For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಲಿಂಬೆ ಹಣ್ಣಿನ ಬಾಡಿ ಸ್ಕ್ರಬ್‌, ನೀವೂ ಪ್ರಯತ್ನಿಸಿ

By Hemanth
|

ದೇಹದ ಸೌಂದರ್ಯ ಮತ್ತು ನಮ್ಮ ಆರೋಗ್ಯವನ್ನು ತಿಳಿಸುವ ಚರ್ಮವನ್ನು ಯಾವಾಗಲೂ ಚೆನ್ನಾಗಿ ಆರೈಕೆ ಮಾಡಬೇಕಾಗುತ್ತದೆ. ಚರ್ಮದ ಆರೈಕೆಯಲ್ಲಿ ಕೆಲವೊಂದು ವಿಷಯಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಚರ್ಮದ ಸತ್ತ ಕೋಶಗಳನ್ನು ತೆಗೆದುಹಾಕಿ ಹೊಸ ಚರ್ಮವು ಬರುವಂತೆ ಮಾಡಲು ಸ್ಕ್ರಬ್ ಮಾಡುವುದು ತುಂಬಾ ಮುಖ್ಯವಾಗುತ್ತದೆ.

ಇಂದಿನ ದಿನಗಳಲ್ಲಿ ಹಲವಾರು ರೀತಿಯ ಸ್ಕ್ರಬ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇಂತಹ ಸ್ಕ್ರಬ್‌ಗಳಲ್ಲಿ ರಾಸಾಯನಿಕವನ್ನು ಬಳಸಲಾಗುತ್ತದೆ. ಇದು ಚರ್ಮದ ಮೇಲೆ ಅಡ್ಡ ಪರಿಣಾಮವನ್ನು ಬೀರಬಹುದು. ಆದರೆ ರಾಸಾಯನಿಕಮುಕ್ತ ಮತ್ತು ಹೆಚ್ಚಿನ ಖರ್ಚಿಲ್ಲದೆ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಉಪಯೋಗಿಸಬಹುದಾದ ಸ್ಕ್ರಬ್ ಬಗ್ಗೆ ಬೋಲ್ಡ್ ಸ್ಕೈ ಹೇಳಿಕೊಡಲಿದೆ.

ಮನೆಯಲ್ಲೇ ಮಾಡಬಹುದಾದ ಈ ಸ್ಕ್ರಬ್ ನ್ನು ಮಾಡಲು ಬೇಕಾದ ವಸ್ತುಗಳು ಎಪ್ಸಮ್ ಉಪ್ಪು, ಆಲಿವ್ ಎಣ್ಣೆ, ನಿಂಬೆರಸ ಮತ್ತು ಲ್ಯಾವೆಂಡರ್ ಎಣ್ಣೆ. ಎಪ್ಸಮ್ ಉಪ್ಪು ಚರ್ಮದ ಸತ್ತ ಕೋಶಗಳನ್ನು ಹೊರಹಾಕುವ ಗುಣವನ್ನು ಹೊಂದಿದೆ. ಆಲಿವ್ ಎಣ್ಣೆ ಮಾಯಿಶ್ಚರೈಸರ್ ಆಗಿ ಕೆಲಸ ಮಾಡಿದರೆ, ನಿಂಬೆರಸವು ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳನ್ನು ಹೊಂದಿದೆ. ಲ್ಯಾವೆಂಡರ್ ಎಣ್ಣೆಯು ಚರ್ಮವನ್ನು ಮೃಧುವಾಗಿಸುತ್ತದೆ. ಈ ಸ್ಕ್ರಬ್ ಅನ್ನು ಮಾಡಲು ಎಷ್ಟು ಪ್ರಮಾಣದಲ್ಲಿ ಈ ಸಾಮಗ್ರಿಗಳನ್ನು ಬಳಸಬೇಕು ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳಿ.

Simple Homemade Body Scrub Using Lemon

ಸಾಮಗ್ರಿಗಳು
*3-4 ಚಮಚ ಎಪ್ಸಮ್ ಉಪ್ಪು
*2 ಚಮಚ ಆಲಿವ್ ಎಣ್ಣೆ
*4-5 ಚಮದ ಲಿಂಬೆಯ ರಸ
*2-3 ಚಮಚ ಲ್ಯಾವೆಂಡರ್ ಎಣ್ಣೆ

ವಿಧಾನ
*ಒಂದು ಸಣ್ಣ ಪಿಂಗಾಣಿ ತೆಗೆದುಕೊಂಡು ಹೇಳಿದ ಪ್ರಮಾಣದಲ್ಲಿ ಎಲ್ಲಾ ಸಾಮಗ್ರಿಗಳನ್ನು ಹಾಕಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಸ್ಕ್ರಬ್ ಗೆ ಅನುಕೂಲವಾಗುಂತೆ ಮಾಡಿ. ತದನಂತೆ ಇದನ್ನು ಒಂದು ಜಾರ್ ಗೆ ಹಾಕಿ ಗಟ್ಟಿಯಾಗಿ ಬಾಯಿ ಮುಚ್ಚಿಡಿ.
*ಇನ್ನು ನಿಮ್ಮ ದೇಹಕ್ಕೆ ಸ್ಕ್ರಬ್ ಮಾಡಲು ಹೊಂದಿಕೊಳ್ಳುವಂತಹ ಸ್ಕ್ರಬರ್ ಅಥವಾ ಲೂಫ್ಹವನ್ನು ಬಳಸಿ. ಇದನ್ನು ಶೇಖರಣೆ ಮಾಡಿಕೊಂಡರೆ ಅದನ್ನು ವಾರಕ್ಕೆ ಎರಡು ಸಲ ಬಳಸಬಹುದು. ಇದರಿಂದ ಚರ್ಮದ ಸತ್ತ ಕೋಶಗಳು ಹೋಗಿ ನಿಮ್ಮ ಚರ್ಮವು ಕಾಂತಿಯನ್ನು ಪಡೆಯುವುದು.

English summary

Simple Homemade Body Scrub Using Lemon

Regular exfoliation is essential for the health and appearance of your skin. This beauty technique plays an instrumental role in regenerating new skin cells and shedding off the dead ones. That is why, over the past few years, there has been a significant rise in the sale of commercial body scrubs. So, today at Boldsky, we will be sharing with you an inexpensive and incredibly simple way to prepare your own body scrub using some natural ingredients.
Story first published: Tuesday, June 7, 2016, 19:56 [IST]
X
Desktop Bottom Promotion