನು ಪುನಶ್ಚೇತನಗೊಳಿಸುವುದು. ತೆಂಗಿನ ಎಣ್ಣೆಯಲ್ಲಿ ಉತ್ತಮ ಎಂಮೂಲಿಯೆಂಟ್ ಗುಣ ಲಕ್ಷಣಗಳಿದ್ದು, ಚರ್ಮಕ್ಕೆ ಇದೂ ಕೂಡ ತೇವಾಂಶವನ್ನು ನೀಡುತ್ತದೆ. ದೇಹದ ಸಕ್ಕರೆ ಅಂಶ ಚರ್ಮವನ್ನು ಪದಗಳಿರುವಂತೆ ಮಾಡಿ ಸತ್ತ ಜೀವ ಕೋಶಗಳನ್ನು ಮತ್ತು ವಿಷಕಾರಿ ತ್ಯಾಜ್ಯವನ್ನು ತೆಗೆದು ಹಾಕಿ, ಆರೋಗ್ಯಕರ ಚರ್ಮವನ್ನು ನೀಡುತ್ತದೆ.

ಬಾಡಿ ಸ್ಕ್ರಬ್ ತಯಾರು ಮಾಡಲು ಬೇಕಾಗಿರುವ ಸಾಮಾಗ್ರಿಗಳು
  • ಒಂದು ಕಪ್ ಗ್ರೌಂಡ್ ಕಾಫಿ.
  • ಅರ್ಧ ಕಪ್ ವರ್ಜಿನ್ ಕೋಕೋನಟ್ ಆಯಿಲ್.
  • 1 ಕಪ್ ಸಕ್ಕರೆ.
  • ಬಾಡಿ ಸ್ಕ್ರಬ್ ತಯಾರು ಮಾಡುವ ವಿಧಾನ

    ಮೊದಲಿಗೆ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಗ್ರೌಂಡ್ ಕಾಫಿ ಮತ್ತು ಸಕ್ಕರೆ ಹಾಕಿ ಚೆನ್ನಾಗಿ ತಿರುಗಿಸಿ. ನಂತರ ಈ ಮಿಶ್ರಣಕ್ಕೆ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ ಚೆನ್ನಾಗಿ ಕಲಸಿ. ಈ ರೀತಿ ತಯಾರಾದ ಸ್ಕ್ರಬ್ ಅನ್ನು ಒಂದು ಗಾಜಿನ ಜಾರಿನಲ್ಲಿ ಹಾಕಿ ಎತ್ತಿಡಿ. ಇದನ್ನು ಉಪಯೋಗಿಸಲು ಮೊದಲು ನಿಮ್ಮ ಚರ್ಮವನ್ನು ಸ್ವಲ್ಪ ತೇವ ಮಾಡಿ ಚರ್ಮದ ಮೇಲೆ 5 ನಿಮಿಷಗಳ ತನಕ ಸ್ಕ್ರಬ್ ನಿಂದ ನಯವಾಗಿ ಮಸಾಜ್ ಮಾಡಿ. ನಂತರ ಸ್ನಾನ ಮಾಡಿ. ವಾರಕ್ಕೆ ಒಂದು ಬಾರಿ ಇದನ್ನು ಪ್ರಯತ್ನಿಸಿ.

    2. ಉಪ್ಪು ಮತ್ತು ಜೇನು ತುಪ್ಪದ ಸ್ಕ್ರಬ್

    2. ಉಪ್ಪು ಮತ್ತು ಜೇನು ತುಪ್ಪದ ಸ್ಕ್ರಬ್

    ಇದರಲ್ಲಿ ಆಂಟಿ - ಆಕ್ಸಿಡೆಂಟ್, ಆಂಟಿ - ಮೈಕ್ರೋಬಿಯಲ್ ಮತ್ತು ಆಂಟಿ - ಏಜಿಂಗ್ ಗುಣ ಲಕ್ಷಣಗಳಿವೆ. ಜೇನು ತುಪ್ಪ ಚರ್ಮಕ್ಕೆ ಯಮೋಲಿಎಂಟ್ ಆಗಿ ಕೆಲಸ ಮಾಡುತ್ತದೆ. ಮನುಷ್ಯನ ದೇಹದ ಚರ್ಮದಲ್ಲಿ ನೀರಿನ ಅಂಶವನ್ನು ಹಾಗೆ ಉಳಿಯಲು ಬಿಟ್ಟು ಚರ್ಮದ ಮೇಲಿನ ಸಣ್ಣ ಸಣ್ಣ ರಂಧ್ರಗಳನ್ನು ತೆರೆಯುವಂತೆ ಮಾಡುತ್ತದೆ. ಇದರ ಜೊತೆಗೆ ಉಪ್ಪು ಸಹ ದೇಹದಲ್ಲಿ ನೀರಿನ ಅಂಶವನ್ನು ಹೆಚ್ಚಾಗುವಂತೆ ಮಾಡಿ ದೇಹದ ಒಣ ಚರ್ಮ ಉಂಟು ಮಾಡುವ ಉರಿಯೂತವನ್ನು ನಿಯಂತ್ರಣ ಮಾಡುತ್ತದೆ.

    ತಯಾರು ಮಾಡಲು ಬೇಕಾಗಿರುವ ಸಾಮಾಗ್ರಿಗಳು

    • ಒಂದು ಕಪ್ ಉಪ್ಪು.
    • 1/3 ಕಪ್ ಹಸಿ ಜೇನು ತುಪ್ಪ.
    • 1/2 ಕಪ್ ಆಲಿವ್ ಆಯಿಲ್.
    • ಉಪಯುಕ್ತ ಸ್ಕ್ರಬ್ ತಯಾರು ಮಾಡಿ ಅದನ್ನು ಬಳಸುವ ವಿಧಾನ

      ಒಂದು ಬೌಲ್ ನಲ್ಲಿ ಜೇನು ತುಪ್ಪ ಮತ್ತು ಆಲಿವ್ ಆಯಿಲ್ ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಸ್ವಲ್ಪ ಉಪ್ಪು ಸೇರಿಸಿ ಪೇಸ್ಟ್ ನ ಹದಕ್ಕೆ ಬರುವಂತೆ ಕಲಸಿ. ತಯಾರಾದ ಸ್ಕ್ರಬ್ ಅನ್ನು ಒಂದು ಗ್ಲಾಸ್ ಜಾರಿನಲ್ಲಿ ಮುಚ್ಚಿಡಿ. ನೀವು ಸ್ನಾನ ಮಾಡುವ ಸಮಯದಲ್ಲಿ ನಿಮ್ಮ ಚರ್ಮವನ್ನು ಸ್ವಲ್ಪ ನೆನೆಸಿ ಸ್ಕ್ರಬ್ ತೆಗೆದುಕೊಂಡು ಚರ್ಮದ ಮೇಲೆ ಒಂದೆರಡು ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಸ್ನಾನ ಮಾಡುವಾಗ ಮಸಾಜ್ ಮಾಡಿದ ಚರ್ಮದ ಭಾಗವನ್ನು ಚೆನ್ನಾಗಿ ತೊಳೆದುಕೊಳ್ಳಿ. ಇದೇ ರೀತಿ ವಾರಕ್ಕೆ 1 - 2 ಬಾರಿ ಪ್ರಯತ್ನಿಸಿ.

      3. ಓಟ್ ಮೀಲ್ ಮತ್ತು ಬ್ರೌನ್ ಶುಗರ್ ಸ್ಕ್ರಬ್

      3. ಓಟ್ ಮೀಲ್ ಮತ್ತು ಬ್ರೌನ್ ಶುಗರ್ ಸ್ಕ್ರಬ್

      ಓಟ್ ಮೀಲ್ ಮತ್ತು ಶುಗರ್ ಮಿಶ್ರಣದ ಸ್ಕ್ರಬ್ ನಿಮ್ಮ ಮುಖದ ಮೇಲಿನ ತ್ಯಾಜ್ಯಗಳನ್ನು ದೂರಗೊಳಿಸಿ ನಿಮ್ಮ ಚರ್ಮವನ್ನು ಸುಕ್ಕುಗಟ್ಟಿಕೊಳ್ಳದಂತೆ ನೋಡಿಕೊಳ್ಳುತ್ತದೆ. ಓಟ್ ಮೀಲ್ ಚರ್ಮವನ್ನು ನಯವಾಗಿ ಎಸ್ಫೋಲಿಯೇಟ್ ಮಾಡಿ ಚರ್ಮದ ಮೇಲಿನ ಕೊಳಕು ಮತ್ತು ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತದೆ. ಬ್ರೌನ್ ಶುಗರ್ ಚರ್ಮದ ಮೇಲೆ ಕಲೆಗಳು ಹೆಚ್ಚಾಗದಂತೆ ತಡೆದು ಚರ್ಮ ಸುಕ್ಕುಗಟ್ಟದಂತೆ ಚರ್ಮವನ್ನು ಎಸ್ಫೋಲಿಯೇಟ್ ಮಾಡುತ್ತದೆ. ಜೊತೆಗೆ ಜೋಜೋಬ ಆಯಿಲ್ ಆಂಟಿ - ಇನ್ಫಾಮೇಟರಿ ಗುಣ ಲಕ್ಷಣಗಳನ್ನು ಮತ್ತು ಆಂಟಿ - ಏಜಿಂಗ್ ಚಿಕಿತ್ಸೆಯನ್ನು ಚರ್ಮಕ್ಕೆ ಒದಗಿಸುತ್ತದೆ.

      ತಯಾರು ಮಾಡಲು ಬೇಕಾಗಿರುವ ಸಾಮಾಗ್ರಿಗಳು

      • ಅರ್ಧ ಕಪ್ ಗ್ರೌಂಡೆಡ್ ಓಟ್ ಮೀಲ್.
      • ಅರ್ಧ ಕಪ್ ಬ್ರೌನ್ ಶುಗರ್.
      • ಅರ್ಧ ಕಪ್ ಜೇನುತುಪ್ಪ.
      • ಕೆಲವು ಹನಿಗಳಷ್ಟು ಜೊಜೊಬಾ ಎಣ್ಣೆ.
      • ತಯಾರು ಮಾಡುವ ವಿಧಾನ

        ಮೊದಲು ಓಟ್ ಮೀಲ್ ಅನ್ನು ಒಂದು ಬೌಲ್ ನಲ್ಲಿ ತೆಗೆದುಕೊಳ್ಳಿ. ಅದಕ್ಕೆ ಬ್ರೌನ್ ಶುಗರ್, ಜೇನು ತುಪ್ಪ ಮತ್ತು ಜೋಜೋಬ ಎಣ್ಣೆಯನ್ನು ಮಿಶ್ರಣ ಮಾಡಿ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಕಲಸಿ. ಸ್ಕ್ರಬ್ ಹಚ್ಚುವ ಮುಂಚೆ ಚರ್ಮವನ್ನು ಸ್ವಲ್ಪ ನೆನೆಸಿ ಕೆಲವು ನಿಮಿಷಗಳ ಕಾಲ ಸ್ಕ್ರಬ್ ನಿಂದ ಮಸಾಜ್ ಮಾಡಿ. ತದ ನಂತರ ಸ್ನಾನ ಮಾಡಿ. ಈ ರೀತಿ ತಯಾರು ಮಾಡಿದ ಸ್ಕ್ರಬ್ ಅನ್ನು ವಾರದಲ್ಲಿ ಒಂದು ಅಥವಾ ಎರಡು ಬಾರಿ ಉಪಯೋಗಿಸಿ.

        4. ಬಾದಾಮಿ ಮತ್ತು ಜೇನು ತುಪ್ಪದ ಸ್ಕ್ರಬ್

        4. ಬಾದಾಮಿ ಮತ್ತು ಜೇನು ತುಪ್ಪದ ಸ್ಕ್ರಬ್

        ಬಾದಾಮಿ ಬೀಜಗಳಲ್ಲಿ ವಿಟಮಿನ್ ' ಈ ' ಅಂಶ ಬಹಳಷ್ಟಿದ್ದು, ಇದು ಮನುಷ್ಯನ ದೇಹದ ಚರ್ಮವನ್ನು ಫ್ರೀ ರಾಡಿಕಲ್ ಗಳ ಹಾನಿಯಿಂದ ಮತ್ತು ಸೂರ್ಯನ ಹಾನಿಕಾರಕ ಅತಿನೇರಳೆ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಇದು ನಿಮ್ಮ ಚರ್ಮವನ್ನು ಮೃದುವಾಗಿಸಿ ದಷ್ಟಪುಷ್ಟವಾಗುವಂತೆ ಮಾಡುತ್ತದೆ.

        ತಯಾರು ಮಾಡಲು ಬೇಕಾಗಿರುವ ಪದಾರ್ಥಗಳು

        • 4 - 5 ಬಾದಾಮಿ ಬೀಜಗಳು.
        • ಒಂದು ಟೇಬಲ್ ಚಮಚದಷ್ಟು ಹಸಿ ಜೇನುತುಪ್ಪ.
        • ಕೆಲವು ಹನಿಗಳಷ್ಟು ಆರ್ಗನ್ ಆಯಿಲ್
        • ಬಳಸುವ ವಿಧಾನ

          ಮೊದಲಿಗೆ ಬಾದಾಮಿ ಬೀಜಗಳನ್ನು ತೆಗೆದುಕೊಂಡು ಮಿಕ್ಸರ್ ನಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಅದಕ್ಕೆ ಸ್ವಲ್ಪ ಜೇನು ತುಪ್ಪ ಮತ್ತು ಆರ್ಗನ್ ಆಯಿಲ್ ಮಿಶ್ರಣ ಮಾಡಿ ಪೇಸ್ಟ್ ನ ಹದಕ್ಕೆ ಸರಿಯಾಗಿ ತಯಾರಿ ಮಾಡಿಕೊಳ್ಳಿ. ಇದನ್ನು ಚರ್ಮದ ಮೇಲೆ 5 - 10 ನಿಮಿಷಗಳ ಕಾಲ ವೃತ್ತಾಕಾರವಾಗಿ ಮಸಾಜ್ ಮಾಡಿ. ನಂತರ ನೀರಿನಿಂದ ಚೆನ್ನಾಗಿ ತೊಳೆಯಿರಿ. ವಾರದಲ್ಲಿ ಒಂದು ಬಾರಿ ಈ ಸ್ಕ್ರಬ್ ಯೂಸ್ ಮಾಡಿ.

          5. ಸಿ - ಸಾಲ್ಟ್ ಮತ್ತು ಲೆಮನ್ ಸ್ಕ್ರಬ್

          5. ಸಿ - ಸಾಲ್ಟ್ ಮತ್ತು ಲೆಮನ್ ಸ್ಕ್ರಬ್

          ಬಹಳಷ್ಟು ಪೌಷ್ಟಿಕ ಸತ್ವಗಳನ್ನು ಮತ್ತು ವಿಟಮಿನ್ ಗಳನ್ನು ಹೊಂದಿರುವ ಈ ಸ್ಕ್ರಬ್ ಚರ್ಮಕ್ಕೆ ನೈಸರ್ಗಿಕ ಎಮೋಲಿಯೆಂಟ್ ಗುಣ ಲಕ್ಷಣಗಳನ್ನು ಬಳಸಿ ನಿಮ್ಮ ಚರ್ಮವನ್ನು ಪ್ರಖರಗೊಳಿಸುತ್ತದೆ. ನಿಂಬೆ ಹಣ್ಣಿನಲ್ಲಿರುವ ವಿಟಮಿನ್ ' ಸಿ ' ಅಂಶ ಮತ್ತು ಕೊಲ್ಲಾಜೆನ್ ಚರ್ಮದ ಎಲಾಸ್ಟಿಕ್ ಗುಣ ಲಕ್ಷಣ ಹೆಚ್ಚಿಸಿ ಚರ್ಮದ ತೇವಾಂಶವನ್ನು ಉತ್ತಮಗೊಳಿಸುತ್ತದೆ. ಆಲಿವ್ ಆಯಿಲ್ ಕೂಡ ಚರ್ಮದ ತೇವಾಂಶವನ್ನು ಹೆಚ್ಚಿಸುತ್ತದೆ. ಸಿ - ಸಾಲ್ಟ್ ಚರ್ಮದ ಕೊಳೆ ಮತ್ತು ದುರ್ಗಂಧವನ್ನು ಹೋಗಲಾಡಿಸುತ್ತದೆ.

          ತಯಾರು ಮಾಡಲು ಬೇಕಾಗಿರುವ ಪದಾರ್ಥಗಳು

          • 1 ಕಪ್ ಸಿ - ಸಾಲ್ಟ್.
          • 1 ಟೇಬಲ್ ಚಮಚದಷ್ಟು ನಿಂಬೆ ರಸ.
          • 1 ಕಪ್ ಆಲಿವ್ ಆಯಿಲ್.
          • ತಯಾರು ಮಾಡುವ ಮತ್ತು ಬಳಸುವ ವಿಧಾನ

            1 ಕಪ್ ಉಪ್ಪಿಗೆ, ನಿಂಬೆ ರಸವನ್ನು ಹಾಕಿ ಜೊತೆಗೆ ಆಲಿವ್ ಆಯಿಲ್ ಮಿಶ್ರಣ ಮಾಡಿ. ಎಲ್ಲವನ್ನು ಚೆನ್ನಾಗಿ ಕಲಸಿ ಸ್ಕ್ರಬ್ ತಯಾರಿಸಿಕೊಳ್ಳಿ. ನೆನೆಸಿದ ಚರ್ಮದ ಮೇಲೆ ಸ್ಕ್ರಬ್ ಅನ್ನು 2 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ. ನಂತರ ಚರ್ಮವನ್ನು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಮಾಯಿಶ್ಚರೈಸರ್ ಅಪ್ಲೈ ಮಾಡಿ. ಈ ಸ್ಕ್ರಬ್ ಅನ್ನು ವಾರದಲ್ಲಿ ಎರಡು ಬಾರಿ ಬಳಸಿ.

            6. ಬ್ರೌನ್ ಶುಗರ್ ಮತ್ತು ವೆನಿಲ್ಲಾ ಎಕ್ಸ್ಟ್ರಾಕ್ಟ್ ಸ್ಕ್ರಬ್

            6. ಬ್ರೌನ್ ಶುಗರ್ ಮತ್ತು ವೆನಿಲ್ಲಾ ಎಕ್ಸ್ಟ್ರಾಕ್ಟ್ ಸ್ಕ್ರಬ್

            ಹೈಡ್ರಾಟಿಂಗ್ ಮತ್ತು exfoliating ಗುಣ ಲಕ್ಷಣಗಳನ್ನು ಹೊಂದಿರುವ ಈ ಸ್ಕ್ರಬ್ ಒಣ ಚರ್ಮವನ್ನು ಮತ್ತು ಬಾಡಿದ ಚರ್ಮವನ್ನು ಚಮತ್ಕಾರಿ ರೀತಿಯಲ್ಲಿ ಗುಣಪಡಿಸುತ್ತದೆ. ಚರ್ಮದ ಮೇಲೆ ಅಲ್ಲಲ್ಲಿ ಮೂಡಿ ಬಂದಿರುವ ಸುಕ್ಕುಗಳನ್ನು ಮತ್ತು ಕಲೆಗಳನ್ನು ಇಲ್ಲವಾಗಿಸುತ್ತದೆ. ಬ್ರೌನ್ ಶುಗರ್ ಮತ್ತು ತೆಂಗಿನ ಎಣ್ಣೆ ಚರ್ಮವನ್ನು ತೇವಾಂಶ ಮಾಡುತ್ತದೆ. ವೆನಿಲ್ಲಾ ಎಕ್ಸ್ಟ್ರಾಕ್ಟ್ ನಲ್ಲಿ ಆಂಟಿ - ಆಕ್ಸಿಡೆಂಟ್ ಮತ್ತು anti - ಇಂಪ್ಲಾಮೇಟರಿ ಗುಣ ಲಕ್ಷಣಗಳನ್ನು ಹೊಂದಿದ್ದು ಚರ್ಮವನ್ನು ಪುನಶ್ಚೇತನಗೊಳಿಸುತ್ತದೆ.

            ತಯಾರು ಮಾಡಲು ಬೇಕಾಗಿರುವ ಸಾಮಗ್ರಿಗಳು

            • 1/2 ಕಪ್ ಬ್ರೌನ್ ಶುಗರ್.
            • 1/2 ಕಪ್ ವೆನಿಲ್ಲಾ ಎಕ್ಸ್ಟ್ರಾಕ್ಟ್.
            • 1/2 ಕಪ್ ತೆಂಗಿನೆಣ್ಣೆ.
            • ಬಳಸುವ ವಿಧಾನ

              ಒಂದು ಬೌಲ್ ನಲ್ಲಿ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮ ದೇಹದ ಚರ್ಮವನ್ನು ನೆನೆಸಿ ವೃತ್ತಾಕಾರವಾಗಿ ಈ ಸ್ಕ್ರಬ್ ಮಸಾಜ್ ಮಾಡಿ ಕೆಲವು ನಿಮಿಷಗಳ ನಂತರ, ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಈ ಸ್ಕ್ರಬ್ ಬಳಸಿ.

              7. ಗ್ರೀನ್ ಟೀ ಮತ್ತು ಶುಗರ್ ಸ್ಕ್ರಬ್

              7. ಗ್ರೀನ್ ಟೀ ಮತ್ತು ಶುಗರ್ ಸ್ಕ್ರಬ್

              ಮೇಲಿನ ಎಲ್ಲಾ ಸ್ಕ್ರಬ್ ಗಳಿಗೆ ಹೋಲಿಸಿದರೆ ಇದೊಂದು ಶಕ್ತಿಯುತವಾದ ಸ್ಕ್ರಬ್ ಆಗಿದ್ದು, ತನ್ನಲ್ಲಿನ ನೈಸರ್ಗಿಕ ಅಂಶಗಳಿಂದ ಚರ್ಮದ ಒಳ ಭಾಗದಲ್ಲಿ ನೀರಿನ ಅಂಶವನ್ನು ಹೆಚ್ಚು ಮಾಡಿ ಚರ್ಮ ಕಟ್ ಆಗಿದ್ದರೆ ನೈಸರ್ಗಿಕವಾಗಿ ಬೆಳೆಯುವಂತೆ ಮಾಡುತ್ತದೆ. ಶಕ್ತಿಯುತವಾದ ಆಂಟಿ - ಆಕ್ಸಿಡೆಂಟ್ ಗುಣ ಲಕ್ಷಣಗಳು ಗ್ರೀನ್ ಟೀಯಲ್ಲಿದ್ದು ಚರ್ಮವನ್ನು ಪುನರುಜ್ಜೀವನಗೊಳಿಸಿ ನೈಸರ್ಗಿಕವಾದ ಹೊಳಪನ್ನು ಮರಳಿ ಕೊಡುತ್ತದೆ.

              ಸ್ಕ್ರಬ್ ತಯಾರು ಮಾಡಲು ಬೇಕಾಗಿರುವ ಸಾಮಗ್ರಿಗಳು

              • ಒಂದು ಕಪ್ ಗ್ರೀನ್ ಟೀ.
              • ಎರಡು ಕಪ್ ಬ್ರೌನ್ ಶುಗರ್.
              • 2 ಟೇಬಲ್ ಚಮಚದಷ್ಟು ಹಸಿ ಜೇನು ತುಪ್ಪ.
              • ಬಳಸುವ ವಿಧಾನ

                ಮೊದಲು ಗ್ರೀನ್ ಟೀ ಅನ್ನು ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ ನಂತರ ಕೊಠಡಿಯ ತಾಪಮಾನಕ್ಕೆ ಸರಿಯಾಗಿ ತಣ್ಣಗಾಗಿಸಿ. ಇದಕ್ಕೆ ಸಕ್ಕರೆ ಮತ್ತು ಹಸಿ ಜೇನು ತುಪ್ಪವನ್ನು ಹಾಕಿ ಒಂದು ಹದಕ್ಕೆ ಬರುವ ಹಾಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ನೆನೆಸಿರುವ ಮುಖದ ಚರ್ಮಕ್ಕೆ ವೃತ್ತಾಕಾರದಲ್ಲಿ 5 ನಿಮಿಷಗಳವರೆಗೆ ಮಸಾಜ್ ಮಾಡಿ. ನಂತರ ಕೆಲ ಸಮಯದ ನಂತರ ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ. ಒಂದು ವಾರಕ್ಕೆ ಒಮ್ಮೆಯಾದರೂ ಈ ಸ್ಕ್ರಬ್ ಅನ್ನು ಪ್ರಯತ್ನಿಸಿ.

                8. ಕಿತ್ತಳೆ ಸಿಪ್ಪೆಯ ಪುಡಿ ಮತ್ತು ಕಡಲೆ ಹಿಟ್ಟಿನ ಸ್ಕ್ರಬ್

                8. ಕಿತ್ತಳೆ ಸಿಪ್ಪೆಯ ಪುಡಿ ಮತ್ತು ಕಡಲೆ ಹಿಟ್ಟಿನ ಸ್ಕ್ರಬ್

                ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ' ಸಿ ' ಅಂಶ ಹೇರಳವಾಗಿದೆ. ಇದು ಚರ್ಮದ ಮೇಲಿನ ಸಣ್ಣ ಸಣ್ಣ ರಂಧ್ರಗಳನ್ನು ತೆರೆದುಕೊಳ್ಳುವಂತೆ ಮಾಡಿ, ನಿಮ್ಮ ಚರ್ಮದ ಎಲಾಸ್ಟಿಕ್ ಗುಣವನ್ನು ಅಭಿವೃದ್ಧಿ ಮಾಡುತ್ತದೆ. ಚರ್ಮವನ್ನು ನಯವಾಗಿ ರೂಪಿಸಿ ಹೊಳಪನ್ನು ಕಾಯ್ದಿರಿಸುತ್ತದೆ. ಕಡಲೆ ಹಿಟ್ಟು ಚರ್ಮವನ್ನು ಶುಚಿ ಮಾಡಿ ಯಾವುದೇ ಕಲ್ಮಶದಿಂದ ಒಣ ಚರ್ಮಕ್ಕೆ ಉಂಟಾಗುವ ಕಿರಿಕಿರಿಯನ್ನು ತಪ್ಪಿಸುತ್ತದೆ.

                ಸ್ಕ್ರಬ್ ತಯಾರಿಸಲು ಬೇಕಾಗಿರುವ ಆಹಾರ ಪದಾರ್ಥಗಳು

                • ಅರ್ಧ ಕಪ್ ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿ.
                • ಅರ್ಧ ಕಪ್ ಕಡಲೆ ಹಿಟ್ಟು.
                • ಒಂದು ಟೇಬಲ್ ಸ್ಪೂನ್ ನಿಂಬೆಯ ಹಣ್ಣಿನ ರಸ.
                • ಒಂದು ಚಮಚ ಹಸಿ ತೆಂಗಿನ ಎಣ್ಣೆ.
                • ಬಳಸುವ ವಿಧ

                  ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಯನ್ನು ಕಡಲೆ ಹಿಟ್ಟಿನ ಜೊತೆಗೆ ಚೆನ್ನಾಗಿ ಬೆರೆಸಿ, ಅದಕ್ಕೆ ಒಂದು ಟೇಬಲ್ ಚಮಚದಷ್ಟು ನಿಂಬೆ ಹಣ್ಣಿನ ರಸ ಸೇರಿಸಿ. ಸ್ವಲ್ಪ ನಿಂಬೆ ರಸವನ್ನು ಸೇರಿಸಿ ತೆಂಗಿನ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ತಯಾರಾದ ಸ್ಕ್ರಬ್ ತೆಗೆದುಕೊಂಡು ಚರ್ಮದ ಮೇಲೆ ಸ್ವಲ್ಪ ನೀರಿನಿಂದ ಮೊದಲೇ ನೆನೆಸಿ ವೃತ್ತಾಕಾರವಾಗಿ 5 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ಶುಚಿ ಮಾಡಿಕೊಳ್ಳಿ. ಒಂದು ವಾರಕ್ಕೆ 1 - 2 ಬಾರಿ ಈ ಸ್ಕ್ರಬ್ ಬಳಸಬಹುದು.

                  9. ಬಾಳೆ ಹಣ್ಣು ಮತ್ತು ಬ್ರೌನ್ ಶುಗರ್ ಸ್ಕ್ರಬ್

                  9. ಬಾಳೆ ಹಣ್ಣು ಮತ್ತು ಬ್ರೌನ್ ಶುಗರ್ ಸ್ಕ್ರಬ್

                  ಬಾಳೆ ಹಣ್ಣಿನಲ್ಲಿ ವಿಟಮಿನ್ ' ಎ ' ಅಂಶವಿದ್ದು, ಚರ್ಮವನ್ನು ತೇವಾಂಶಗೊಳಿಸಿ, ಚರ್ಮದ ಕೋಶಗಳನ್ನು ಉತ್ತೇಜಿಸಿ ಚರ್ಮವನ್ನು ಅಂತರಿಕವಾಗಿ ತೇವಗೊಳಿಸಿ ಆರೋಗ್ಯಕರವಾಗಿ ಮಾಡುತ್ತದೆ. ಬ್ರೌನ್ ಶುಗರ್ ಚರ್ಮದ ವಯಸ್ಸಾಗುವ ಗುಣ ಲಕ್ಷಣಗಳನ್ನು ತಡೆಯುತ್ತದೆ.

                  ಸ್ಕ್ರಬ್ ತಯಾರಿಕೆಯಲ್ಲಿ ಬಳಸುವ ಆಹಾರ ಸಾಮಗ್ರಿಗಳು

                  • ಒಂದು ಚೆನ್ನಾಗಿ ಮಾಗಿದ ದೊಡ್ಡದಾದ ಬಾಳೆ ಹಣ್ಣು.
                  • ಅರ್ಧ ಕಪ್ ಬ್ರೌನ್ ಶುಗರ್.
                  • ಮೊದಲು ಬಾಳೆ ಹಣ್ಣನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಒಂದು ಬೌಲ್ ನಲ್ಲಿ ಹಾಕಿ. ಅದಕ್ಕೆ ಸಕ್ಕರೆ ಹಾಕಿ ಎರಡನ್ನೂ ಚೆನ್ನಾಗಿ ಮ್ಯಾಶ್ ಮಾಡಿ ಪೇಸ್ಟ್ ನ ಹದಕ್ಕೆ ಬರುವಂತೆ ಕಲಸಿ. ನೀವು ಸ್ಕ್ರಬ್ ಹಚ್ಚಲು ಬಯಸುವ ಚರ್ಮದ ಭಾಗವನ್ನು ನೀರಿನಿಂದ ಮೊದಲು ಚೆನ್ನಾಗಿ ನೆನೆಸಿ ಈ ಸ್ಕ್ರಬ್ ಅನ್ನು ಒಂದೆರಡು ನಿಮಿಷಗಳವರೆಗೆ ವೃತ್ತಾಕಾರವಾಗಿ ಮಸಾಜ್ ಮಾಡಿ. ನಂತರ ಸ್ನಾನ ಮಾಡಿ ಶುಚಿ ಮಾಡಿಕೊಳ್ಳಿ. ಒಂದು ವಾರಕ್ಕೆ ಕಡೆ ಪಕ್ಷ ಒಂದು ಬಾರಿಯಾದರೂ ಈ ಸ್ಕ್ರಬ್ ಬಳಸುವ ಅಭ್ಯಾಸ ಮಾಡಿಕೊಳ್ಳಿ.

                    ನೋಡಿದಿರಲ್ಲ !!! ಈ ಮೇಲಿನ ಸ್ಕ್ರಬ್ ಗಳ ಉಪಯೋಗದಿಂದ ನೈಸರ್ಗಿಕವಾಗಿ ನಿಮ್ಮ ಚರ್ಮ ಪುಷ್ಟಿಗೊಂಡು, ನೀರಿನ ಅಂಶವನ್ನು ಆವಿ ಆಗದಂತೆ ತನ್ನಲ್ಲಿಯೇ ಉಳಿಸಿಕೊಂಡು ಚಳಿಗಾಲದಲ್ಲಿ ಚರ್ಮ ಒಣಗದಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ಚಳಿಗಾಲ ಪ್ರಾರಂಭವಾಗುವ ಮುಂಚಿನ ಸಮಯದಿಂದ ಈ ಸ್ಕ್ರಬ್ ಗಳನ್ನು ಬಳಸಲು ಮುಂದಾಗಿ. ಆಗ ನಿಮ್ಮ ಚರ್ಮ ಸ್ಕ್ರಬ್ ಬಳಕೆಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಆದರೆ ನಾವು ಮೇಲೆ ಹೇಳಿದ ಪ್ರಮಾಣದಲ್ಲಿ ಮಾತ್ರ ಉಪಯೋಗಿಸಿ. ಯಾವುದೇ ಕಾರಣಕ್ಕೂ ಅತಿಯಾದ ಬಳಕೆ ಬೇಡ. ನಿಯಮಿತವಾಗಿ ಬಳಸಿದರೂ ಆಗಾಗ ಬಳಸಬೇಡಿ.

English summary

Body Scrubs To Get Rid Of Dry Skin In Winter

Here we are discussing about body scrubs to get rid of dry skin in winter. Even if you naturally have oily skin, the cool winter air can strip the moisture of your skin and leave it dry and dehydrated. Here are 10 natural DIY body scrubs that you can use to beat the winter dry skin.Read more.
X
Desktop Bottom Promotion