For Quick Alerts
ALLOW NOTIFICATIONS  
For Daily Alerts

ಬಜೆಟ್‌ನಲ್ಲಿ ಬರುವ 9 ಸೌಂದರ್ಯ ಟಿಪ್ಸ್‌ಗಳು

By Hemanth P
|

ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿ ಪ್ರಕ್ಷುಬ್ದವಾಗಿರುತ್ತದೆ. ಈ ವೇಳೆ ವೆಚ್ಚ ಕಡಿಮೆ ಮಾಡಿ ಜೀವನದ ಶೈಲಿ ಬದಲಾಯಿಸಬೇಕಾಗುತ್ತದೆ. ನಿಮ್ಮ ಬಜೆಟ್ ತುಂಬಾ ಬಿಗಿಯಾಗಿದ್ದರೆ ಆಗ ನೀವು ಹಣ ಖರ್ಚು ಮಾಡುವಾಗ ಕೆಲವೊಂದು ಕಟು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

ಇಂತಹ ಬಿಗಿ ಪರಿಸ್ಥಿತಿಯಲ್ಲಿ ಮಹಿಳೆಯರನ್ನು ಅತಿಯಾಗಿ ಕಾಡುವ ವಿಷಯವೆಂದರೆ ಅವರ ಸೌಂದರ್ಯವನ್ನು ನಿರ್ವಹಿಸುವುದು. ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಿಮಗೆ ನೆರವಾಗುವಂತಹ ಬಜೆಟ್ ಬ್ಯೂಟಿ ಟಿಪ್ಸ್ ಗಳು ಇಲ್ಲಿವೆ.

ನಿಮ್ಮ ಬಜೆಟ್ ಗೆ ತುಂಬಾ ದುಬಾರಿಯಾಗಬಲ್ಲ ಬ್ರಾಂಡೆಡ್ ಕಾಸ್ಮೆಟಿಕ್ ಮತ್ತು ತ್ವಚೆಯ ಆರೈಕೆಯ ಉತ್ಪನ್ನಗಳನ್ನು ಬಳಸುವ ಹವ್ಯಾಸ ಹೊಂದಿರಬಹುದು. ಇದು ನಿಮಗೆ ತುಂಬಾ ನೆರವಾಗಬಹುದು. ಆದರೆ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಇದು ಕೈಗೆಟಕುವಂತಹದಲ್ಲ.

ಇಂತಹ ಪರಿಸ್ಥಿತಿಯಲ್ಲಿ ನೀವು ಸುಲಭವಾಗಿ ಸಿಗುವ ಅಗ್ಗದ ಸೌಂದರ್ಯ ಸಾಧನಗಳನ್ನು ಬಳಸಬೇಕು. ನೀವು ಹೂಡಿಕೆ ಮಾಡುವ ಮೊದಲು ಉತ್ತಮವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಿ. ವೆಚ್ಚ ಕಡಿತಕ್ಕೆ ನೆರವಾಗುವಂತಹ ಕೆಲವೊಂದು ಅತ್ಯಗತ್ಯ ಸೌಂದರ್ಯ ಟಿಪ್ಸ್ ಗಳ ಬಗ್ಗೆ ಇಲ್ಲಿ ಓದಿ. ನಿಮಗೆ ನೆರವಾಗುವಂತಹ ಬಜೆಟ್ ಬ್ಯೂಟಿ ಟಿಪ್ಸ್‌ಗಳು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೈಸರ್ಗಿಕ ಸೌಂದರ್ಯ ಸಲಹೆಗಳು

ಅಡುಗೆ ಸೋಡಾ ಬಳಸಿ

ಅಡುಗೆ ಸೋಡಾ ಬಳಸಿ

ಮನೆಗಳಲ್ಲಿ ಸಾಮಾನ್ಯವಾಗಿರುವಂತಹ ಈ ಸಾಧನವು ಪ್ರತಿಯೊಂದು ಅಡುಗೆ ಮನೆಯಲ್ಲಿ ಲಭ್ಯವಾಗುತ್ತದೆ ಮತ್ತು ಇದನ್ನು ತುಂಬಾ ಪರಿಣಾಮಕಾರಿ ಮುಖದ ಶುದ್ದೀಕರಣಗೊಳಿಸಲು ಬಳಸಬಹುದು. ದುರ್ಗಂಧ ಬೀರುವ ಕಾಲುಗಳಿಗೂ ಇದನ್ನು ಬಳಸಬಹುದು.

ಸ್ಟ್ರಾಬೆರಿಯಿಂದ ಮೊಡವೆ ಕಡಿಮೆ ಮಾಡಿ

ಸ್ಟ್ರಾಬೆರಿಯಿಂದ ಮೊಡವೆ ಕಡಿಮೆ ಮಾಡಿ

ಸ್ಯಾಲಿಸಿಲಿಕ್ ಆಮ್ಲದಿಂದ ಸಮೃದ್ಧವಾಗಿರುವ ಸ್ಟ್ರಾಬೆರಿ ಪೇಸ್ಟ್ ಮೊಡವೆ ನಿವಾರಿಸಲು ಅತ್ಯಂತ ಅಗ್ಗ ಮತ್ತು ಸುಲಭವಾಗಿ ಸಿಗುವ ಸೌಂದರ್ಯದ ಐಡಿಯಾ. ಮುಖಕ್ಕೆ ಸ್ಟ್ರಾಬೆರಿ ಪೇಸ್ಟ್ ಹಚ್ಚಿ 15 ನಿಮಿಷ ಹಾಗೆ ಬಿಟ್ಟರೆ ಒಳ್ಳೆಯ ಫಲಿತಾಂಶ ಪಡೆಯಬಹುದು.

ಬಟಾಟೆಯ ಕಣ್ಣಿನ ಕ್ರೀಮ್

ಬಟಾಟೆಯ ಕಣ್ಣಿನ ಕ್ರೀಮ್

ಬಟಾಟೆ ಬಳಸಿಕೊಂಡು ನೀವು ಕಣ್ಣಿನ ಸುತ್ತಲು ಇರುವ ಬೊಜ್ಜು ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡಬಹುದು. ಬಟಾಟೆ ತುಂಡುಗಳನ್ನು ಮಾಡಿ ಅಥವಾ ಪೇಸ್ಟ್ ಮಾಡಿಕೊಂಡು ಬಳಸಿದರೆ ಅದು ಒಳ್ಳೆಯ ಬಜೆಟ್ ಬ್ಯೂಟಿ ಟಿಪ್ಸ್.

ಚಾ ಶುದ್ಧೀಕರಣ

ಚಾ ಶುದ್ಧೀಕರಣ

ಗ್ರೀನ್ ಟೀ ನಿಮ್ಮ ತ್ವಚೆಯಯನ್ನು ಶುದ್ದೀಕರಿಸಲು ಮತ್ತು ಹೊಳಪು ನೀಡಲು ಇದು ಅತ್ಯುತ್ತಮ ವಸ್ತು. ಅಗ್ಗದ ಸೌಂದರ್ಯ ಐಡಿಯಾಗಳಲ್ಲಿ ಇದು ತುಂಬಾ ಕಡಿಮೆ ವೆಚ್ಚದ್ದು ಮತ್ತು ಮನೆಯಲ್ಲೇ ಇದನ್ನು ಮಾಡಬಹುದು.

ನಿಂಬೆಯ ಶಕ್ತಿ

ನಿಂಬೆಯ ಶಕ್ತಿ

ಕೆಲವು ನಿಮಿಷಗಳ ಕಾಲ ನಿಂಬೆಯ ರಸದಲ್ಲಿ ಬೆರಳುಗಳನ್ನು ಅದ್ದಿಡುವ ಮೂಲಕ ಉಗುರುಗಳಲ್ಲಿ ಇರುವ ಹಳದಿ ಕಲೆ ತೆಗೆದುಹಾಕಬಹುದು. ನಿಮ್ಮ ಕೈಗಳಿಗೆ ಒಳ್ಳೆಯ ಮೊಶ್ಚಿರೈಸರ್ ಗಳನ್ನು ಬಳಸಿ, ನಿಂಬೆ ರಸ ಬಳಸುವುದರಿಂದ ಚರ್ಮವು ಒಣಗಿ ಹೋಗಬಹುದು.

ಸಕ್ಕರೆ ಸ್ಕ್ರಬ್

ಸಕ್ಕರೆ ಸ್ಕ್ರಬ್

ಬಜೆಟ್ ನಲ್ಲಿ ಬರುವ ಸೌಂದರ್ಯ ಟಿಪ್ಸ್ ನಲ್ಲಿ ಸಕ್ಕರೆಯನ್ನು ನೈಸರ್ಗಿಕವಾಗಿ ದೇಹಕ್ಕೆ ಸ್ಕ್ರಬ್ ಆಗಿ ಬಳಸಬಹುದು. ಸಕ್ಕರೆಯಲ್ಲಿರುವ ಕ್ರಿಸ್ಟಲ್ ಗಳು ಸತ್ತಜೀವಕೋಶಗಳನ್ನು ತೆಗೆದುಹಾಕುತ್ತದೆ ಮತ್ತು ಚರ್ಮದ ವಿನ್ಯಾಸ ಸುಧಾರಿಸುತ್ತದೆ.

ಬಾಳೆಹಣ್ಣಿನ ಫೇಸ್ ಪ್ಯಾಕ್

ಬಾಳೆಹಣ್ಣಿನ ಫೇಸ್ ಪ್ಯಾಕ್

ಅಗ್ಗದ ಸೌಂದರ್ಯ ಟಿಪ್ಸ್ ಗಳಲ್ಲಿ ಬಾಳೆಹಣ್ಣು ತ್ವಚೆಯ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ. ತ್ವಚೆಯ ಆರೋಗ್ಯ ಮತ್ತು ಸೌಂದರ್ಯವನ್ನು ಹೆಚ್ಚಿಸಲು ಬಾಳೆಹಣ್ಣಿನ ಪೇಸ್ಟ್ ಮಾಡಿ ಹಚ್ಚಬಹುದು. ಇದು ತುಂಬಾ ನೈಸರ್ಗಿಕ ಮತ್ತು ಅಗ್ಗದ್ದಾಗಿದೆ.

ಜೇನು

ಜೇನು

ನೀವು ತುಂಬಾ ಅಗ್ಗದ ಸೌಂದರ್ಯ ಸಾಧನವನ್ನು ಹುಡುಕುತ್ತಿದ್ದರೆ ನಿಮ್ಮ ಅಂಗೈಗೆ ಕೆಲವು ಹನಿ ಜೇನು ಹಾಕಿಕೊಳ್ಳಿ. ಇದನ್ನು ಕೂದಲಿನ ಕಂಡಿಷನರ್ ಗೆ ಬಳಸಬಹುದು. ಇದು ಕೂದಲಿನಲ್ಲಿ ಮೊಶ್ಚಿರೈಸರ್ ಹೆಚ್ಚು ಮಾಡುತ್ತದೆ.

ಮಾಯೊ ಶಕ್ತಿ

ಮಾಯೊ ಶಕ್ತಿ

ನಿಮ್ಮ ಕೂದಲಿಗೆ ಪೋಷಕಾಂಶ, ಮೃದು ಮತ್ತು ಆರೋಗ್ಯವಾಗಿಸಲು ಮೇಯನೆಸ್ ಮಾಡಿ. ಇದು ತುಂಬಾ ಅಗ್ಗದ ಸೌಂದರ್ಯ ಟಿಪ್ಸ್. ಇದು ನಿಮ್ಮ ಫ್ರಿಡ್ಜ್ ನಲ್ಲಿ ಲಭ್ಯವಾಗುವಂತಹ ವಸ್ತು.

ಕಾಸ್ಮೆಟಿಕ್ ಮತ್ತು ಸೌಂದರ್ಯ ಉತ್ಪನ್ನಗಳಿಗೆ ಒಳ್ಳೆಯ ಬದಲಿಯಾಗಿರುವಂತಹ ಈ ಬಜೆಟ್ ಬ್ಯೂಟಿ ಟಿಪ್ಸ್ ಗಳನ್ನು ಬಳಸಿ ಮತ್ತು ಲಾಭ ಪಡೆಯಿರಿ.


English summary

Beauty Tips Under Budge

Financial conditions often are turbulent, leading to cost cuttings and a change of living. If you are on a tight budget, you need to make sound decisions in terms of spending money wisely. In such tight conditions,
Story first published: Saturday, January 18, 2014, 13:21 [IST]
X
Desktop Bottom Promotion