For Quick Alerts
ALLOW NOTIFICATIONS  
For Daily Alerts

ಪಾದಗಳ ಸೌಂದರ್ಯವನ್ನು ಹೆಚ್ಚಿಸಲು ಮನೆಯಲ್ಲಿಯೇ ಮಾಡಿದ ಫುಟ್ ಸ್ಕ್ರಬ್‌ಗಳು

|

ದೇಹದ ಸೌಂದರ್ಯ ಆರೈಕೆ ವೇಳೆ ಪಾದಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುವುದಿಲ್ಲ. ಇದರಿಂದ ಪಾದಗಳು ಯಾವಾಗಲೂ ಕಡೆಗಣಿಸಲ್ಪಟ್ಟಿರುವುದು. ಹೀಗಾಗಿ ಪಾದಗಳ ಆರೈಕೆ ಕೂಡ ಅನಿವಾರ್ಯವಾಗಿದೆ. ಹೀಗಾಗಿ ಪಾದಗಳ ಸ್ವಚ್ಛತೆ ಕಡೆ ಗಮನಹರಿಸಬೇಕು. ಪಾದಗಳನ್ನು ಸ್ವಚ್ಛವಾಗಿಡಲು ಎಷ್ಟು ಪ್ರಯತ್ನ ಪಡಬೇಕು ಎಂದು ನೀವು ಯೋಚಿಸುತ್ತೀದ್ದೀರಿ? ಪಾದಗಳ ಸ್ವಚ್ಛತೆಯು ಅನಿವಾರ್ಯ ವಾಗಿದ್ದರೂ ನಾವೆಲ್ಲರೂ ಇದು ತುಂಬಾ ದುಬಾರಿ ಎಂದು ಭಾವಿಸುತ್ತೇವೆ. ಆದರೆ ಇದನ್ನು ಸಾಮಾನ್ಯ ಚರ್ಮದ ಆರೈಕೆಯೊಂದಿಗೆ ಮಾಡಬಹುದಾಗಿದೆ. ಇದು ತುಂಬಾ ಸರಳವಾಗಿದೆ ಮತ್ತು ಕೆಲವೇ ದಿನಗಳಲ್ಲಿ ಪಾದೋಪಚರಿಂದ ಪಾದಗಳ ಆರೈಕೆ ಮಾಡಬಹುದಾಗಿದೆ.

ನೀವು ಸುಲಭವಾಗಿ ನಿಮಗೆ ಸಿಗುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ಪಾದಗಳ ಆರೈಕೆ ಮಾಡಬಹುದಾಗಿದೆ. ನೀವು ಏನನ್ನು ಬಯಸುತ್ತಿದ್ದೀರಿ ಎಂದು ಮಾತ್ರ ತಿಳಿಯಬೇಕಾಗಿದೆ. ಮನೆಮದ್ದುಗಳು ಪಾದಗಳ ಪೋಷಣೆ ಮಾಡಲು ತುಂಬಾ ಒಳ್ಳೆಯದು ಮತ್ತು ಅವುಗಳಿಗೆ ಬೇಕಾಗಿರುವಂತಹ ಪ್ರೀತಿಯನ್ನು ಇದು ನೀಡುವುದು. ಮನೆಯಲ್ಲೇ ಮಾಡುವಂತಹ ಫುಟ್ ಸ್ಕ್ರಬ್ ನಿಂದಾಗಿ ಸತ್ತ ಚರ್ಮದ ಕೋಶಗಳು, ಕಲ್ಮಶ ಹಾಗೂ ಕೊಳೆ ತೆಗೆಯಬಹುದು. ಇದರಿಂದ ಪಾದಗಳು ತುಂಬಾ ನಯ ಹಾಗೂ ಮೃಧುವಾಗುವುದು. ಪಾದಗಳನ್ನು ಮೃದುವಾಗಿಸಲು ಬೇಕಾಗುವಂತಹ ಫುಟ್ ಸ್ಕ್ರಬ್ ನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬಹುದು ಎಂದು ತಿಳಿಯಿರಿ.

ಬ್ರೌನ್ ಶುಗರ್, ತೆಂಗಿನೆಣ್ಣೆ ಮತ್ತು ಲಿಂಬೆ ರಸ
ಪಾದಗಳಲ್ಲಿ ಇರುವಂತಹ ಚರ್ಮದ ಸತ್ತ ಕೋಶಗಳನ್ನು ಬ್ರೌನ್ ಶುಗರ್ ತೆಗೆಯುವುದು. ತೆಂಗಿನೆಣ್ಣೆಯು ಚರ್ಮವು ಮೊಶ್ಚಿರೈಸ್ ಆಗಿರುವಂತೆ ಮತ್ತು ನಯವಾಗಿರುವಂತೆ ಮಾಡುವುದು. ಇದರ ಹೊರತಾಗಿ ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಚರ್ಮವನ್ನು ಫ್ರೀ ರ್ಯಾಡಿಕಲ್ ನಿಂದ ಆಗುವ ಹಾನಿಯಿಂದ ತಪ್ಪಿಸುವುದು. ಲಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ ಮತ್ತು ಇದು ಚರ್ಮಕ್ಕೆ ಹಾನಿಯಾಗುವುದನ್ನು ತಡೆಯುವುದು ಮಾತ್ರವಲ್ಲದೆ ಚರ್ಮವು ಬಣ್ಣ ಕುಂದುವುದನ್ನು ತಡೆದು, ಚರ್ಮಕ್ಕೆ ಕಾಂತಿ ನೀಡುವುದು.

Foot Scrubs

ಬೇಕಾಗುವ ಸಾಮಗ್ರಿಗಳು
2
ಚಮಚ ಬ್ರೌನ್ ಶುಗರ್
1 ಚಮಚ ತೆಂಗಿನ ಎಣ್ಣೆ
2 ಚಮಚ ತಾಜಾ ಲಿಂಬೆಯ ರಸ

ತಯಾರಿಸುವ ವಿಧಾನ
•ಎಲ್ಲಾ ಸಾಮಗ್ರಿಗಳನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಐದು ನಿಮಿಷ ಕಾಲ ಪಾದಗಳಿಗೆ ಸ್ಕ್ರಬ್ ಮಾಡಲು ಇದನ್ನು ಬಳಸಿ.
•ಉಗುರುಬೆಚ್ಚಗಿನ ನೀರಿನಿಂದ ಪಾದಗಳನ್ನು ತೊಳೆಯಿರಿ ಮತ್ತು ಒರೆಸಿಕೊಳ್ಳಿ.

ಸಮುದ್ರ ಉಪ್ಪು, ಜೇನುತುಪ್ಪ ಮತ್ತು ಪುದೀನಾ ರಸ
ಪಾದಗಳಲ್ಲಿ ಇರುವಂತಹ ಸತ್ತ ಚರ್ಮದ ಕೋಶವನ್ನು ಸಮುದ್ರ ಉಪ್ಪು ಕಿತ್ತು ಹಾಕುವುದು ಮತ್ತು ಇದು ಚರ್ಮಕ್ಕೆ ಮೊಶ್ಚಿರೈಸ್ ನೀಡಿ, ಮೃದು ಚರ್ಮ ನೀಡುವುದು. ಜೇನುತುಪ್ಪವು ಚರ್ಮವನ್ನು ತೇವಾಂಶದಿಂದ ಇಡುತ್ತದೆ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮವನ್ನು ಆರೋಗ್ಯವಾಗಿ ಇಡಲು ನೆರವಾಗುವುದು. ಪುದೀನಾದಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಚರ್ಮಕ್ಕೆ ಶಮನ ಹಾಗೂ ತಂಪು ನೀಡುವುದು.

ಬೇಕಾಗುವ ಸಾಮಗ್ರಿಗಳು
*2-3 ಚಮಚ ಸಮುದ್ರದ ಉಪ್ಪು
*2 ಚಮಚ ಸಾವಯವ ಜೇನುತುಪ್ಪ
*1 ಚಮಚ ಪುದೀನಾ ರಸ
ವಿಧಾನ
•ಪಿಂಗಾಣಿಯಲ್ಲಿ ಸಮುದ್ರ ಉಪ್ಪು ತೆಗೆದುಕೊಳ್ಳಿ.
•ಇದಕ್ಕೆ ಜೇನುತುಪ್ಪ ಹಾಕಿ ಸರಿಯಾಗಿ ಮಿಶ್ರಣ ಮಾಡಿ.
•ಈ ಮಿಶ್ರಣಕ್ಕೆ ಪುದೀನಾ ರಸ ಹಾಕಿ ಮತ್ತು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ.
•ಐದು ನಿಮಿಷ ಕಾಲ ಪಾದಗಳಿಗೆ ಸ್ಕ್ರಬ್ ಮಾಡಲು ಇದನ್ನು ಬಳಸಿ.
•ಉಗುರುಬೆಚ್ಚಗಿನ ನೀರಿನಿಂದ ಪಾದಗಳನ್ನು ತೊಳೆಯಿರಿ ಮತ್ತು ಒರೆಸಿಕೊಳ್ಳಿ.

ಅಡುಗೆ ಸೋಡಾ, ಬ್ರೌನ್ ಶುಗರ್ ಮತ್ತು ಆಲಿವ್ ತೈಲ
ಅಡುಗೆ ಸೋಡಾದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ ಮತ್ತು ಇದು ಆರೋಗ್ಯಕಾರಿ ಚರ್ಮವನ್ನು ಕಾಪಾಡುವುದು. ಬ್ರೌನ್ ಶುಗರ್ ಸತ್ತ ಚರ್ಮದ ಕೋಶಗಳನ್ನು ತೆಗೆಯುವುದು ಮತ್ತು ಆಲಿವ್ ತೈಲವು ಮೊಶ್ಚಿರೈಸ್ ಮಾಡುವುದು ಮತ್ತು ಚರ್ಮವನ್ನು ನಯವಾಗಿಸುವುದು.

ಬೇಕಾಗುವ ಸಾಮಗ್ರಿಗಳು
•1 ಚಮಚ ಅಡುಗೆ ಸೋಡಾ
•1 ಚಮಚ ಬ್ರೌನ್ ಶುಗರ್
•1 ಚಮಚ ಆಲಿವ್ ತೈಲ
ತಯಾರಿಸುವ ವಿಧಾನ
•ಪಿಂಗಾಣಿಯಲ್ಲಿ ಅಡುಗೆ ಸೋಡಾ ಹಾಕಿಕೊಳ್ಳಿ.
•ಇದಕ್ಕೆ ಬ್ರೌನ್ ಶುಗರ್ , ಆಲಿವ್ ತೈಲ ಹಾಕಿ ಮತ್ತು ಸರಿಯಾಗಿ ಕಲಸಿಕೊಳ್ಳೀ. ಇದನ್ನು ನೀವು ಸರಿಯಾಗಿ ಮಿಶ್ರಣವಾಗುವ ತನಕ ಕಲಸಿಕೊಳ್ಳೀ.
•ಈ ಮಿಶ್ರಣವನ್ನು ಬಳಸಿಕೊಂಡು 5-10 ನಿಮಿಷ ಕಾಲ ಸ್ಕ್ರಬ್ ಮಾಡಿಕೊಳ್ಳಿ.
•ಇದರ ಬಳಿಕ ಪಾದಗಳನ್ನು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಒರೆಸಿಕೊಳ್ಳಿ.
•ಪಾದಗಳಿಗೆ ಕ್ರೀಮ್ ಹಚ್ಚಿಕೊಳ್ಳಿ.

ಸಕ್ಕರೆ ಮತ್ತು ಮೊಸರು
ಪಾದಗಳಲ್ಲಿ ಇರುವಂತಹ ಸತ್ತ ಚರ್ಮದ ಕೋಶಗಳನ್ನು ಸಕ್ಕರೆಯು ತೆಗೆಯುವುದು, ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವಿದೆ ಮತ್ತು ಇದು ಚರ್ಮಕ್ಕೆ ಮೊಶ್ಚಿರೈಸ್ ನೀಡುವುದು ಮತ್ತು ಚರ್ಮಕ್ಕೆ ಕಾಂತಿ ಹಾಗೂ ಬಣ್ಣ ನೀಡುವುದು.

ಬೇಕಾಗುವ ಸಾಮಗ್ರಿಗಳು
*2 ಚಮಚ ಸಕ್ಕರೆ ಹರಳು
*½ ಕಪ್ ಮೊಸರು
ಬಳಸುವ ವಿಧಾನ
•ಮೊಸರನ್ನು ಪಿಂಗಾಣಿಗೆ ಹಾಕಿಕೊಳ್ಳಿ.
•ಇದಕ್ಕೆ ಸಕ್ಕರೆ ಹರಳು ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿ.
•ಐದು ನಿಮಿಷ ಕಾಲ ಪಾದಗಳಿಗೆ ಮೊಸರು ಮತ್ತು ಸಕ್ಕರೆ ಮಿಶ್ರಣದಿಂದ ಸ್ಕ್ರಬ್ ಮಾಡಿ.
•ನೀರು ಬಳಸಿ ಪಾದಗಳನ್ನು ತೊಳೆಯಿರಿ ಮತ್ತು ಒರೆಸಿಕೊಳ್ಳಿ.

ಕಾಫಿ, ಓಟ್ ಮೀಲ್ ಮತ್ತು ಕಲ್ಲು ಉಪ್ಪು
ಕಾಫಿಯು ಪಾದಗಳಿಂದ ಸತ್ತ ಚರ್ಮದ ಕೋಶಗಳನ್ನುತೆಗೆಯುವುದು ಮಾತ್ರವಲ್ಲದೆ ಇದು ಚರ್ಮದಲ್ಲಿ ರಕ್ತ ಸಂಚಾರವನ್ನು ಉತ್ತಮಪಡಿಸುವುದು ಮತ್ತು ಚರ್ಮವು ನಯವಾಗುವಂತೆ ಮಾಡುವುದು. ಓಟ್ ಮೀಲ್ ನಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಚರ್ಮಕ್ಕೆ ಆಗುವ ಹಾನಿ ತಡೆಯುವುದು ಮತ್ತು ರಕ್ಷಣೆ ನೀಡುವುದು. ಕಲ್ಲು ಉಪ್ಪು ಚರ್ಮವನ್ನು ಸ್ವಚ್ಛಗೊಳಿಸುವುದು ಮತ್ತು ಕಿರಿಕಿರಿ ಮತ್ತು ಉರಿಯೂತ ಉಂಟು ಮಾಡುವ ಚರ್ಮಕ್ಕೆ ಶಮನ ನೀಡುವುದು.

ಬೇಕಾಗುವ ಸಾಮಗ್ರಿಗಳು
•2 ಚಮಚ ಕಾಫಿ
•3 ಚಮಚ ಓಟ್ ಮೀಲ್
•3 ಚಮಚ ಕಲ್ಲು ಉಪ್ಪು
•3 ಚಮಚ ಆಲಿವ್ ತೈಲ
•2 ಹನಿ ಲ್ಯಾವೆಂಡರ್ ಸಾರಭೂತ ತೈಲ
ಬಳಸುವ ವಿಧಾನ
•ಒಂದು ಪಿಂಗಾಣಿಯಲ್ಲಿ ಕಾಫಿ ಮತ್ತು ಓಟ್ ಮೀಲ್ ಹಾಕಿ.
•ಇದಕ್ಕೆ ಕಲ್ಲು ಉಪ್ಪು ಮತ್ತು ಆಲಿವ್ ತೈಲ ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿ.
•ಇದಕ್ಕೆ ನೀವು ಲ್ಯಾವೆಂಡರ್ ಸಾರಭೂತ ತೈಲ ಹಾಕಿ ಮತ್ತು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಪಾದಗಳಿಗೆ ಈ ಮಿಶ್ರಣವನ್ನು ಸರಿಯಾಗಿ ಹಚ್ಚಿಕೊಳ್ಳಿ ಮತ್ತು 5-10 ನಿಮಿಷ ಕಾಲ ಪಾದಗಳಿಗೆ ಸರಿಯಾಗಿ ಸ್ಕ್ರಬ್ ಮಾಡಿ.
•ಉಗುರುಬೆಚ್ಚಗಿನ ನೀರಿನಿಂದ ಪಾದಗಳನ್ನು ತೊಳೆಯಿರಿ ಮತ್ತು ಒರೆಸಿಕೊಳ್ಳಿ.

ಅಕ್ಕಿ ಹಿಟ್ಟು, ಕಡಲೆಹಿಟ್ಟು ಮತ್ತು ಹಾಲು
ಅಕ್ಕಿಹಿಟ್ಟು ಪಾದಗಳಲ್ಲಿ ಇರುವ ಸತ್ತ ಚರ್ಮದ ಕೋಶಗಳನ್ನು ತೆಗೆಯುವುದು ಮತ್ತು ಇದರಲ್ಲಿ ಪಾದಗಳ ಬಣ್ಣ ವೃದ್ಧಿಸುವ ಗುಣವು ಇದೆ. ಕಡಲೆ ಹಿಟ್ಟು ಚರ್ಮವನ್ನು ಶುಚಿಗೊಳಿಸುವುದು ಮತ್ತು ಹಾಲಿನಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಚರ್ಮಕ್ಕೆ ಮೊಶ್ಚಿರೈಸ್ ನೀಡುವುದು ಮತ್ತು ಕಾಂತಿ ನೀಡುವುದು.

ಬೇಕಾಗುವ ಸಾಮಗ್ರಿಗಳು
*2 ಚಮಚ ಅಕ್ಕಿ ಹಿಟ್ಟು
*1 ಚಮಚ ಕಡಲೆ ಹಿಟ್ಟು
*2 ಚಮಚ ಹಾಲು
ಬಳಸುವ ವಿಧಾನ
•ಪಿಂಗಾಣಿಯಲ್ಲಿ ಎಲ್ಲಾ ಸಾಮಗ್ರಿಗಳನ್ನು ಮಿಶ್ರಣ ಮಾಡಿಕೊಳ್ಳಿ.
•ಪಾದಗಳಿಗೆ ಈ ಮಿಶ್ರಣವನ್ನು ಸರಿಯಾಗಿ ಹಚ್ಚಿಕೊಳ್ಳಿ ಮತ್ತು 5-10 ನಿಮಿಷ ಕಾಲ ಸರಿಯಾಗಿ ಸ್ಕ್ರಬ್ ಮಾಡಿ.
•ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಒರೆಸಿಕೊಳ್ಳಿ

ಕಿತ್ತಳೆ ಸಿಪ್ಪೆ ಹುಡಿ, ಸಕ್ಕರೆ ಮತ್ತು ರೋಸ್ ವಾಟರ್
ಕಿತ್ತಳೆ ಸಿಪ್ಪೆ ಹುಡಿಯು ಕಿತ್ತು ಹಾಕುವ ಗುಣ ಹೊಂದಿದೆ ಮತ್ತು ಇದು ಪಾದಗಳ ಚರ್ಮವನ್ನು ಬಿಳಿಯಾಗಿಸುವ ಗುಣ ಹೊಂದಿದೆ. ರೋಸ್ ವಾಟರ್ ನಲ್ಲಿ ಉರಿಯೂತ ಶಮನಕಾರಿ ಗೂನ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಚರ್ಮಕ್ಕೆ ಶಮನ ನೀಡುವುದು ಮತ್ತು ಆರೋಗ್ಯಕಾರಿ ಚರ್ಮ ಕಾಪಾಡಲು ನೆರವಾಗುವುದು.

ಬೇಕಾಗುವ ಸಾಮಗ್ರಿಗಳು
*1 ಚಮಚ ಕಿತ್ತಳೆ ಸಿಪ್ಪೆ ಹುಡಿ
*2 ಚಮಚ ಸಕ್ಕರೆ ಹರಳು
*2 ಚಮಚ ರೋಸ್ ವಾಟರ್
ವಿಧಾನ
•ಪಿಂಗಾಣಿಯಲ್ಲಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳಿ.
•ಎಲ್ಲಾ ಮಿಶ್ರಣವನ್ನು ಸರಿಯಾಗಿ ಪಾದಗಳಿಗೆ ಹಚ್ಚಿಕೊಳ್ಳಿ ಮತ್ತು ಕೆಲವು ನಿಮಿಷ ಕಾಲ ಇದನ್ನು ಸ್ಕ್ರಬ್ ಮಾಡಿ.
•ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಒರೆಸಿಕೊಳ್ಳಿ.

ಕಾಫಿ, ಅಲೋವೆರಾ ಮತ್ತು ಲಿಂಬೆ
ಕಾಫಿ ಗ್ರೌಂಡ್ಸ್ ಸತ್ತ ಚರ್ಮದ ಕೋಶಗಳನ್ನು ಕಿತ್ತು ಹಾಕುವ ಗುಣ ಹೊಂದಿಗೆ ಮತ್ತು ಇದು ಚರ್ಮವನ್ನು ನಯವಾಗಿಸುವುದು. ಅಲೋವೆರಾದಲ್ಲಿ ಕೆಲವೊಂದು ಪ್ರಮುಖ ಖನಿಜಾಂಶಗಳು, ವಿಟಮಿನ್ ಗಳು ಮತ್ತು ಅಮಿನೋ ಆಮ್ಲಗಳು ಇವೆ. ಇದು ಚರ್ಮಕ್ಕೆ ಶಮನ ಹಾಗೂ ತಂಪು ನೀಡುವುದು.

ಬೇಕಾಗುವ ಸಾಮಗ್ರಿಗಳು
*2 ಚಮಚ ಕಾಫಿ ಹುಡಿ
*3 ಚಮಚ ಅಲೋವೆರಾ ಲೋಳೆ
*3 ಚಮಚ ತಾಜಾ ಲಿಂಬೆ ರಸ
ವಿಧಾನ
•ಒಂದು ಪಿಂಗಾಣಿಯಲ್ಲಿ ಕಾಫಿ ಗ್ರೌಂಡ್ಸ್ ಹಾಕಿ.
•ಇದಕ್ಕೆ ಅಲೋವೆರಾ ಲೋಳೆ ಮತ್ತು ಲಿಂಬೆರಸ ಹಾಕಿ ಮಿಶ್ರಣ ಮಾಡಿ. ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಈ ಮಿಶ್ರಣವನ್ನು ಸರಿಯಾಗಿ ಪಾದಗಳಿಗೆ ಹಚ್ಚಿಕೊಳ್ಳಿ ಮತ್ತು ಕೆಲವು ನಿಮಿಷ ಕಾಲ ಪಾದಗಳಲ್ಲಿ ಹಾಗೆ ಬಿಡಿ.
•ಉಗುರುಬೆಚ್ಚಗಿನ ನೀರಿನಿಂದ ಪಾದಗಳನ್ನು ತೊಳೆಯಿರಿ ಮತ್ತು ಒರೆಸಿಕೊಳ್ಳಿ.

ಅಡುಗೆ ಸೋಡಾ, ಬಾದಾಮಿ ಹುಡಿ ಮತ್ತು ಮಯೋನಿಸ್
ಅಡುಗೆ ಸೋಡಾವು ಚರ್ಮವನ್ನು ಶುಚಿಗೊಳಿಸುವುದು, ಅದೇ ಬಾದಾಮಿ ಹುಡಿಯಲ್ಲಿರುವ ವಿಟಮಿನ್ ಇ ಚರ್ಮಕ್ಕೆ ಪೋಷಣೆ ನೀಡುವುದು ಮತ್ತು ಅದನ್ನು ನಯಗೊಳಿಸುವುದು. ಇದಕ್ಕೆ ಮಯೋನಿಸ್ ಸೇರಿಸಿಕೊಂಡರೆ ಆಗ ಪಾದಗಳನ್ನು ತುಂಬಾ ನಯ ಹಾಗೂ ಮೊಶ್ಚಿರೈಸ್ಮಾ ಡುವುದು ಮತ್ತು ಒಣ ಹಾಗೂ ಒರಟು ಪಾದಗಳಿಂದ ಮುಕ್ತಿ ನೀಡುವುದು.

ಬೇಕಾಗುವ ಸಾಮಗ್ರಿಗಳು
1 ಚಮಚ ಅಡುಗೆ ಸೋಡಾ
1 ಚಮಚ ಬಾದಾಮಿ ಹುಡಿ
2-3 ಚಮಚ ಮಯೋನಿಸ್
ಬಳಸುವ ವಿಧಾನ
•ಒಂದು ಪಿಂಗಾಣಿಯಲ್ಲಿ ಅಡುಗೆ ಸೋಡಾ ಹಾಕಿ.
•ಇದಕ್ಕೆ ಬಾದಾಮಿ ಹುಡಿ ಹಾಕಿ ಮತ್ತು ಇದನ್ನು ಸರಿಯಾಗಿ ಮಿಶ್ರಣ ಮಾಡಿ.
•ಇದಕ್ಕೆ ಮಯೋನಿಸ್ ಹಾಕಿ ಮತ್ತು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ.
•ಈ ಮಿಶ್ರಣವನ್ನು ಪಾದಗಳಿಗೆ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಕೆಲವು ನಿಮಿಷಗಳ ಕಾಲ ಸರಿಯಾಗಿ ಸ್ಕ್ರಬ್ ಮಾಡಿಕೊಳ್ಳಿ.
•ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಒರೆಸಿಕೊಳ್ಳಿ.
•ಇದರ ಬಳಿಕ ಪಾದಗಳ ಕ್ರೀಮ್ ಹಚ್ಚಿಕೊಳ್ಳಿ.

English summary

Home-made Foot Scrubs To Get Beautiful Feet

Foot care is the most overlooked part of our skincare routine. Foot hygiene is essential as it is considered to be the reflection of your overall hygiene. Home remedies are the best way to nourish your feet and give them the love they deserve. You can use ingredients like brown sugar, coconut oil, salt etc. to whip up home-made foot scrubs to pamper your feet.
X
Desktop Bottom Promotion