ತ್ವಚೆ ಹೆಚ್ಚು ಆಕರ್ಷಕವಾಗಬೇಕೇ ಹಾಗಾದರೆ ಬ್ಲೀಚಿಂಗ್ ಪ್ರಯೋಗ ಮಾಡಿ

By: Divya Pandith
Subscribe to Boldsky

ಸೌಂದರ್ಯಕ್ಕೆ ಕನ್ನಡಿ ಹಿಡಿಯುವುದು ನಮ್ಮ ಮುಖ. ಹಾಗಾಗಿ ಮುಖದ ತ್ವಚೆಯ ಆರೈಕೆಯ ಬಗ್ಗೆ ಹೆಚ್ಚು ಗಮನ ನೀಡಬೇಕು. ಅದಕ್ಕಾಗಿಯೇ ಫೇಸ್ ಪ್ಯಾಕ್, ಮಸಾಜ್ ಹಾಗೂ ಬ್ಲೀಚಿಂಗ್ ಮಾಡಿಸುತ್ತೇವೆ. ಬ್ಲೀಚಿಂಗ್ ಮಾಡಿಸುವುದರಿಂದ ತ್ವಚೆಯ ಮೇಲಿರುವ ಕೂದಲು ಹಾಗೂ ಕಲೆಗಳನ್ನು ಮರೆ ಮಾಚಿ, ಇನ್ನಷ್ಟು ಹೊಳಪನ್ನು ಪಡೆಯಬಹುದು.

ಬ್ಲೀಚಿಂಗ್ ಎಂದರೆ ಚರ್ಮವನ್ನು ಬಿಳುಪು ಮಾಡುವ ಪ್ರಕ್ರಿಯೆ ಎಂದಾಗುತ್ತದೆ. ಇದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸಲಾಗುವುದು. ಚರ್ಮದ ಬ್ಲೀಚಿಂಗ್ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು? ಹಾಗೂ ಬ್ಲೀಚಿಂಗ್‍ನಿಂದ ತ್ವಚೆಯ ಮೇಲಾಗುವ ಸಂಭವನೀಯ ಸಂಗತಿಗಳ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ. 

Bleaching faces

ತ್ವಚೆಯ ಬ್ಲೀಚಿಂಗ್ ಮಾಡುವುದು ಹೇಗೆ?

ಚರ್ಮದ ಬ್ಲೀಚಿಂಗ್‍ಅಲ್ಲಿ ಎರಡು ವಿಧಗಳಿವೆ.

1. ಬ್ಲೀಚಿಂಗ್ ಕ್ರೀಮ್ ಬಳಕೆ ಮಾಡುವುದು

2. ನೈಸರ್ಗಿಕ ಮಾರ್ಗದಲ್ಲಿ ಬ್ಲೀಚಿಂಗ್ ಮಾಡುವುದು.

ಮನೆಯಲ್ಲಿ ಅಥವಾ ಪಾರ್ಲರ್‍ಗಳಲ್ಲಿ ತ್ವಚೆಯ ಬ್ಲೀಚಿಂಗ್ ಮಾಡುವಾಗ ಬ್ಲೀಚಿಂಗ್ ಕ್ರೀಮ್ ಕಿಟ್ ಬಳಸಲಾಗುತ್ತದೆ. ಅದರಲ್ಲಿ ಬ್ಲೀಚಿಂಗ್ ಕ್ರೀಮ್ ಮತ್ತು ಆಕ್ಟಿವೇಟೆಡ್ ಪುಡಿ ಇರುತ್ತದೆ. ಚರ್ಮದ ಮೇಲೆ ಲೇಪಿಸುವ ಮೊದಲು ಇವುಗಳನ್ನು ಸೂಕ್ತ ರೀತಿಯಲ್ಲಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ತ್ವಚೆಯ ಮೇಲೆ ಅನ್ವಯಿಸಬೇಕು. ಈ ವಿಧಾನದಿಂದ ತ್ವರಿತ ಹಾಗೂ ವೇಗವಾಗಿ ಬ್ಲೀಚಿಂಗ್ ಮಾಡಬಹುದು. ಇದು ತ್ವಚೆಯ ಮೇಲೆ ಅಷ್ಟು ಪರಿಣಾಮಕಾರಿಯಾಗಿ ಇರದು.

Bleaching faces

ಬ್ಲೀಚಿಂಗ್ ಕ್ರೀಮ್ ಹೇಗೆ ಕೆಲಸ ನಿರ್ವಹಿಸುತ್ತದೆ?

ತ್ವಚೆಯ ಬ್ಲೀಚಿಂಗ್ ಕ್ರೀಮ್‍ಗಳಲ್ಲಿ ಹೈಡ್ರೋಕ್ವಿನೋನ್ ಎಂಬ ಪದಾರ್ಥ ಇರುತ್ತದೆ. ಇದು ಶೇ. 2 ರಿಂದ 5 ರಷ್ಟು ಒಳಗೊಂಡಿರುತ್ತದೆ. ಹೈಡ್ರೋಕ್ವಿನೋನ್ ಮೆಲನಿನ್‍ನ ಉತ್ಪಾದನೆಯನ್ನು ಪ್ರತಿಬಂಧಿಸುತ್ತದೆ ಮತ್ತು ತ್ವಚೆಯು ಹೆಚ್ಚು ಕಾಂತಿ ಹಾಗೂ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ. 

ಯಾವ ಫೇಶಿಯಲ್ ಬ್ಲೀಚಿಂಗ್ ಒಳ್ಳೆಯದು?

ತ್ವಚೆಯ ಬ್ಲೀಚಿಂಗ್ ಕ್ರೀಮ್ ಬಳಸುವುದು ಹೇಗೆ?

ಸ್ಕಿನ್ ಬ್ಲೀಚಿಂಗ್ ಕ್ರೀಮ್ ಕಿಟ್‍ನಲ್ಲಿ ಕ್ರೀಮ್ ಮತ್ತು ಪುಡಿ ಎರಡು ಪ್ಯಾಕ್‍ಗಳಲ್ಲಿ ಬರುತ್ತವೆ. ಕೆಲವು ಪ್ಯಾಕ್‍ಗಳಲ್ಲಿ ಸಣ್ಣ ಚಾಕುಗಳಿರುವುದನ್ನು ಕಾಣಬಹುದು.

- ಮೊದಲು ಚಾಕುವನ್ನು ಬಳಸಿಕೊಂಡು ಕ್ರೀಮ್ ಮತ್ತು ಪುಡಿಯನ್ನು ಮಿಶ್ರಗೊಳಿಸಿ.

- ಚಾಕುವಿನ ಸಹಾಯದಿಂದ ಬ್ಲೀಚಿಂಗ್ ಮಿಶ್ರಣವನ್ನು ಮುಖದ ಮೇಲೆ ಅನ್ವಯಿಸಿ. ಬಾಯಿ ಮತ್ತು ಕಣ್ಣಿನ ಭಾಗದಲ್ಲಿ ಅನ್ವಯಿಸಬಾರದು.

- ಒಮ್ಮೆ ಬ್ಲೀಚ್ ಕ್ರೀಮ್ ಅನ್ವಯಿಸಿದ ನಂತರ 15 ನಿಮಿಷಗಳ ಕಾಲ ಬಿಡಬೇಕು. ಸ್ವಲ್ಪ ಮಂಕಾದ ತ್ವಚೆಯನ್ನು ಬಯಸುವುದಾದರೆ 10 ನಿಮಿಷಗಳ ಕಾಲ ಬಿಡಿ

- ನಂತರ ಚರ್ಮದ ಮೇಲೆ ಅನ್ವಯಿಸಿರುವ ಕ್ರೀಮ್‍ಅನ್ನು ಒಂದು ಟಿಶ್ಯು ಪೇಪರ್‍ನಿಂದ ಒರೆಸಿ ತೆಗೆಯಿರಿ.

- ಬಳಿಕ ಕ್ಲೀನ್ಸರ್ ಬಳಸಿ ಮುಖವನ್ನು ತೊಳೆಯಿರಿ.

Bleaching faces

ನೈಸರ್ಗಿಕವಾಗಿ ತ್ವಚೆಯನ್ನು ಬ್ಲೀಚ್ ಮಾಡುವುದು ಹೇಗೆ?

ನೀವು ನೈಸರ್ಗಿಕ ಪ್ರಕ್ರಿಯೆಯಲ್ಲಿ ತ್ವಚೆಯನ್ನು ಬ್ಲೀಚ್ ಮಾಡುವ ಹವಣಿಕೆಯಲ್ಲಿದ್ದರೆ ಈ ಕೆಳಗಿನ ವಿಧಾನವನ್ನು ಅನ್ವಯಿಸಬಹುದು.

-ನಿಂಬು

-ಆಲೂಗಡ್ಡೆ

-ಜೇನುತುಪ್ಪ

-ಹಾಲು

-ಶ್ರೀಗಂಧದ ಪುಡಿ

-ಹಿಟ್ಟು

-ಕಿತ್ತಳೆ

-ಮೊಸರು

-ಕಡ್ಲೆ ಹಿಟ್ಟು

-ಲೈಕೋರೈಸ್ ಜ್ಯೂಸ್

-ಮಲ್ಬೆರಿ 

ಬ್ಲೀಚಿಂಗ್‌ ಮಾಡುವ ಮುನ್ನ, ಈ ಸಂಗತಿಗಳು ತಿಳಿದಿರಲಿ

ತ್ವಚೆಯ ಬ್ಲೀಚಿಂಗ್ ಬಗ್ಗೆ ಗಮನಿಸಬೇಕಾದ ಅಂಶಗಳು

- ಸ್ಕಿನ್ ಬ್ಲೀಚಿಂಗ್ ಕ್ರೀಮ್‍ಗಿಂತ ನೈಸರ್ಗಿಕವಾಗಿ ಮಾಡುವ ಬ್ಲೀಚಿಂಗ್ ಪ್ರಕ್ರಿಯೆಯೇ ಹೆಚ್ಚು ಸೂಕ್ತವಾದದ್ದು.

- ಚರ್ಮದ ಬ್ಲೀಚಿಂಗ್ ಕ್ರೀಮ್‍ಅನ್ನು ಮೊದಲು ನಿಮ್ಮ ತ್ವಚೆಗೆ ಒಗ್ಗುತ್ತದೆಯೇ ಎನ್ನುವುದನ್ನು ಪರೀಕ್ಷಿಸಿಕೊಂಡು ನಂತರ ಮುಖಕ್ಕೆ ಅನ್ವಯಿಸಿಕೊಳ್ಳಬೇಕು.

- ನೈಸರ್ಗಿಕವಾದ ಬ್ಲೀಚಿಂಗ್ ವಿಧಾನಗಳು ನಿಧಾನಗತಿಯಲ್ಲಿ ಫಲಿತಾಂಶ ತೋರುತ್ತದೆಯಾದರೂ ತ್ವಚೆಯ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟಾಗದು.

- ಬ್ಲೀಚಿಂಗ್ ಕ್ರೀಮ್ ಬಳಸುತ್ತೀರಿ ಎಂದಾದರೆ ಅದನ್ನು ತಿಂಗಳಿಗೊಮ್ಮೆ ಮಾತ್ರ ಮಾಡಬೇಕು. ಪದೇ ಪದೇ ಬ್ಲೀಚಿಂಗ್ ಕ್ರೀಮ್‍ಅನ್ನು ಬಳಸಬಾರದು.

-ಬ್ಲೀಚಿಂಗ್ ಕ್ರೀಮ್‍ನಿಂದ ತ್ವಚೆಯ ಮೇಲಿರುವ ಕೂದಲು ಉದುರುವುದಿಲ್ಲ. ಬದಲಿಗೆ ಕೂದಲಿನ ಬಣ್ಣ ಮಂಕಾಗಿ ಗೋಚರಿಸುವಂತೆ ಮಾಡುತ್ತದೆ.

-ಚರ್ಮದ ಬ್ಲೀಚಿಂಗ್ ಕ್ರೀಮ್‍ಅನ್ನು ದೇಹದೆಲ್ಲೆಡೆ ಅನ್ವಯಿಸಬಹುದು. ಆದರೆ ಕಣ್ಣುಗಳು, ತುಟಿ ಹಾಗೂ ದೇಹದ ಸೂಕ್ಷ್ಮ ಮತ್ತು ಖಾಸಗಿ ಪ್ರದೇಶದಲ್ಲಿ ಅನ್ವಯಿಸಬಾರದು.

-ಬ್ಲೀಚಿಂಗ್ ಕ್ರೀಮ್ ಡಾರ್ಕ್ ಸರ್ಕಲ್ ಮತ್ತು ತೆಳುವಾದ ಚರ್ಮದ ಭಾಗದಲ್ಲಿ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ.

- ನೈಸರ್ಗಿಕ ಬ್ಲೀಚಿಂಗ್ ಗಿಂತ ಕಡಿಮೆ ಖರ್ಚಿನಲ್ಲಿ ಬ್ಲೀಚಿಂಗ್ ಕ್ರೀಮ್‍ಅನ್ನು ಬಳಸಬಹುದಾಗಿದೆ.

Bleaching faces

-ಬ್ಲೀಚಿಂಗ್ ಕ್ರೀಮ್‍ನಲ್ಲಿ ಪಾದರಸದಂತಹ ರಾಸಾಯನಿಕಗಳಿರುವುದರಿಂದ ದೀರ್ಘಕಾಲದವರೆಗೆ ಬಳಸಬಾರದು ಎಂದು ಚರ್ಮದ ತಜ್ಞರು ಸಲಹೆ ನೀಡುತ್ತಾರೆ. ಇದು ದೇಹದ ಜೀವಕೋಶಗಳ ಮೇಲೆ ಅಪಾಯವನ್ನುಂಟುಮಾಡುವವು. ಅಲ್ಲದೆ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ.

ಸಂಜೆಯ ವೇಳೆ ಬ್ಲೀಚ್ ಕ್ರೀಮ್ ಅನ್ವಯಿಸಿಕೊಳ್ಳುವುದು ಸೂಕ್ತ. ನಂತರ 7-8 ಗಂಟೆಗಳ ಕಾಲ ಸೂರ್ಯನ ಕಿರಣದ ಸಂಪರ್ಕಕ್ಕೆ ಹೋಗದಿರಲು ಅನುಕೂಲವಾಗುವುದು. 

ಬ್ಲೀಚಿಂಗ್ ಗೆ ನೈಸರ್ಗಿಕ ವಿಧಾನ ಉತ್ತಮ

ಗಾಢ ಬಣ್ಣವನ್ನು ಹೊಂದಿದವರು 10 -12ನಿಮಿಷಕ್ಕೂ ಹೆಚ್ಚುಕಾಲ ಅನ್ವಯಸಿಕೊಳ್ಳಬಾರದು. ಇಲ್ಲವಾದರೆ ತ್ವಚೆಯ ಮೇಲಿರುವ ಕೂದಲು ಹೆಚ್ಚು ಬಣ್ಣವನ್ನು ಪಡೆದುಕೊಳ್ಳುತ್ತವೆ. ಅವು ತ್ವಚೆಯ ಬಣ್ಣಕ್ಕೆ ಹೊಂದಿಕೆಯಾಗಲಾರವು.

English summary

What Is Skin Bleaching And Its Different Types?

Skin bleaching is a parlour or home-based treatment that results in an instant glow on the skin fading out all kinds of skin marks and spots along with facial hair. Skin bleaching is also called skin whitening or skin lightening process, where the aim is to obtain an uniform skin colour, so that it can have an even exposure. Today, we shall look into all the possible facts associated with skin bleaching that you must note before you start doing this on yourself.
Subscribe Newsletter