ಕಾಡುವ ಸಮಸ್ಯೆ ಹಿಮ್ಮಡಿ ಒಡಕು-ಇಲ್ಲಿದೆ ಸಿಂಪಲ್ ಮದ್ದು

By Jaya Subramanya
Subscribe to Boldsky

ಸಾಮಾನ್ಯವಾಗಿ ಪಾದಗಳು ಒಣ ತ್ವಚೆಯದ್ದಾಗಿದ್ದರೆ ಕಾಲಿನ ಬಿರುಕು ಆಗಾಗ್ಗೆ ಉಂಟಾಗುತ್ತದೆ. ಒಮ್ಮೊಮ್ಮೆ ಈ ನೋವು ಎಷ್ಟು ತೀವ್ರವಾಗಿರುತ್ತದೆ ಎಂದರೆ ಅದರಲ್ಲಿ ರಕ್ತ ಕೂಡ ಬರುತ್ತದೆ. ನಿಮ್ಮ ಹಿಮ್ಮಡಿ ಒಡೆಯುತ್ತಿದೆ ಎಂದಾದಲ್ಲಿ ಕೂಡಲೇ ಚಿಕಿತ್ಸೆಯನ್ನು ನಡೆಸಬೇಕು. ಹಿಮ್ಮಡಿಯಲ್ಲಿ ನೋವು ಉಂಟಾಗುತ್ತಿದೆ ಎಂದಾದಲ್ಲಿ, ತೆಂಗಿನೆಣ್ಣೆ ಅಥವಾ ಆಲೀವ್ ಎಣ್ಣೆಯನ್ನು ಹಚ್ಚಿ ಉಪಚರಿಸಬೇಕಾಗುತ್ತದೆ. 15 ದಿನಗಳಿಗೊಮ್ಮೆ ಪೆಡಿಕ್ಯೂರ್ ಮಾಡಿಸುವುದು ಅಂತೆಯೇ ಕಾಲಿನ ಮಸಾಜ್ ಮಾಡಿಸಿಕೊಳ್ಳುವುದರಿಂದ ಹಿಮ್ಮಡಿ ಒಡೆತಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು. ಒಣ ಚರ್ಮ ನಿಮ್ಮದಾಗಿದ್ದರೂ ಈ ರೀತಿಯ ಕಾಳಜಿ ತ್ವರಿತ ಉಪಶಮವನ್ನು ನೀಡುತ್ತದೆ.

ಹಿಮ್ಮಡಿಗೆ ಉತ್ತಮವಾಗಿ ನೀವು ಮಸಾಜ್ ಮಾಡಿದಿರಿ ಎಂದಾದಲ್ಲಿ ರಕ್ತ ಪ್ರಸಾರ ಸರಾಗವಾಗಿ ನೋವನ್ನು ಕಡಿಮೆ ಮಾಡಿ ಕಾಲಿನಲ್ಲಿ ಉಂಟಾದ ಬಿರುಕುಗಳನ್ನು ನಿವಾರಿಸುತ್ತದೆ. ಇಂದಿನ ನಮ್ಮ ಲೇಖನದಲ್ಲಿ ಹಿಮ್ಮಡಿ ಒಡೆತಕ್ಕೆ ನೀವು ಮಾಡಬಹುದಾದ ಪರಿಹಾರಗಳನ್ನು ನೀಡುತ್ತಿದ್ದು ಇದು ಉಪಶಮವನ್ನು ಮಾಡುತ್ತದೆ. ಈ ಪರಿಹಾರಗಳನ್ನು ಒಡೆದ ಹಿಮ್ಮಡಿಗೆ ಹಚ್ಚಿಕೊಂಡಾಗ ನೋವಿನಿಂದ ಪರಿಹಾರವನ್ನು ಪಡೆದುಕೊಳ್ಳಬಹುದು. ಈ ಪರಿಹಾರಗಳಲ್ಲಿರುವ ಮದ್ದು ಹಿಮ್ಮಡಿಯ ಒಡೆತದ ಆಳಕ್ಕೆ ಹೋಗಿ ನೋವನ್ನೂ ಒಡೆತವನ್ನು ನಿವಾರಿಸುತ್ತದೆ. ಆದ್ದರಿಂದ ಆದಷ್ಟು ಮನೆಮದ್ದುಗಳನ್ನು ಅನುಸರಿಸುವ ಮೂಲಕ ದುಡ್ಡನ್ನೂ ಉಳಿಸಿ ಅಂತೆಯೇ ತ್ವರಿತ ಪರಿಹಾರವನ್ನೂ ನೋವಿಗೆ ಪಡೆದುಕೊಳ್ಳಿ. ಇನ್ನು ಪಾದದ ಬಿರುಕು ಕಡಿಮೆಯಾಗಿದ್ದರೂ ತೆಂಗಿನೆಣ್ಣೆಯೊಂದಿಗೆ ಈ ಮದ್ದುಗಳನ್ನು ಆಗಾಗ್ಗೆ ಹಿಮ್ಮಡಿಗೆ ಹಚ್ಚಿಕೊಳ್ಳುತ್ತಿರಿ.

ವ್ಯಾಸಲೀನ್

ವ್ಯಾಸಲೀನ್

ಪ್ರತೀ ರಾತ್ರಿ ಮಲಗುವ ಮುನ್ನ, ನಿಮ್ಮ ಹಿಮ್ಮಡಿಗೆ ವ್ಯಾಸಲಿನ್ ಅನ್ನು ಸವರಿಕೊಳ್ಳಿ ಈ ಪೆಟ್ರೋಲಿಯಮ್ ಜೆಲ್ಲಿ ತ್ವಚೆಯನ್ನು ಮೃದುವಾಗಿಸುವುದರ ಜೊತೆಗೆ ಕಡಿಮೆ ಸಮಯದಲ್ಲೇ ಬಿರುಕಿನ ಸಮಸ್ಯೆಯನ್ನು ದೂರಮಾಡುತ್ತದೆ.

ಆಲೀವ್ ಆಯಿಲ್

ಆಲೀವ್ ಆಯಿಲ್

ತ್ವಚೆಯ ಮೇಲೆ ಪರಿಣಾಮಕಾರಿಯಾಗಿ ಆಲೀವ್ ಆಯಿಲ್ ಕೆಲಸ ಮಾಡುತ್ತದೆ. ಸ್ನಾನದ ನಂತರ, ಬೆಚ್ಚಗಿನ ಆಲೀವ್ ಆಯಿಲ್ ಬಳಸಿಕೊಂಡು ಹಿಮ್ಮಡಿಯನ್ನು ಮಸಾಜ್ ಮಾಡಿಕೊಳ್ಳಿ. ಪಾದ ಮತ್ತು ಹಿಮ್ಮಡಿ ಈ ಎಣ್ಣೆಯನ್ನು ಹೀರಲು ಬಿಡಿ. ನಂತರ ಸಾಕ್ಸ್‎ನಿಂದ ಪಾದವನ್ನು ಮುಚ್ಚಿ ಮರುದಿನ ಬೆಳಗ್ಗೆ ಕಾಲುಗಳನ್ನು ತೊಳೆದುಕೊಳ್ಳಿ.

ತೆಂಗಿನೆಣ್ಣೆ

ತೆಂಗಿನೆಣ್ಣೆ

ನಿಮ್ಮ ಒಣ ತ್ವಚೆಗೆ ತೆಂಗಿನೆಣ್ಣೆ ಉತ್ತಮವಾದುದು. ಬಿಸಿಯಾದ ತೆಂಗಿನೆಣ್ಣೆಯನ್ನು ಹಿಮ್ಮಡಿಗೆ ಹಚ್ಚಿಕೊಂಡಿ ಮಸಾಜ್ ಮಾಡಿಕೊಳ್ಳಿ ನಂತರ ಬೆರಳು ತುದಿಯವರೆಗೆ ಚೆನ್ನಾಗಿ ನೀವಿಕೊಳ್ಳಿ ಕನಿಷ್ಟ ಪಕ್ಷ 15 ನಿಮಿಷಗಳು ಕಾಲನ್ನು ಮಸಾಜ್ ಮಾಡಿ ನಂತರವಷ್ಟೇ ಮಲಗಲು ಹೋಗಿ.

ಮೀನಿನ ಪೆಡಿಕ್ಯೂರ್ಸ್

ಮೀನಿನ ಪೆಡಿಕ್ಯೂರ್ಸ್

ಗಾರಾ ರೂಫಾ ಅಥವಾ ಡಾಕ್ಟರ್ ಫಿಶ್ ಒಣ ತ್ವಚೆಗೆ ನೈಸರ್ಗಿಕ ವರವಾಗಿದೆ. ನಿಮ್ಮ ಬಿರುಕುಂಟಾದ ಪಾದವನ್ನು ಈ ಮೀನಿನಿಂದ ಉಪಚರಿಸಿಕೊಳ್ಳಬಹುದು ತಿಂಗಳಿನಲ್ಲಿ ಎರಡು ಬಾರಿ ಮೀನಿನ ಪೆಡಿಕ್ಯೂರ್ ಮಾಡಿಸಿಕೊಂಡು ಒಣ ತ್ವಚೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.

ಪೆಡಿಕ್ಯೂರ್ಸ್

ಪೆಡಿಕ್ಯೂರ್ಸ್

ಪೆಡಿಕ್ಯೂರ್ ಮಾಡಿಸಿಕೊಂಡ ನಂತರ ವಾರದಲ್ಲಿ ಎರಡು ಬಾರಿ ಪಾದಗಳನ್ನು ಫೂಟ್ ಬ್ರಶ್‎ನಿಂದ ಸ್ವಚ್ಛಮಾಡಿಕೊಳ್ಳಿ. ಪಾದಗಳನ್ನು ಬ್ರಶ್ ಮಾಡುವಾಗ, ಒಣ ತ್ವಚೆಯು ತೊಲಗುತ್ತದೆ. ನಿಮ್ಮ ಕಾಲು ತುಂಬಾ ಒಣಗಿದೆ ಎಂದಾದಲ್ಲಿ, ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಮೂರುಬಾರಿ ಪಾದಗಳನ್ನು ತೊಳೆದುಕೊಳ್ಳಿ.

ಜೇನಿನ ಮಸಾಜ್

ಜೇನಿನ ಮಸಾಜ್

ನಿಮ್ಮ ಪಾದ ಒಣಗಿದ್ದು ತುರಿಕೆಯುಂಟಾಗುತ್ತಿದೆಯೇ? ಹಾಗಿದ್ದರೆ ಈ ಸರಳ ಪರಿಹಾರವನ್ನು ಅನುಸರಿಸಿ. ಒಂದು ಪಾತ್ರೆಯಲ್ಲಿ ಬಿಸಿ ನೀರು ತೆಗೆದುಕೊಂಡು, ಕಾಲನ್ನು 20 ನಿಮಷಗಳ ಕಾಲ ನೀರಿನಲ್ಲಿರಿಸಿ. ನಂತರ ಕಾಲುಗಳನ್ನು ಹೊರತೆಗೆದು ಒಣಗಿಸಿಕೊಳ್ಳಿ. ಈಗ ಪಾದಗಳಿಗೆ ಜೇನಿನಿಂದ 15 ನಿಮಿಷ ಮಸಾಜ್ ಮಾಡಿ. ಪುನಃ ನೀರಿನಲ್ಲಿ ಕಾಲುಗಳನ್ನು ಇರಿಸಿಕೊಂಡು ನೀರನಿಂದ ಹೊರತೆಗೆದು ಒಣಗಿಸಿಕೊಳ್ಳಿ.

ಬೇವಿನ ಪೇಸ್ಟ್

ಬೇವಿನ ಪೇಸ್ಟ್

ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈದ್ಯಕೀಯ ಅಂಶಗಳನ್ನು ಹೊಂದಿರುವ ಬೇವು ನಿಮ್ಮ ಪಾದದ ಬಿರುಕಿಗೆ ಉತ್ತಮ ಮದ್ದಾಗಿದೆ. ನಿಮ್ಮ ಪಾದದ ಬಿರುಕು ತುಂಬಾ ಆಳವಾಗಿದೆ ಎಂದಾದಲ್ಲಿ ಈ ಪೇಸ್ಟ್ ಅನ್ನು ದಿನಕ್ಕೆರಡು ಬಾರಿ ಹಚ್ಚಿಕೊಂಡು ತ್ವಚೆಯ ಸಮಸ್ಯೆಯನ್ನು ನಿವಾರಿಸಿಕೊಳ್ಳಿ.

 
For Quick Alerts
ALLOW NOTIFICATIONS
For Daily Alerts

    English summary

    Remedies To Have Cracked Free Feet

    Cracked feet should be dealt with immediately. If you have pain in the sole of your foot, apply coconut oil or olive oil to get rid of the dry skin. You can also go in for a pedicure every 15 days as regular massaging of the foot and the sole will help to get rid of dry skin immediately. Therefore, don't waste any more time, take a look at these humble home remedies to have cracked free feet. And, when those scars slowly start to disappear, continue to apply these ingredients on the skin every alternate day. Take a look:
    Story first published: Thursday, April 21, 2016, 8:10 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more