For Quick Alerts
ALLOW NOTIFICATIONS  
For Daily Alerts

ಸೌಂದರ್ಯ ಹೆಚ್ಚಲು ಮಾಡಿ ಕತ್ತಿನ ಆರೈಕೆ

|
Neck Care Beauty Tips
ಮುಖ ಬೆಳ್ಳಗೆ ಇದ್ದು ಕುತ್ತಿಗೆ ಕಪ್ಪಿದ್ದರೆ ನೋಡಲು ಆಕರ್ಷಕವಾಗಿ ಕಾಣುವುದಿಲ್ಲ. ಮುಖದ ಜೊತೆಗೆ ಕುತ್ತಿಗೆ ಕೂಡ ನೋಡುಗರ ಗಮನವನ್ನು ಸೆಳೆಯುತ್ತದೆ. ಆದರೆ ಸಾಕಷ್ಟು ಜನರು ಮುಖದ ಆರೈಕೆಗೆ ಕೊಡುವ ಗಮನವನ್ನು ಕುತ್ತಿಗೆಗೆ ಕೊಡುವುದಿಲ್ಲ. ಕತ್ತಿನ ಅಂದ ಚೆಲುವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದ್ದರಿಂದ ಕುತ್ತಿಗೆಯನ್ನು ಆಕರ್ಷಕವಾಗಿ ಇಟ್ಟುಕೊಳ್ಳಲು ಈ ರೀತಿ ಮಾಡಿ.

1. ಮುಖವನ್ನು ತೊಳೆಯುವಾಗ ಕುತ್ತಿಗೆಯನ್ನು ತೊಳೆಯಬೇಕು. ರಾತ್ರಿ ಮಲುಗುವಾಗ ಮುನ್ನ ಮುಖ ಮಾತ್ರವಲ್ಲ ಕುತ್ತಿಗೆಯನ್ನು ಕ್ಲೆನ್ಸ್ ಮಾಡಿ.

2. ಕುತ್ತಿಗೆಯಲ್ಲಿ ಬೆವರನ್ನು ಒರೆಸುತ್ತಾ ಇರಬೇಕು. ಬೆವರನ್ನು ಹಾಗೇ ಬಿಟ್ಟರೆ ಕುತ್ತಿಗೆ ಕಪ್ಪಾಗಿ ಕಾಣುತ್ತದೆ.

3. ಕುತ್ತಿಗೆಯನ್ನು ಹಾಲಿನಿಂದ ಕ್ಲೆನ್ಸ್ ಮಾಡಿ.

4. ಕುತ್ತಿಗೆಯನ್ನು ಸ್ಕ್ರಬ್ ಮಾಡಲು ಮೆಡಿಕಲ್ ನಲ್ಲಿ ಸಿಗುವ ಯಾವುದೇ ಬಗೆಯ ಸ್ಕ್ರಬ್ಬರ್ ಬೇಕಾದರು ಬಳಸಬಹುದು.

5. ಆಲೀವ್ ಎಣ್ಣೆಗೆ ಸ್ವಲ್ಪ ಸಕ್ಕರೆ ಹಾಕಿ ಅದನ್ನು ಪೇಸ್ಟ್ ರೀತಿ ಮಾಡಿ ಕುತ್ತಿಗೆಗೆ ವೃತ್ತಾಕಾರವಾಗಿ ಮಸಾಜ್ ಮಾಡಿ 10 ನಿಮಿಷ ಬಿಟ್ಟು ತೊಳೆಯಬಹುದು.

6. ಮೊಸರಿನ ಜೊತೆ ವಾಲ್ ನೆಟ್ ಪುಡಿ ಮಾಡಿ ಹಾಕಿ ಅದರಲ್ಲಿ ಸ್ವಲ್ಪ ನಿಂಬೆ ರಸ ಹಾಕಿ ಮಿಶ್ರ ಮಾಡಿ ಸ್ಕ್ರಬ್ ಮಾಡಿದರೆ ಉತ್ತಮ ಫಲ ಸಿಗುತ್ತದೆ.

7. ಮುಲ್ತಾನಿ ಮಿಟಿಯನ್ನು ಮುಖಕ್ಕೆ ಹಚ್ಚುವಾಗ ಕತ್ತಿನ ಭಾಗಕ್ಕೂ ಹಚ್ಚಿ.

ಈ ಎಲ್ಲಾ ಸ್ಕ್ರಬ್ ಗಳನ್ನು ರಾತ್ರಿಯಲ್ಲಿ ಮಾಡುವುದು ಒಳ್ಳೆಯದು. ಇದನ್ನು ಹಚ್ಚಿ ತೊಳೆಯದೆ ಬಿಸಿಲಿಗೆ ಹೋದರೆ ಕುತ್ತಿಗೆ ಮತ್ತಷ್ಟು ಕಪ್ಪಾಗುವುದು.

English summary

Neck Care Beauty Tips | Tips For Beauty | ಕತ್ತಿನ ಸೌಂದರ್ಯಕ್ಕೆ ಕೆಲ ಸಲಹೆ | ಸೌಂದರ್ಯಕ್ಕಾಗಿ ಕೆಲ ಸಲಹೆ

Having a dark neck is a quite common. But one can solve that problem if they take proper care on beauty. here are few tips to get rid from black colour neck.
Story first published: Friday, February 10, 2012, 14:15 [IST]
X
Desktop Bottom Promotion