For Quick Alerts
ALLOW NOTIFICATIONS  
For Daily Alerts

ಓಟ್ ಮೀಲ್‌ನ ಸ್ಕ್ರಬ್ ಮಾಡಿ ತ್ವಚೆಯ ಸೌಂದರ್ಯ ವೃದ್ಧಿಸಿ!

|

ಅಂದವಾಗಿ ಅದರಲ್ಲೂ ಮುಖವು ತುಂಬಾ ಬಿಳಿಯಾಗಿ ಕಾಣಿಸಿಕೊಳ್ಳಬೇಕೆಂಬ ಕನಸು ಎಲ್ಲರಲ್ಲೂ ಇರುವುದು. ಬಿಳಿಯಿದ್ದರೆ ಮಾತ್ರ ಅದಕ್ಕೆ ಪ್ರಾಮುಖ್ಯತೆ ಎನ್ನುವಂತಹ ಒಂದು ಮಿಥ್ಯವನ್ನು ಸೃಷ್ಟಿಸಲಾಗಿದೆ. ಇದಕ್ಕಾಗಿ ಪ್ರತಿಯೊಬ್ಬರು ಕಂಪೆನಿಗಳ ಜಾಹೀರಾತುಗಳಿಗೆ ಮಾರುಹೋಗಿ ಇದ್ದಬದ್ದ ಕ್ರೀಮ್ ಗಳನ್ನು ಬಳಸಿಕೊಂಡು ಅದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸಲು ಪ್ರಯತ್ನಿಸುವರು. ಇದು ಸ್ವಲ್ಪ ಮಟ್ಟಿಗೆ ಮುಖದ ಕಾಂತಿ ನೀಡಿದರೂ ದೀರ್ಘ ಕಾಲ ಉಳಿಯದು.

ಮುಖವು ಕಾಂತಿ ಕಳೆದುಕೊಳ್ಳಲು ಹಲವಾರು ರೀತಿಯ ಕಾರಣಗಳು ಇವೆ. ಬಿಸಿಲಿಗೆ ಅತಿಯಾಗಿ ಮೈಯೊಡ್ಡವುದು, ಕಲುಷಿತ ವಾತಾವರಣ ಇತ್ಯಾದಿಗಳು ಮುಖದ ಅಂದಗೆಡಲು ಪ್ರಮುಖ ಕಾರಣವಾಗಿರುವುದು. ಇದರಿಂದಾಗಿ ಮುಖದ ಮೇಲೆ ಕಪ್ಪು ಕಲೆಗಳು ಹಾಗೂ ಬಿಸಿಲಿನಿಂದ ಸುಟ್ಟ ಕಲೆಗಳು ಮೂಡುವುದು. ಇದರ ನಿವಾರಣೆ ಮಾಡಲು ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ತುಂಬಾ ಒಳ್ಳೆಯದು. ಈ ಲೇಖನದಲ್ಲಿ ನಿಮ್ಮ ಮುಖದ ಕಾಂತಿ ಹೆಚ್ಚಿಸುವ ಒಂದು ನೈಸರ್ಗಿಕವಾದ ಸ್ಕ್ರಬ್ ಬಗ್ಗೆ ತಿಳಿಸಿಕೊಡಲಿದ್ದೇವೆ. ಓದಲು ತಯಾರಾಗಿ...

ಕಾಫಿ ಮತ್ತು ಓಟ್ ಮೀಲ್

ಕಾಫಿ ಮತ್ತು ಓಟ್ ಮೀಲ್

ಈ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಿಕೊಂಡು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯವಾಗಿರುವುದು. ಇಂತಹ ಸಂದರ್ಭದಲ್ಲಿ ತುಂಬಾ ಸರಳ ಹಾಗೂ ಸುಲಭವಾಗಿ ಮಾಡಬಹುದಾದ ಓಟ್ ಮೀಲ್ ಮತ್ತು ಕಾಫಿ ಸ್ಕ್ರಬ್ ನ್ನು ನೀವು ಬಳಸಿಕೊಳ್ಳಿ. ಇದು ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುವುದು ಮಾತ್ರವಲ್ಲದೆ ಚರ್ಮವು ತುಂಬಾ ಕಾಂತಿಯುತವಾಗಿ ಕಾಣಲು ನೆರವಾಗುವುದು.

ಕಾಫಿ ಹಾಗೂ ಓಟ್ ಮೀಲ್ ಸ್ಕ್ರಬ್

ಬೇಕಾಗುವ ಸಾಮಗ್ರಿಗಳು

•ಎರಡು ಚಮಚ ಓಟ್ ಮೀಲ್

•½ ಚಮಚ ಕಾಫಿ

•1 ಚಮಚ ಜೇನುತುಪ್ಪ

•ಕೆಲವು ಹನಿ ಹಾಲು

Most Read: ರಾತ್ರಿ ಮಲಗುವ ಮುನ್ನ ಹಾಲು ಕುಡಿದು ಮಲಗಿದರೆ, ಕಣ್ತುಂಬ ನಿದ್ದೆ ಗ್ಯಾರಂಟಿ!

ತಯಾರಿಸು ವಿಧಾನ

ಈ ಸ್ಕ್ರಬ್ ತ್ವಚೆಗೆ ತಕ್ಷಣ ಕಾಂತಿ ಮತ್ತು ಹೊಳಪನ್ನು ನೀಡುವುದು. ಮೊದಲು ಓಟ್ ಮೀಲ್ ನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಿ. ಒಂದು ಸ್ವಚ್ಛ ಪಿಂಗಾಣಿ ತೆಗೆದುಕೊಳ್ಳಿ ಮತ್ತು ಇದಕ್ಕೆ ಓಟ್ ಮೀಲ್ ಹುಡಿ ಹಾಕಿ. ಇದರ ಬಳಿಕ ಇದಕ್ಕೆ ಕಾಫಿ ಹುಡಿ, ಜೇನುತುಪ್ಪ ಮತ್ತು ಹಸಿ ಹಾಲು ಹಾಕಿ ಪೇಸ್ಟ್ ಮಾಡಿ. ಸ್ಕ್ರಬ್ ನಂತೆ ಈ ಪೇಸ್ಟ್ ಇರಲಿ. ಸ್ವಚ್ಛಗೊಳಿಸುವ ಮುಖದ ಮೇಲೆ ಇದನ್ನು ಹಚ್ಚಿಕೊಳ್ಳಿ ಮತ್ತು ಬೆರಳುಗಳನ್ನು ಬಳಸಿಕೊಂಡು ಸುಮಾರು 2-3 ನಿಮಿಷ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಇದರ ಬಳಿಕ ಮತ್ತೆ 5-10 ನಿಮಿಷ ಕಾಲ ಹಾಗೆ ಬಿಡಿ. ಹೀಗೆ ಬಿಟ್ಟ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಒರೆಸಿಕೊಳ್ಳಿ. ಅಂತಿಮವಾಗಿ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿಕೊಂಡು ತೇವಾಂಶ ನೀಡಿ. ಉತ್ತಮ ಫಲಿತಾಂಶ ಪಡೆಯಲು ನೀವು ವಾರದಲ್ಲಿ ಒಂದು ಸಲ ಹೀಗೆ ಮಾಡಿ.

ಓಟ್ ಮೀಲ್ ನ ಲಾಭಗಳು

ಓಟ್ ಮೀಲ್ ನ ಲಾಭಗಳು

ಓಟ್ ಮೀಲ್ ಎನ್ನುವುದು ನೈಸರ್ಗಿಕ ಕಿತ್ತುಹಾಕುವ ಗುಣ ಹೊಂದಿದೆ. ಇದು ಚರ್ಮದ ಸತ್ತ ಕೋಶಗಳನ್ನು ತೆಗೆದುಹಾಕಿ, ಚರ್ಮಕ್ಕೆ ಕಾಂತಿ ನೀಡುವುದು. ಬಿಸಿಲಿನಲ್ಲಿರುವಂತಹ ಹಾನಿಕಾರಕ ಯುವಿ ಕಿರಣಗಳು ಮತ್ತು ಕಲುಷಿತ ವಾತಾವರಣದಿಂದ ಉಂಟಾಗುವಂತಹ ಹಾನಿಯನ್ನು ಸರಿಪಡಿಸಲು ಓಟ್ ಮೀಲ್ ನಲ್ಲಿ ಇರುವಂತಹ ಆ್ಯಂಟಿ ಆಕ್ಸಿಡೆಂಟ್ ಗುಣಗಳು ನೆರವಾಗುವುದು. ಇದು ಚರ್ಮಕ್ಕೆ ಮೊಶ್ಚಿರೈಸರ್ ನೀಡುವುದು ಮತ್ತು ತನ್ನಲ್ಲಿರುವಂತಹ ಉರಿಯೂತ ಶಮನಕಾರಿ ಗುಣದಿಂದಾಗಿ ಬಿಸಿಲಿನಿಂದ ಆಗಿರುವ ಕಲೆಗಳ ನಿವಾರಣೆ ಮಾಡುವುದು.

Most Read: ಪಪ್ಪಾಯ ಹಣ್ಣಿನ ಚಿಕಿತ್ಸೆ- ಒಂದೆರಡು ದಿನಗಳಲ್ಲಿ ಮೊಡವೆಗೆ ಪರಿಹಾರ

ಕಾಫಿಯ ಲಾಭಗಳು

ಕಾಫಿಯ ಲಾಭಗಳು

ಕಾಫಿ ಕುಡಿಯುವುದರ ಮೂಲಕವಾಗಿ ನಾವೆಲ್ಲರೂ ದಿನದ ಆರಂಭ ಮಾಡುತ್ತೇವೆ. ಆದರೆ ಇದರಿಂದ ಚರ್ಮಕ್ಕೆ ಆಗುವಂತಹ ಲಾಭಗಳ ಬಗ್ಗೆ ನಿಮಗೆ ತಿಳಿದಿದೆಯಾ? ಇದನ್ನು ತ್ವಚೆಗೆ ಹಚ್ಚಿಕೊಂಡಾಗ ಹಲವಾರು ಲಾಭಗಳು ಸಿಗಲಿದೆ. ಕಾಫಿಯನ್ನು ನಿಯಮಿತವಾಗಿ ಬಳಸಿಕೊಂಡಾಗ ಅಕಾಲಿಕ ವಯಸ್ಸಾಗುವ ಲಕ್ಷಣಗಳಾಗಿರುವಂತಹ ನೆರಿಗೆಗಳು, ಗೆರೆಗಳು ಮತ್ತು ಕಪ್ಪು ಕಲೆಗಳನ್ನು ನಿವಾರಣೆ ಮಾಡುವುದು. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮುಖದ ಮೇಲೆ ಮೂಡಿರುವಂತಹ ಮೊಡವೆಗಳು, ಬೊಕ್ಕೆಗಳು ಮತ್ತು ಯಾವುದೇ ರೀತಿಯ ಉರಿಯೂತ ನಿವಾರಣೆ ಮಾಡುವುದು. ಕಣ್ಣಿನ ಕೆಳಗಡೆ ಕಪ್ಪು ಕಲೆಗಳು ಇದ್ದರೆ ಆಗ ನೀವು ಕಾಫಿ ಬಳಸಿಕೊಂಡು ಇದನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡಬಹುದು.

ಜೇನುತುಪ್ಪದ ಲಾಭಗಳು

ಜೇನುತುಪ್ಪದ ಲಾಭಗಳು

ಜೇನುತುಪ್ಪವನ್ನು ನೈಸರ್ಗಿಕ ಮೊಶ್ಚಿರೈಸರ್ ಎಂದು ಕರೆಯಲಾಗುತ್ತದೆ. ಇದು ಚರ್ಮವನ್ನು ತೇವಾಂಶ ಹಾಗೂ ನಯವಾಗಿಡುವುದು. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಚರ್ಮವನ್ನು ಪುನರ್ಶ್ಚೇತನಗೊಳಿಸುವುದು ಮತ್ತು ತಾಜಾ ಹಾಗೂ ಆರೋಗ್ಯವಾಗಿರುವಂತೆ ಮಾಡುವುದು. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣಗಳು ಮೊಡವೆ, ಕಲೆಗಳು ಹಾಗೂ ಚರ್ಮದ ಇತರ ಉರಿಯೂತದ ಸಮಸ್ಯೆ ನಿವಾರಿಸುವುದು.

Most Read: ಮೊಡವೆ ಕಲೆಗಳನ್ನು ನಿವಾರಿಸಲು 'ಗ್ರೀನ್ ಟೀ' ಬಳಸಿ ನೋಡಿ!

ಹಾಲಿನ ಲಾಭಗಳು

ಹಾಲಿನ ಲಾಭಗಳು

ಹಾಲು ತ್ವಚೆಯನ್ನು ಮೃಧು ಹಾಗೂ ನಯವಾಗಿಸುವುದು. ಹಾಲಿನಲ್ಲಿ ಇರುವಂತಹ ಲ್ಯಾಕ್ಟಿಕ್ ಆಮ್ಲವು ಚರ್ಮದ ಸತ್ತ ಕೋಶಗಳನ್ನು ನಿವಾರಣೆ ಮಾಡುವುದು ಮತ್ತು ಹೊಸ ಕೋಶಗಳನ್ನು ಸ್ಥಾಪಿಸಿ, ತ್ವಚೆಯು ಕಾಂತಿಯುತವಾಗಿರುವಂತೆ ಮಾಡುವುದು. ಬೇರೆ ಸಾಮಗ್ರಿಗಳೊಂದಿಗೆ ಮಿಶ್ರಣ ಮಾಡುವ ಬದಲು ನೀವು ಹಾಲನ್ನು ಪ್ರತಿನಿತ್ಯ ಮುಖಕ್ಕೆ ಹಚ್ಚಿಕೊಂಡರೆ ಆಗ ಸುಂದರವಾಗಿರುವ ಚರ್ಮವನ್ನು ಪಡೆಯಬಹುದು.

English summary

coffee and oatmeal scrub for glowing skin

When our skin is exposed to a lot of external factors like harmful UV rays of the sun, pollution, etc., it loses its original tone and eventually leading to pigmentation and suntan. Therefore, it is important to treat these issues and restore your skin's health. You can easily make a home-made scrub with oatmeal, coffee, milk and honey for a brighter skin.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more