For Quick Alerts
ALLOW NOTIFICATIONS  
For Daily Alerts

ವಾಕ್ಸಿಂಗ್ ಬಂಪ್ಸ್ ಅನ್ನು ನಿವಾರಿಸುವ ಸಲಹೆಗಳು

By Poornima heggade
|

ಇಂದಿನ ಯುಗದಲ್ಲಿ ಎಲ್ಲವೂ ಸುಲಭದಲ್ಲಿ ಆಗಬೇಕು ಹಾಗೂ ಅದಕ್ಕೆ ತಕ್ಕಂತೆ ಸಾಧನಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ಹಾಗಾಗಿ ಎಲ್ಲರೂ ಯಾವುದು ಹೆಚ್ಚು ಸುಲಭದಲ್ಲಿ ಆಗುತ್ತದೋ ಅದನ್ನೇ ಮಾಡುತ್ತಾರೆ. ಮಹಿಳೆಯರು ಕೂದಲು ತೆಗೆಯುವ ಬಗ್ಗೆ ಬಹಳ ಕಾಳಜಿ ತೆಗೆದುಕೊಳ್ಳುತ್ತಾರೆ. ದೇಹದಲ್ಲಿನ ಅನಗತ್ಯ ಕೂದಲು ತೆಗೆಯುವ ಹಲವು ಸುಲಭ ದಾರಿಗಳು ಇಂದು ಲಭ್ಯವಿವೆ.

ಅವುಗಳಲ್ಲಿ ವಾಕ್ಸಿಂಗ್ ಕೂಡ ಒಂದು ಮತ್ತು ಬಹಳ ಪ್ರಸಿದ್ಧ ಮತ್ತು ಸುಲಭ. ಇದು ಅತ್ಯಂತ ಸುಲಭದ ದಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ ಆದರೆ ಇದನ್ನು ಬಳಸುವಾಗ ಇದರ ಹಲವು ಅಡ್ಡ ಪರಿಣಾಮಗಳೂ ಇದರೊಂದಿಗೇ ಬರುತ್ತವೆ. ವಾಕ್ಸ್ ಬಂಪ್ಸ್ (ಗುಳ್ಳೆಗಳು) ಅಥವಾ ಗುಳ್ಳೆಗಳು ಇದರ ಸಾಮಾನ್ಯ ಅಡ್ಡ ಪರಿಣಾಮವಾಗಿದೆ.

Ways to avoid waxing bumps

ಹೆಚ್ಚಿನ ಸಮಯದಲ್ಲಿ ವಾಕ್ಸ್ ಬಂಪ್ಸ್ ನೋವನ್ನು ತರುವುದಿಲ್ಲ. ಆದರೆ ಕೆಲವು ಬಾರಿ ಇದು ನೋವನ್ನು ತರುತ್ತವೆ ಹಾಗೂ ಕಿರಿಕಿರಿ ಉಂಟುಮಾಡುತ್ತವೆ. ಇವುಗಳು ಉಂಟಾಗಲು ಹಲವು ಕಾರಣಗಳಿರಬಹುದು. ಇದರಲ್ಲಿನ ರಾಸಾಯನಿಕಗಳಿಗೆ ನಮ್ಮ ದೇಹ ಪ್ರತಿಕ್ರಿಯೆ ಮಾಡುವುದರಿಂದ ಹಾಗಾಗಬಹುದು. ಉಷ್ಣತೆ ಮತ್ತಿತರ ಕಾರಣಗಳೂ ಇವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಳಿಗಾಲದಲ್ಲಿ ಯುವ ಜನತೆಗಾಗಿ ಸೌಂದರ್ಯದ ಟಿಪ್ಸ್

ಇವು ಬಿಟ್ಟು ಬೇರೆ ಕಾರಣಗಳಾದರೆ ವಾಕ್ಸಿಂಗ್ ಬಂಪ್ಸ್ ನಿವಾರಕಗಳು ನಿಮಗೆ ಸಹಾಯ ಮಾಡಬಹುದು. ಅವುಗಳೆಂದರೆ :

1.ಮೃದುವಾಗಿ ತೊಳೆಯುವುದು: ವಾಕ್ಸಿಂಗ್ ಆದ ಬಳಿಕ ನೀವು ಕೊಡಬೇಕಾಗಿರುವ ಮೊದಲ ಗಮನ ತೊಳೆಯುವುದರ ಮೇಲೆ. ವಾಕ್ಸಿಂಗ್ ಆದ ಬಳಿಕ ಬಹಳ ಜೋರಾಗಿ ವಾಕ್ಸಿಂಗ್ ಆದ ಜಾಗವನ್ನು ತೊಳೆಯಬೇಡಿ. ನಿಧಾನಕ್ಕೆ ಆ ಜಾಗವನ್ನು ಸ್ವಚ್ಛಗೊಳಿಸಿ. ಇದು ಬಂಪ್ಸ್ ಉಂಟಾಗಲು ಪ್ರಮುಖ ಕಾರಣವಾಗಿದೆ.

2.ಹತ್ತಿ ಬಳಕೆ: ಹತ್ತಿ ಬಟ್ಟೆಯನ್ನು ಬಳಸುವುದು ನೀವು ಮಾಡಬೇಕಾಗಿರುವ ಮುಂದಿನ ಕೆಲಸವಾಗಿದೆ. ವಾಕ್ಸ್ ಮಾಡಿದ ಜಾಗವನ್ನು ಹತ್ತಿ ಬಟ್ಟೆಯಿಂದ ಸುತ್ತಿ. ಇದಕ್ಕೆ ಯಾವುದೇ ರೀತಿಯ ಧೂಳಿನ ಸಂಪರ್ಕವಾಗುವುದನ್ನು ತಪ್ಪಿಸಿ. ಇದು ಒಂದು ಪ್ರಮುಖ ವಾಕ್ಸಿಂಗ್ ಬಂಪ್ಸ್ ತಂತ್ರ.

3.ಬಂಪ್ಸ್ ಆಗುವ ಜಾಗವನ್ನು ಗಮನಿಸಿ: ಬಂಪ್ಸ್ ನಿವಾರಣೆಗೂ ಮುನ್ನ ಆ ಜಾಗವನ್ನು ಸರಿಯಾಗಿ ಗಮನಿಸಿ ನೋಡಿ. ವಾಕ್ಸಿಂಗ್ ಆದ ಮೇಲೆ ಬಹಳ ಬಿಸಿ ಇರುವ ಕಡೆಗೆ ಹೋಗದೇ ಇದ್ದಲ್ಲಿ ಒಳ್ಳೆಯದು. ಓವನ್ ನಂತಹ ಸಾಧನಗಳ ಬಳಿಗೆ ಹೋಗದಿರಿ.

4.ನಾನ್ ಪ್ರಿಸ್ಕ್ರಿಪ್ಷನ್ ಔಶಧಿಗಳು : ನಾನ್ ಪ್ರಿಸ್ಕ್ರಿಪ್ಶನ್ ಅಥವಾ ಸೂಚಿಸದ ಔಷಧಗಳನ್ನು ವಾಕ್ಸಿಂಗ್ ಬಂಪ್ಸ್ ನಿವಾರಣೆಗೆ ಬಳಸಿ. ಇವುಗಳು ಬಹಳ ಲಾಭದಾಯಕ. ಇದು ವಾಕ್ಸಿಂಗ್ ನಿಂದಾದ ನೋವನ್ನೂ ನಿವಾರಿಸುತ್ತದೆ.

5.ಆದ್ರ ಗೊಳಿಸಿ: ನಿಮ್ಮ ಚರ್ಮವನ್ನು ಒದ್ದೆ ಮಾಡುತ್ತಿರುವುದು ವಾಕ್ಸಿಂಗ್ ಬಂಪ್ಸ್ ನಿವಾರಣೆಗೆ ಬಹಲ ಲಾಭದಾಯಕ. ಮಾಶ್ಚುರೈಸಿಂಗ್ ಕ್ರೀಮ್ ಅನ್ನು ಚರ್ಮದ ಮೇಲೆ ಹಚ್ಚುವುದು ಬಹಳ ಲಾಭದಾಯಕ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಜೆಟ್‌ನಲ್ಲಿ ಬರುವ 9 ಸೌಂದರ್ಯ ಟಿಪ್ಸ್‌ಗಳು

6.ವಾಕ್ಸ್ ಆದ ನಂತರ ಹಚ್ಚುವ ವಸ್ತುಗಳು: ಮಾರುಕಟ್ಟೆಯಲ್ಲಿ ಹಲವು ವಾಕ್ಸ್ ಆದ ಬಳಿಕ ಬಳಸಬಹುದಾದ ಕ್ರೀಮ್ ಗಳು ಲಭ್ಯವಿವೆ. ಇವುಗಳಲ್ಲಿ ನಿಮ್ಮ ತ್ವಚೆಗೆ ಸರಿಹೊಂದುವ ಯಾವುದನ್ನಾದರೂ ಆರಿಸಿ ಬಳಸಲು ಆರಂಭಿಸಿ.

7.ಸಮಸ್ಯೆಯನ್ನು ಹೇಳಿ: ವಾಕ್ಸಿಂಗ್ ಸೆಷನ್ಸ್ ಗೆ ಹೋದಾಗ ನಿಮ್ಮ ಈ ಸಮಸ್ಯೆಯನ್ನು ವಾಕ್ಸಿಂಗ್ ಮಾಡುವವರ ಬಳಿ ಹೇಳಿ. ನೀವು ಹೇಳುವ ತನಕ ಅವರಿಗೆ ಈ ವಿಷಯ ತಿಳಿಯದು. ಆಗ ಅವರು ಬೇರೆ ಏನಾದರೂ ಪ್ರಯತ್ನಿಸಬಹುದೇ ಎಂದು ಯೋಚಿಸಿ ಏನನ್ನಾದರೂ ಹೊಸತನ್ನು ಉಪಯೋಗಿಸಬಹುದು.

English summary

Ways to avoid waxing bumps

Ways to avoid waxing bumps
X
Desktop Bottom Promotion