For Quick Alerts
ALLOW NOTIFICATIONS  
For Daily Alerts

ರಾತ್ರಿ ಸಮಯದಲ್ಲಿ ಕಾಲು ಹಾಗೂ ಕೈಯಲ್ಲಿ ತುರಿಕೆ ಬರಲು ಕಾರಣಗಳು

|

ತುರಿಕೆ ಎನ್ನುವುದು ತುಂಬಾ ಕಿರಿಕಿರಿ ಉಂಟು ಮಾಡುವುದು. ಇದರಿಂದಾಗಿ ದೈನಂದಿನ ಚಟುವಟಿಕೆಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುವುದೇ ಇಲ್ಲ. ಅದರಲ್ಲೂ ಕೈ ಹಾಗೂ ಕಾಲುಗಳಲ್ಲಿ ತುರಿಕೆ ಕಾಣಿಸಿಕೊಂಡರೆ ಆಗ ಯಾವುದೇ ಕೆಲಸ ಮಾಡಲು ಕಷ್ಟವಾಗುತ್ತದೆ ಮತ್ತು ಕಿರಿಕಿರಿ ಉಂಟಾಗುವುದು. ಪದೇ ಪದೇ ತುರಿಸಿಕೊಳ್ಳುವ ಕಾರಣದಿಂದ ಚರ್ಮದಲ್ಲಿ ಗಾಯವಾಗಬಹುದು ಮತ್ತು ಅದರಿಂದ ನಿದ್ರೆಗೂ ತೊಂದರೆ ಆಗಬಹುದು.

ಕೈಗಳು ಮತ್ತು ಕಾಲುಗಳು ತುರಿಸುವುದು ಚರ್ಮದ ಅಲರ್ಜಿ ಅಥವಾ ಬೇರೆ ಯಾವುದೇ ರೀತಿಯ ಕಾಯಿಲೆಯ ಲಕ್ಷಣಗಳು ಆಗಿರಲೂಬಹುದು. ಕೈಗಳು ಹಾಗೂ ಕಾಲುಗಳು ತುರಿಸುತ್ತಾ ಇದ್ದರೆ ಆಗ ನೀವು ಇದಕ್ಕೆ ಕಾರಣವೇನು ಎಂದು ಮೊದಲು ಕಂಡುಕೊಳ್ಳಬೇಕು. ಕೈ ಹಾಗೂ ಕಾಲುಗಳು ತುರಿಸಲು ಹಲವಾರು ಕಾರಣಗಳು ಇವೆ ಮತ್ತು ಇದರಿಂದಾಗಿ ನೀವು ನಿದ್ರೆ ಕಳೆದುಕೊಳ್ಳಬಹುದು.

ಚರ್ಮ ಒಣಗುವುದು

ಚರ್ಮ ಒಣಗುವುದು

ನಿಮ್ಮ ಚರ್ಮವು ನೈಸರ್ಗಿಕವಾಗಿ ಒಣಗಿರಬಹುದು ಅಥವಾ ಇದು ಹವಾಮಾನ, ಸೂರ್ಯನ ಬಿಸಿಲಿಗೆ ಮೈಯೊಡ್ಡುವಿಕೆ, ಹವಾನಿಯಂತ್ರಿತ ಅಥವಾ ವಯಸ್ಸಾಗುವುದರಿಂದಲೂ ಇದು ಬರಬಹುದು. ಈ ಎಲ್ಲಾ ಕಾರಣಗಳಿಂದಾಗಿ ಚರ್ಮದಲ್ಲಿ ನೈಸರ್ಗಿಕ ಎಣ್ಣೆಯು ಕಡಿಮೆ ಆಗುವುದು. ಇದರಿಂದ ಚರ್ಮದ ಹೊರ ಪದರಲ್ಲಿ ನೀರಿನಾಂಶ ಮತ್ತು ಮೊಶ್ಚಿರೈಸರ್ ಮಾಯವಾಗಬಹುದು. ಒಣ ಚರ್ಮದಿಂದಾಗಿ ಚರ್ಮವು ಕಿತ್ತು ಬರಬಹುದು ಮತ್ತು ಉರಿಯೂತ ಉಂಟಾಗಬಹುದು. ಇದರಿಂದಾಗಿ ಅತಿಯಾಗಿ ತುರಿಕೆ ಕಾಣಿಸಬಹುದು. ಚರ್ಮವು ಒಣಗುತ್ತಲಿದ್ದರೆ ಆಗ ನೀವು ಮೊಶ್ಚಿರೈಸರ್ ಅಥವಾ ಪ್ರತಿನಿತ್ಯ ಲೋಷನ್ ಬಳಸಿಕೊಳ್ಳಿ.

ಸೋರಿಯಾಸಿಸ್

ಸೋರಿಯಾಸಿಸ್

ಸೋರಿಯಾಸಿಸ್ ಎನ್ನುವುದು ಸಾಂಕ್ರಾಮಿಕವಲ್ಲ, ಆದರೆ ಇದು ಒಂದಿಷ್ಟು ಜನರಲ್ಲಿ ಜೀವಮಾನವಿಡಿ ಕಾಡುತ್ತಲೇ ಇರುತ್ತದೆ. ದಪ್ಪ, ಕೆಂಪು ಮತ್ತು ಪದರ ಕಿತ್ತು ಬಂದಿರುವಂತಹ ಒಡೆದ ಚರ್ಮ ಇದರ ಪ್ರಮುಖ ಲಕ್ಷಣಗಳು. ಭಾವನಾತ್ಮಕ ಒತ್ತಡ, ಚರ್ಮದ ಗಾಯ, ಸೋಂಕು ಮತ್ತು ಇತರ ಕೆಲವೊಂದು ವೈದ್ಯಕೀಯ ಪರಿಸ್ಥಿತಿಯಿಂದ ಇದು ಬರಬಹುದು. ಸೋರಿಯಾಸಿಸ್ ನಿಂದಾಗಿ ಬಾಧಿತ ಜಾಗದಲ್ಲಿ ತುಂಬಾ ತುರಿಕೆ ಕಾಣಿಸುವುದು. ಇದನ್ನು ಕೆಲವೊಂದು ಚರ್ಮದ ಆರೈಕೆಯ ಉತ್ಪನ್ನಗಳಾಗಿರುವಂತಹ ಸ್ಟಿರಾಯ್ಡ್, ವಿಟಮಿನ್ ಎ ಮತ್ತು ವಿಟಮಿನ್ ಡಿ, ಮಾತ್ರೆಗಳು ಮತ್ತು ಇತರ ಕೆಲವೊಂದು ಪ್ರತಿರೋಧಕ ಹೆಚ್ಚಿಸುವ ಔಷಧಿಯಿಂದ ಕಡಿಮೆ ಮಾಡಬಹುದು.

Most Read: ಸೋರಿಯಾಸಿಸ್ ಎನ್ನುವ 'ಚರ್ಮ ರೋಗಕ್ಕೆ' ಪವರ್‌ಫುಲ್ ಮನೆಔಷಧಿಗಳು

ಅಲರ್ಜಿಯಿಂದ ಬರುವ ಡರ್ಮಮಾಟಿಸ್

ಅಲರ್ಜಿಯಿಂದ ಬರುವ ಡರ್ಮಮಾಟಿಸ್

ನೀವು ಯಾವುದೇ ರೀತಿಯ ಅಲರ್ಜಿಯಾಗಿರುವಂತಹ ಕ್ರೋಮಟೆಸ್, ನಿಕೆಲ್, ರಬ್ಬರ್, ರಾಸಾಯನಿಕ, ಕ್ರೀಮ್, ಆಯಿನ್ಮೆಂಟ್, ಸುಗಂಧ ದ್ರವ್ಯ, ಲ್ಯಾನೋಲಿನ್ ಫಾರ್ಮಾಲ್ಡಿಹೈಡ್ ಮತ್ತು ಇತರ ಕೆಲವೊಂದು ರಾಸಾಯನಿಕಗಳು ಡರ್ಮಮಾಟಿಸ್ ಅಲರ್ಜಿಯನ್ನು ಉಂಟು ಮಾಡುವುದು. ಇದು ಆ ವಸ್ತುವಿಗೆ ದೇಹವು ಒಗ್ಗಿಕೊಂಡ 48-72 ಗಂಟೆಗಳಲ್ಲಿ ಅತೀ ಸೂಕ್ಷ್ಮ ರೀತಿಯಲ್ಲಿ ಕಾಣಿಸಿಕೊಳ್ಳುವುದು. ಇದರ ಕೆಲವೊಂದು ಲಕ್ಷಣಗಳೆಂದರೆ ಅದು ಗುಲಾಬಿ ಅಥವಾ ಕೆಂಪಾಗುವ ಚರ್ಮ, ಚರ್ಮ ಕಿತ್ತು ಬರುವುದು ಮತ್ತು ಬೊಕ್ಕೆಗಳು, ಕಣ್ಣಿನ ರೆಪ್ಪೆಗಳು ಊದಿಕೊಳ್ಳುವುದು ಮತ್ತು ತೀವ್ರವಾದ ತುರಿಕೆ. ಅಲರ್ಜಿಯಿಂದ ಉಂಟಾಗುವಂತಹ ಡರ್ಮಮಾಟಿಸ್ ನಿಂದ ಪಾರಾಗಲು ನಿಮಗೆ ಅಲರ್ಜಿ ಉಂಟಾಗುವ ವಸ್ತುವಿನ ದೂರವಿರುವುದು ತುಂಬಾ ಒಳ್ಳೆಯದು. ಆಂಟಿಹಿಸ್ಟಮೈನ್ ಗಳು, ಸ್ಟಿರಾಯ್ಡ್ ಹಚ್ಚುವುದು ಮತ್ತು ಅತಿಯಾಗಿದ್ದರೆ ಆಗ ಸ್ಟಿರಾಯ್ಡ್ ಮಾತ್ರೆ ತೆಗೆದುಕೊಳ್ಳಬಹುದು.

ಡರ್ಮಮಾಟಿಸ್ ನ ಸಂಪರ್ಕದಿಂದ ತುರಿಕೆ

ಡರ್ಮಮಾಟಿಸ್ ನ ಸಂಪರ್ಕದಿಂದ ತುರಿಕೆ

ಚರ್ಮಕ್ಕೆ ಯಾವುದೇ ರೀತಿಯ ರಾಸಾಯನಿಕದಿಂದ ಆಗಿರುವಂತಹ ನೇರ ಹಾನಿಯಿಂದಾಗಿ ಉರಿಯೂತದ ಬೊಕ್ಕೆಗಳು ಕಾಣಿಉವುದು. ಇದಕ್ಕೆ ಒಗ್ಗಿಕೊಂಡ ಕೆಲವೇ ಗಂಟೆಗಳಲ್ಲಿ ಚರ್ಮವು ಪ್ರತಿಕ್ರಿಯೆ ನೀಡುವುದು. ಉರಿ ಅಥವಾ ಸುಟ್ಟ ರೀತಿಯ ನೋವು ಕಾಣಿಸಿಕೊಳ್ಳಬಹುದು. ಚರ್ಮವು ಹೆಚ್ಚು ಉರಿಯೂತಕ್ಕೆ ಸಿಲುಕಿದ ವೇಳೆ ಇದರ ತುರಿಕೆಯು ತುಂಬಾ ದೀರ್ಘವಾಗುವುದು. ಸಂಪರ್ಕದಿಂದ ಬರುವಂತಹ ಡರ್ಮಮಾಟಿಸ್ ನ ಲಕ್ಷಣವೇ ತುರಿಕೆ. ನಿಮಗೆ ಚರ್ಮವು ಕೆಂಪಾಗಿರುವುದ ಕಂಡುಬಂದರೆ ಆಗ ನೀವು ಇದಕ್ಕೆ ಪೆಟ್ರೋಲಿಯಂ ಜೆಲ್ ಹಚ್ಚಿಕೊಳ್ಳಬಹುದು.

ಡೈಶಿಡ್ರೋಟಿಕ್ ಇಕ್ಸಮಾ ಅಥವಾ ಡೈಶಿಡ್ರೋಟಿಕ್ ಡರ್ಮಮಾಟಿಸ್

ಡೈಶಿಡ್ರೋಟಿಕ್ ಇಕ್ಸಮಾ ಅಥವಾ ಡೈಶಿಡ್ರೋಟಿಕ್ ಡರ್ಮಮಾಟಿಸ್

ಇದು ಒಂದು ರೀತಿಯ ತುರಿಕೆಯ ದದ್ದು ಆಗಿದ್ದು, ಅಂಗೈ, ಬೆರಳುಗಳು ಮತ್ತು ಪಾದಗಳಲ್ಲಿ ಕಾಣಿಸಿಕೊಳ್ಳುವುದು. ತುಂಬಾ ಸಣ್ಣ ಮತ್ತು ತುರಿಕೆ ಉಂಟು ಮಾಡುವ ಡರ್ಮಮಾಟಿಸ್, ನೀರು ತುಂಬಿದ ಗುಳ್ಳೆಗಳು ಆಗಾಗ ಬಂದು ಹೋಗುತ್ತಲಿರುವುದು. ಇದರಿಂದಾಗಿ ಉಷ್ಣತೆ ಹೆಚ್ಚಾಗಿರುವಂತಹ ಸಂದರ್ಭದಲ್ಲಿ ಕಾಣಿಸುವುದು. ಇದು ಚರ್ಮ ಕೆಂಪಾಗಿಸಬಹುದು ಅಥವಾ ಕೆಂಪಾಗಿಸದೆ ಇರಬಹುದು. ಡೈಶಿಡ್ರೋಟಿಕ್ ಇಕ್ಸಮಾ ಅಥವಾ ಡೈಶಿಡ್ರೋಟಿಕ್ ಡರ್ಮಮಾಟಿಸ್ ಗೆ ಚಿಕಿತ್ಸೆ ನೀಡಬೇಕಾದರೆ ಆಗ ವೈದ್ಯರು ಒಣಗುವ ವಸ್ತುಗಳೊಂದಿಗೆ ಸಾಕ್ಸ್ ಧರಿಸಲು, ಸ್ಟಿರಾಯ್ಡ್ ಹಚ್ಚಲು ಮತ್ತು ಸ್ಟಿರಾಯ್ಡ್ ಮಾತ್ರೆಗಳನ್ನು ತೆಗೆದುಕೊಳ್ಳಲು ಸೂಚಿಸುವರು.

ಪಿಟ್ಟೆಡ್ ಕೆರಾಟೋಲೈಸಿಸ್

ಪಿಟ್ಟೆಡ್ ಕೆರಾಟೋಲೈಸಿಸ್

ಬ್ಯಾಕ್ಟೀರಿಯಾದಿಂದ ಉಂಟಾಗುವಂತಹ ಪಿಟ್ಟೆಡ್ ಕೆರಾಟೋಲೈಸಿಸ್ ಪಾದಗಳ ಅಡಿಭಾಗದಲ್ಲಿ ಕಾಣಿಸುವುದು ಮತ್ತು ಕೆಲವೊಂದು ಸಲ ಅಂಗೈಯಲ್ಲೂ ಕಾಣಿಸಬಹುದು. ಇದರಿಂದ ತುಂಬಾ ಕೆಟ್ಟ ವಾಸನೆಯು ಬರಬಹುದು. ಬಿಳಿ ಪದರಗಳು ಹಾಗೂ ತುಂಬಿದ ಬೊಕ್ಕೆಗಳು ಕಾಣಿಸಬಹುದು. ಇದು ಕೆಲವೊಂದು ಸಂದರ್ಭದಲ್ಲಿ ತುಂಬಾ ತುರಿಕೆ ಮತ್ತು ನೋವುಂಟು ಮಾಡಬಹುದು. ಈ ಸಮಸ್ಯೆ ಇರುವಂತಹ ಜನರು ಪಾದಗಳಲ್ಲಿ ತೇವಾಂಶವನ್ನು ಕಡಿಮೆ ಮಾಡಿಕೊಳ್ಳಬೇಕು. ಕಾಟನ್ ಸಾಕ್ಸ್ ಧರಿಸಬೇಕು ಮತ್ತು ಇದನ್ನು ನಿಯಮಿತವಾಗಿ ಬದಲಾಯಿಸುತ್ತಾ ಇರಬೇಕು.

ಅಥ್ಲೆಟಿಕ್ ಫುಟ್ ಅಥವಾ ತುರಿಕಚ್ಚಿ

ಅಥ್ಲೆಟಿಕ್ ಫುಟ್ ಅಥವಾ ತುರಿಕಚ್ಚಿ

ನಿಮ್ಮ ಪಾದಗಳಿಗೆ ಸಾಮಾನ್ಯವಾದಂತಹ ಕೆಲವೊಂದು ಶಿಲೀಂಧ್ರ ಸೊಂಕು ಕಾಣಿಸಿಕೊಳ್ಳಬಹುದು. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು. ಬೇರೆಯವರ ಟವೆಲ್, ಬಟ್ಟೆ ಅಥವಾ ಬೇರೆ ಯಾವುದೇ ವಸ್ತುಗಳನ್ನು ಬಳಸುವ ಮೂಲಕವಾಗಿ ಇದು ಹರೆಡಬಹುದು. ಇದು ತುಂಬಾ ನೋವುಂಟು ಮಾಡುವುದು, ತುರಿಕೆ ಕಾಣಿಸುವುದು ಮತ್ತು ಕೆಲವೊಂದು ಸಂದರ್ಭದಲ್ಲಿ ಬೊಕ್ಕೆಗಳು ಕೂಡ ಬರಬಹುದು. ಶಿಲೀಂಧ್ರ ವಿರೋಧಿ ಕ್ರೀಮ್ ಅಥವಾ ಲೋಷನ್ ಬಳಸಿಕೊಂಡು ಅಥವಾ ಶಿಲೀಂಧ್ರ ವಿರೋಧಿ ಔಷಧಿಯಿಂದ ಇದನ್ನು ತಡೆಯಬಹುದು.

ಔಷಧಿಗಳು

ಔಷಧಿಗಳು

ಕೆಲವೊಂದು ರೀತಿಯ ಔಷಧಿಗಳಿಂದಾಗಿ ಕಾಲುಗಳು ಹಾಗೂ ಕೈಗಳಲ್ಲಿ ತುರಿಕೆ ಕಾಣಿಸಬಹುದು. ಕೆಲವೊಂದು ಔಷಧಿಯ ಅಡ್ಡಪರಿಣಾಮಗಳಿಂದಾಗಿ ತುರಿಕೆ ಉಂಟಾಗಬಹುದು ಮತ್ತು ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ ಆಗ ಪರಿಹಾರ ಸಿಗುವುದು. ಕೆಲವೊಂದು ಔಷಧಿಗಳಿಂದ ಅಲರ್ಜಿ ಉಂಟಾಗಬಹುದು ಮತ್ತು ಚರ್ಮದಲ್ಲಿ ತುರಿಕೆ ಮತ್ತು ಬೊಕ್ಕೆ ಬರಬಹುದು. ಇದರಿಂದ ನೀವು ವೈದ್ಯರನ್ನು ಸಂಪರ್ಕಿಸಿ ಈ ಔಷಧಿಗಳನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂದು ತಿಳಿಯಿರಿ.

ಆರೋಗ್ಯ ಸಮಸ್ಯೆಗಳು

ಆರೋಗ್ಯ ಸಮಸ್ಯೆಗಳು

ಕ್ರೋನ್ಸ್ ಕಾಯಿಲೆ, ದೀರ್ಘಕಾಲಿಕ ಕಿಡ್ನಿ ಕಾಯಿಲೆ ಅಥವಾ ಯಕೃತ್ ವೈಫಲ್ಯದಿಂದಾಗಿ ಕಾಲುಗಳು ಹಾಗೂ ಕೈಗಳಲ್ಲಿ ತುರಿಕೆ ಕಾಣಿಸುವುದು. ಯಕೃತ್ ಉಬ್ಬುವ ಸಮಸ್ಯೆಯಿಂದಾಗಿ ಯಕೃತ್ ನಲ್ಲಿ ಗಾಯ ಮತ್ತು ಉರಿಯೂತ ಉಂಟಾಗಬಹುದು. ಇದರಿಂದಾಗಿ ತುರಿಕೆ ದೇಹದಲ್ಲೂ ಕಾಣಿಸಬಹುದು. ಇದು ಮೊದಲಿಗೆ ಪಾದಗಳು ಹಾಗೂ ಅಂಗೈಯಲ್ಲಿ ಕಂಡುಬರುವುದು. ಥೈರಾಯ್ಡ್ ಸಮಸ್ಯೆಯಿಂದಲೂ ಪಾದಗಳು ಮತ್ತು ಅಂಗೈಯಲ್ಲಿ ತುರಿಕೆ ಕಾಣಿಸಬಹುದು. ರಕ್ತದ ಕ್ಯಾನ್ಸರ್ ಮತ್ತು ಇತರ ಕೆಲವು ಕ್ಯಾನ್ಸರ್ ನಿಂದಾಗಿಯೂ ತುರಿಕೆ ಬರಬಹುದು. ವಿಟಮಿನ್ ಬಿ1, ಬಿ6 ಮತ್ತು ಬಿ12 ಕೊರತೆಯಿಂದಲೂ ತುರಿಕೆ ಬರಬಹುದು.

ಒತ್ತಡ

ಒತ್ತಡ

ಇತ್ತೀಚೆಗೆ ನಡೆಸಿರವಂತಹ ಅಧ್ಯಯನದ ಪ್ರಕಾರ ಒತ್ತಡ ಹಾಗೂ ಆತಂಕದಿಂದಾಗಿ ಕೈ ಹಾಗೂ ಕಾಲುಗಳಲ್ಲಿ ತುರಿಕೆ ಕಾಣಿಸಿಕೊಳ್ಳುವುದು. ಒತ್ತಡದ ಮಟ್ಟವು ಹೆಚ್ಚಾಗುತ್ತಲಿದ್ದರೆ ಆಗ ಪರಿಸ್ಥಿತಿ ಕೆಡುವುದು ಮತ್ತು ತುರಿಕೆ ಸಮಸ್ಯೆಯು ಹೆಚ್ಚಾಗುವುದು.

English summary

Causes for Itchy Hands and Feet, Especially at Night

It is annoying to have persistently itchy hands and feet, especially when it distracts your concentration levels while doing daily activities. Constant scratching can damage your skin further and may cause disturbances in sleep. Itchy hand and feet may be a symptom of a skin disorder or another medical condition that might need treatment. In order to treat itchy hands and feet, you need to know what is causing it.
X
Desktop Bottom Promotion