For Quick Alerts
ALLOW NOTIFICATIONS  
For Daily Alerts

ಕಂಕುಳ ಆಕರ್ಷಕವಾಗಿರಬೇಕೆಂದರೆ ಈ 5 ಮಿಸ್ಟೇಕ್ಸ್ ಮಾಡದಿರಿ

|

ಸ್ಲೀವ್‌ಲೆಸ್‌ ಡ್ರೆಸ್‌ ಹಾಕುವುದಾದರೆ ಕಂಕುಳ ಸ್ವಚ್ಛವಾಗಿರಲೇಬೇಕು. ಅಲ್ಲಿ ಕೂದಲು ಬೆಳೆದಿದ್ದರೆ, ಕಂಕುಳ ಭಾಗ ಕಪ್ಪು-ಕಪ್ಪಾಗಿ ಕಂಡರೆ ನೋಡುವವರಿಗೂ, ನಿಮಗೂ ಮುಜುಗರ.

Alarming Underarm Mistakes You Need To Stop

ಸ್ಲೀವ್‌ಲೆಸ್ ಹಾಕಿದ ಮೇಲೆ ಕೈಗಳನ್ನು ಮೇಲಕ್ಕೆ ಎತ್ತುವಾಗ ಕಂಕುಳ ಮೈ ಬಣ್ಣದಂತೆ ಆಕರ್ಷಕವಾಗಿರಬೇಕು. ಆದರೆ ಕೆಲವರು ಆ ಭಾಗದ ಕೂದಲು ತೆಗೆದಿದ್ದರೂ ಆ ಭಾಗ ಕಪ್ಪಾಗಿ ಕಾಣುವುದು. ಈ ರೀತಿಯಿದ್ದರೆ ಸ್ಲೀವ್‌ಲೆಸ್ ಬಟ್ಟೆ ಹಾಕಲು ಮುಜುಗರವಾಗಿರುತ್ತದೆ.

ಇಲ್ಲಿ ನಾವು ಕಂಕುಳ ವಿಷಯದಲ್ಲಿ ಮಾಡಬಾರದ 5 ಮಿಸ್ಟೇಕ್ಸ್ ಬಗ್ಗೆ ಹೇಳಿದ್ಧೇವೆ ನೋಡಿ:

1. ಎಕ್ಸ್‌ಪೋಲೆಟ್ ಮಾಡದೇ ಇರುವುದು

1. ಎಕ್ಸ್‌ಪೋಲೆಟ್ ಮಾಡದೇ ಇರುವುದು

ಸ್ನಾನ ಮಾಡುವಾಗ ಕಂಕುಳದಲ್ಲಿ ಸೋಪ್ ಹಾಕಿ ತೊಳೆದರಷ್ಟೇ ಸಾಕಾಗುವುದಿಲ್ಲ. ಆ ಭಾಗವನ್ನು ಎಕ್ಸ್‌ಫೋಲೆಟ್ ಮಾಡಬೇಕು. ಕಂಕುಳ ಭಾಗಕ್ಕೆ ಮುಖಕ್ಕೆ ಹಾಕುವ ಸ್ವಲ್ಪ ಸ್ಕ್ರಬ್ಬರ್ ಹಾಕಿ ತಿಕ್ಕಿ, ಈ ರೀತಿ ವಾರದಲ್ಲಿ 2-3 ಬಾರಿ ಮಾಡುತ್ತಿದ್ದರೆ ಕಂಕುಳ ಕಪ್ಪಗೆ ಕಾಣುವುದಿಲ್ಲ.

2. ಮಾಯಿಶ್ಚರೈಸರ್ ಹಚ್ಚದೇ ಇರುವುದು

2. ಮಾಯಿಶ್ಚರೈಸರ್ ಹಚ್ಚದೇ ಇರುವುದು

ಕಂಕುಳ ಭಾಗಕ್ಕೆ ವ್ಯಾಕ್ಸಿಂಗ್, ಕ್ಲೀನಿಂಗ್, ಶೇವಿಂಗ್ ಅಷ್ಟೇ ಸಾಲದು, ಆ ಭಾಗವನ್ನು ಮಾಯಿಶ್ಚರೈಸರ್ ಮಾಡಬೇಕು, ಇಲ್ಲದಿದ್ದರೆ ಕಂಕುಳಭಾಗ ತ್ವಚೆಯಂತೇ ಆಕರ್ಷಕವಾಗಿ ಕಾಣುವುದಿಲ್ಲ. ಸ್ನಾನ ಮಾಡಿದ ಬಳಿಕ ಬಾಡಿ ಲೋಷನ್ ಅನ್ನು ಮಾಯಿಶ್ಚರೈಸರ್ ಅಂತೆ ಬಳಸಿ ಕಂಕುಳ ಆಕರ್ಷಕವಾಗಿ ಕಾಣುವುದು

3. ಶೇವಿಂಗ್

3. ಶೇವಿಂಗ್

ಕಂಕುಳ ಭಾಗದ ಕೂದಲನ್ನು ತೆಗೆಯಲು ಹೆಚ್ಚಿನವರು ಶೇವಿಂಗ್ ವಿಧಾನ ಅನುಸರಿಸುತ್ತಾರೆ. ಏಕೆಂದರೆ ಶೇವಿಂಗ್ ಮಾಡಿದಾಗ ನೋವಾಗುವುದಿಲ್ಲ ಎಂದು ಶೇವಿಂಗ್ ಮೊರೆ ಹೋಗುತ್ತಾರೆ. ಆದರೆ ಶೇವಿಂಗ್ ಮಾಡಿದಾಗ ಕೂದಲು ಬುಡದಿಂದಲೇ ಹೋಗುವುದಿಲ್ಲ, ಹೀಗಾಗಿ ಒಂದೆರಡು ದಿನದಲ್ಲಿ ಕೂದಲು ಬಂದು ಕಂಕುಳ ಕಪ್ಪು-ಕಪ್ಪಾಗಿ ಕಾಣುವುದು.

ಕಂಕುಳ ಭಾಗದ ಬೇಡದ ಕೂದಲು ತೆಗೆಯಲು ಶೇವಿಂಗ್ ಬದಲು ವ್ಯಾಕ್ಸಿಂಗ್ ಮಾಡಿ.

4. ಆಲ್ಕೋಹಾಲ್ ಅಂಶವಿರುವ ಡಿಯೋಡ್ರೆಂಟ್ ಬಳಸುವುದು

4. ಆಲ್ಕೋಹಾಲ್ ಅಂಶವಿರುವ ಡಿಯೋಡ್ರೆಂಟ್ ಬಳಸುವುದು

ಯಾವುದೇ ಸೌಂದರ್ಯವರ್ಧಕ ಬಳಸುವಾಗ ಅದು ನಮಗೆ ಸೂಕ್ತವೇ ಎಂದು ಪರಿಶೀಲಿಸಿ ಬಳಸುವುದು ಒಳ್ಳೆಯದು. ನಿಮ್ಮ ಡಿಯೋಡ್ರೆಂಟ್‌ನಲ್ಲಿ ಆಲ್ಕೋಹಾಲ್ ಅಂಶವಿದ್ದರೆ ಅದು ಕಂಕುಳ ಭಾಗವನ್ನು ಕಪ್ಪಾಗಿಸುತ್ತದೆ, ಅಲ್ಲದೆ ಡಿಯೋಡ್ರೆಂಟ್‌ ಹಾಕಿದಾಗ ಆ ಭಾಗದಲ್ಲಿ ಉರಿ ಕೂಡ ಕಂಡು ಬರುವುದು. ಕಂಕುಳಕ್ಕೆ ಡಿಯೋಡ್ರೆಂಟ್ ಹಾಕುವಾಗ ಕಡಿಮೆ ಪ್ರಮಾಣದ ಆಲ್ಕೋಹಾಲ್ ಇರುವ ಡಿಯೋಡ್ರೆಂಟ್ ಬಳಸಿ. ಇನ್ನು ಡಿಯೋಡ್ರೆಂಟ್ 15ಸೆ.ಮೀ ದೂರದಿಂದ ಸ್ಪ್ರೇ ಮಾಡಿ.

5. ಪ್ರತಿನಿತ್ಯ ಕಂಕುಳದ ಆರೈಕೆ ಮಾಡದೇ ಇರುವುದು

5. ಪ್ರತಿನಿತ್ಯ ಕಂಕುಳದ ಆರೈಕೆ ಮಾಡದೇ ಇರುವುದು

ಕಂಕುಳ ಶುದ್ಧವಾಗಿರಬೇಕೆಂದರೆ ಪ್ರತಿದಿನ ಅದರ ಆರೈಕೆ ಮಾಡಬೇಕು. ಇನ್ನು ಕಂಕುಳ ತುಂಬಾ ಕಪ್ಪಗೆ ಇದ್ದರೆ ಸ್ವಲ್ಪ ಕಡಲೆ ಹಿಟ್ಟು ಹಾಗೂ ಅರಿಶಿಣ ಪುಡಿ ಮಿಶ್ರ ಮಾಡಿ ಸ್ನಾನ ಮಾಡುವ 15 ನಿಮಿಷ ಮುಂಚೆ ಹಚ್ಚಿ ನಂತರ ಸ್ನಾನ ಮಾಡಿ ಹೀಗೆ ಮಾಡುವುದರಿಂದ ಕಂಕುಳ ಭಾಗ ಕೂಡ ನಿಮ್ಮ ತ್ವಚೆ ಬಣ್ಣದಲ್ಲಿಯೇ ಕಾಣುವುದು.

English summary

Alarming Underarm Mistakes You Need To Stop Making

The mistakes we make while dealing with our underarms does not help us either. It is time we buckle up and correct these 5 alarming underarm mistakes. Here we go!
X
Desktop Bottom Promotion