For Quick Alerts
ALLOW NOTIFICATIONS  
For Daily Alerts

ಹೊಳಪಿನ ತ್ವಚೆಗಾಗಿ ಸಾಲ್ಟ್ ಬಾಡಿ ಸ್ಕ್ರಬ್ ಬಳಸಿ ನೋಡಿ!

|

ಚಳಿಗಾಲ ಬಂದಿತೆಂದರೆ ನಾವು ನಮಗೆ ಆಪ್ಯಾಯಮಾನವಾದ ಹವಾಮಾನವನ್ನು ಆನಂದಿಸುತ್ತೇವೆ ಆದರೆ ಇದೇ ಆಪ್ಯಾಯಮಾನತೆಯನ್ನು ನಮ್ಮ ತ್ವಚೆ ಆನಂದಿಸುತ್ತದೆಯೇ? ಅದು ಸಹ ಚಳಿಗಾಲವನ್ನು ಇಷ್ಟಪಡುತ್ತದೆಯೇ? ನಾವು ಹೇಳುವ ಸಾಲ್ಟ್ ಬಾಡಿ ಸ್ಕ್ರಬ್ ರೆಸಿಪಿಯನ್ನು ನೀವು ಅನುಸರಿಸಿದರೆ ಅದು ಸಹ ಚಳಿಗಾಲವನ್ನು ಇಷ್ಟಪಡುತ್ತದೆ. ಚಳಿಗಾಲವು ತ್ವಚೆಯನ್ನು ಒಣ, ಒರಟು ಮತ್ತು ಮಚ್ಚೆಗಳಂತೆ ಮಾಡುತ್ತದೆ.

ಇಂತಹ ಚಳಿಗಾಲದ ಸಂದರ್ಭದಲ್ಲಿ ಸಾಲ್ಟ್ ಬಾಡಿ ಸ್ಕ್ರಬ್ ರೆಸಿಪಿಯು ತ್ವಚೆಯನ್ನು ಎಕ್ಸ್‌ಫೋಲಿಯೇಶನ್ ಮಾದಿ, ತ್ವಚೆಗೆ ಅಗತ್ಯವಾದ ಮೊಯಿಶ್ಚರೈಸನ್ನು ನೀಡುತ್ತದೆ. ಇದರಿಂದ ತ್ವಚೆಯು ಮೃದುವಾಗಿ ರೇಷ್ಮೆಯಂತೆ ಆಗುತ್ತದೆ. ಈ ಸಾಲ್ಟ್ ಬಾಡಿ ಸ್ಕ್ರಬ್ ತಯಾರಿಸುವುದು ಸುಲಭ ಮತ್ತು ಇದಕ್ಕೆ ಅಧಿಕ ಸಮಯ ಬೇಕಾಗುವುದಿಲ್ಲ. ಇದರ ಇನ್ನೊಂದು ಉಪಯೋಗವೇನೆಂದರೆ, ಇದನ್ನು ನಿಮಗೂ ತಯಾರಿಸಿಕೊಳ್ಳಬಹುದು ಮತ್ತು ಇದನ್ನು ನೀವು ಇತರರಿಗೆ ಉಡುಗೊರೆಯಾಗಿ ಸಹ ನೀಡಬಹುದು.

ಇದನ್ನು ಒಂದು ಫ್ಯಾನ್ಸಿಯಾಗಿರುವ ಬಾಟಲ್‌ಗಳಲ್ಲಿ ಹಾಕಿ ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಬಹುದು. ಈ ಸಾಲ್ಟ್ ಬಾಡಿ ಸ್ಕ್ರಬ್ ತಯಾರಿಸಲು ಅಗತ್ಯವಾಗಿರುವ ಪದಾರ್ಥಗಳು ನಿಮ್ಮ ಮನೆಯ ಅಡುಗೆ ಮನೆಯಲ್ಲಿ ಸುಲಭವಾಗಿ ದೊರೆಯುತ್ತವೆ. ವಾವ್! ದೇಹಕ್ಕೆ ಸ್ಕ್ರಬ್ ಮನೆಯಲ್ಲಿಯೇ ಮಾಡಬಹುದು

ಹೀಗಾಗಿ ಇದು ಅಷ್ಟೇನು ಖರ್ಚಿಲ್ಲದ ಹಾಗು ಅಷ್ಟೇ ಪರಿಣಾಮಕಾರಿಯಾದ ಸ್ಕ್ರಬ್ ಆಗಿ ಗುರುತಿಸಲ್ಪಟ್ಟಿದೆ. ಚಳಿಗಾಲದಲ್ಲಿ ನಿಮ್ಮ ಮಾಮೂಲಿ ಸ್ಕಿನ್ ಕೇರ್ ಉತ್ಪನ್ನಗಳನ್ನು ಬಳಸಬೇಡಿ. ಇದರಿಂದ ತ್ವಚೆಯು ತುರಿಕೆ ಮತ್ತು ಕಿರಿಕಿರಿಯ ಅನುಭವ ನೀಡುತ್ತದೆ. ಇಲ್ಲಿ ನಾವು ನಿಮಗಾಗಿ ಕೆಲವೊಂದು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಸಾಲ್ಟ್ ಬಾಡಿ ಸ್ಕ್ರಬ್‌ಗಳ ರೆಸಿಪಿಯನ್ನು ನೀಡುತ್ತಿದ್ದೇವೆ ತಿಳಿದುಕೊಂಡು ನೀವು ತಯಾರಿಸಿ.

ರೋಸ್‍ಮೇರಿ ಆಯಿಲ್ ಸ್ಕ್ರಬ್:

Salt body scrub recipes for winter

1 1/4 ಕಪ್ ಒರಟಾದ ಉಪ್ಪನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ. ಇದಕ್ಕೆ 1/4 ಕಪ್ ತೆಂಗಿನ ಎಣ್ಣೆ ಮತ್ತು 6 ತೊಟ್ಟು ರೋಸ್‍ಮೇರಿ ಎಣ್ಣೆಯನ್ನು ಹಾಕಿ. ಇದನ್ನು ಚೆನ್ನಾಗಿ ಕಲೆಸಿಕೊಟ್ಟು, ಒಂದು ಗಾಳಿಯಾಡದ ಜಾರ್‌ನಲ್ಲಿ ಹಾಕಿಡಿ. ಇದೊಂದು ಸರಳವಾದ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ಸಾಲ್ಟ್ ಬಾಡಿ ಸ್ಕ್ರಬ್ ರೆಸಿಪಿಯಾಗಿದೆ. ರೋಸ್‌ಮೇರಿಯಂತಹ ಉದ್ದೀಪಕವು ನಿಮ್ಮ ತ್ವಚೆಯನ್ನು ಎಕ್ಸ್‌ಫೋಲಿಯೇಟ್ ಮಾಡುತ್ತದೆ.

ಹರ್ಬಲ್ ಸ್ಕ್ರಬ್


1 1/2 ಕಪ್ ಎಪ್ಸಂ ಸಾಲ್ಟ್, 3/4 ಕಪ್ ಬೇಕಿಂಗ್ ಸೋಡಾ ಮತ್ತು 3/4 ನುಣ್ಣಗೆ ರುಬ್ಬಿಕೊಂಡ ಗಿಡಮೂಲಿಕೆಗಳ ಪುಡಿಯನ್ನು ಒಟ್ಟಿಗೆ ರುಬ್ಬಿಕೊಳ್ಳಿ. ಇದನ್ನು ಚೆನ್ನಾಗಿ ಬೆರೆಸಿಕೊಳ್ಳಿ ಮತ್ತು ಇದನ್ನು ಗಾಳಿಯಾಡದ ಒಂದು ಜಾಡಿಯಲ್ಲಿ ಹಾಕಿಟ್ಟುಕೊಳ್ಳಿ. ನಂತರ ದಿನವೂ ಇದನ್ನು ಬಳಸಬಹುದು. ಇದರಲ್ಲಿ ನಿಂಬೆ ಹುಲ್ಲು ಮತ್ತು ಬಾದಾಮಿ ಎಣ್ಣೆಯಿರುವಂತೆ ನೋಡಿಕೊಳ್ಳಿ. ಏಕೆಂದರೆ ನಿಂಬೆ ಹುಲ್ಲು ಆಹ್ಲಾದಕತೆಯನ್ನು ಮತ್ತು ತಾಜಾತನವನ್ನು ಒದಗಿಸುತ್ತದೆ. ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಹೆಚ್ಚಾಗಿದ್ದು ತ್ವಚೆಯನ್ನು ಮೃದು ಮತ್ತು ಕೋಮಲವನ್ನಾಗಿಸುತ್ತದೆ.

ಅಲೋವಿರಾ ಸ್ಕ್ರಬ್


2 ಕಪ್ ಸಮುದ್ರ ಉಪ್ಪನ್ನು, 1 1/3 ಕಪ್ ಅಲೋವಿರಾ ಎಣ್ಣೆ ಮತ್ತು 2 ಟೇಬಲ್ ಚಮಚ ಜೇನುತುಪ್ಪದೊಂದಿಗೆ ಬೆರೆಸಿ. ಒಂದು ಗಾಳಿಯಾಡದ ಜಾಡಿಯಲ್ಲಿ ಹಾಕಿಡಿ. ಇದಕ್ಕೆ 8 ವಿಟಮಿನ್ ಇ ಕ್ಯಾಪ್ಸುಲ್‌ಗಳನ್ನು ತೆಗೆದು ಆ ಪುಡಿಯನ್ನು ಇದಕ್ಕೆ ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಸಣ್ಣ ಪ್ರಮಾಣದಲ್ಲಿ ಕ್ರೀಮ್‍ನಷ್ಟು ಮಾತ್ರ ಬಳಸಿ. ಅದನ್ನೆ ತ್ವಚೆಯ ಎಲ್ಲಾ ಭಾಗಕ್ಕು ಲೇಪಿಸಿಕೊಳ್ಳಿ. ನಂತರ ತಪ್ಪದೆ ಚೆನ್ನಾಗಿ ತೊಳೆಯಿರಿ.

ಆಲೀವ್ ಆಯಿಲ್ ಸ್ಕ್ರಬ್


ಸಮುದ್ರದ ಉಪ್ಪು ಮತ್ತು ಎಕ್ಸ್‌ಟ್ರಾ ವರ್ಜಿನ್ ಆಲೀವ್ ಆಯಿಲ್ ಅನ್ನು ಒಂದು ಬಟ್ಟಲಿನಲ್ಲಿ ಹಾಕಿಕೊಳ್ಳಿ. ಉಪ್ಪು ಈ ಎಣ್ಣೆಯಲ್ಲಿ ಕರಗಲು ಬಿಡಿ. ಇದರ ಮೂಲಕ ಇಡೀ ದೇಹಕ್ಕೆ ಸ್ಕ್ರಬ್ ಮಾಡಿಕೊಳ್ಳಬಹುದು. ಇದಾದ ಮೇಲೆ ಒಂದು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಈ ಸ್ಕ್ರಬ್ ಚಳಿಗಾಲದಲ್ಲಿ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ. ದೇಹದ ದುರ್ವಾಸನೆಗೆ ನೈಸರ್ಗಿಕ ಪರಿಹಾರ

ಪುದಿನಾ ಎಣ್ಣೆ ಸ್ಕ್ರಬ್


ಪುದಿನಾದ ಹುರುಪು ಮತ್ತು ಉಪ್ಪಿನಿಂದ ದೊರೆಯುವ ಹೊಳಪು ರೋಸ್‍ಮೇರಿಯ ಗುಣಗಳು ಸಮತೋಲನದಿಂದ ಕೂಡಿ ಈ ಸ್ಕ್ರಬ್ಬನ್ನು ಒಂದು ಒಳ್ಳೆಯ ಸೌಂದರ್ಯವರ್ಧಕವಾಗಿಸುತ್ತದೆ. ಒಂದು ಕಪ್ ಆಲೀವ್ ಎಣ್ಣೆ ಮತ್ತು 1/4 ಕಪ್ ಲಿಕ್ವಿಡ್ ಗ್ಲಿಸೆರಿನ್ ಸೋಪನ್ನು ಒಂದು ಪಾತ್ರೆಯಲ್ಲಿ ಹಾಕಿ ಬೆಚ್ಚಗಾಗುವವರೆಗೆ ಕಾಯಿಸಿ. ಇದಕ್ಕೆ 2 ಕಪ್ ಸಮುದ್ರ ಉಪ್ಪು ಮತ್ತು 5 ಡ್ರಾಪ್ ರೋಸ್‍ಮೇರಿ ಮತ್ತು ಪುದಿನಾ ಎಣ್ಣೆಯನ್ನು ಹಾಕಿ. ನಂತರ ಇದನ್ನು ತಣ್ಣಗಾಗಲು ಬಿಡಿ. ಈ ಸ್ಕ್ರಬ್ ನಿಜಕ್ಕು ನಿಮಗೆ ಒಳ್ಳೆಯ ಪ್ರಯೋಜನಗಳನ್ನು ನೀಡುತ್ತದೆ.
English summary

Salt body scrub recipes for winter

During winter, we have a gala time enjoying the pleasant climate. But how about your skin? Does it also like the winter season? It will if you follow your own homemade salt body scrub recipes. The winter makes the skin dry, rough and scaly. Salt body scrub recipes are the ideal ones for smooth, glowing skin
Story first published: Monday, January 26, 2015, 15:01 [IST]
X
Desktop Bottom Promotion