For Quick Alerts
ALLOW NOTIFICATIONS  
For Daily Alerts

ಕೂದಲು, ತ್ವಚೆಯ ಆರೈಕೆಗೆ- ಟೊಮೆಟೊ ಹಣ್ಣು ಬಳಸುವುದು ಹೇಗೆ ಗೊತ್ತೇ?

|

ಸೌಂದರ್ಯ ಎನ್ನುವುದು ಹಿಂದಿನಿಂದಲೂ ಮಹಿಳೆಯರಿಗೆ ಭೂಷಣವಾಗಿತ್ತು. ಯಾವುದೇ ಸೌಂದರ್ಯವರ್ಧಕ ಉತ್ಪನ್ನಗಳು ಇಲ್ಲದೆ ಇದ್ದ ಸಮಯದಲ್ಲಿ ಮಹಿಳೆಯರು ತುಂಬಾ ಸುಂದರವಾಗಿ ಕಾಣಿಸುತ್ತಿದ್ದರು. ಇದಕ್ಕೆ ಪ್ರಮುಖ ಕಾರಣ ಅವರು ಬಳಸುತ್ತಿದ್ದ ರಾಸಾಯನಿಕವಿಲ್ಲದ, ನೈಸರ್ಗಿಕವಾಗಿ ದೊರೆಯುವಂತಹ ಕೆಲವೊಂದು ಸಾಮಗ್ರಿಗಳನ್ನು. ಹೌದು, ಪ್ರಕೃತಿ ದತ್ತವಾಗಿರುವ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ಸೌಂದರ್ಯವನ್ನು ವೃದ್ಧಿಸಬಹುದು. ಆದರೆ ಸುಲಭವಾಗಿ ಸಿಗುವಂತಹ ರಾಸಾಯನಿಕಯುಕ್ತ ಉತ್ಪನ್ನಗಳಲ್ಲಿ ಹೆಚ್ಚಿನ ಅಡ್ಡಪರಿಣಾಮಗಳು ಇರುವುದು. ಇದರಿಂದ ನೈಸರ್ಗಿಕದತ್ತ ವಸ್ತುಗಳನ್ನು ಬಳಸುವುದು ತುಂಬಾ ಒಳ್ಳೆಯದು. ಇದರಲ್ಲಿ ಮುಖ್ಯವಾಗಿ ವಾಲ್ ನಟ್ ಸ್ಕ್ರಬ್, ಹಣ್ಣಿನ ಫೇಸ್ ಪ್ಯಾಕ್, ಎಣ್ಣೆಯಿರುವ ಶಾಂಪೂ ಇತ್ಯಾದಿಗಳು. ಇದೆಲ್ಲವೂ ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಆದರೆ ಇಂತಹ ಉತ್ಪನ್ನಗಳಿಗೆ ಹೆಚ್ಚಾಗಿ ರಾಸಾಯನಿಕ ಬೆರಕೆ ಮಾಡಿರುವರು. ಇದರ ಬದಲಿಗೆ ತಾಜಾವಾಗಿ ಸಿಗುವಂತಹ ಹಣ್ಣುಗಳು ಹಾಗೂ ತರಕಾರಿಗಳನ್ನು ಬಳಸಿಕೊಂಡು ಚರ್ಮ ಹಾಗೂ ಕೂದಲಿನ ಆರೈಕೆ ಮಾಡಬಹುದು. ಇದರಿಂದ ಚರ್ಮಕ್ಕೆ ಯಾವುದೇ ಹಾನಿ ಆಗದು. ಈ ಲೇಖನದಲ್ಲಿ ಟೊಮೆಟೋವನ್ನು ಹೇಗೆ ಬಳಸಿಕೊಳ್ಳಬಹುದು ಎಂದು ತಿಳಿಸಿಕೊಡಲಿದ್ದೇವೆ. ಕೆಂಪು ಕೆಂಪಾಗಿರುವಂತಹ ಟೊಮೆಟೋವನ್ನು ನೇರವಾಗಿ ಹಚ್ಚಿಕೊಂಡು ಚರ್ಮ ಮತ್ತು ಕೂದಲಿನ ಸಮಸ್ಯೆ ನಿವಾರಣೆ ಮಾಡಬಹುದು. ಟೊಮೆಟೋದಲ್ಲಿ ಪ್ರಬಲವಾಗಿರುವ ಆಂಟಿಆಕ್ಸಿಡೆಂಟ್ ಇದ್ದು, ಇದು ಫ್ರೀ ರ್ಯಾಡಿಕಲ್ ನಿಂದ ಚರ್ಮ ಮತ್ತು ತಲೆಬುರುಡೆಗೆ ಆಗುವಂತಹ ಹಾನಿಯನ್ನು ತಪ್ಪಿಸುವುದು. ಚರ್ಮ ಮತ್ತು ಕೂದಲಿನ ಆರೋಗ್ಯ ಮತ್ತು ಕಾಂತಿ ಹೆಚ್ಚಾಗುವುದು. ಇದರಲ್ಲಿ ಉರಿಯೂತ ಶಮನಕಾರಿ ಗುಣಗಳು ಕೂಡ ಇರುವ ಕಾರಣದಿಂದಾಗಿ ಇದು ಚರ್ಮವನ್ನು ನಯ ಹಾಗೂ ಕಾಂತಿಯುತವಾಗಿಸುವುದು. ವಿಟಮಿನ್ ಸಿಯು ಚರ್ಮಕ್ಕೆ ತುಂಬಾ ಲಾಭಕಾರಿ ಆಗಿದೆ.

Tomato

ಈ ಎಲ್ಲಾ ವಿಚಾರಗಳನ್ನು ಹೇಳಿದ ಬಳಿಕ ಟೊಮೆಟೋದಿಂದ ಕೂದಲು ಮತ್ತು ಚರ್ಮಕ್ಕೆ ಯಾವ ರೀತಿಯ ಲಾಭಗಳು ಸಿಗಲಿದೆ ಎಂದ ನಾವು ಇಲ್ಲಿ ತಿಳಿದುಕೊಳ್ಳಬೇಕು ಮತ್ತು ಚರ್ಮ ಹಾಗೂ ಕೂದಲಿಗೆ ಇದರ ಬಳಕೆ ಹೇಗೆ ಎಂದು ತಿಳಿಯುವ.

ಚರ್ಮ ಮತ್ತು ಕೂದಲಿಗೆ ಟೊಮೆಟೋದ ಲಾಭಗಳು

ಟೊಮೆಟೋದಲ್ಲಿ ಹಲವಾರು ರೀತಿಯ ಲಾಭಗಳು ಇವೆ. ಇದರಲ್ಲಿ ಕೆಲವೊಂದನ್ನು ಇಲ್ಲಿ ಉಲ್ಲೇಖಿಸಲಾಗಿದೆ.
•ಇದು ಚರ್ಮಕ್ಕೆ ಪುನರ್ಶ್ಚೇತನ ನೀಡುವುದು.
•ಎಣ್ಣೆಯುಕ್ತ ಚರ್ಮಕ್ಕೆ ಚಿಕಿತ್ಸೆ ನೀಡುವುದು.
•ಕಲೆ, ಬೊಕ್ಕೆಗಳು ಮತ್ತು ಬಣ್ಣ ಕುಂದುವುದನ್ನು ನಿವಾರಿಸುವುದು.
•ಇದು ಚರ್ಮಕ್ಕೆ ನೈಸರ್ಗಿಕವಾಗಿ ಕಾಂತಿ ನೀಡುವುದು.
•ಬಿಸಿಲಿನ ಕಲೆಗಳಿಂದ ಚರ್ಮಕ್ಕೆ ರಕ್ಷಣೆ ನೀಡುವುದು.
•ತಲೆಬುರುಡೆ ತುರಿಸುವುದರಿಂದ ಮುಕ್ತಿ ನೀಡುವುದು.
•ತಲೆಹೊಟ್ಟು ನಿವಾರಣೆ ಮಾಡುವುದು.
•ಕೂದಲಿಗೆ ಇದು ಕಾಂತಿ ನೀಡುವುದು.
•ಕೂದಲು ಉದುರುವುದನ್ನು ತಡೆಯುವುದು.
•ಕೂದಲನ್ನು ಕಂಡೀಷನ್ ಮಾಡುವುದು. ಟೊಮೆಟೋವನ್ನು ಚರ್ಮಕ್ಕೆ ಬಳಸಿಕೊಳ್ಳುವುದು ಹೇಗೆ

Most Read: ಮೊಡವೆ ಕಾಟಕ್ಕೆ, ಟೊಮೆಟೊ ಹಣ್ಣಿನ ಫೇಸ್ ಪ್ಯಾಕ್

ಎಣ್ಣೆಯುಕ್ತ ಚರ್ಮಕ್ಕೆ

ಟೊಮೆಟೋದಲ್ಲಿ ನೈಸರ್ಗಿಕ ಸಂಕೋಚನ ಗುಣವಿದೆ ಮತ್ತು ಇದು ಚರ್ಮದಲ್ಲಿನ ರಂಧ್ರಗಳನ್ನು ಕುಗ್ಗಿಸುವುದು ಮತ್ತು ಚರ್ಮದಲ್ಲಿ ಅತಿಯಾಗಿ ಎಣ್ಣೆ ಉತ್ಪತ್ತಿ ಆಗದಂತೆ ತಡೆಯುವುದು. ಸಕ್ಕರೆಯು ಸತ್ತ ಚರ್ಮವನ್ನು ಕಿತ್ತುಹಾಕುವುದು. ಎಣ್ಣೆಯುಕ್ತ ಚರ್ಮದಲ್ಲಿ ನಿರ್ಮಾಣವಾಗಿರುವಂತಹ ಧೂಳು, ಕಲ್ಮಷ ಮತ್ತು ಎಣ್ಣೆಯನ್ನು ತೆಗೆಯುವುದು.
ಬೇಕಾಗುವ ಸಾಮಗ್ರಿಗಳು
ಒಂದು ಹಣ್ಣಾದ ಟೊಮೆಟೋ
1 ಚಮಚ ಸಕ್ಕರೆ
ಬಳಸುವ ವಿಧಾನ
•ಒಂದು ಪಿಂಗಾಣಿಯಲ್ಲಿ ಟೊಮೆಟೋ ತಿರುಳನ್ನು ಹಿಚುಕಿಕೊಳ್ಳಿ.
•ಇದಕ್ಕೆ ಸಕ್ಕರೆ ಹಾಕಿಕೊಂಡು ಎರಡನ್ನು ಸರಿಯಾಗಿ ಮಿಶ್ರಣ ಮಾಡಿ.
•ಬೇಕಾದಷ್ಟು ಪ್ರಮಾಣದಲ್ಲಿ ಈ ಮಿಶ್ರಣವನ್ನು ಬೆರಳುಗಳಲ್ಲಿ ತೆಗೆದುಕೊಂಡು ಅದನ್ನು ಮುಖಕ್ಕೆ ವೃತ್ತಾಕಾರದಲ್ಲಿ ಹತ್ತು ನಿಮಿಷ ಕಾಲ ಸ್ಕ್ರಬ್ ಮಾಡಿ.
•ಮತ್ತೆ 10 ನಿಮಿಷ ಕಾಲ ಹಾಗೆ ಬಿಡಿ.
•ಇದರ ಬಳಿಕ ತೊಳೆಯಿರಿ.
•ವಾರದಲ್ಲಿ ಒಂದು ಸಲ ನೀವು ಇದನ್ನು ಬಳಸಿಕೊಂಡರೆ ಒಳ್ಳೆಯ ಫಲಿತಾಂಶ ಪಡೆಯಬಹುದು.

ಕಾಂತಿಯುತ ಚರ್ಮಕ್ಕಾಗಿ

ಟೊಮೆಟೋವು ನೈಸರ್ಗಿಕ ಬ್ಲೀಚಿಂಗ್ ಅಂಶವಾಗಿ ಕೆಲಸ ಮಾಡುವುದು ಮತ್ತು ಇದು ಚರ್ಮಕ್ಕೆ ಕಾಂತಿ ನೀಡುತ್ತದೆ. ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು, ಚರ್ಮವನ್ನು ತುಂಬಾ ನಯ ಹಾಗೂ ಬಿಗಿಯಾಗಿಸುವುದು. ಜೇನುತುಪ್ಪದಲ್ಲಿ ಆಂಟಿಆಕ್ಸಿಡೆಂಟ್ ಗುಣಗಳು ಇವೆ ಮತ್ತು ಇದು ಚರ್ಮಕ್ಕೆ ಶಮನ ಮತ್ತು ಪುನರ್ಶ್ಚೇತನ ನೀಡುವುದು.
ಬೇಕಾಗುವ ಸಾಮಗ್ರಿಗಳು
ಒಂದು ಹಣ್ಣಾದ ಟೊಮೆಟೋ
ಒಂದು ಚಮಚ ಮೊಸರು
ಒಂದು ಚಮಚ ಜೇನುತುಪ್ಪ
ಬಳಸುವ ವಿಧಾನ
•ಒಂದು ಪಿಂಗಾಣಿಯಲ್ಲಿ ಟೊಮೆಟೋದ ತಿರುಳನ್ನು ಸರಿಯಾಗಿ ಹಿಚುಕಿಕೊಳ್ಳಿ.
•ಇದಕ್ಕೆ ಮೊಸರು ಮತ್ತು ಜೇನುತುಪ್ಪ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಮೆತ್ತಗಿನ ಪೇಸ್ಟ್ ಮಾಡಿ.
•ಇದನ್ನು ಮುಖ ಹಾಗೂ ಕುತ್ತಿಗೆಗೆ ಸರಿಯಾಗಿ ಹಚ್ಚಿಕೊಳ್ಳಿ.
•20 ನಿಮಿಷ ಕಾಲ ಹಾಗೆ ಬಿಡಿ.
•ಇದರ ಬಳಿಕ ತೊಳೆದು, ಮುಖ ಒರೆಸಿಕೊಳ್ಳಿ.
•ವಾರದಲ್ಲಿ 2-3 ಸಲ ನೀವು ಇದನ್ನು ಬಳಸಿದರೆ ಫಲಿತಾಂಶ ಸಿಗುವುದು.

ಬಣ್ಣ ಕುಂದುವುದಕ್ಕೆ

ಟೊಮೆಟೋ ಮತ್ತು ಬಟಾಟೆಯನ್ನು ಜತೆಯಾಗಿ ಮಿಶ್ರಣ ಮಾಡಿಕೊಳ್ಳಬೇಕು. ಇವೆರಡರಲ್ಲಿ ಅದ್ಭುತವಾದ ಬ್ಲೀಚಿಂಗ್ ಅಂಶಗಳು ಇವೆ ಮತ್ತು ಇದು ಚರ್ಮದ ಬಣ್ಣ ಕುಂದುವುದನ್ನು ತಡೆಯುವುದು.
ಬೇಕಾಗುವ ಸಾಮಗ್ರಿಗಳು
ಒಂದು ಚಮಚ ಟೊಮೆಟೋ ತಿರುಳು
½ ಚಮಚ ಬಟಾಟೆ ಜ್ಯೂಸ್
ತಯಾರಿಸುವ ವಿಧಾನ
•ಒಂದು ಪಿಂಗಾಣಿಯಲ್ಲಿ ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಇದನ್ನು ಭಾದಿತ ಜಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.
•15 ನಿಮಿಷ ಕಾಲ ಹಾಗೆ ಬಿಡಿ.
•ಇದರ ಬಳಿಕ ತೊಳೆಯಿರಿ.
•ಉತ್ತಮ ಫಲಿತಾಂಶಕ್ಕಾಗಿ ಇದನ್ನು ಪುನರಾವರ್ತಿಸಿ.

Most Read: ಚರ್ಮದ ಬಣ್ಣ ಕಪ್ಪಾಗುವುದನ್ನು ತಡೆಯಲು-ಟೊಮೆಟೋ ಫೇಸ್ ಪ್ಯಾಕ್

ಕಪ್ಪು ಕಲೆ ಮತ್ತು ಬೊಕ್ಕೆ ನಿವಾರಣೆ ಮಾಡಲು

ಜೇನುತುಪ್ಪವು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವುದು. ಇದರಿಂದೊಂದಿಗೆ ಇದರಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣವು ಇದೆ. ಇದರಿಂದ ಇದು ಬೊಕ್ಕೆ ಮತ್ತು ಕಪ್ಪು ಕಲೆಗಳನ್ನು ನಿವಾರಣೆ ಮಾಡುವುದು. ಟೊಮೆಟೊ ಮತ್ತು ಜೇನುತುಪ್ಪ ಬೆರೆಸಿಕೊಂಡಾಗ ಇದು ಪರಿಣಾಮಕಾರಿಯಾಗಿ ಕಲೆ ಮತ್ತು ಬೊಕ್ಕೆ ನಿವಾರಿಸುವುದು.
ಬೇಕಾಗುವ ಸಾಮಗ್ರಿಗಳು
1 ಹಣ್ಣಾದ ಟೊಮೆಟೋ
1 ಚಮಚ ಜೇನುತುಪ್ಪ
ವಿಧಾನ
•ಟೊಮೆಟೊದ ಸಿಪ್ಪೆ ತೆಗೆಯಿರಿ ಮತ್ತು ಒಂದು ಪಿಂಗಾಣಿಗೆ ಹಾಕಿ ಇದನ್ನು ಸರಿಯಾಗಿ ಹಿಚುಕಿಕೊಳ್ಳಿ.
•ಇದಕ್ಕೆ ಜೇನುತುಪ್ಪ ಹಾಕಿಕೊಂಡು ಸರಿಯಾಗಿ ಎರಡನ್ನು ಮಿಶ್ರಣ ಮಾಡಿಕೊಳ್ಳಿ.
•ಈ ಮಿಶ್ರಣವನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.
•15 ನಿಮಿಷ ಕಾಲ ಹಾಗೆ ಬಿಡಿ.
•ನೀರಿನಿಂದ ಸರಿಯಾಗಿ ತೊಳೆಯಿರಿ.
•ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಸಲ ನೀವು ಇದನ್ನು ಬಳಸಿ.

ಬಿಸಿಲಿನ ಕಲೆ ನಿವಾರಿಸಲು

ಲಿಂಬೆರಸವು ಅದ್ಭುತವಾಗಿ ಚರ್ಮವನ್ನು ಬಿಳಿಗೊಳಿಸುವ ಅಂಶವನ್ನು ಹೊಂದಿದೆ ಮತ್ತು ಇದು ಬಿಸಿಲಿನಿಂದ ಆದ ಕಲೆ ತೆಗೆಯುವುದು. ಇದರಲ್ಲಿ ಇರುವಂತಹ ವಿಟಮಿನ್ ಸಿ ಅಂಶವು ಬಿಸಿಲಿನ ಕಲೆಯನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡಲು ನೆರವಾಗುವುದು. ಮೊಸರಿನಲ್ಲಿ ಇರುವ ಲ್ಯಾಕ್ಟಿಕ್ ಆಮ್ಲವು ಚರ್ಮವ ಬಣ್ಣ ಸುಧಾರಣೆ ಮಾಡುವುದು.
ಬೇಕಾಗುವ ಸಾಮಗ್ರಿಗಳು
2 ಚಮಚ ಟೊಮೆಟೊ ಜ್ಯೂಸ್
1 ಚಮಚ ಮೊಸರು
1 ಚಮಚ ಲಿಂಬೆರಸ
ಬಳಸುವ ವಿಧಾನ
•ಒಂದು ಪಿಂಗಾಣಿಯಲ್ಲಿ ಟೊಮೆಟೊ ಜ್ಯೂಸ್ ಹಾಕಿಕೊಳ್ಳಿ.
•ಇದಕ್ಕೆ ಮೊಸರು ಮತ್ತು ಲಿಂಬೆರಸ ಸೇರಿಸಿಕೊಂಡು ಸರಿಯಾಗಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳಿ.
•ಈ ಮಿಶ್ರಣವನ್ನು ಭಾದಿತ ಜಾಗಕಕ್ಕೆ ಹಚ್ಚಿಕೊಳ್ಳಿ.
•30 ನಿಮಿಷ ಕಾಲ ಹಾಗೆ ಒಣಗಲು ಬಿಡಿ.
•ತಣ್ಣೀರಿನಿಂದ ಇದನ್ನು ತೊಳೆಯಿರಿ.
•ವಾರದಲ್ಲಿ ಒಂದು ಸಲ ಇದನ್ನು ಬಳಸಿದರೆ ಉತ್ತಮ ಫಲಿತಾಂಶ ಸಿಗುವುದು.

ಕಪ್ಪು ವೃತ್ತಗಳ ನಿವಾರಣೆಗೆ

ಅಲೋವೆರಾದಲ್ಲಿ ವಯಸ್ಸಾಗುವ ಲಕ್ಷಣಗಳನ್ನು ನಿವಾರಣೆ ಮಾಡುವಂತಹ ಗುಣಗಳು ಇದೆ ಮತ್ತು ಇದು ಚರ್ಮಕ್ಕೆ ತಾಜಾತನ ನೀಡುವುದು. ಅಲೋವೆರಾ ಮತ್ತು ಟೊಮೆಟೊ ಜತೆಯಾಗಿ ಸೇರಿಸಿಕೊಂಡರೆ ಆಗ ಅದು ಕಪ್ಪು ವೃತ್ತಗಳನ್ನು ನಿವಾರಣೆ ಮಾಡುವುದು.
ಬೇಕಾಗುವ ಸಾಮಗ್ರಿಗಳು
1 ಚಮಚ ಟೊಮೆಟೊ ಜ್ಯೂಸ್
1 ಚಮಚ ಅಲೋವೆರಾ ಲೋಳೆ
ತಯಾರಿಸುವ ವಿಧಾನ
•ಒಂದು ಪಿಂಗಾನಿಯಲ್ಲಿ ಟೊಮೆಟೊ ಜ್ಯೂಸ್ ಹಾಕಿ.
•ಇದಕ್ಕೆ ಅಲೋವೆರಾ ಜ್ಯೂಸ್ ಹಾಕಿ ಮತ್ತು ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಇದರ ತೆಳ್ಳಗಿನ ಪದರವನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿಕೊಳ್ಳಿ.
•10 ನಿಮಿಷ ಕಾಲ ಹಾಗೆ ಬಿಡಿ.
•ಇದರ ಬಳಿಕ ತೊಳೆಯಿರಿ.
•ಎರಡು ದಿನಕ್ಕೊಮ್ಮೆ ನೀವು ಇದನ್ನು ಬಳಸಿಕೊಂಡರೆ ಉತ್ತಮ ಫಲಿತಾಂಶ ಪಡೆಯಬಹುದು.

Most Read: ಮುಖದ ಸೌಂದರ್ಯ ಹೆಚ್ಚಿಸುವ ತರಕಾರಿಗಳ ಫೇಸ್ ಪ್ಯಾಕ್

ನೆರಿಗೆ ನಿವಾರಣೆ ಮಾಡಲು

ಸಂಕೋಚನ ಗುಣ ಹೊಂದಿರುವ ಟೊಮೆಟೋ ಚರ್ಮದಲ್ಲಿರುವ ರಂಧ್ರಗಳನ್ನು ಕುಗ್ಗಿಸುವುದು ಮತ್ತು ಚರ್ಮವು ಬಿಗಿಯಾಗುವಂತೆ ಮಾಡುವುದು. ಆಲಿವ್ ತೈಲದಲ್ಲಿ ಆಂಟಿಆಕ್ಸಿಡೆಂಟ್ ಮತ್ತು ವಯಸ್ಸಾಗುವ ಲಕ್ಷಣ ತಡೆಯುವ ಗುಣಗಳು ಇದೆ. ಇದು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು ಮತ್ತು ಚರ್ಮದಲ್ಲಿ ನೆರಿಗೆ ಮೂಡದಂತೆ ಇದು ತಡೆಯುವುದು.
ಬೇಕಾಗುವ ಸಾಮಗ್ರಿಗಳು
1 ಚಮಚ ಟೊಮೆಟೊ ಜ್ಯೂಸ್
10 ಹನಿ ಆಲಿವ್ ತೈಲ
ತಯಾರಿಸುವ ವಿಧಾನ
•ಪಿಂಗಾಣಿಯಲ್ಲಿ ಟೊಮೆಟೊ ಜ್ಯೂಸ್ ಹಾಕಿ.
•ಇದಕ್ಕೆ ಆಲಿವ್ ತೈಲ ಹಾಕಿ ಮಿಶ್ರಣ ಮಾಡಿ.
•ಒಂದು ಬ್ರಷ್ ತೆಗೆದುಕೊಂಡು ಅದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.
•15 ನಿಮಿಷ ಕಾಲ ಹಾಗೆ ಬಿಡಿ.
•ಬಳಿಕ ನೀರಿನಿಂದ ತೊಳೆಯಿರಿ.
ಕೂದಲಿಗೆ ಟೊಮೆಟೊ ಬಳಸುವುದು ಹೇಗೆ

ತಲೆಹೊಟ್ಟು ನಿವಾರಣೆಗೆ

ಲಿಂಬೆರಸ ಮತ್ತು ಟೊಮೆಟೋ ತುರಿಸುವ ತಲೆಬುರುಡೆ ಮತ್ತು ತಲೆಹೊಟ್ಟು ನಿವಾರಣೆ ಮಾಡಲು ಅದ್ಭುತವಾಗಿ ಕೆಲಸ ಮಾಡುವುದು.
ಬೇಕಾಗುವ ಸಾಮಗ್ರಿಗಳು
3 ಹಣ್ಣಾದ ಟೊಮೆಟೊ
2 ಚಮಚ ಲಿಂಬೆರಸ

ತಯಾರಿಸುವ ವಿಧಾನ

•ಟೊಮೆಟೊ ತಿರುಳು ತೆಗೆಯಿರಿ ಮತ್ತು ಇದನ್ನು ಪಿಂಗಾಣಿಗೆ ಹಾಕಿ.
•ಇದಕ್ಕೆ ಲಿಂಬೆರಸ ಹಾಕಿ ಮತ್ತು ಅದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿ.
•ಈ ಪೇಸ್ಟ್ ನ್ನು ನಿಮಗೆ ಬೇಕಾದಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಿ ಮತ್ತು ಅದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ.
•30 ನಿಮಿಷ ಕಾಲ ಹಾಗೆ ಬಿಡಿ.
•ಇದರ ಬಳಿಕ ತಣ್ಣೀರಿನಿಂದ ಕೂದಲು ತೊಳೆಯಿರಿ.
•ಕೂದಲು ಹಾಗೆ ಗಾಳಿಗೆ ಒಣಗಲು ಬಿಡಿ.
•ವಾರದಲ್ಲಿ ಎರಡು ಸಲ ನೀವು ಇದನ್ನು ಪ್ರಯತ್ನಿಸಿದರೆ ಉತ್ತಮ ಫಲಿತಾಂಶ ಸಿಗುವುದು.

ಕೂದಲಿಗೆ ಕಂಡೀಷನ್ ಮಾಡಲು

ಜೇನುತುಪ್ಪವು ಒಳ್ಳೆಯ ಮೊಶ್ಚಿರೈಸರ್ ಮತ್ತು ಶಮನಕಾರಿ ಗುಣ ಹೊಂದಿದೆ. ಇದು ಕೂದಲನ್ನು ಕಂಡೀಷನ್ ಮಾಡುವುದು.
ಬೇಕಾಗುವ ಸಾಮಗ್ರಿಗಳು
2 ಹಣ್ಣಾದ ಟೊಮೆಟೊ
2 ಚಮಚ ಜೇನುತುಪ್ಪ
ತಯಾರಿಸುವ ವಿಧಾನ
•ಒಂದು ಪಿಂಗಾಣಿಯಲ್ಲಿ ಟೊಮೆಟೊ ಹಿಚುಕಿಕೊಳ್ಳಿ.
•ಇದಕ್ಕೆ ಜೇನುತುಪ್ಪ ಹಾಕಿ ಮತ್ತು ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಕೆಲವು ನಿಮಿಷ ಈ ಮಿಶ್ರಣ ಹಾಗೆ ಇರಲಿ.
•ಇದರ ಬಳಿಕ ಕೂದಲು ಮತ್ತು ತಲೆಬುರುಡೆಗೆ ಹಚ್ಚಿಕೊಳ್ಳಿ.
•30 ನಿಮಿಷ ಕಾಲ ಹಾಗೆ ಬಿಡಿ.
•ತಣ್ಣೀರು ಬಳಸಿಕೊಂಡು ಕೂದಲು ತೊಳೆಯಿರಿ.
•ವಾರದಲ್ಲಿ ಒಂದು ಸಲ ಬಳಸಿದರೆ ಉತ್ತಮ ಫಲಿತಾಂಶ ಸಿಗುವುದು.

ಕೂದಲಿನ ಪ್ರಮಾಣ ಹೆಚ್ಚಿಸುವುದು

ಟೊಮೆಟೊ ಮತ್ತು ಹರಳೆಣ್ಣೆ ಜತೆಯಾಗಿ ಸೇರಿಸಿಕೊಂಡಾಗ ಅದು ಕೂದಲಿನ ಕಿರುಚೀಲಗಳನ್ನು ಉತ್ತೇಜಿಸುವುದು ಮತ್ತು ಕೂದಲಿನ ಬೆಳವಣಿಗೆಗೆ ನೆರವಾಗುವುದು. ಇದರಿಂದ ಕೂದಲಿನ ಪ್ರಮಾಣ ಹೆಚ್ಚಾಗುವುದು.
ಬೇಕಾಗುವ ಸಾಮಗ್ರಿಗಳು
ಒಂದು ಹಣ್ಣಾದ ಟೊಮೆಟೊ
2 ಚಮಚ ಹರಳೆಣ್ಣೆ
ಬಳಸುವ ವಿಧಾನ
•ಒಂದು ಪಿಂಗಾಣಿಯಲ್ಲಿ ಟೊಮೆಟೊದ ತಿರುಳನ್ನು ಸರಿಯಾಗಿ ಹಿಚುಕಿಕೊಳ್ಳಿ.
•ಇದಕ್ಕೆ ಹರಳೆಣ್ಣೆ ಹಾಕಿ ಮತ್ತು ಸರಿಯಾಗಿ ಎರಡು ಮಿಶ್ರಣ ಮಾಡಿಕೊಳ್ಳಿ.
•ಇದನ್ನು ಸ್ವಲ್ಪ ಬಿಸಿ ಮಾಡಿ. ಇದು ತಲೆಬುರುಡೆಗೆ ಹಾಕುವಷ್ಟು ಬಿಸಿ ಇರಲಿ.
•ಇದನ್ನು ಈಗ ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ವೃತ್ತಾಕಾರದಲ್ಲಿ ತಲೆಬುರುಡೆಗೆ ಕೆಲವು ನಿಮಿಷ ಕಾಲ ಮಸಾಜ್ ಮಾಡಿ.
•ಒಂದು ಗಂಟೆ ಕಾಲ ಹಾಗೆ ಬಿಡಿ.
•ಇದನ್ನು ತೊಳೆಯಿರಿ ಮತ್ತು ಶಾಂಪೂ ಹಾಕಿಕೊಳ್ಳಿ.
•ಕಂಡೀಷನರ್ ಬಳಸಿಕೊಂಡು ಇದನ್ನು ಕೊನೆಗೊಳಿಸಿ.
•ವಾರದಲ್ಲಿ ಒಂದು ಸಲ ಬಳಸಿಕೊಂಡರೆ ಉತ್ತಮ ಫಲಿತಾಂಶ ಸಿಗುವುದು.

English summary

How To Use Tomato To Get Amazing Skin & Hair

Home remedies have gained a lot of popularity and rightfully so. These are made up of natural ingredients that benefit your skin without causing any harm. The delicious red tomato, when used topically, is a delightful treat for your skin and hair. It can be used with ingredients like honey, lemon, potato etc. to tackle various skin & hair issues. Take a look!
X
Desktop Bottom Promotion