For Quick Alerts
ALLOW NOTIFICATIONS  
For Daily Alerts

ನೀವೂ ನಂಬಲೇಬೇಕು, ತುಪ್ಪ ತ್ವಚೆಗೆ ಬಹಳ ಒಳ್ಳೆಯದು!

By Manu
|

ತುಪ್ಪ ತ್ವಚೆಗೆಷ್ಟು ಸುರಕ್ಷಿತ? ಈ ಪ್ರಶ್ನೆ ನಮ್ಮೆಲ್ಲರಿಗೂ ಒಂದಲ್ಲಾ ಒಂದು ಬಾರಿಯಾದರೂ ಬಂದೇ ಇರುತ್ತದೆ. ಏಕೆಂದರೆ ನಿಸರ್ಗದ ಈ ಅದ್ಭುತ ಕೊಡುಗೆಯಿಂದ ಹಲವಾರು ಬಗೆಯ ಪ್ರಯೋಜನಗಳಿದ್ದು ಇದನ್ನು ಹಚ್ಚಿಕೊಳ್ಳುವಾಗ ಕೈಗಳಿಗೆ ಅಕಸ್ಮಾತಾಗಿ ತಾಕಿದ ಬಳಿಕ ಕೈಗಳು ಮೃದುವಾಗಿರುವುದನ್ನು ಗಮನಿಸಿದ್ದರೂ ಇದು ಮುಖದ ಚರ್ಮಕ್ಕೆ ಹೇಗೋ ಎಂಬ ಅಳುಕು ಎಲ್ಲರಲ್ಲಿಯೂ ಉಂಟಾಗಿರುತ್ತದೆ.

Ghee

ಆದರೆ ಇದಕ್ಕೆ ಸೂಕ್ತವಾದ ಉತ್ತರ ಯಾರೂ ಸ್ಪಷ್ಟವಾಗಿ ಇದುವರೆಗೆ ಹೇಳಿರದಿದ್ದ ಕಾರಣ ಈ ಅದ್ಭುತ ಗುಣವುಳ್ಳ ನೈಸರ್ಗಿಕ ಔಷಧಿಯನ್ನು ಬಳಸದೇ ಇದರ ಪ್ರಯೋಜನಗಳಿಂದ ವಂಚಿತರಾಗಿದ್ದೇವೆ. ತುಪ್ಪದಲ್ಲಿ ಸಂತುಲಿತ ಕೊಬ್ಬಿನ ಜೊತೆಗೇ ವಿಟಮಿನ್ಎ , ಡಿ ಮತ್ತು ಇ ಇವೆ. ಇವುಗಳ ಇರುವಿಕೆಯಿಂದ ತುಪ್ಪ ಒಂದು ಅತ್ಯುತ್ತಮ ಆಂಟಿ ಆಕ್ಸಿಡೆಂಟು ಸಹಾ ಆಗಿದೆ.

ಆದರೆ ತುಪ್ಪವನ್ನು ಚರ್ಮಕ್ಕೆ ಬಳಸುವುದು ಹೇಗೆ? ನೇರವಾಗಿ ಇದನ್ನು ಹಚ್ಚಿಕೊಂಡರೆ ಮುಖವೆಲ್ಲಾ ಎಣ್ಣೆಪಸೆಯಾಗುತ್ತದೆ. ಇದರ ಸರಿಯಾದ ಬಳಕೆಯಾಗಬೇಕೆಂದರೆ ಔಷಧಿಯ ಗುಣವುಳ್ಳ ಇತರ ಸಾಮಾಗ್ರಿಗಳೊಂದಿಗೆ ಬೆರೆಸಿ ಬಳಸಬೇಕಾಗುತ್ತದೆ. ಬನ್ನಿ, ಇಂದು ತುಪ್ಪವನ್ನು ಸೌಂದರ್ಯವರ್ಧಕವಾಗಿ ಹೇಗೆ ಮತ್ತು ಯಾವ ಯಾವ ರೂಪದಲ್ಲಿ ಬಳಸಬಹುದೆಂಬುದನ್ನು ನೋಡೋಣ:

ದೇಹದ ತೇವಕಾರಕ ಎಣ್ಣೆಯಾಗಿ
ಒಂದು ವೇಳೆ ನಿಮ್ಮ ಚರ್ಮ ವಿಪರೀತ ಒಣದಾಗಿದ್ದರೆ ಈ ವಿಧಾನವನ್ನು ಅನುಸರಿಸಿ: ಎರಡು ದೊಡ್ಡ ಚಮಚ ಅಪ್ಪಟ ತುಪ್ಪವನ್ನು ಕರಗುವಷ್ಟು ಬಿಸಿಮಾಡಿ. ಬಳಿಕ ಉಗುರುಬೆಚ್ಚನೆಯ ತಾಪಮಾನಕ್ಕೆ ಬರುವಷ್ಟು ತಣಿಸಿ. ಬಳಿಕ ಈ ತುಪ್ಪವನ್ನು ತೆಳುವಾಗಿ ಒಣಚರ್ಮದ ಮೇಲೆಲ್ಲಾ ನಯವಾಗಿ ಮಸಾಜ್ ಮಾಡುತ್ತಾ ಸವರಿಕೊಳ್ಳಿ. ಸುಮಾರು ಒಂದು ಘಂಟೆ ಬಿಟ್ಟು ಸ್ನಾನ ಮಾಡಿ. ದೇಹದ ತೂಕ ಇಳಿಸಲು ದಿನಕ್ಕೆರಡು ಚಮಚ ತುಪ್ಪ ಸಾಕು!

ಮುಖದ ಕಾಂತಿಗೆ
ಒಂದು ದೊಡ್ಡ ಚಮಚ ಕಡ್ಲೆಹಿಟ್ಟು, ಒಂದು ದೊಡ್ಡ ಚಮಚ ಅಪ್ಪಟ ತುಪ್ಪ ಹಾಗೂ ಅಗತ್ಯವಿರುವಷ್ಟು ನೀರು ಬೆರೆಸಿ ಚೆನ್ನಾಗಿ ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖಕ್ಕೆ ತೆಳುವಾಗಿ ಹಚ್ಚಿಕೊಳ್ಳಿ. ಇದನ್ನು ಪೂರ್ಣವಾಗಿ ಒಣಗಲು ಬಿಡಿ. ಒಣಗಿದ ಬಳಿಕ ಈ ಲೇಪನ ಬಿರಿಬಿಡಲು ಪ್ರಾರಂಭಿಸುತ್ತದೆ. ಈಗ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸಬೇಡಿ.

ಬಿರಿದ ತುಟಿಗಳ ಆರೈಕೆಗಾಗಿ
ಒಂದು ಚಿಕ್ಕ ಚಮಚ ತುಪ್ಪ ಮತ್ತು ಸಮಪ್ರಮಾಣದ ಜೇನು ಬೆರೆಸಿ ತುಟಿಗಳಿಗೆ ತೆಳುವಾಗಿ ಹಚ್ಚಿಕೊಳ್ಳಿ. ರಾತ್ರಿ ಮಲಗುವ ಮುನ್ನ ಹಚ್ಚಿ ಇಡಿಯ ರಾತ್ರಿ ಹಾಗೇ ಬಿಡಿ. ಮರುದಿನ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. ಈಗ ತುಟಿಗಳು ಮೃದು, ಬಿರುಕಿಲ್ಲದೇ ಮತ್ತು ತುಂಬಿಕೊಂಡಿರುತ್ತವೆ.

ಕಣ್ಣುಗಳ ಕೆಳಗಿನ ಕಪ್ಪು ವರ್ತುಲ ನಿವಾರಿಸಲು
ತುಪ್ಪದಲ್ಲಿರುವ ವಿಟಮಿನ ಎ ಕಣ್ಣುಗಳ ಕೆಳಗಿನ ವರ್ತುಲಗಳನ್ನು ನಿವಾರಿಸುವ ಮಾಯಾದಂಡದಂತೆ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ ಐದು ಹನಿ ಬಾದಾಮಿ ಎಣ್ಣೆ ಮತ್ತು ಒಂದು ಚಿಕ್ಕಚಮಚ ತುಪ್ಪ ಬೆರೆಸಿ ಕಣ್ಣುಗಳ ಕೆಳಗಿನ ವರ್ತುಲದ ಮೇಲೆ ತೆಳುವಾಗಿ ಹಚ್ಚಿ. ಇದನ್ನು ಪ್ರತಿದಿನ ಹಚ್ಚಿಕೊಳ್ಳುತ್ತಾ ಇದ್ದರೆ ಒಂದು ತಿಂಗಳಲ್ಲಿ ಈ ವರ್ತುಲಗಳು ಮಾಯವಾಗತೊಡಗುತ್ತವೆ. ಪೂರ್ಣವಾಗಿ ಈ ವರ್ತುಲಗಳು ಇಲ್ಲವಾಗುವವರೆಗೆ ಈ ವಿಧಾನವನ್ನು ಮುಂದುವರೆಸಿ.

ತ್ವಚೆಯ ಕಾಂತಿ ಹೆಚ್ಚಲು
ಒಂದು ದೊಡ್ಡಚಮಚ ಮಸೂರ್ ದಾಲ್ (ಕಿತ್ತಳೆ ಬಣ್ಣದ ತೊಗರಿ ಬೇಳೆ) ಯನ್ನು ಮಿಕ್ಸಿಯಲ್ಲಿ ನುಣ್ಣಗಾಗಿ ಪುಡಿಮಾಡಿ. ಇದಕ್ಕೆ ಐದು ಹನಿ ಪ್ರಿಮ್ರೋಸ್ ಎಣ್ಣೆ (primrose oil), ಒಂದು ವಿಟಮಿನ್ ಇ ಮಾತ್ರೆಯ ಒಳಗಣ ಸಾಮಾಗ್ರಿಗಳು ಮತ್ತು ಒಂದು ದೊಡ್ಡಚಮಚ ತುಪ್ಪ ಸೇರಿಸಿ ಚೆನ್ನಾಗಿ ಬೆರೆಸಿ. ಇದಕ್ಕೆ ಅಗತ್ಯವೆನಿಸುವಷ್ಟು ಹಸಿ ಹಾಲು ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ ಮೂವತ್ತು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಪಕ್ಕಾ ದೇಸಿ ತುಪ್ಪ, ಆರೋಗ್ಯದ ಲವಲವಿಕೆಯ ಕೀಲಿಕೈ

ಬಾಡಿ ಲೋಷನ್ ರೂಪದಲ್ಲಿ
ದೇಹದ ತ್ವಚೆಯನ್ನು ಇಡಿಯ ದಿನ ಕೋಮಲ ಮತ್ತು ಮೃದುವಾಗಿಸಲು ತುಪ್ಪವೂ ಸಮರ್ಥವಾಗಿದೆ. ಇದಕ್ಕಾಗಿ ಸಮಪ್ರಮಾಣದಲ್ಲಿ ತುಪ್ಪ ಮತ್ತು ಕೊಬ್ಬರಿ ಎಣ್ಣೆಯನ್ನು ಬೆರೆಸಿ ಕೊಂಚ ಲ್ಯಾವೆಂಡರ್ ಎಣ್ಣೆಯ ಹನಿಗಳನ್ನು ಸೇರಿಸಿ ನಯವಾದ ಲೇಪನ ತಯಾರಿಸಿ. ಸ್ನಾನದ ಬಳಿಕ ಈ ಲೇಪನವನ್ನು ತೆಳುವಾಗಿ ಕೊಂಚ ಮಸಾಜ್ ಮೂಲಕ ಸೂಕ್ಷ್ಮಭಾಗಗಳನ್ನು ಬಿಟ್ಟು ಉಳಿದೆಲ್ಲಾ ಭಾಗಗಳಿಗೆ ಹಚ್ಚಿಕೊಳ್ಳಿ.

English summary

Is It Safe To Use Ghee On Skin?

Is it safe to use ghee on skin? A question that has crossed our mind at some point or the other. While we certainly psyched about eating food generously laden with clarified butter, we just ain't that sure about applying it on face!
X
Desktop Bottom Promotion