Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕಾಫಿ ಕುಡಿಯುವುದು ಮಾತ್ರವಲ್ಲ, ಸೌಂದರ್ಯಕ್ಕೂ ಬಳಸಿಕೊಳ್ಳಿ!
ಬೆಳಿಗ್ಗೆ ಎದ್ದು ದೈನಂದಿನ ಕ್ರಿಯೆಗಳನ್ನು ಮುಗಿಸಿಕೊಂಡ ಬಳಿಕ ಕುಡಿಯಲು ಒಂದು ಲೋಟ ಕಾಫಿ ಪ್ರತಿಯೊಬ್ಬರಿಗೆ ಬೇಕೇಬೇಕು. ಇದು ಇಲ್ಲವೆಂದಾದಲ್ಲಿ ಆ ದಿನದ ಕೆಲಸ ಕಾರ್ಯಗಳೇ ಸರಿಯಾಗಿ ಸಾಗುವುದಿಲ್ಲ. ಕಾಫಿ ಕುಡಿಯದೆ ಯಾವುದೇ ಕೆಲಸ ಮಾಡಲು ನಮಗೆ ಸಾಧ್ಯವೇ ಇಲ್ಲವೆನ್ನುವಂತೆ ನಾವು ಅದಕ್ಕೆ ಅಂಟಿಕೊಂಡಿದ್ದೇವೆ. ಆದರೆ ಕಾಫಿಯಿಂದ ನಿಮ್ಮ ತ್ವಚೆಗೆ ತುಂಬಾ ಪ್ರಯೋಜನವಿದೆ ಎಂದು ತಿಳಿದಿದೆಯಾ? ಸೌಂದರ್ಯ ವೃದ್ಧಿಗೆ ಒಂದು ಚಮಚ ಕಾಫಿ ಪುಡಿ ಸಾಕು!
ಇಲ್ಲವೆಂದಾದರೆ ನೀವು ಈ ಲೇಖನವನ್ನು ಓದಿಕೊಂಡು ಮುಂದೆ ಕಾಫಿಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂದು ತಿಳಿದುಕೊಳ್ಳಿ. ಕಾಫಿಯ ಬೀಜವನ್ನು ವಿವಿಧ ರೀತಿಯ ಸೌಂದರ್ಯ ವರ್ಧಕಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಕಾಫಿ ಬೀಜಗಳನ್ನು ಬಳಸಿಕೊಂಡು ನಿಮ್ಮ ತ್ವಚೆಯನ್ನು ಕಾಂತಿಯುತ ಹಾಗೂ ಹೊಳೆಯುವಂತೆ ಮಾಡಬಹುದು.

ತ್ವಚೆಯ ಆರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದೆಂದರೆ ಸ್ಕರ್ಬ್ ಮಾಡುವುದು. ಇದರಿಂದ ಚರ್ಮದ ಸತ್ತ ಕೋಶಗಳು ಹೋಗಿ ಹೊಸ ಚರ್ಮ ಬೆಳೆಯುತ್ತದೆ. ಚರ್ಮದ ಸ್ಕ್ರಬ್ ಮಾಡಲು ಹಲವಾರು ರೀತಿಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದರಲ್ಲಿ ಅತಿಯಾದ ರಾಸಾಯನಿಕವನ್ನು ಬಳಕೆ ಮಾಡಿರುತ್ತಾರೆ. ಇದನ್ನು ಬಳಸುವುದರಿಂದ ಮುಂದೆ ಅಡ್ಡ ಪರಿಣಾಮಗಳು ಉಂಟಾಗಬಹುದು. ಇದಕ್ಕಾಗಿ ನೈಸರ್ಗಿಕವಾಗಿ ಸಿಗುವ ಕಾಫಿ ಬೀಜದಿಂದ ಚರ್ಮದ ಆರೈಕೆ ಹೇಗೆ ಮಾಡಿಕೊಳ್ಳಬಹುದು ಎಂದು ಮುಂದೆ ಓದುತ್ತಾ ತಿಳಿಯಿರಿ. ಕಾಫಿ ಕಲೆಯನ್ನು ಚಕ್ಕನೆ ನಿವಾರಿಸಲು ಸರಳ ಟಿಪ್ಸ್
ಸ್ಕ್ರಬ್ ಮಾಡಿಕೊಳ್ಳಲು ಬೇಕಾಗುವ ಸಾಮಗ್ರಿಗಳು
*ಕಾಫಿ ಹುಡಿ ನಾಲ್ಕು ಚಮಚ
*ತೆಂಗಿನ ಎಣ್ಣೆ 1 ಚಮಚ
*ಕಾಫಿ ಹುಡಿಯಲ್ಲಿರುವ ಸುಲಿಯುವ ಗುಣವು ಚರ್ಮದ ಸತ್ತ ಕೋಶಗಳನ್ನು ತೆಗೆದು ಹಾಕಿ ಹೊಸ ಚೈತನ್ಯವನ್ನು ನೀಡುವುದು. ಇದರಿಂದ ಚರ್ಮದ ಮೇಲಿನ ಕಲೆಗಳು ಹಾಗೂ ಕಳೆಗುಂದಿರುವ ಚರ್ಮವು ಕಿತ್ತು ಹೋಗುವುದು. ಕಾಫಿ ಹುಡಿಯನ್ನು ಸ್ಕ್ರಬ್ ಮಾಡಿದಾಗ ಚರ್ಮದಲ್ಲಿರುವ ಕಲ್ಮಶಗಳನ್ನು ನಿವಾರಣೆ ಮಾಡುವುದು. ತೆಂಗಿನ ಎಣ್ಣೆ ಚರ್ಮದ ಕೋಶಗಳಿಗೆ ಪೋಷಕಾಂಶವನ್ನು ಒದಗಿಸುವುದು ಮತ್ತು ಹೊಸ ಚರ್ಮದ ಬೆಳವಣಿಗೆಗೆ ನೆರವಾಗಿ ಚರ್ಮಕ್ಕೆ ಕಾಂತಿ ನೀಡುವುದು.
ಇದನ್ನು ಮಾಡುವುದು ಹೇಗೆ?
ಒಂದು ಸಣ್ಣ ಪಿಂಗಾಣಿಯಲ್ಲಿ ಮೇಲೆ ಹೇಳಿದಂತಹ ಸಾಮಗ್ರಿಗಳನ್ನು ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ದೇಹದ ಮೇಲೆ ಹಚ್ಚಿಕೊಂಡು ಕೆಲವು ನಿಮಿಷಗಳ ಕಾಲ ಸ್ಕ್ರಬ್ ಮಾಡಿ ಬಳಿಕ ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಕೊಳ್ಳಿ. ಬೆಳಗಿನ ಜಾವ ಸೇವಿಸಿ- ಬಿಸಿ ಬಿಸಿಯಾದ ಬೆಣ್ಣೆ ಕಾಫಿ!



Click it and Unblock the Notifications


