For Quick Alerts
ALLOW NOTIFICATIONS  
For Daily Alerts

ಮುಖದ ಕೂದಲು ತೆಗೆಯಲು ಹೇಳಿ ಮಾಡಿಸಿದ ಫೇಸ್ ಪ್ಯಾಕ್ ಅಂದರೆ ಅದು ಪಪ್ಪಾಯ ಫೇಸ್ ಪ್ಯಾಕ್

|

ಹೆಣ್ಣು ಮಕ್ಕಳಿಗೆ ಮುಖದ ಮೇಲೆ ಕೂದಲು ಬರಲು ಶುರುವಾದರೆ ಮುಖದ ಅಂದ ಕೆಡುತ್ತದೆ . ನಯವಾದ ಚರ್ಮದ ಮೇಲೆ ಕಪ್ಪು ಕೂದಲು ಬರಲು ಪ್ರಾರಂಭ ಆದರೆ , ಹೊರಗೆ ಹೋಗಲು ಒಂದು ರೀತಿಯ ಮುಜುಗರ , ಬೇಸರ ಎಲ್ಲವೂ ಉಂಟಾಗುತ್ತದೆ . ಇದರಿಂದ ಯಾವಾಗ ಮುಕ್ತಿ ಎಂದು ಕೆಲವರು ಮೂಗು ಮುರಿದರೆ ಇನ್ನೂ ಕೆಲವರು ಬ್ಯೂಟಿ ಪಾರ್ಲರ್ ಗೆ ಹೋಗಿ ಅನೇಕ ಫೇಷಿಯಲ್ ಗೆ ಮುಖವೊಡ್ಡುತ್ತಾರೆ . ಬಗೆಬಗೆಯ ಫೇಸ್ ಪ್ಯಾಕ್ ಗಳ ಮೊರೆ ಹೋಗುತ್ತಾರೆ.

ಕೆಲವರು ಮುಖದ ಕೂದಲು ತೆಗೆಯಲು ವಾಕ್ಸಿಂಗ್ , ಥ್ರೆಡ್ಡಿಂಗ್ ನಂತಹ ಚರ್ಮಕ್ಕೆ ನೋವು ಕೊಡುವಂತಹ ವಿಧಾನಗಳನ್ನು ಅನುಸರಿಸುತ್ತಾರೆ . ಎಪಿಲೇಟರ್ , ರೇಜರ್ ಮತ್ತು ಟ್ರಿಮ್ಮರ್ ಉಪಯೋಗಿಸಿ ಮುಖದ ಮೇಲೆ ಕೂದಲು ತೆಗೆಯಲು ಹೋದರೆ ಸಂದರ್ಭ ಇನ್ನೂ ಕೆಟ್ಟದ್ದಾಗಿ ಪರಿಣಮಿಸುತ್ತದೆ . ಏಕೆಂದರೆ ಹೀಗೆ ತೆಗೆದ ನಂತರ ಕೂದಲು ಇನ್ನಷ್ಟು ಬೆಳೆಯಲು ಪ್ರಾರಂಭವಾಗುತ್ತದೆ . ಇದರಿಂದ ಮುಖ ಇನ್ನೂ ಕೆಟ್ಟದ್ದಾಗಿ ಕಾಣುತ್ತದೆ .

Papaya Face Masks

ಕೊನೆಯಲ್ಲಿ ಎಲ್ಲಾ ಬೇಜಾರಾಗಿ ಯಾವುದೇ ಪ್ರಯೋಜನವಾಗದಿದ್ದನ್ನು ನೋಡಿ ಕೆಮಿಕಲ್ ಉಪಯೋಗಿಸಿ ಬ್ಲೀಚಿಂಗ್ ನಂತಹ ವಿಧಾನಗಳನ್ನು ಪ್ರಯೋಗಿಸುತ್ತಾರೆ . ಇದರಿಂದ ಸಂಪೂರ್ಣ ಮುಖದ ಕಾಂತಿಯೇ ಹಾಳಾಗಿ ಹೋಗುತ್ತದೆ . ಆಮೇಲೆ ಮನೆ ಬಿಟ್ಟು ಹೊರ ಬರಲಾರದಂತಹ ಪರಿಸ್ಥಿತಿ ಎದುರಾಗುತ್ತದೆ . ಇದರ ಬದಲು ಈಗಾಗಲೇ ಎಲ್ಲರ ಮನೆಯಲ್ಲೂ ತಲೆಯೆತ್ತಿರುವ ನೈಸರ್ಗಿಕ ಪ್ರಯೋಗಗಳೇ ವಾಸಿ .ಆದ್ದರಿಂದ ನಮ್ಮ ಸಲಹೆ ಇಷ್ಟೇ . ಆದಷ್ಟು ನೈಸರ್ಗಿಕವಾದ ವಿಧಾನಗಳನ್ನು ಪ್ರಯೋಗಿಸಿ . ನೈಸರ್ಗಿಕವಾದ ವಿಧಾನಗಳು ಫಲ ಕೊಡಲು ಸ್ವಲ್ಪ ಸಮಯ ಹಿಡಿದರೂ ಅದರ ಪ್ರಭಾವ ಬಹಳ ಸಮಯದವರೆಗೂ ಇರುತ್ತದೆ . ಅದರಿಂದ ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ ಮತ್ತು ಚರ್ಮ ಹಾಳಾಗುವುದಿಲ್ಲ .

ಇಂತಹ ಒಂದು ನೈಸರ್ಗಿಕ ವಿಧಾನಗಳಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದಿರುವ ಪಪ್ಪಾಯಹಣ್ಣಿನ ಫೇಸ್ ಮಾಸ್ಕ್ ಕೂಡ ಒಂದು . ಪಪ್ಪಾಯಹಣ್ಣಿನ ಫೇಸ್ ಮಾಸ್ಕ್ ಮುಖದ ಮೇಲಿನ ಬೇಡದಿರುವ ಕೂದಲನ್ನು ಅತ್ಯಂತ ಪರಿಣಾಮಕಾರಿಯಾಗಿ ಇಲ್ಲವಾಗಿಸುತ್ತದೆ . ಪಪ್ಪಾಯಹಣ್ಣಿನಲ್ಲಿ " ಪಪೈನ್ " ಎನ್ನುವ ಅಂಶ ಇದ್ದು , ಇದು ಮುಖದ ಮೇಲಿನ ಕೂದಲಿನ ಬೇರುಗಳನ್ನು ನಾಶಪಡಿಸಿ ಮತ್ತೆ ಆ ಜಾಗದಲ್ಲಿ ಕೂದಲು ಬೆಳೆಯದಂತೆ ವಜ್ರಕವಚವಾಗಿ ಕಾಪಾಡುತ್ತದೆ . ಅದರಲ್ಲೂ ಹಸಿ ಪಪ್ಪಾಯಹಣ್ಣು ಪಪೈನ್ ಅಂಶವನ್ನು ಜಾಸ್ತಿ ಹೊಂದಿದ್ದು , ಫೇಸ್ ಮಾಸ್ಕ್ ಗೆ ಇದು ಬಹಳ ಒಪ್ಪುತ್ತದೆ . ಅಲ್ಲದೆ ಈ ಫೇಸ್ ಮಾಸ್ಕ್ ಗೆ ಚರ್ಮವನ್ನು ತಿಳಿಯಾಗಿಸುವ ಗುಣ ಇದ್ದು ಮುಖದ ಮೇಲಿನ ಕಲೆಗಳನ್ನು ಮತ್ತು ಮಚ್ಚೆಗಳನ್ನು ಕೂಡ ಇಲ್ಲವಾಗಿಸುತ್ತದೆ . ಇದರಿಂದ ಕಾಂತಿಯುಕ್ತ ಸುಂದರ ಚರ್ಮ ನಿಮ್ಮದಾಗುತ್ತದೆ . ಪಪ್ಪಾಯಹಣ್ಣನ್ನು ವಿವಿಧ ಬಗೆಯ ವಸ್ತುಗಳೊಡನೆ ಸೇರಿಸಿ ಅನೇಕ ರೀತಿಯ ಫೇಸ್ ಪ್ಯಾಕ್ ಗಳನ್ನು ತಯಾರಿಸಬಹುದು . ಬನ್ನಿ ಒಂದೊಂದಾಗಿ ನೋಡೋಣ . ಪಪ್ಪಾಯಹಣ್ಣಿನಿಂದ ಮುಖದ ಕೂದಲನ್ನು ಹೀಗೆ ತೆಗೆಯಬಹುದು :

ಹಸಿ ಪಪ್ಪಾಯಹಣ್ಣು ಮತ್ತು ಅರಿಶಿನದ ಫೇಸ್ ಪ್ಯಾಕ್

ಅರಿಶಿನದಲ್ಲಿ ನಮಗೆಲ್ಲಾ ತಿಳಿದಿರುವ ಹಾಗೆ " ಕರ್ಕ್ಯುಮಿನ್ " ಎಂಬ ಅಂಶವಿದೆ . ಇದು ಒಂದು ಆಂಟಿ ಇಂಪ್ಲಾ ಮ್ಯಾಟೋರಿ ಗುಣ ಲಕ್ಷಣ ಆಗಿದ್ದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಚರ್ಮದ ಮೇಲೆ ಬೇಡದಿರುವ ಕೂದಲನ್ನು ಬೆಳೆಯದಂತೆ ತಡೆಯುತ್ತದೆ . ಅರಿಶಿನವನ್ನು ಚರ್ಮಕ್ಕೆ ಲೇಪಿಸಿದರೆ ಅದು ಗಮ್ ನ ರೀತಿ ಚರ್ಮಕ್ಕೆ ಅಂಟಿಕೊಂಡು ಕೂದಲನ್ನು ಬುಡದಿಂದಲೇ ಬೆಳೆಯದಂತೆ ಮಾಡುತ್ತದೆ . ಅರಿಶಿನವನ್ನು ಆಗಾಗ ಉಪಯೋಗಿಸುತ್ತಿದ್ದರೆ ಖಂಡಿತ ಕೂದಲು ಬೆಳೆಯುವುದನ್ನು ತಡೆಯಬಹುದು.

Most Read: ಪಪ್ಪಾಯಿ ಹಣ್ಣಿನಲ್ಲಿದೆ 'ಸೌಂದರ್ಯದ' ಮಾಂತ್ರಿಕ ಶಕ್ತಿ!

ಫೇಸ್ ಪ್ಯಾಕ್ ತಯಾರು ಮಾಡಲು ಬೇಕಾದ ಸಾಮಗ್ರಿಗಳು

1 . 2 ಟೇಬಲ್ ಸ್ಪೂನ್ ನಷ್ಟು ಚೆನ್ನಾಗಿ ಮ್ಯಾಶ್ ಮಾಡಿದ ಪಪ್ಪಾಯಹಣ್ಣು .
2 . 1 / 2 ಟೇಬಲ್ ಸ್ಪೂನ್ ನಷ್ಟು ಅರಿಶಿನ ಪುಡಿ .
ತಯಾರು ಮಾಡುವ ವಿಧಾನ
* ಒಂದು ಪಾತ್ರೆಯಲ್ಲಿ ಚೆನ್ನಾಗಿ ಮ್ಯಾಶ್ ಮಾಡಿದ ಪಪ್ಪಾಯಹಣ್ಣು ಮತ್ತು ಅರಿಶಿನ ಪುಡಿಯನ್ನು ತೆಗೆದುಕೊಂಡು ಎರಡನ್ನೂ ಚೆನ್ನಾಗಿ ಕಲಸಿ ಪೇಸ್ಟ್ ತಯಾರಿಸಿಕೊಳ್ಳಿ .
* ಈ ಪೇಸ್ಟ್ ಅನ್ನು ತೆಗೆದುಕೊಂಡು ನಿಮ್ಮ ಮುಖದ ಮೇಲೆ ಸುರುಳಿಯಾಕಾರದಲ್ಲಿ 5 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ .
* ಈ ರೀತಿ ಅಪ್ಲೈ ಮಾಡಿದ ಮಾಸ್ಕ್ ಅನ್ನು 15 ನಿಮಿಷಗಳ ಕಾಲ ಹಾಗೇ ಬಿಡಿ .
* ನಂತರ ತಣ್ಣನೆಯ ನೀರಿನಲ್ಲಿ ಮುಖ ತೊಳೆದುಕೊಳ್ಳಿ .
* ಈ ಮಾಸ್ಕ್ ಅನ್ನು ವಾರದಲ್ಲಿ 2 ರಿಂದ 3 ಬಾರಿ ಮುಖಕ್ಕೆ ಅಪ್ಲೈ ಮಾಡಿ .

ಹಸಿ ಪಪ್ಪಾಯಹಣ್ಣು ಮತ್ತು ಹಸುವಿನ ಹಾಲಿನ ಫೇಸ್ ಪ್ಯಾಕ್

ಹಸು ಕಪ್ಪಾದರೂ ಕೊಡುವ ಹಾಲು ಮಾತ್ರ ಬೆಳ್ಳಗೆ ಇರುತ್ತದೆ ಎಂಬ ಮಾತಿದೆ . ಹಾಲಿಗೆ ಅಮೃತದ ಗುಣವಿದೆ ಎಂದು ನಂಬಲಾಗಿದೆ . ಹಾಲು ಚರ್ಮದ ಮೇಲೆ ಲೇಪನವಾದಾಗ ಅದರಲ್ಲಿರುವ " ಲ್ಯಾಕ್ಟಿಕ್ ಆಸಿಡ್ " ಅಂಶ ಚರ್ಮದ ಹೊರಪದರವನ್ನು ಕಳಚುವಂತೆ ಮಾಡಿ ಚರ್ಮದ ಮೇಲೆ ಸತ್ತಂತೆ ಇರುವ ಅಂದರೆ ನಿರ್ಜೀವ ಕೋಶಗಳನ್ನು ತೆಗೆಯುತ್ತದೆ . ಅಷ್ಟೇ ಅಲ್ಲದೆ ಮುಖದ ಮೇಲೆ ಕೂದಲು ಬರದಂತೆ ತಡೆಯುತ್ತದೆ ಹಾಗು ಬ್ಲಾಕ್ ಹೆಡ್ ಗಳನ್ನು ಇಲ್ಲದಂತೆ ಮಾಡುತ್ತದೆ .
ತಯಾರು ಮಾಡಲು ಬೇಕಾದ ಸಾಮಗ್ರಿಗಳು :
* 2 ಟೇಬಲ್ ಸ್ಪೂನ್ ನಷ್ಟು ತುರಿದ ಹಸಿ ಪರಂಗಿ .
* 1 ಟೇಬಲ್ ಸ್ಪೂನ್ ನಷ್ಟು ಶುದ್ಧವಾದ ಹಸುವಿನ ಹಾಲು .
ತಯಾರು ಮಾಡುವ ವಿಧಾನ
* ಒಂದು ಬೌಲ್ ನಲ್ಲಿ ತುರಿದ ಪಪ್ಪಾಯಮತ್ತು ಹಸುವಿನ ಹಾಲನ್ನು ಚೆನ್ನಾಗಿ ಪೇಸ್ಟ್ ಬರುವ ಹಾಗೇ ಕಲಸಿ .
* ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿ ಸುಮಾರು 30 ನಿಮಿಷಗಳ ಕಾಲ ಆರಲು ಬಿಡಿ .
* ಕೈ ಬೆರಳುಗಳನ್ನು ನೀರಿನಲ್ಲಿ ತೇವ ಮಾಡಿಕೊಂಡು ಮುಖವನ್ನು ಒರೆಸಿ ನಂತರ ನೀರಿನಲ್ಲಿ ತೊಳೆಯಿರಿ .
* ಒಳ್ಳೆಯ ಮತ್ತು ತ್ವರಿತ ಫಲಿತಾಂಶಕ್ಕಾಗಿ ವಾರದಲ್ಲಿ 4 ರಿಂದ 5 ಬಾರಿ ಈ ಫೇಸ್ ಪ್ಯಾಕ್ ಉಪಯೋಗಿಸಿ .

ಪರಂಗಿ ಹಣ್ಣು ಮತ್ತು ಕಡಲೆ ಹಿಟ್ಟಿನ ಫೇಸ್ ಪ್ಯಾಕ್

ಕಡಲೆ ಹಿಟ್ಟು ಮೈ ಮೇಲೆ ಹಚ್ಚಿದರೆ ಸಾಮಾನ್ಯವಾಗಿ ಕೂದಲು ಬೆಳೆಯುವುದನ್ನು ತಡೆಯುತ್ತದೆ ಎಂಬುದು ನಮಗೆಲ್ಲ ಗೊತ್ತಿರುವ ವಿಚಾರವೇ . ಅದರಲ್ಲಿರುವ ' ಎಸ್ಫೋಲಿಯೇಟಿಂಗ್ ಏಜೆಂಟ್ ' ಗಳು ಮುಖದ ಮೇಲಿನ ಕೂದಲನ್ನು ತಗೆಯುವುದರಲ್ಲಿ ಸಹಕಾರಿ .
ಫೇಸ್ ಪ್ಯಾಕ್ ಮಾಡಲು ಬೇಕಾಗಿರುವ ವಸ್ತುಗಳು :
* 2 ಟೇಬಲ್ ಸ್ಪೂನ್ ನಷ್ಟು ಚೆನ್ನಾಗಿ ಮ್ಯಾಶ್ ಮಾಡಿದ ಪಪ್ಪಾಯಹಣ್ಣು .
* 1 ಟೇಬಲ್ ಸ್ಪೂನ್ ನಷ್ಟು ಅರಿಶಿನ ಪುಡಿ .
* 2 ಟೇಬಲ್ ಸ್ಪೂನ್ ನಷ್ಟು ಕಡಲೆ ಹಿಟ್ಟು .

ತಯಾರು ಮಾಡುವ ವಿಧಾನ

* ಒಂದು ಪಾತ್ರೆಯಲ್ಲಿ ಮ್ಯಾಶ್ ಮಾಡಿದ ಪಪ್ಪಾಯಹಣ್ಣು , ಅರಿಶಿನ ಪುಡಿ ಮತ್ತು ಕಡಲೆ ಹಿಟ್ಟನ್ನು ಬೆರೆಸಿ ನೀರು ಹಾಕಿಕೊಳ್ಳದೆ ಪೇಸ್ಟ್ ಮಾಡಿಕೊಳ್ಳಿ .
* ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿ ಸುಮಾರು 20 ರಿಂದ 30 ನಿಮಿಷಗಳ ಕಾಲ ಆರಲು ಬಿಡಿ .
* ನಂತರ ತಣ್ಣೇರಿನಲ್ಲಿ ಮುಖ ತೊಳೆಯಿರಿ .
* ವಾರಕ್ಕೆ 2 ರಿಂದ 3 ಬಾರಿ ಹೀಗೆ ಮಾಡಿ .

ಪಪ್ಪಾಯಹಣ್ಣು , ಅರಿಶಿನ , ಕಡಲೆ ಹಿಟ್ಟು ಮತ್ತು ಅಲೋವೆರಾದ ಫೇಸ್ ಪ್ಯಾಕ್

ಅಲೋವೆರಾ ಮತ್ತು ಕಡಲೆ ಹಿಟ್ಟಿನ ಮಿಶ್ರಣ ಮುಖದ ಚರ್ಮಕ್ಕೆ ಒಳ್ಳೆಯ ಕಾಂತಿಯನ್ನು ಕೊಡುತ್ತದೆ . ಈ ಎಲ್ಲಾ ವಸ್ತುಗಳ ಮಿಶ್ರಣದ ಫೇಸ್ ಪ್ಯಾಕ್ ನಿಮ್ಮ ಮುಖದ ಕೂದಲನ್ನು ಬಹಳ ಅಚ್ಚುಕಟ್ಟಾಗಿ ತೆಗೆಯುತ್ತದೆ .
ಫೇಸ್ ಪ್ಯಾಕ್ ತಯಾರು ಮಾಡಲು ಬೇಕಾದ ವಸ್ತುಗಳು :
* 2 ಟೇಬಲ್ ಸ್ಪೂನ್ ನಷ್ಟು ಹಸಿ ಪಪ್ಪಾಯಪೇಸ್ಟ್ .
* 2 ಟೇಬಲ್ ಸ್ಪೂನ್ ನಷ್ಟು ಅಲೋವೆರಾ ಜೆಲ್ .
* 1 ಟೀ ಸ್ಪೂನ್ ನಷ್ಟು ಅರಿಶಿನ ಪುಡಿ .
* 2 ಟೇಬಲ್ ಸ್ಪೂನ್ ನಷ್ಟು ಹಸಿ ಕಡಲೆ ಹಿಟ್ಟು .
ತಯಾರಿಸುವ ವಿಧಾನ :
* ಒಂದು ಬೌಲ್ ನಲ್ಲಿ ಅಲೋವೆರಾ ಜೆಲ್ , ಕಡಲೆ ಹಿಟ್ಟು , ಅರಿಶಿನ ಪುಡಿ ಮತ್ತು ಪಪ್ಪಾಯಪೇಸ್ಟ್ ಅನ್ನು ಮಿಕ್ಸ್ ಮಾಡಿ .
* ಎಲ್ಲವನ್ನೂ ಚೆನ್ನಾಗಿ ಕಲಸಿ ಒಂದು ನಯವಾದ ಪೇಸ್ಟ್ ಆಗಿ ತಯಾರಿಸಿಕೊಳ್ಳಿ .
* ಈ ಪೇಸ್ಟ್ ಅನ್ನು ಮುಖದ ಮೇಲೆ ಹಚ್ಚಿ 20 ನಿಮಿಷಗಳ ಕಾಲ ಒಣಗಲು ಬಿಡಿ .
* ನಂತರ ನೀರಿನಿಂದ ತೊಳೆಯಿರಿ .
* ವಾರಕ್ಕೆ 4 ರಿಂದ 5 ಬಾರಿ ಈ ರೀತಿ ಮಾಡಿ .
ಹಸಿ ಪಪ್ಪಾಯಹಣ್ಣು , ಸಾಸಿವೆ ಎಣ್ಣೆ ( ಮಸ್ಟರ್ಡ್ ಆಯಿಲ್ ) , ಅರಿಶಿನ , ಅಲೋವೆರಾ ಮತ್ತು ಕಡಲೆ ಹಿಟ್ಟು ಇವುಗಳ ಮಿಶ್ರಣದ ಫೇಸ್ ಪ್ಯಾಕ್ :
ಮುಖದ ಮೇಲೆ ಆಯಿಲ್ ನಿಂದ ಮಸಾಜ್ ಮಾಡುವುದು ಕೇವಲ ಮುಖದ ಮಾಂಸಖಂಡಗಳನ್ನು ರಿಲಾಕ್ಸ್ ಮಾಡುವುದಲ್ಲದೆ ಮುಖದ ಕೂದಲಿನ ಬೇರುಗಳು ಬೆಳೆಯುವುದನ್ನು ಕಡಿಮೆ ಮಾಡುತ್ತದೆ .
ಫೇಸ್ ಪ್ಯಾಕ್ ತಯಾರು ಮಾಡಲು ಬೇಕಾದ ಸಾಮಗ್ರಿಗಳು :
* 2 ಟೇಬಲ್ ಸ್ಪೂನ್ ನಷ್ಟು ಹಸಿ ಪಪ್ಪಾಯಪೇಸ್ಟ್ .
* 1 ಟೇಬಲ್ ಸ್ಪೂನ್ ನಷ್ಟು ಅಲೋವೆರಾ ಜೆಲ್ .
* 1 ಟೇಬಲ್ ಸ್ಪೂನ್ ನಷ್ಟು ಹಸಿ ಕಡಲೆ ಹಿಟ್ಟು .
* 1 / 2 ಟೇಬಲ್ ಸ್ಪೂನ್ ನಷ್ಟು ಅರಿಶಿನ ಪುಡಿ .
* 2 ಟೇಬಲ್ ಸ್ಪೂನ್ ನಷ್ಟು ಸಾಸಿವೆ ಎಣ್ಣೆ .

ತಯಾರು ಮಾಡುವ ವಿಧಾನ :

* ಒಂದು ಪಾತ್ರೆಯಲ್ಲಿ ಹಸಿ ಪಪ್ಪಾಯಹಣ್ಣು , ಸಾಸಿವೆ ಎಣ್ಣೆ , ಅರಿಶಿನ , ಅಲೋವೆರಾ ಮತ್ತು ಕಡಲೆ ಹಿಟ್ಟನ್ನು ಚೆನ್ನಾಗಿ ಕಲಸಿ ಒಂದು ಹದಕ್ಕೆ ಬರುವ ಹಾಗೇ ಪೇಸ್ಟ್ ತಯಾರಿಸಿಕೊಳ್ಳಿ .
* ಇದನ್ನು ಮುಖದ ಮೇಲೆ ಹಾಕಿ ಚೆನ್ನಾಗಿ ಮತ್ತು ಪೂರ್ತಿಯಾಗಿ ಆರಲು ಬಿಡಿ .
* ಕೈ ಬೆರಳುಗಳನ್ನು ತೇವ ಮಾಡಿಕೊಂಡು ಒಣಗಿದ ಪೇಸ್ಟ್ ಅನ್ನು ಪೂರ್ತಿ ಉದುರಿ ಹೋಗುವ ಹಾಗೆ ನಿಧಾನವಾಗಿ ಮುಖದ ಮೇಲೆ ವೃತ್ತಾಕಾರವಾಗಿ ಉಜ್ಜಿ .
* ನೀರಿನಿಂದ ಮುಖ ತೊಳೆದುಕೊಳ್ಳಿ .
* ಹೀಗೆ ವಾರಕ್ಕೆ ಎರಡು ಬಾರಿಯಂತೆ ಮಾಡಿ .

Most Read: ಪಪ್ಪಾಯ ಹಣ್ಣಿನ ಹೇರ್ ಮಾಸ್ಕ್-ಕೂದಲಿನ ಎಲ್ಲಾ ಸಮಸ್ಯೆಗೆ ತ್ವರಿತ ಪರಿಹಾರ

ನೀವು ಸದಾ ನೆನೆಪಿನಲ್ಲಿಡಬೇಕಾದ ಅಂಶಗಳು :

* ನೈಸರ್ಗಿಕವಾದ ಮತ್ತು ಮನೆಯಲ್ಲೇ ಮಾಡಿದ ಫೇಸ್ ಮಾಸ್ಕ್ ಗಳು ಯಾವುದೇ ಕಾರಣಕ್ಕೂ ಅಪಾಯಕಾರಿಯಲ್ಲ . ಅವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ ಉತ್ತಮ ಫಲಿತಾಂಶಗಳನ್ನು ಕಂಡು ಕೊಳ್ಳಬಹುದು .
* ಯಾವುದೇ ಕಾರಣಕ್ಕೂ ಫೇಸ್ ಮಾಸ್ಕ್ ಗಳನ್ನು ಕಣ್ಣಿನ ಭಾಗದಲ್ಲಿ ಮತ್ತು ಕಣ್ಣಿನ ಸುತ್ತಲಿನ ಭಾಗದಲ್ಲಿ ಅಪ್ಲೈ ಮಾಡಬೇಡಿ . ಏಕೆಂದರೆ ಕಣ್ಣಿನ ಸುತ್ತ ಮುತ್ತ ಇರುವ ಚರ್ಮ ತುಂಬಾ ಮೃದುವಾಗಿ ಮತ್ತು ನಯವಾಗಿ ಇರುವುದರಿಂದ ಹಾನಿಗೊಳಗಾಗುವ ಸಂಭವ ಹೆಚ್ಚು .
* ಮನೆಯಲ್ಲೇ ಮಾಡಿದ ಮತ್ತು ನೈಸರ್ಗಿಕ ವಸ್ತುಗಳನ್ನು ಉಪಯೋಗಿಸಿ ಮಾಡಿದ ಫೇಸ್ ಪ್ಯಾಕ್ ಗಳು ತಮ್ಮ ಪ್ರಭಾವವನ್ನು ತೋರಲು ಸ್ವಲ್ಪ ಸಮಯ ಹಿಡಿಯುತ್ತವೆ . ಆದ್ದರಿಂದ ತಾಳ್ಮೆಯಿರಲಿ . ಹೆಚ್ಚು ಬಾರಿ ಉಪಯೋಗಿಸುವುದರಿಂದ ಬಹಳ ಬೇಗನೆ ಫಲಿತಾಂಶ ಸಿಗುತ್ತದೆ ಮತ್ತು ಮೇಲೆ ತಿಳಿಸಿದ ಹಾಗೇ ಯಾವುದೇ ತೊಂದರೆ ಆಗುವುದಿಲ್ಲ . ಒಂದೊಂದು ಫೇಸ್ ಪ್ಯಾಕ್ ಒಬ್ಬೊಬ್ಬರಿಗೆ ಒಂದೊಂದು ರೀತಿ ಕೆಲಸ ಮಾಡುತ್ತದೆ . ಅದಕ್ಕೆ ಕಾರಣ ಅವರ ಚರ್ಮದ ಗುಣಗಳು .
* ಕೆಲವೊಂದು ಫೇಸ್ ಮಾಸ್ಕ್ ಗಳು ತೀರಾ ಸೆನ್ಸಿಟಿವ್ ಚರ್ಮ ಹೊಂದಿರುವವರಿಗೆ ಅಪಾಯಕಾರಿಯಾಗಬಹುದು . ಅಂತಹವರು ಬಿಸಿಲಿಗೆ ಬರುವ ಮುಂಚೆ ಸನ್ ಸ್ಕ್ರೀನ್ ಉಪಯೋಗಿಸತಕ್ಕದ್ದು .
* ಸೆನ್ಸಿಟಿವ್ ಚರ್ಮ ಹೊಂದಿರುವವರು ಫೇಸ್ ಪ್ಯಾಕ್ ಮಾಡಿಕೊಳ್ಳುವ ಮೊದಲು ಪ್ಯಾಚ್ ಟೆಸ್ಟ್ ಮಾಡಿಕೊಂಡು ಯಾವುದೇ ಉರಿ , ನೋವು ಕಾಣಿಸಿಕೊಳ್ಳದಿದ್ದರೆ ನಂತರ ಉಪಯೋಗಿಸುವುದು ಒಳ್ಳೆಯದು .
* ಎಲ್ಲಾ ಹೆಂಗೆಳೆಯರೂ ಇನ್ನು ಮುಂದೆ ಯಾವುದೇ ಯೋಚನೆ ಮಾಡದೆ ಈ ಫೇಸ್ ಪ್ಯಾಕ್ ಗಳನ್ನು ಉಪಯೋಗಿಸಿ ನಿಮ್ಮ ಚರ್ಮದ ಹಾಗು ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ .

English summary

Papaya Face Masks To Remove Facial Hair

Papaya is a wonder fruit as it is very effective in removing unwanted facial hair. The star ingredient called papain helps in breaking down the hair follicles, therefore, preventing re-growth of hair. Raw papaya paste can be used with ingredients like turmeric, aloe vera and gram flour to remove facial hair.
X
Desktop Bottom Promotion