Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ನೋಡಿ, ಇಂತಹ ಮನೆಮದ್ದು ಪ್ರಯತ್ನಿಸಿದರೆ ಮಚ್ಚೆ ಶೀಘ್ರ ಮಾಯವಾಗುವುದು
ದೇಹದ ಯಾವುದಾದರೂ ಒಂದು ಭಾಗದಲ್ಲಿ ಮಚ್ಚೆ ಇದ್ದೇ ಇರುತ್ತದೆ. ಮಚ್ಚೆ ಇಲ್ಲದ ವ್ಯಕ್ತಿಯೇ ಇಲ್ಲವೆನ್ನಬಹುದು. ಆದರೆ ಕೆಲವರ ಮುಖದಲ್ಲಿ ಸಣ್ಣ ಮಚ್ಚೆಗಳು ಇರುತ್ತದೆ. ಇನ್ನು ಕೆಲವು ಮಚ್ಚೆಗಳು ಅರ್ಧ ಮುಖವನ್ನೇ ಆವರಿಸಿಕೊಂಡಿರುತ್ತದೆ. ಸೌಂದರ್ಯದ ದೃಷ್ಟಿಯಿಂದ ಸಣ್ಣ ಮಚ್ಚೆಗಳು ಸುಂದರವಾಗಿ ಕಂಡರೂ ದೊಡ್ಡ ಮಚ್ಚೆಗಳು ಸಮಸ್ಯೆ ಉಂಟು ಮಾಡುವುದು.
ಮಚ್ಚೆಗಳನ್ನು ಚರ್ಮದ ಮೇಲಿನ ವರ್ಣದ್ರವ್ಯ ಕೋಶಗಳು ಎಂದು ಕರೆಯಬಹುದಾಗಿದೆ. ಕೆಲವರಿಗೆ ಮುಖದ ಮೇಲಿನ ಈ ಮಚ್ಚೆಗಳು ಇಷ್ಟವಿರುವುದಿಲ್ಲ. ಇದರಿಂದ ಯಾವುದಾದರೂ ವಿಧಾನದಿಂದ ಇದನ್ನು ತೆಗೆಯುತ್ತಾರೆ. ಮಚ್ಚೆ ಇದ್ದಾಗ ಇದ್ದ ಸೌಂದರ್ಯ ಮಚ್ಚೆ ತೆಗೆದ ಬಳಿಕ ಅವರಲ್ಲಿ ಕಾಣಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಇದು ಅನುವಂಶಿಯವಾಗಿಯೂ ಬರಬಹುದು.
ಮಚ್ಚೆಗಳನ್ನು ಈಗ ತುಂಬಾ ಸುರಕ್ಷಿತ ವಿಧಾನದಿಂದ ತೆಗೆಯುತ್ತಾರೆ. ಆದರೆ ಇದು ತುಂಬಾ ದುಬಾರಿ ಮತ್ತು ಕೆಲವೊಂದು ಸಲ ಇದು ಕಲೆಯನ್ನು ಹಾಗೆ ಉಳಿಸಿಕೊಳ್ಳುವುದು. ನೈಸರ್ಗಿಕವಾಗಿ ಮಚ್ಚೆಯನ್ನು ಮನೆಯಲ್ಲೇ ತೆಗೆದುಹಾಕುವ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ....

ಮಚ್ಚೆ ನಿವಾರಣೆಗೆ ಇರುವ ನೈಸರ್ಗಿಕ ಔಷಧಿಗಳು
ಹೂಕೋಸಿನ ಜ್ಯೂಸ್ ನೈಸರ್ಗಿಕ ರೀತಿಯಲ್ಲಿ ಮಚ್ಚೆ ತೆಗೆದುಹಾಕುವುದು. ಹೂಕೋಸಿನ ಜ್ಯೂಸ್ ಮಾಡಿಕೊಂಡು ಅದನ್ನು ಪ್ರತೀ ದಿನ ಮಚ್ಚೆ ಮೇಲೆ ಹಚ್ಚಿಕೊಳ್ಳಿ. ಮಚ್ಚೆ ನೈಸರ್ಗಿಕವಾಗಿ ಕಿತ್ತು ಬರುವುದು.

ಕೊತ್ತಂಬರಿ ಪೇಸ್ಟ್
ಮಚ್ಚೆ ತೆಗೆದುಹಾಕುವ ಮತ್ತೊಂದು ಸರಳ ವಿಧಾನವೆಂದರೆ ಕೊತ್ತಂಬರಿ ಪೇಸ್ಟ್ ಅನ್ನು ಮಚ್ಚೆಗೆ ಹಚ್ಚಿಕೊಳ್ಳುವುದು. ಕೊತ್ತಂಬರಿ ಎಲೆಗಳ ಪೇಸ್ಟ್ ಮಾಡಿಕೊಳ್ಳಿ ಮತ್ತು ಇದನ್ನು ಮಚ್ಚೆಗೆ ಹಚ್ಚಿ. ಈ ಮದ್ದು ಸ್ವಲ್ಪ ಸಮಯ ತೆಗೆದುಕೊಂಡರೂ ಮಚ್ಚೆಯನ್ನು ಶಾಶ್ವತವಾಗಿ ತೆಗೆದುಹಾಕುವುದು.

ಬೆಳ್ಳುಳ್ಳಿ ಪೇಸ್ಟ್
ಬೆಳ್ಳುಳ್ಳಿಯ ಪೇಸ್ಟ್ ಮಾಡಿಕೊಂಡು ಮಲಗುವ ಮೊದಲು ಅದನ್ನು ಮಚ್ಚೆಯ ಮೇಲೆ ಹಚ್ಚಿಕೊಳ್ಳಿ. ಇದಕ್ಕೆ ಬ್ಯಾಂಡೇಜ್ ಹಚ್ಚಿಕೊಂಡು ಮರುದಿನ ತೆಗೆಯಿರಿ. ಶಾಶ್ವತವಾಗಿ ಮಚ್ಚೆ ತೆಗೆಯಲು ಈ ಮನೆಮದ್ದನ್ನು ನಿಯಮಿತವಾಗಿ ಬಳಸಿ.

ಹರಳೆಣ್ಣೆ
ಹರಳೆಣ್ಣೆಯನ್ನು ಮಸಾಜ್ ಮಾಡುವುದರಿಂದ ಮನೆಯಲ್ಲೇ ಮಚ್ಚೆಯನ್ನು ತೆಗೆದುಹಾಕಬಹುದು. ಹರಳೆಣ್ಣೆ ಹಚ್ಚುವುದರಿಂದ ಮಚ್ಚೆ ಕಡಿಮೆಯಾಗುವುದು ಅಥವಾ ಮಾಯವಾಗುವುದು.

ಆ್ಯಪಲ್ ಸೀಡರ್ ವಿನೇಗರ್
ಮುಖವನ್ನು 5-10 ನಿಮಿಷ ಕಾಲ ಬಿಸಿ ನೀರಿನಿಂದ ತೊಳೆಯಿರಿ. ಬಳಿಕ ಮುಖವನ್ನು ಒಣಗಲು ಬಿಡಿ. ಆ್ಯಪಲ್ ಸೀಡರ್ ವಿನೇಗರ್ ನಲ್ಲಿ ಹತ್ತಿ ಉಂಡೆ ಅದ್ದಿ ಮತ್ತು ಇದನ್ನು ಮಚ್ಚೆಗೆ ಹಚ್ಚಿ. ಹತ್ತು ನಿಮಿಷ ಕಾಲ ಹಾಗೆ ಬಿಡಿ ಮತ್ತು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಮಚ್ಚೆ ಶಾಶ್ವತವಾಗಿ ತೆಗೆಯಲು ದಿನದಲ್ಲಿ ಎರಡು ಸಲ ಇದನ್ನು ಬಳಸಿ.

ಜೇನುತುಪ್ಪ
ಮಚ್ಚೆ ತೆಗೆಯಲು ಜೇನುತುಪ್ಪವು ಮತ್ತೊಂದು ನೈಸರ್ಗಿಕ ವಿಧಾನವಾಗಿದೆ. ಅಗಸೆ ಬೀಜವನ್ನು ಅಗಸೆ ಬೀಜದ ಎಣ್ಣೆಯಲ್ಲಿ ಮಿಶ್ರಣ ಮಾಡಿ ಮತ್ತು ಇದಕ್ಕೆ ಸ್ವಲ್ಪ ತಾಜಾ ಜೇನುತುಪ್ಪ ಹಾಕಿ. ಇದನ್ನು ಮಚ್ಚೆಗೆ ಹಚ್ಚಿಕೊಂಡು 5 ನಿಮಿಷ ಕಾಲ ಉಜ್ಜಿಕೊಳ್ಳಿ. ಬಿಸಿ ನೀರಿನಿಂದ ಮುಖ ತೊಳೆಯಿರಿ. ಜೇನುತುಪ್ಪವನ್ನು ಪ್ರತೀದಿನ ಮಚ್ಚೆಗೆ ಹಚ್ಚಿಕೊಂಡರೂ ನೈಸರ್ಗಿಕವಾಗಿ ಮಚ್ಚೆ ಮಾಯವಾಗುವುದು.

ಅನಾನಸ್ ಜ್ಯೂಸ್
ಮಚ್ಚೆ ತೆಗೆಯಲು ಅನಾನಸ್ ಜ್ಯೂಸ್ ಮತ್ತು ಅನಾನಸನ್ನು ಬಳಸಿಕೊಳ್ಳಬಹುದು. ಇದನ್ನು ನೇರವಾಗಿ ತ್ವಚೆಗೆ ಹಚ್ಚಿಕೊಳ್ಳಿ.

ಅಡುಗೆ ಸೋಡಾ
ಅಡುಗೆ ಸೋಡಾದೊಂದಿಗೆ ಹರಳೆಣ್ಣೆ ಮಿಶ್ರಣ ಮಾಡಿದರೆ ಮಚ್ಚೆಗಳಿಗೆ ಇದು ತುಂಬಾ ಒಳ್ಳೆಯ ಚಿಕಿತ್ಸೆಯಾಗಿದೆ. ಇದನ್ನು ರಾತ್ರಿ ಹಚ್ಚಿಕೊಂಡು ಬೆಳಿಗ್ಗೆ ತೊಳೆಯಿರಿ.



Click it and Unblock the Notifications
