For Quick Alerts
ALLOW NOTIFICATIONS  
For Daily Alerts

ತ್ವಚೆಯ ಸುಟ್ಟ ಗಾಯ ಹೋಗಲಾಡಿಸಲು ಇಲ್ಲಿದೆ ಸುಲಭ ಉಪಾಯ!

|

ನಿಮ್ಮ ದೈನಂದಿನ ಜೀವನದಲ್ಲಿ ಸಣ್ಣ ಪುಟ್ಟ ಬರ್ನ್‌ಗಳು ಉಂಟಾಗುತ್ತಿರುತ್ತವೆ. ನೀವು ಮಧ್ಯಾಹ್ನದಡುಗೆ ಮಾಡುತ್ತಿರುವಾಗ ನಿಮ್ಮ ಕೈಗೆ ಸುಟ್ಟ ಗಾಯಗಳು ಹೆಚ್ಚು ಸಂಭವಿಸುತ್ತಲೇ ಇರುತ್ತದೆ. ಇದು ಸಾಮಾನ್ಯವಾಗಿ ಉಂಟಾಗುತ್ತಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ನಮಗೆ ಹೀಗೆ ಸುಟ್ಟ ಗಾಯಗಳು ಸಂಭವಿಸುತ್ತಲೇ ಇರುತ್ತದೆ. ಬೆಂಕಿಯಂದ ಉಂಟಾಗುವ ಸುಟ್ಟ ಗಾಯ ಕೂಡ ತುಂಬಾ ಅಪಾಯಕರವಾಗಿರುತ್ತದೆ. ಸುಟ್ಟ ಗಾಯಗಳಿಗೆ ಚಿಕಿತ್ಸೆಯನ್ನು ತುರ್ತಾಗಿ ಮಾಡಬೇಕು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಂಬೆ ಫೇಸ್ ಪ್ಯಾಕ್‌ನ ಮಹತ್ವವೇನು ?

ಸುಟ್ಟ ಗಾಯಗಳಾದ ಸಂದರ್ಭದಲ್ಲಿ ಅದಕ್ಕೆ ತಕ್ಕದಾದ ಸೂಕ್ತ ಚಿಕಿತ್ಸೆಯನ್ನು ನಾವು ಮಾಡಬೇಕು. ಸುಟ್ಟ ಗಾಯಕ್ಕೆ ಸರಿಯಾದ ಆರೈಕೆಯನ್ನು ನಾವು ಮಾಡಿದ್ದೇವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಹೆಚ್ಚಿನ ಜನರು ಸುಟ್ಟ ಗಾಯಗಳನ್ನು ನಿವಾರಿಸಲು ಟೂತ್‍‌ಪೇಸ್ಟ್ ಅನ್ನು ಬಳಸುತ್ತಾರೆ.

Toothpaste Can Treat Skin Burns?

ಯಾವಾಗ ಮತ್ತು ಹೇಗೆ ಟೂತ್‌ಪೇಸ್ಟ್ ಅನ್ನು ಬಳಸಬೇಕು ಎಂಬುದು ನಿಮಗೆ ತಿಳಿದಿರಬೇಕು. ಕೈಗೆ ಸುಟ್ಟ ಗಾಯಗಳಾದಾಗ ನಿರ್ದಿಷ್ಟ ಟೂತ್‌ಪೇಸ್ಟ್ ಅನ್ನೇ ಬಳಸಬೇಕು. ಎಲ್ಲ ಟೂತ್‌ಪೇಸ್ಟ್ ಅನ್ನು ಗಾಯಗಳ ಉಪಶಮನಕ್ಕಾಗಿ ಬಳಸುವಂತಿಲ್ಲ. ಟೂತ್‌ಪೇಸ್ಟ್ ಬಳಸಿ ತ್ವಚೆಯ ಸುಟ್ಟ ಗಾಯಗಳನ್ನು ನಿವಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಉರಿಯನ್ನು ಶಮನ ಮಾಡಲು ತಂಪು ನೀರು:
ಸುಟ್ಟ ಗಾಯಕ್ಕೆ ಟೂತ್‌ಪೇಸ್ಟ್ ಹಚ್ಚುವ ಮುನ್ನ, ನಿಮ್ಮ ಕೈಗಳನ್ನು ತಂಪು ನೀರಿಗೆ ಹಿಡಿದುಕೊಳ್ಳಿ. ನಿಮ್ಮ ಪ್ರಥಮ ಚಿಕಿತ್ಸೆ ಇಲ್ಲಿಂದ ಪ್ರಾರಂಭವಾಗಲಿ. ನಿಮಗೆ ಸುಟ್ಟ ಗಾಯಗಳಾದಾಗ, ತಂಪು ನೀರು ಮಾತ್ರವೇ ಉರಿಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಚರ್ಮವನ್ನು ತಂಪು ಮಾಡುವುದಲ್ಲದೆ ಉರಿಯನ್ನು ಕೂಡ ತಂಪು ನೀರು ನಿವಾರಿಸುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ದೇಹಕ್ಕೆ ಸೂಕ್ತ ಮನೆಯಲ್ಲಿಯೇ ತಯಾರಿಸುವ 11 ಸ್ಕ್ರಬ್!

ಟೂತ್‌ಪೇಸ್ಟ್ ಬಳಸಿ:
ತಂಪು ನೀರಿಗೆ ನಿಮ್ಮ ಕೈಗಳನ್ನು ಹಿಡಿದ ನಂತರ, ಸುಟ್ಟ ಗಾಯವನ್ನು ಆರೈಕೆ ಮಾಡಲು ಟೂತ್‌ಪೇಸ್ಟ್ ಅನ್ನು ಬಳಸುವುದು ಮುಂದಿನ ಹಂತವಾಗಲಿ. ಹಳೆಯ ಟೂತ್‌ಪೇಸ್ಟ್ ಅನ್ನು ಬಳಸುವುದು ಇದಕ್ಕೆ ಸುಲಭ ಉಪಾಯವಾಗಿದೆ. ನಿಮ್ಮ ನೋವನ್ನು ನಿವಾರಿಸಲು ಉರಿಯನ್ನು ಹೋಗಲಾಡಿಸಲು ಟೂತ್‌ಪೇಸ್ಟ್ ಅತ್ಯುತ್ತಮ. ಇದು ತಂಪಿನ ಅನುಭವವನ್ನು ನಿಮಗೆ ಉಂಟುಮಾಡುತ್ತದೆ. ಬೆಣ್ಣೆ, ಎಣ್ಣೆ ಮುಂತಾದ ವಸ್ತುಗಳನ್ನು ಸುಟ್ಟ ಗಾಯಕ್ಕೆ ಬಳಸದಿರಿ. ಗಾಯಕ್ಕೆ ಬ್ಯಾಂಡೇಜ್ ಹಾಕಿ ಅದನ್ನು ಬಂಧಿಸದಿರಿ ಇದರಿಂದ ನಿಮ್ಮ ನೋವು ಉಲ್ಭಣಗೊಳ್ಳುವ ಸಾಧ್ಯತೆ ಹೆಚ್ಚು.

ವೈದ್ಯರನ್ನು ಭೇಟಿ ಮಾಡಿ:
ನಿಮ್ಮ ಸುಟ್ಟ ಗಾಯಗಳಿಗೆ ಪ್ರಥಮ ಚಿಕಿತ್ಸೆಯನ್ನು ನೀವು ಮಾಡಿದ ನಂತರ, ತಜ್ಞರ ಸಲಹೆಯನ್ನು ಪಡೆಯಬೇಕಾದ್ದು ಅತ್ಯವಶ್ಯಕ. ಪ್ರಥಮ ಚಿಕಿತ್ಸೆಯ ನಂತರ ವೈದ್ಯರನ್ನು ಭೇಟಿ ಮಾಡುವುದು ನಿಮ್ಮ ಅತೀ ಅಗತ್ಯವಾದ ಕರ್ತವ್ಯವಾಗಿದೆ. ತುಂಬಾ ಸೂಕ್ಷ್ಮ ಪ್ರದೇಶಗಳನ್ನು ಸುಟ್ಟ ಗಾಯ ಆವರಿಸಿದ್ದರೆ, ಗಾಯಗಳನ್ನು ಉಪಶಮನಿಸಲು ನೀವು ತುರ್ತಾಗಿ ಹತ್ತಿರದ ಆಸ್ಪತ್ರೆ ಅಥವಾ ವೈದ್ಯರನ್ನು ಭೇಟಿ ಮಾಡಲೇಬೇಕು.

English summary

Toothpaste Can Treat Skin Burns?

There are a lot of minor burns that you experience in your day to day life. You may be preparing lunch and suddenly your hands get burned while cooking. This is pretty common for those who love to cook or have to cook.
X
Desktop Bottom Promotion