For Quick Alerts
ALLOW NOTIFICATIONS  
For Daily Alerts

ವಯಸ್ಸಾಗುವ ಲಕ್ಷಣಗಳನ್ನು ತಡೆಯಲು 'ತೆಂಗಿನ ಎಣ್ಣೆ' ಬಳಸಿ ನೋಡಿ

|

ಮನುಷ್ಯನಿಗೆ ವಯಸ್ಸಾಗುತ್ತಾ ಹೋದಂತೆ ಮುಖದ ಮೇಲೆ ನೆರಿಗೆ ಹಾಗೂ ಗೆರೆಗಳು ಕಾಣಿಸಿಕೊಳ್ಳುವುದು. ಇದನ್ನು ಎಚ್ಚರಿಕೆ ಎಂದು ಪರಿಗಣಿಸಬಹುದು. ನಿಮ್ಮ ಮುಖದಲ್ಲಿ ಕೂಡ ಹೀಗೆ ನೆರಿಗೆ ಹಾಗೂ ಗೆರೆಗಳು ಮೂಡುತ್ತಿದೆಯಾ? ಹಾಗಾದರೆ ನೀವು ಇದಕ್ಕೆ ಏನಾದರೂ ಮಾಡಲೇಬೇಕಾಗುತ್ತದೆ. ವಯಸ್ಸಾಗುವ ವೇಳೆ ಮೂಡುವಂತಹ ನೆರಿಗೆ ಹಾಗೂ ಗೆರೆ ನಿವಾರಣೆ ಮಾಡಲು ಜನರು ಮಾರುಕಟ್ಟೆಗೆ ತೆರಳಿ ಅಲ್ಲಿ ಸಿಗುವಂತಹ ವಯಸ್ಸಾಗುವ ಲಕ್ಷಣ ತಡೆಯುವಂತಹ ಉತ್ಪನ್ನಗಳನ್ನು ಖರೀದಿಸಿ, ಅದನ್ನು ಬಳಸುವರು. ಆದರೆ ಇದು ಹೆಚ್ಚು ಸಮಯ ಕೆಲಸ ಮಾಡದು ಮತ್ತು ಇದರಿಂದ ದೇಹಕ್ಕೆ ಹಾನಿ ಕೂಡ ಉಂಟಾಗುತ್ತದೆ.

ಇದಕ್ಕಾಗಿ ಏನಾದರೂ ಪರ್ಯಾಯ ಇದೆಯಾ ಎಂದು ಹುಡುಕುವಿರಿ. ತುಂಬಾ ಸುಲಭವಾಗಿ ಸಿಗುವಂತಹ ತೆಂಗಿನ ಎಣ್ಣೆ ಬಳಸಿಕೊಂಡು ಈ ಸಮಸ್ಯೆ ನಿವಾರಣೆ ಮಾಡಬಹುದು. ಚರ್ಮಕ್ಕೆ ಪೋಷಣೆ ನೀಡಲು ತೆಂಗಿನ ಎಣ್ಣೆಯು ಅದ್ಭುತವಾದ ಸಾಮಗ್ರಿ ಎಂದು ಪರಿಗಣಿಸಲಾಗಿದೆ ಮತ್ತು ಇದು ನೆರಿಗೆ ನಿವಾರಣೆ ಮಾಡುತ್ತದೆ. ತೆಂಗಿನ ಎಣ್ಣೆಯು ಚರ್ಮವನ್ನು ಮೊಶ್ಚಿರೈಸ್ ಆಗಿ ಇಡುತ್ತದೆ ಮತ್ತು ಇದು ಚರ್ಮವನ್ನು ತೇವಾಂಶದಿಂದ ಇಟ್ಟು ನಯ ಹಾಗೂ ಸುಂದರವಾಗಿಸುವುದು. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗುಣಗಳು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು ಮತ್ತು ನೆರಿಗೆ ಹಾಗೂ ಗೆರೆಗಳ ನಿವಾರಣೆ ಮಾಡಿ, ಚರ್ಮಕ್ಕೆ ಪುನರ್ಶ್ಚೇತನ ನೀಡುವುದು. ಇದು ಚರ್ಮದಲ್ಲಿನ ಕಾಲಜನ್ ಉತ್ಪತ್ತಿ ಹೆಚ್ಚಿಸುವುದು ಮತ್ತು ಚರ್ಮವು ಯೌವನಯುತ ಹಾಗೂ ಬಿಗಿಯಾಗಿಸುವುದು. ನೆರಿಗೆ ನಿವಾರಣೆ ಮಾಡಲು ತೆಂಗಿನ ಎಣ್ಣೆ ಬಳಸುವುದು ಹೇಗೆ ಎಂದು ತಿಳಿಯಿರಿ.

Coconut Oil

1. ತೆಂಗಿನ ಎಣ್ಣೆಯ ಜತೆಗೆ ಅರಶಿನ

ಚರ್ಮಕ್ಕೆ ಶಮನ ನೀಡಲು ಇದು ಪರಿಣಾಮಕಾರಿ ಸಾಮಗ್ರಿಯಾಗಿರುವುದು.ಅರಶಿನವು ಚರ್ಮದಲ್ಲಿ ಕಾಲಜನ್ ಉತ್ಪತ್ತಿಗೆ ನೆರವಾಗುವುದು. ಇದರಿಂದ ಚರ್ಮದ ಸ್ಥಿತಿಸ್ಥಾಪಕತ್ವ ಉತ್ತಮವಾಗುವುದು ಮತ್ತು ಅದು ಬಿಗಿಯಾಗುವುದು. ಇದರಿಂದ ನೆರಿಗೆ ನಿವಾರಣೆ ಮಾಡಲು ನೆರವಾಗುವುದು.

ಬೇಕಾಗುವ ಸಾಮಗ್ರಿಗಳು

  • 1 ಚಮಚ ತೆಂಗಿನ ಎಣ್ಣೆ
  • ಒಂಚು ಚಿಟಿಕೆ ಅರಶಿನ

ವಿಧಾನ

•ತೆಂಗಿನ ಎಣ್ಣೆಯನ್ನು ಪಿಂಗಾಣಿಗೆ ಹಾಕಿ.
•ಇದಕ್ಕೆ ಅರಿಶಿನ ಹಾಕಿ ಮತ್ತು ಮಿಶ್ರಣ ಮಾಡಿ.
•ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ.
•15-20 ನಿಮಿಷ ಕಾಲ ಹಾಗೆ ಬಿಡಿ.
•ಇದನ್ನು ಬಳಿಕ ತೊಳೆಯಿರಿ.
•ಉತ್ತಮ ಫಲಿತಾಂಶಕ್ಕಾಗಿ ಈ ಮನೆಮದ್ದನ್ನು ಪ್ರತಿನಿತ್ಯ ಬಳಸಿ.

2.ತೆಂಗಿನ ಎಣ್ಣೆ, ಹಾಲು ಮತ್ತು ಲಿಂಬೆ

ಹಾಲಿನಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಚರ್ಮದ ನೋಟವನ್ನು ಉತ್ತಮಪಡಿಸುವುದು ಮತ್ತು ನೆರಿಗೆ ಹಾಗೂ ಗೆರೆಗಳಂತಹ ಚಿಹ್ನೆಗಳನ್ನು ಇದು ಕಡಿಮೆ ಮಾಡುವುದು. ಲಿಂಬೆಯಲ್ಲಿ ವಿಟಮಿನ್ ಸಿ ಇದ್ದು, ಇದು ಶ್ರೇಷ್ಠ ಆ್ಯಂಟಿಆಕ್ಸಿಡೆಂಟ್ ಆಗಿದೆ ಮತ್ತು ಕಾಲಜನ್ ಉತ್ಪತ್ತಿಗೆ ಇದು ನೆರವಾಗುವುದು ಮತ್ತು ನೆರಿಗೆ ನಿವಾರಣೆ ಮಾಡುವುದು.

ಬೇಕಾಗುವ ಸಾಮಗ್ರಿಗಳು

•1 ಚಮಚ ತೆಂಗಿನ ಎಣ್ಣೆ
•1 ಚಮಚ ಹಸಿ ಹಾಲು
•ಕೆಲವು ಹನಿ ಲಿಂಬೆ ರಸ

ವಿಧಾನ

•ಪಿಂಗಾಣಿಗೆ ಹಾಲು ಹಾಕಿ.
•ಇದಕ್ಕೆ ಲಿಂಬೆರಸ ಹಾಕಿ ಮತ್ತು ಅದನ್ನು ತಿರುಗಿಸುತ್ತಾ ಇರಿ ಮತ್ತು ಹಾಲು ದಪ್ಪಗಾಗಲಿ.
•ಇದಕ್ಕೆ ಈಗ ತೆಂಗಿನ ಎಣ್ಣೆ ಹಾಕಿ ಮತ್ತು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ.
•ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಕೆಲವು ನಿಮಿಷ ಕಾಲ ಮಸಾಜ್ ಮಾಡಿಕೊಳ್ಳಿ.
•15 ನಿಮಿಷ ಹಾಗೆ ಬಿಡಿ.
•ಇದರ ಬಳಿಕ ಮುಖ ತೊಳೆದುಕೊಳ್ಳಿ.
•ಉತ್ತಮ ಫಲಿತಾಂಶ ಬರಲು ನೀವು ಎರಡು ದಿನಕ್ಕೊಮ್ಮೆ ಇದನ್ನು ಬಳಸಿ.

3.ತೆಂಗಿನ ಎಣ್ಣೆ ಮತ್ತು ಹರಳೆಣ್ಣೆ

ಹರಳೆಣ್ಣೆಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣವು ಚರ್ಮವನ್ನು ರಕ್ಷಿಸುವುದು ಮತ್ತು ಶಮನಗೊಳಿಸುವುದು. ಚರ್ಮವು ತೇವಾಂಶದಿಂದ ಇರುವಂತೆ ಮಾಡುವುದು ಮತ್ತು ನೆರಿಗೆ ಮೂಡುವುದನ್ನು ಇದು ಕಡಿಮೆ ಮಾಡುವುದು.

ಬೇಕಾಗುವ ಸಾಮಗ್ರಿಗಳು

•1ಚಮಚ ತೆಂಗಿನ ಎಣ್ಣೆ
•1ಚಮಚ ಹರಳೆಣ್ಣೆ

ವಿಧಾನ

•ಪಿಂಗಾಣಿಯಲ್ಲಿ ಎರಡನ್ನು ಸರಿಯಾಗಿ ಮಿಶ್ರಣ ಮಾಡಿ.
•ಈ ಮಿಶ್ರಣವನ್ನು ಸಾಕಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಿ ಮತ್ತು ಮುಖಕ್ಕೆ ಸರಿಯಾಗಿ ಮಸಾಜ್ ಮಾಡಿಕೊಳ್ಳಿ.
•ರಾತ್ರಿಯಿಡಿ ಹಾಗೆ ಬಿಡಿ.
•ಬೆಳಗ್ಗೆ ಎದ್ದ ಬಳಿಕ ತೊಳೆಯಿರಿ.
•ನೆರಿಗೆ ನಿವಾರಣೆ ಮಾಡಲು ಇದನ್ನು ದಿನನಿತ್ಯ ಬಳಸಿ.

4.ತೆಂಗಿನ ಎಣ್ಣೆ ಮತ್ತು ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್ ಚರ್ಮವನ್ನು ಸಂಕುಚಿತಗೊಳಿಸುವುದು ಮತ್ತು ಚರ್ಮಕ್ಕೆ ಪೋಷಣೆ ನೀಡಿ, ಶುದ್ಧ ಮಾಡುವುದು. ಇದನ್ನು ತೆಂಗಿನ ಎಣ್ಣೆ ಜತೆ ಸೇರಿಸಿದರೆ ಮತ್ತಷ್ಟು ಪರಿಣಾಮಕಾರಿ.

ಬೇಕಾಗುವ ಸಾಮಗ್ರಿಗಳು

•6-7 ಹನಿ ತೆಂಗಿನ ಎಣ್ಣೆ
•1 ಚಮಚ ಆ್ಯಪಲ್ ಸೀಡರ್ ವಿನೇಗರ್
•1 ಚಮಚ ನೀರು

ವಿಧಾನ

•ನೀರು ಹಾಕಿಕೊಂಡು ಆ್ಯಪಲ್ ಸೀಡರ್ ವಿನೇಗರ್ ನ್ನು ಕಲಸಿಕೊಳ್ಳಿ.
•ಹತ್ತಿ ಉಂಡೆ ಬಳಸಿಕೊಂಡು ಆ್ಯಪಲ್ ಸೀಡರ್ ವಿನೇಗರ್ ನ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ.
•ಇದು ಒಣಗುವ ತನಕ ಹಾಗೆ ಬಿಡಿ.
•ಕೆಲವು ನಿಮಿಷಗಳ ಕಾಲ ನೀವು ತೆಂಗಿನ ಎಣ್ಣೆ ಬಳಸಿಕೊಂಡು ಮುಖಕ್ಕೆ ಮಸಾಜ್ ಮಾಡಿ.
•ರಾತ್ರಿಯಿಡಿ ಹಾಗೆ ಬಿಡಿ.
•ಬೆಳಗ್ಗೆ ನೀವು ಇದನ್ನು ತೊಳೆಯಿರಿ.
•ಈ ವಿಧಾನವನ್ನು ನೀವು ಪ್ರತಿನಿತ್ಯ ಬಳಸಿಕೊಂಡು ಸುಧಾರಣೆ ಕಾಣಬಹುದು.

5. ತೆಂಗಿನ ಎಣ್ಣೆ ಜತೆಗೆ ಜೇನುತುಪ್ಪ

ಚರ್ಮಕ್ಕೆ ಮೊಶ್ಚಿರೈಸರ್ ನೀಡುವಂತಹ ಜೇನುತುಪ್ಪದಲ್ಲಿ ಆ್ಯಂಟಿಆಕ್ಸಿಡೆಂಟ್, ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಚರ್ಮದ ರಕ್ಷಣೆ, ಶಮನ ಮತ್ತು ಚರ್ಮಕ್ಕೆ ಪುನರ್ಶ್ಚೇತನ ನೀಡುವುದು ಮತ್ತು ನೆರಿಗೆ ಮೂಡುವುದನ್ನು ತಡೆಯುವುದು.

ಬೇಕಾಗುವ ಸಾಮಗ್ರಿಗಳು

•1 ಚಮಚ ಸಾವಯವ ತೆಂಗಿನ ಎಣ್ಣೆ
•½ ಚಮಚ ಜೇನುತುಪ್ಪ

ಬಳಸುವ ವಿಧಾನ

•ಪಿಂಗಾಣಿಗೆ ತೆಂಗಿನ ಎಣ್ಣೆ ಹಾಕಿ.
•ಇದಕ್ಕೆ ಜೇನುತುಪ್ಪ ಹಾಕಿ ಮತ್ತು ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ.
•30 ನಿಮಿಷ ಕಾಲ ಹಾಗೆ ಬಿಡಿ.
•ಇದರ ಬಳಿಕ ತೊಳೆಯಿರಿ.

6. ತೆಂಗಿನ ಎಣ್ಣೆ ಮತ್ತು ವಿಟಮಿನ್ ಇ

ಆ್ಯಂಟಿಆಕ್ಸಿಡೆಂಡ್ ಸಮೃದ್ಧವಾಗಿರುವ ವಿಟಮಿನ್ ಇ ಚರ್ಮದ ರಕ್ಷಣೆ ಮತ್ತು ಪೋಷಣೆ ಮಾಡುವುದು. ಇದರಿಂದ ಆರೋಗ್ಯಕಾರಿ, ನಯ ಹಾಗೂ ಯೌವನಯುತ ಚರ್ಮವು ನಿಮ್ಮದಾಗುವುದು.

ಬೇಕಾಗುವ ಸಾಮಗ್ರಿಗಳು

  • 1 ಚಮಚ ತೆಂಗಿನ ಎಣ್ಣೆ
  • 1 ವಿಟಮಿನ್ ಇ ಕ್ಯಾಪ್ಸೂಲ್

ವಿಧಾನ

•ತೆಂಗಿನ ಎಣ್ಣೆಯನ್ನು ಪಿಂಗಾಣಿಗೆ ಹಾಕಿ.
•ವಿಟಮಿನ್ ಇ ಕ್ಯಾಪ್ಸೂಲ್ ನ್ನು ತುಂಡು ಮಾಡಿ ಅದನ್ನು ಪಿಂಗಾಣಿಗೆ ಹಾಕಿಕೊಳ್ಳಿ.
•ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಮುಖ ತೊಳೆದು ಸರಿಯಾಗಿ ಒರೆಸಿಕೊಳ್ಳಿ.
•ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ನಿಧಾನವಾಗಿ ಮುಖಕ್ಕೆ ಕೆಲವು ನಿಮಿಷ ಕಾಲ ಮಸಾಜ್ ಮಾಡಿ.
•ಒಂದು ಗಂಟೆ ಕಾಲ ಹಾಗೆ ಬಿಡಿ.
•ಇದರ ಬಳಿಕ ನೀರಿನಿಂದ ತೊಳೆಯಿರಿ.
•ಉತ್ತಮ ಫಲಿತಾಂಶಕ್ಕಾಗಿ ನೀವು ಎರಡು ದಿನಕ್ಕೊಮ್ಮೆ ಈ ವಿಧಾನವನ್ನು ಬಳಸಿಕೊಳ್ಳಿ.

English summary

How To Use Coconut Oil To Get Rid Of Wrinkles

Wrinkles face are the first visible signs of ageing and they can be quite alarming. Coconut oil is a wonderful natural ingredient that can help you get rid of wrinkles. The antioxidant and collagen-boosting properties of coconut oil make it an effective remedy against wrinkles. It can be used with ingredients like turmeric, honey, milk etc. to get rid of wrinkles.
Story first published: Thursday, July 18, 2019, 15:36 [IST]
X
Desktop Bottom Promotion