For Quick Alerts
ALLOW NOTIFICATIONS  
For Daily Alerts

ಒಡೆದ ತುಟಿಗಳ ಸಮಸ್ಯೆಗೆ ಬಾದಾಮಿ ಎಣ್ಣೆಯ ಲಿಪ್ ಸ್ಕ್ರಬ್

|

ಚಳಿಗಾಲವೆನ್ನುವುದು ತುಂಬಾ ಕಠಿಣ ಸಮಯ. ಈ ಸಮಯದಲ್ಲಿ ದೇಹ ಸಂಪೂರ್ಣವಾಗಿ ಒಣಗಿ ಹೋಗಿ, ಮೈಯೆಲ್ಲಾ ತೇವಾಂಶವಿಲ್ಲದೆ ಚರ್ಮವು ನಿರ್ಜೀವವಾದಂತೆ ಆಗುವುದು. ಇದರಿಂದ ಚರ್ಮದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚರ್ಮವು ಒಣಗುವುದು, ಒಡೆಯುವುದು ಮತ್ತು ಕೆಂಪಾಗುವುದು ಇತ್ಯಾದಿಗಳು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಸಮಸ್ಯೆಗಳು. ಇಷ್ಟು ಮಾತ್ರವಲ್ಲದೆ ಕೆಲವೊಂದು ಸಲ ನಿಮಗೆ ಕಾಣಿಸುವುದು.

Almond Oil Lip Scrub For Chapped Lips

ಇದು ತುಂಬಾ ನೋವುಂಟು ಮಾಡುವುದು. ತುಟಿ ಒಣಗಿ, ಒಡೆಯುವುದು ಚಳಿಗಾಲದಲ್ಲಿ ಸಾಮಾನ್ಯ. ಇದರಿಂದ ತುಟಿಯು ತುಂಬಾ ನೋವಿಗೆ ಒಳಗಾಗಿ ರಕ್ತ ಕೂಡ ಬರುವುದು. ಇದರಿಂದ ಚಳಿಗಾಲದಲ್ಲಿ ಯಾವಾಗಲೂ ತುಟಿಗಳನ್ನು ತೇವಾಂಶದಿಂದ ಇಡುವುದು ಅತೀ ಅಗತ್ಯವಾಗಿರುವುದು. ಬಿಸಿಲಿನಿಂದ ಆಗಿರುವ ಹಾನಿ, ತುಟಿಗಳ ನೆಕ್ಕುವಿಕೆ, ಅತಿಯಾಗಿ ಧೂಮಪಾನ ಮತ್ತು ಮದ್ಯಪಾನ ಇತ್ಯಾದಿಗಳಿಂದಾಗಿ ತುಟಿಯು ತನ್ನ ನೈಸರ್ಗಿಕ ಬಣ್ಣ ಕಳೆದುಕೊಂದು ಒಣಗಬಹುದು. ಇದಕ್ಕೆ ನೀವು ಲಿಪ್ ಮುಲಾಮ್ ಹಚ್ಚಿಕೊಂಡು ಸಮಸ್ಯೆ ನಿವಾರಣೆ ಮಾಡಿಕೊಳ್ಳಬಹುದು. ಆದರೆ ಇದಕ್ಕೆ ಹೆಚ್ಚುವರಿಯಾಗಿ ನೀವು ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ತುಂಬಾ ಒಳ್ಳೆಯದು. ಈ ಲೇಖನದಲ್ಲಿ ನೀವೇ ಮನೆಯಲ್ಲಿ ತಯಾರಿಸಿಕೊಳ್ಳಬಹುದಾದ ಬಾದಾಮಿ ಎಣ್ಣೆಯ ಸ್ಕ್ರಬ್ ಬಗ್ಗೆ ತಿಳಿಸಲಿದ್ದೇವೆ. ಇದು ಒಡೆದ ತುಟಿಗಳ ನಿವಾರಣೆ ಮಾಡುವಲ್ಲಿ ಹೇಗೆ ಪಾತ್ರ ನಿರ್ವಹಿಸುವುದು ಎಂದು ತಿಳಿಯಿರಿ. ಒಡೆದ ತುಟಿಗಳಿಗೆ ನೀವೇ ತಯಾರಿಸಿಕೊಳ್ಳಬಹುದಾದ ಬಾದಾಮಿ ಎಣ್ಣೆಯ ಸ್ಕ್ರಬ್

ಬಾದಾಮಿ ಎಣ್ಣೆಯ ಸ್ಕ್ರಬ್

ಬಾದಾಮಿ ಎಣ್ಣೆಯ ಸ್ಕ್ರಬ್

ಬೇಕಾಗುವ ಸಾಮಗ್ರಿಗಳು

*5-10 ಹನಿ ಬಾದಾಮಿ ಎಣ್ಣೆ

*1 ಚಮಚ ಸಕ್ಕರೆ ಹರಳು

*1 ಚಮಚ ಸಾವಯವ ಜೇನುತುಪ್ಪ

*1 ವಿಟಮಿನ್ ಇ ಕ್ಯಾಪ್ಸೂಲ್

Most Read: ತುಟಿಯ ಸೌಂದರ್ಯಕ್ಕೆ, ಸಿಹಿ-ಸಿಹಿ ಲಿಪ್ ಬಾಮ್!

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*20-30 ನಿಮಿಷ ಕಾಲ ಒಂದು ತವಾದಲ್ಲಿ ಹಾಕಿ ಸಾವಯವ ಆಗಿರುಂತಹ ಜೇನುತುಪ್ಪವನ್ನು ಬಿಸಿ ಮಾಡಿಕೊಳ್ಳಿ.

*ಬಿಸಿಯಾದ ಜೇನುತುಪ್ಪವನ್ನು ಈಗ ಶುದ್ಧವಾಗಿರುವ ಪಿಂಗಾಣಿಗೆ ಹಾಕಿ ಮತ್ತು ಅದಕ್ಕೆ ಸಕ್ಕರೆ ಹರಳುಗಳನ್ನು ಸೇರಿಸಿಕೊಳ್ಳಿ.

*ಇದಕ್ಕೆ ವಿಟಮಿನ್ ಇ ಎಣ್ಣೆ ಹಾಕಿಕೊಳ್ಳಿ. ವಿಟಮಿನ್ ಇ ಮಾತ್ರೆಗೆ ಪಿನ್ ಚುಚ್ಚಿಕೊಂಡು ಅದರಿಂದ ಹೊರಬರುವ ಎಣ್ಣೆಯನ್ನು ಮಿಶ್ರಣಕ್ಕೆ ಹಾಕಿಕೊಳ್ಳಿ.

*ಅಂತಿಮವಾಗಿ ಕೆಲವು ಹನಿ ಬಾದಾಮಿ ಎಣ್ಣೆ ಹಾಕಿಕೊಂಡು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

*ಈ ಮಿಶ್ರಣವನ್ನು ಒಂದು ಗಾಳಿಯಾಡದ ಡಬ್ಬಕ್ಕೆ ಹಾಕಿ ಬಿಡಿ.

*ಈ ಸ್ಕ್ರಬ್ ನ ಸ್ವಲ್ಪ ಭಾಗವನ್ನು ತೆಗೆದುಕೊಂಡು ನೀವು ತುಟಿಗಳಿಗೆ ಹಚ್ಚಿಕೊಳ್ಳಿ. ಇದನ್ನು ಐದು ನಿಮಿಷ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿ ಮತ್ತು ಇದರ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.

*ಇದು ಚರ್ಮದ ಸತ್ತ ಕೋಶಗಳನ್ನು ತೆಗೆದುಹಾಕುವುದು ಮಾತ್ರವಲ್ಲದೆ ನಯ ಹಾಗೂ ಮೃದುವಾದ ಚರ್ಮವನ್ನು ನೀಡುವುದು.

Most Read: ಹಲ್ಲಿನ ಕಾಂತಿ ಹೆಚ್ಚಿಸಲು ಅರಿಶಿನದ ಚಿಕಿತ್ಸೆ! ಇಲ್ಲಿದೆ ನೋಡಿ ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಬಾದಾಮಿ ಎಣ್ಣೆಯ ಲಾಭಗಳು

ಬಾದಾಮಿ ಎಣ್ಣೆಯ ಲಾಭಗಳು

ಹೆಚ್ಚಾಗಿ ಇಂದು ಸಿಗುವಂತಹ ಪ್ರತಿಯೊಂದು ಚರ್ಮದ ಆರೈಕೆಯ ಉತ್ಪನ್ನಗಳಲ್ಲಿ ಬಾದಾಮಿ ಎಣ್ಣೆಯನ್ನು ಬಳಸಿಕೊಳ್ಳಲಾಗುತ್ತದೆ. ಬಾದಾಮಿ ಎಣ್ಣೆಯು ಚರ್ಮದಲ್ಲಿರುವಂತಹ ಸತ್ತ ಚರ್ಮದ ಕೋಶಗಳನ್ನು ತೆಗೆಯುವುದು ಮತ್ತು ಚರ್ಮವು ನಯ ಹಾಗೂ ಮೃಧುವಾಗುವಂತೆ ಮಾಡುವುದು. ಇದು ತುಟಿಗಳಿಗೆ ಆಳವಾಗಿ ಪೋಷಣೆ ನೀಡಿ ಚರ್ಮವು ಪುನರ್ ಶ್ಚೇತನಗೊಳ್ಳುವಂತೆ ಮಾಡುವುದು.

ಸಕ್ಕರೆಯ ಲಾಭಗಳು

ಸಕ್ಕರೆಯ ಲಾಭಗಳು

ಸಕ್ಕರೆಯನ್ನು ನೈಸರ್ಗಿಕವಾಗಿ ಕಿತ್ತೊಗೆಯುವ ಗುಣವುಳ್ಳ ಸಾಮಗ್ರಿ ಎಂದು ಪರಿಗಣಿಸಲಾಗಿದೆ. ಇದು ಚರ್ಮದ ನಿಸ್ತೇಜವನ್ನು ತೆಗೆಯುವುದು ಮತ್ತು ಸತ್ತ ಕೋಶಗಳ ನಿವಾರಣೆ ಮಾಡುವುದು. ಇದರಿಂದ ಚರ್ಮವು ತುಂಬಾ ಗುಲಾಬಿಯಾಗಿ ಹಾಗೂ ಸುಂದರವಾಗಿ ಕಾಣುವುದು. ಇದರಿಂದಾಗಿ ಇದನ್ನು ಎಲ್ಲಾ ಸ್ಕ್ರಬ್ ಗಳಲ್ಲಿ ಬಳಸಿಕೊಳ್ಳಲಾಗುತ್ತದೆ.

ಜೇನುತುಪ್ಪದ ಲಾಭಗಳು

ಜೇನುತುಪ್ಪದ ಲಾಭಗಳು

ಜೇನುತುಪ್ಪವು ನೈಸರ್ಗಿಕ ಮೊಶ್ಚಿರೈಸರ್ ಆಗಿರುವ ಕಾರಣದಿಂದ ಇದು ಚರ್ಮಕ್ಕೆ ತೇವಾಂಶ ನೀಡುವುದು. ಇದು ತುಟಿಗಳಿಗೆ ಮೊಶ್ಚಿರೈಸರ್ ನೀಡುವ ಜತೆಗೆ ಕಪ್ಪು ತುಟಿಗಳು ಬಿಳಿಯಾಗಲು ನೆರವಾಗುವುದು ಮತ್ತು ಸುಂದರ, ನಯ ಹಾಗೂ ಗುಲಾಬಿ ಬಣ್ಣದ ತುಟಿಗಳು ಸಿಗುವುದು. ಇಂತಹ ತುಟಿಗಳು ಸೌಂದರ್ಯವನ್ನು ನೈಸರ್ಗಿಕವಾಗಿ ವೃದ್ಧಿಸುವುದು. ಇದಕ್ಕೆ ನೀವು ಮೇಕಪ್ ಕೂಡ ಮಾಡಬೇಕೆಂದಿಲ್ಲ.

Most Read: ತುಟಿಗಳು ಸುಂದರವಾಗಿ ಕಾಣಬೇಕೇ? ಹಾಗಾದರೆ ಆರೈಕೆ ಹೀಗಿರಲಿ...

ವಿಟಮಿನ್ ಇಯ ಲಾಭಗಳು

ವಿಟಮಿನ್ ಇಯ ಲಾಭಗಳು

ಚರ್ಮಕ್ಕೆ ವಿಟಮಿನ್ ಇ ಎಷ್ಟು ಲಾಭಕಾರಿ ಆಗಿದೆ ಎಂದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಒಡೆದಿರುವಂತಹ ತುಟಿಗಳಿಗೆ ಇದು ಅತ್ಯುತ್ತಮವಾಗಿರುವ ಪರಿಹಾರವಾಗಿದೆ. ಇದು ತುಟಿಗಳನ್ನು ಮೊಶ್ಚಿರೈಸ್ ಮಾಡುವುದು ಮತ್ತು ತುಟಿಗಳು ತುಂಬಾ ನಯ ಹಾಗೂ ಸುಂದರವಾಗುವಂತೆ ಮಾಡುವುದು. ನೀವು ವಿಟಮಿನ್ ಇ ಎಣ್ಣೆಯನ್ನು ನಿಯಮಿತವಾಗಿ ಬಳಕೆ ಮಾಡಿಕೊಂಡರೆ ಆಗ ಅದರಿಂದ ನಿಮಗೆ ಹೆಚ್ಚಿನ ಲಾಭವಿದೆ. ಯಾಕೆಂದರೆ ಹಲವಾರು ಕಾರಣಗಳಿಂದ ಕಪ್ಪಾಗಿರುವಂತಹ ತುಟಿಯನ್ನು ಬಿಳಿ ಮಾಡಲು ಇದು ನೆರವಾಗುವುದು. ವಿಟಮಿನ್ ಇ ಎಣ್ಣೆಯು ಧೂಮಪಾನದಿಂದ ಕಪ್ಪಾಗಿರುವಂತಹ ತುಟಿಗಳನ್ನು ಬಿಳಿ ಮಾಡಿ ಸೌಂದರ್ಯ ವೃದ್ಧಿ ಮಾಡುವುದು.

English summary

Almond Oil Lip Scrub For Chapped Lips

Chapped and dry lips is something common that we all face especially during the winter. Chapped lips can be often painful and can even cause bleeding. Almond oil is been used widely in the cosmetic industry in skin care products. Almond oil helps in removing the dead skin cells from the skin thus making it smooth and soft.
Story first published: Wednesday, December 12, 2018, 12:43 [IST]
X
Desktop Bottom Promotion