For Quick Alerts
ALLOW NOTIFICATIONS  
For Daily Alerts

ದ್ರಾಕ್ಷಿ ರಸದಲ್ಲಿ ಅಡಗಿರುವ 7 ಸೌಂದರ್ಯದ ರಹಸ್ಯ

By Poornima Heggade
|

ದ್ರಾಕ್ಷಿ ಹಣ್ಣುಗಳನ್ನು ವೈನ್/ ಮದ್ಯ ತಯಾರಿಸಲು ಬಳಸುತ್ತಾರೆ ಎಂಬುದು ನಮಗೆ ತಿಳಿದಿರುವ ವಿಷಯ. ಆದರೆ ಇದು ಅದ್ಭುತವಾದ ಸೌಂದರ್ಯ ಪ್ರಯೋಜನವನ್ನೂ ಹೊಂದಿದೆ ಎಂದರೆ ನಂಬುವಿರಾ? ನಂಬಲೇಬೇಕು. ಏಕೆಂದರೆ ಇವು ಆಲ್ಜಿಮರ್ (Alzheimer) ಕಾಯಿಲೆಯನ್ನು ಗುಣಪಡಿಸುವಲ್ಲಿ ನೆರವಾಗುವ ರೆಸ್ವೆರಾಟ್ರೊಲ್‌ನ ಉತ್ತಮ ಮೂಲಗಳನ್ನು ಹೊಂದಿದೆ. ಇದು ಕೊಲೆಸ್ಟರಾಲ್ ಮತ್ತು ಯೂರಿಕ್ ಆಮ್ಲವನ್ನು ಕಡಿಮೆಗೊಳಿಸಿ ಮೂತ್ರಪಿಂಡ ಮತ್ತು ಹೃದಯಕ್ಕೆ ಒಳ್ಳೆಯ ಆರೋಗ್ಯವನ್ನು ನೀಡುತ್ತದೆ ಎಂದು ಸಾಬೀತಾಗಿದೆ.

ಇದು ಉತ್ತಮ ಆರೋಗ್ಯ ಮತ್ತು ತ್ವಚೆಗಾಗಿ ಅಗತ್ಯವಿರುವ ವಿವಿಧ ಜೀವವಸತ್ವಗಳು , ಪೊಟ್ಯಾಶಿಯಂ, ಕ್ಯಾಲ್ಸಿಯಂ , ಕಬ್ಬಿಣ, ಮೊದಲಾದ ಪೋಷಕಾಂಶಗಳನ್ನು ಒಳಗೊಂಡಿದೆ. ಈ ಪೋಷಕಾಂಶಗಳು ಆರೋಗ್ಯಕರ ಜೀವನಕ್ಕೆ ಅತ್ಯುತ್ತಮ ಕೊಡುಗೆ ನೀಡಬಲ್ಲವು ಎಂಬುದು ನಿಮಗೆ ಗೊತ್ತೇ? ನೀವು ದ್ರಾಕ್ಷಿ ರಸವನ್ನು ಸೇವಿಸಿದರೆ, ನೀವು ಉತ್ತಮ ರೀತಿಯಲ್ಲಿ ಕೆಮ್ಮು, ಶೀತ ಮೊದಲಾದವುಗಳಿಂದ ಉಪಶಮನ ಪಡೆಯಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆರಾಮ ನಿದ್ದೆಗೆ ಹತ್ತು ದಾರಿಗಳು

ಕ್ಲಿನ್ಸಿಂಗ್ ಮಾಸ್ಕ್

ಕ್ಲಿನ್ಸಿಂಗ್ ಮಾಸ್ಕ್

ನಿಮ್ಮ ಮುಖಕ್ಕೆ ದ್ರಾಕ್ಷಿ ಮಾಸ್ಕ್‌ನ್ನು ಅನ್ವಯಿಸಿದರೆ ಇದು ಮುಖವನ್ನು ಸ್ವಚ್ಛ ಮತ್ತು ಸುಂದರವನ್ನಾಗಿಸುತ್ತದೆ. ಇದು ಶುಷ್ಕ, ಸಾಮಾನ್ಯ ಮತ್ತು ಸೂಕ್ಷ್ಮ ಹೀಗೆಎಲ್ಲಾ ಬಗೆಯ ತ್ವಚೆಗೂ ಸೂಕ್ತವಾಗಿದೆ. ದ್ರಾಕ್ಷಿ ರಸ ಆಂಟಿಆಕ್ಸಿಡೆಂಟ್ ಗಳಿಗೆ ಹೆಸರುವಾಸಿಯಾಗಿದೆ. ಇದು ನಿಮ್ಮ ತ್ವಚೆಯ ಕಲ್ಮಶಗಳನ್ನು ಮತ್ತು ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಲು ಮತ್ತು ತಾಜಾತನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಬಿಸಿಲಿನಿಂದ ರಕ್ಷಿಸುತ್ತದೆ

ಬಿಸಿಲಿನಿಂದ ರಕ್ಷಿಸುತ್ತದೆ

ದ್ರಾಕ್ಷಿರಸದಲ್ಲಿ ಪ್ಲವೊನೈಡ್ ಅಂಶಗಳು ಹೆಚ್ಚು. ಇದು ತ್ವಚೆಯ ಹಾನಿಯ ವಿರುದ್ಧ ರಕ್ಷಿಸಲು ಮತ್ತು ಸೂರ್ಯನ ವಿಕಿರಣಗಳಿಂದ ರಕ್ಷಿಸುತ್ತದೆ. ಇದು ಬಿಸಿಲಿನ ಶಾಖಕ್ಕೂ ಪರಿಹಾರ ನೀಡುತ್ತದೆ. ದ್ರಾಕ್ಷಿ ರಸವನ್ನು ತ್ವಚೆಗೆ ಅನ್ವಯಿಸಿದರೆ, ಬಿಸಿಲಿನ ವಿರುದ್ಧ ನೈಸರ್ಗಿಕವಾಗಿ ರಕ್ಷಣೆಯನ್ನು ನೀಡುತ್ತದೆ. ನೀವು ಸೂಕ್ಷ್ಮ ತ್ವಚೆಯನ್ನು ಹೊಂದಿದ್ದರೆ, ನೀವು ದ್ರಾಕ್ಷಿ ರಸವನ್ನು ಹಚ್ಚಿ ಇದನ್ನು ಗುಣಪಡಿಸಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ ದ್ರಾಕ್ಷಿ ರಸ ಸೂರ್ಯನ ಹಾನಿಕಾರಕ ವಿಕಿರಣದ ವಿರುದ್ಧ ನೈಸರ್ಗಿಕ ರಕ್ಷಕದಂತೆ ಕಾರ್ಯನಿರ್ವಹಿಸುತ್ತದೆ.

ನಿಮ್ಮ ತ್ವಚೆಯ ಕೊಳಕನ್ನು ಹೊರಹಾಕುತ್ತದೆ

ನಿಮ್ಮ ತ್ವಚೆಯ ಕೊಳಕನ್ನು ಹೊರಹಾಕುತ್ತದೆ

ನೀವು ದ್ರಾಕ್ಷಿ ರಸ ಸೇವಿಸಿದರೆ, ನೀವು ನಿಮ್ಮ ರಕ್ತದ ಹರಿವನ್ನು ಹೆಚ್ಚಿಸಲು ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಒಂದು ರೀತಿಯಲ್ಲಿ, ದ್ರಾಕ್ಷಿರಸದಲ್ಲಿರುವ ಕಬ್ಬಿಣದ ಅಂಶವು ಚರ್ಮಕ್ಕೆ ಅಗತ್ಯವಾದ ರಕ್ತವನ್ನು ಶುದ್ಧೀಕರಿಸುತ್ತದೆ. ನೀವು ಉತ್ತಮ ಪ್ರಮಾಣದಲ್ಲಿ ನಿಯಮಿತವಾಗಿ ಶುದ್ಧ ದ್ರಾಕ್ಷಿರಸವನ್ನು ಸೇವಿಸುತ್ತಾ ಬಂದರೆ, ನಿಮ್ಮ ಅಪಧಮನಿಗಳಲ್ಲಿ ರಕ್ತವನ್ನು ಶುದ್ಧೀಕರಿಸಿ ತ್ವಚೆಯ ಹೊಳಪನ್ನು ಹೆಚ್ಚಿಸಲು ಕಾರಣವಾಗುತ್ತದೆ. ಜೊತೆಗೆ ರಕ್ತದ ಚಲನೆಯನ್ನು ಸುಧಾರಿಸಿ ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಇಡುತ್ತದೆ.

ವಯಸ್ಸಿನ ಚಿಹ್ನೆಯನ್ನು ಹೋಗಲಾಡಿಸುತ್ತದೆ

ವಯಸ್ಸಿನ ಚಿಹ್ನೆಯನ್ನು ಹೋಗಲಾಡಿಸುತ್ತದೆ

ನೀವು ದ್ರಾಕ್ಷಿ ರಸ ಸೇವಿಸಿದರೆ ಅದು ತ್ವಚೆಯ ಹೊಳಪನ್ನು ಹೆಚ್ಚುವಂತೆ ಮಾಡುತ್ತದೆ. ನಿಮ್ಮ ಚರ್ಮದ ಮೇಲೆ ದ್ರಾಕ್ಷಿ ರಸವನ್ನು ಅನ್ವಯಿಸಿದರೆನೇ ಮುಖದಲ್ಲಿ ವಯಸ್ಸಾದ ಕಳೆಯನ್ನು ಹೋಗಲಾಡಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಇದು ಅನಗತ್ಯ/ಮೃತ ಜೀವಕೋಶಗಳನ್ನು ನಾಶಮಾಡಿ ನಿಮ್ಮ ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ರಕ್ತ ಚಲನೆಯನ್ನು ಸುಧಾರಿಸಿ, ನಿಮ್ಮ ಚರ್ಮದ ಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ನಿಮ್ಮ ತ್ವಚೆಯಲ್ಲಿ ತೇವಾಂಶವನ್ನು ಉಳಿಸಲು ದ್ರಾಕ್ಷಿ ರಸವನ್ನು ಸೇವಿಸಬೇಕು.

ತ್ವಚೆಯಲ್ಲಿ ತೇವಾಂಶ ಉಳಿಸುತ್ತದೆ

ತ್ವಚೆಯಲ್ಲಿ ತೇವಾಂಶ ಉಳಿಸುತ್ತದೆ

ದ್ರಾಕ್ಷಾರಸದ ಸೌಂದರ್ಯ ಪ್ರಯೋಜನಗಳನ್ನು ತಿಳಿದುಕೊಳ್ಳುವುದರ ಜೊತೆಗೆ ನೀವು ನಿಮ್ಮ ತ್ವಚೆಗೆ ಇದನ್ನು ಹೇಗೆ ಉಅಪಯೋಗಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.

ನಿಮ್ಮ ಮುಖಕ್ಕೆ ಒಂದು ಚಮಚ ದ್ರಾಕ್ಷಿ ರಸವನ್ನು ಅನ್ವಯಿಸಿ ಮತ್ತು 15 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ನಿಮ್ಮ ಮುಖವನ್ನು ತೊಳೆಯಿರಿ. ಇದರಿಂದ ನಿಮ್ಮ ತ್ವಚೆ ತೇವಾಂಶದಿಂದ ಉಳಿಯುತ್ತದೆ.

ಕಣ್ಣುಗಳಿಗೆ ಒಳ್ಳೆಯದು

ಕಣ್ಣುಗಳಿಗೆ ಒಳ್ಳೆಯದು

ನೀವು ನಿಮ್ಮ ಕಣ್ಣುಗಳ ಕೆಳಗೆ ಕಪ್ಪು ಕಲೆಯಿಂದ ನರಳುತ್ತಿದ್ದೀರಾ? ಹಾಗಾದರೆ ಪರಿಹಾರ ಇಲ್ಲಿದೆ. ಒಂದು ಬೀಜವಿಲ್ಲದ ದ್ರಾಕ್ಷಿಯನ್ನು ಕತ್ತರಿಸಿ ನಿಮ್ಮ ಕಣ್ಣು ರೆಪ್ಪೆಗಳ ಮೇಲೆ ಲೇಪಿಸಿ. ನಿಮ್ಮ ಕಣ್ಣಿನ ಸುತ್ತ ಇದನ್ನು ಅನ್ವಯಿಸಬಹುದು. ಈ ರೀತಿಯಲ್ಲಿ ನೀವು ಕಣ್ಣಿನ ಸುತ್ತ ಕಲೆಯನ್ನು ಸುಧಾರಿಸಲು ಮತ್ತು ಕಪ್ಪು ವಲಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಶುಷ್ಕ ಚರ್ಮವನ್ನು ಮೃದುವಾಗಿಸುತ್ತದೆ

ಶುಷ್ಕ ಚರ್ಮವನ್ನು ಮೃದುವಾಗಿಸುತ್ತದೆ

ದ್ರಾಕ್ಷಾರಸಕ್ಕೆ ಒಂದು ಚಮಚ ಮೊಟ್ಟೆಯ ಬಿಳಿ ಭಾಗವನ್ನು ಮಿಶ್ರಣ ಮಾಡಿ ನಿಮ್ಮ ಮುಖದ ಮೇಲೆ ಲೇಪಿಸಿ. ನಿಮ್ಮ ಮುಖ ತೊಳೆಯುವ ಮೊದಲು 10 ನಿಮಿಷ ಹಾಗೆಯೇ ಬಿಡಿ. ನಿಮ್ಮ ಚರ್ಮ ಶುಷ್ಕತೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತದೆ.

English summary

Beauty benefits of grape juice

Grapes, they don’t just make the fine wines for you to have but, have some amazing health and beauty benefits too. They are good sources of Resveratrol which helps in curing Alzheimer’s disease.
Story first published: Tuesday, January 21, 2014, 14:33 [IST]
X
Desktop Bottom Promotion