For Quick Alerts
ALLOW NOTIFICATIONS  
For Daily Alerts

ವರ್ಕ್‎ಔಟ್ ಮಾಡುವ ಮಹಿಳೆಯರಿಗಾಗಿ ವಿಶೇಷ ಬ್ಯೂಟಿ ಟಿಪ್ಸ್

By Jaya subramanya
|

ನಿಮ್ಮನ್ನು ನೀವು ಆಕರ್ಷಕವಾಗಿ ಮತ್ತು ಫಿಟ್‌ ಆಗಿ ಇರಿಸಿಕೊಳ್ಳಬೇಕೆಂಬ ಬಯಕೆಯನ್ನು ಹೊಂದಿದವರಾಗಿದ್ದೀರಾ? ಅಂತೆಯೇ ನಿಯಮಿತ ಫಿಟ್‎ನೆಸ್ ಕೇಂದ್ರಗಳಿಗೆ ಭೇಡಿ ನೀಡಿ ವರ್ಕ್ ಔಟ್ ಮಾಡುವ ಖಯಾಲಿ ಹೊಂದಿದವರಾಗಿದ್ದೀರಾ? ಹಾಗಿದ್ದರೆ ನಿಮ್ಮನ್ನು ಈ ಸಮಯಗಳಲ್ಲಿ ಹೇಗೆ ತಾಜಾ ಆಗಿ ಇರಿಸಿಕೊಳ್ಳಬೇಕೆಂಬ ಸಲಹೆಗಳನ್ನು ಇಂದಿನ ಲೇಖನದಲ್ಲಿ ನಾವು ನೀಡಲಿರುವೆವು.

ವರ್ಕ್ ಔಟ್ ಮಾಡುವುದರಲ್ಲಿ ಹಲವಾರು ವಿಧಗಳಿದ್ದು ಇದರಲ್ಲಿ ಜಿಮ್‎ಗೆ ಹೋಗುವುದು, ಯೋಗ ಮಾಡುವುದು, ಜಾಗಿಂಗ್, ವಾಕಿಂಗ್ ಮೊದಲಾದ ವಿಧಗಳಿವೆ. ಈ ಸಮಯದಲ್ಲಿ ಹೆಚ್ಚುವರಿ ಬೆವರು ದೇಹದಿಂದ ಹರಿದು ಹೋಗುತ್ತದೆ. ಬೆವರುವುದು ತ್ವಚೆಗೆ ಅತ್ಯುತ್ತಮವಾಗಿದೆ.

ಅದಾಗ್ಯೂ ಸೂಕ್ತ ತ್ವಚೆಯ ಕಾಳಜಿ ಸಲಹೆಗಳನ್ನು ನೀವು ಪಾಲಿಸಿಲ್ಲ ಎಂದಾದಲ್ಲಿ ಬೆವರನಿಂದ ಮೊಡವೆ, ದೇಹದ ದುರ್ಗಂಧ ಮತ್ತು ಡ್ಯಾಂಡ್ರಫ್ ಉಂಟಾಗುತ್ತದೆ. ನೀವು ವರ್ಕ್ ಔಟ್ ಮಾಡುವ ಮನಸ್ಸುಳ್ಳವರಾಗಿದ್ದು, ಆರೋಗ್ಯಯುತ ತ್ವಚೆ ಮತ್ತು ಕೂದಲನ್ನು ನಿರ್ವಹಿಸಬೇಕೆನ್ನುವ ಬಯಕೆಯುಳ್ಳವರಾಗಿದ್ದಲ್ಲಿ ಈ ಕೆಳಗೆ ನಾವು ನೀಡುತ್ತಿರುವ ಸೌಂದರ್ಯ ಸಲಹೆಗಳನ್ನು ಪಾಲಿಸಿ.

ವೈಪ್ಸ್ ಬಳಸಿ

ವೈಪ್ಸ್ ಬಳಸಿ

ನೀವು ಜಿಮ್‎ನಲ್ಲಿದ್ದೀರಿ ಅಥವಾ ಜಾಗಿಂಗ್ ಮಾಡುತ್ತಿದ್ದೀರಿ ಎಂದಾದಲ್ಲಿ, ಆಂಟಿ ಬ್ಯಾಕ್ಟೀರಿಯಲ್ ವೆಟ್ ವೈಪ್ಸ್ ಅನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ. ನಿಮ್ಮ ಮುಖದಲ್ಲಿರುವ ಬೆವರನ್ನು ನಿವಾರಿಸಿ ಮೊಡವೆ ಉಂಟಾಗದಂತೆ ವೆಟ್ ವೈಪ್ಸ್ ಸಹಕಾರಿಯಾಗಿದೆ.

ಕೂಡಲೇ ಸ್ನಾನ ಮಾಡಿ

ಕೂಡಲೇ ಸ್ನಾನ ಮಾಡಿ

ತ್ವಚೆಯ ಪರಿಸ್ಥಿತಿಗಳು ಇನ್ನಷ್ಟು ಬಿಗಡಾಯಿಸದಂತೆ ಕಾಪಾಡಿಕೊಳ್ಳಲು ಕೂಡಲೇ ಸ್ನಾನ ಮಾಡಿ. ಜಿಮ್‎ ಕೇಂದ್ರದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದಾದಲ್ಲಿ ಕನಿಷ್ಠ ಪಕ್ಷ ಮುಖವನ್ನಾದರೂ ತೊಳೆದುಕೊಳ್ಳಿ.

ಕೂದಲನ್ನು ಕಟ್ಟಿಕೊಳ್ಳಿ

ಕೂದಲನ್ನು ಕಟ್ಟಿಕೊಳ್ಳಿ

ನೀವು ವರ್ಕ್ ಔಟ್ ಮಾಡುತ್ತಿರುವಾಗ, ಕೂದಲನ್ನು ಬಿಗಿಯಾಗಿ ಪೋನಿ ಟೇಲ್ ಅಥವಾ ಬನ್ ಮಾದರಿಯಲ್ಲಿ ಕಟ್ಟಿಕೊಳ್ಳಿ. ಇದರಿಂದ ಹೆಚ್ಚುವರಿ ಬೆವರು ನಿಮ್ಮ ಮುಖಕ್ಕೆ ಹರಿದು ಮೊಡವೆ ಉಂಟಾಗುವುದನ್ನು ತಡೆಗಟ್ಟಬಹುದಾಗಿದೆ.

ಡೀಪ್ ಕ್ಲೆನ್ಸಿಂಗ್ ಶಾಂಪೂ ಬಳಸಿ

ಡೀಪ್ ಕ್ಲೆನ್ಸಿಂಗ್ ಶಾಂಪೂ ಬಳಸಿ

ನೀವು ನಿಯಮಿತವಾಗಿ ವರ್ಕ್ ಔಟ್ ಮಾಡುವ ಅಭ್ಯಾಸವನ್ನು ಹೊಂದಿದವರು ಎಂದಾದಲ್ಲಿ, ಆಳವಾದ ಕ್ಲೆನ್ಸಿಂಗ್ ಶಾಂಪೂವನ್ನು ಬಳಸಿ. ನೀವು ವರ್ಕ್ ಔಟ್ ಮಾಡುತ್ತಿರುವಾಗ ಸೇಬಮ್ ಮತ್ತು ಬೆವರು ನಿಮ್ಮ ತಲೆಬುರುಡೆಯಲ್ಲಿ ಸಂಗ್ರಹವಾಗುತ್ತದೆ ಆದ್ದರಿಂದ ಕ್ಲೆನ್ಸಿಂಗ್ ಶಾಂಪೂ ಬಳಸಿ.

ಸೌಂದರ್ಯ ಸಲಹೆಗಳನ್ನು ಪಾಲಿಸಿ

ಸೌಂದರ್ಯ ಸಲಹೆಗಳನ್ನು ಪಾಲಿಸಿ

ನೀವು ವರ್ಕ್ ಔಟ್ ಮಾಡುತ್ತಿರುವಾಗ ಹೆಚ್ಚು ಬೆವರು ಹರಿಸುತ್ತೀರಿ ಅಲ್ಲವೇ ಅಂತಹ ಸಂದರ್ಭದಲ್ಲಿ ನೀವು ತ್ವಚೆಯ ಮತ್ತು ಕೂದಲಿನ ಕಾಳಜಿಯನ್ನು ಮಾಡಬೇಕಾಗುತ್ತದೆ.

ತಂಪು ನೀರಿನ ಸಿಂಪಡಿಕೆ

ತಂಪು ನೀರಿನ ಸಿಂಪಡಿಕೆ

ವರ್ಕ್ ಔಟ್ ಮುಗಿದ ಒಡನೆಯೇ, ತಂಪು ನೀರಿನಿಂದ 4-5 ಬಾರಿ ಮುಖ ಮತ್ತು ಕುತ್ತಿಗೆಯನ್ನು ತೊಳೆದುಕೊಳ್ಳಿ ಇದು ತ್ವಚೆಯ ರಂಧ್ರಗಳನ್ನು ಮುಚ್ಚಲು ಸಹಾಯ ಮಾಡುತ್ತದೆ. ಹೆಚ್ಚುವರಿ ಬೆವರಿನಿಂದ ರಂಧ್ರಗಳು ವಿಕಸಿತವಾಗಿರುವ ಸಂದರ್ಭದಲ್ಲಿ ತಂಪು ನೀರು ಹೆಚ್ಚು ಸಹಕಾರಿಯಾಗಿರುತ್ತದೆ.

ಹೆಚ್ಚು ನೀರು ಕುಡಿಯಿರಿ

ಹೆಚ್ಚು ನೀರು ಕುಡಿಯಿರಿ

ತ್ವಚೆಯ ಮತ್ತು ಕೂದಲಿನ ಡ್ರೈನೆಸ್ ಅನ್ನು ನಿವಾರಿಸಬೇಕೆಂಬ ಯೋಚನೆಯಲ್ಲಿ ಇದ್ದೀರಾ ಎಂದಾದಲ್ಲಿ, ಆದಷ್ಟು ನೀರು ಕುಡಿಯುತ್ತಿರಿ, ವರ್ಕ್‎ಔಟ್‎ನ ಮುನ್ನ ಮತ್ತು ನಂತರ ಸಾಧ್ಯವಾದಷ್ಟು ನೀರು ಕುಡಿಯಿರಿ. ಈ ಸಮಯದಲ್ಲಿ ದೇಹಕ್ಕೆ ಹೆಚ್ಚುವರಿ ನೀರು ಬೇಕಾಗಿರುತ್ತದೆ. ವರ್ಕ್‎ಔಟ್ ಮಾಡುತ್ತಿರುವಾಗ ನೀರು ಕುಡಿಯದಿರಿ.

English summary

7 Simple Beauty Tips For Women Who Workout!

Are you a woman who loves to be fit and do you follow a fitness regimen on a daily basis? Are you also equally concerned about your appearance? If yes, then it is good news because who doesn't like a woman who is both fit and beautiful? Fitness is extremely important for every person to have a good physique as well as to stay healthy.
Story first published: Monday, July 11, 2016, 19:54 [IST]
X
Desktop Bottom Promotion