For Quick Alerts
ALLOW NOTIFICATIONS  
For Daily Alerts

ಬೆಂಕಿಯ ಗಾಯ ಮಾಸಿದರೂ ಕಾಡುವ ಹಳೆ ಕಲೆಗಳು

|
Burn scars
ಯಾವುದೋ ಸಮಯದಲ್ಲಿ ಅಚಾನಕ್ ಆಗಿ ಸುಟ್ಟುಕೊಂಡಿದ್ದ ಗಾಯದ ಕಲೆ ಇನ್ನೂ ಹಾಗೇ ಉಳಿದಿದೆ. ಏನೇ ಮಾಡಿದರೂ ಕಲೆ ಮಾತ್ರ ಜಾಗ ಕದಡುತ್ತಿಲ್ಲ, ಗಾಯದ ಕಲೆ ಗುರುತು ಉಳಿದು ಏನೋ ಮುಜುಗರ ತಂದೊಡ್ಡಿರುತ್ತೆ. ಇದು ಹಲವರ ಸಮಸ್ಯೆ.ಆದರೆ ಈ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ. ಮನೆಯಲ್ಲೇ ಇರುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ಈ ಸುಟ್ಟ ಗಾಯದ ಕಲೆಗಳನ್ನು ಹೋಗಿಸಲು ಸಾಧ್ಯವಿದೆ.

ಸುಟ್ಟ ಗಾಯದ ಕಲೆ ಹೇಗೆ ತೊಲಗಿಸಬಹುದು ಎಂಬುದನ್ನು ತಿಳಿದುಕೊಳ್ಳಿ:

1. ಮುಲ್ತಾನಿ ಮಿಟ್ಟಿ, ರೋಸ್ ವಾಟರ್ ಮತ್ತು ನಿಂಬೆ ರಸ ಮಿಶ್ರಣ ತೆಳ್ಳಗೆ ಮಾಡಿಕೊಂಡು ಸುಟ್ಟ ಗಾಯದ ಕಲೆ ಮೇಲೆ 5-7 ನಿಮಿಷ ಹಾಗೇ ಒಣಗಲು ಬಿಡಬೇಕು. ನಂತರ ತಣ್ಣಗಿನ ನೀರಿನಿಂದ ತೊಳೆದುಕೊಳ್ಳಬೇಕು. ಅದನ್ನು ಉಜ್ಜಲು ಹೋಗಬಾರದು.

2. ಪುದೀನಾ ಎಲೆಯನ್ನು ರುಬ್ಬಿ ತೆಳುವಾದ ಹತ್ತಿ ಬಟ್ಟೆಗೆ ಹಾಕಿ ಸುಟ್ಟ ಗಾಯದ ಮೇಲೆ ಹಿಂಡಬೇಕು. ಸುಟ್ಟುಕೊಂಡ ತಕ್ಷಣವೇ ಇದನ್ನು ಪಾಲಿಸಿದರೆ ಉರಿಯೂ ಕಡಿಮೆಯಾಗುವುದಲ್ಲದೆ ಬೊಬ್ಬೆ ಏಳುವುದೂ ನಿಲ್ಲುತ್ತದೆ. ಕಲೆಯೂ ಉಳಿಯುವುದಿಲ್ಲ.

3. ಸುಟ್ಟ ಗಾಯಕ್ಕೆ ಕೊಬ್ಬರಿ ಎಣ್ಣೆ ಲೇಪಿಸುವುದು ಅನಾದಿ ಕಾಲದಿಂದಲೂ ನಡೆದುಬಂದಿದೆ. ದಿನಕ್ಕೆ ನಾಲ್ಕು ಬಾರಿಯಾದರೂ ಸುಟ್ಟ ಗಾಯಕ್ಕೆ ಎಣ್ಣೆ ಹಚ್ಚುತ್ತಾ ಬಂದರೆ ಕೆಲವೇ ವಾರಗಳಲ್ಲಿ ಚರ್ಮದ ಬಣ್ಣ ಮೊದಲಿನಂತಾಗುತ್ತದೆ.

4. ಲೋಳೆರಸ ಎಲ್ಲ ರೀತಿಯ ಚರ್ಮ ರೋಗಗಳಿಗೂ ಪರಿಹಾರ ನೀಡುತ್ತೆ. ಆದ್ದರಿಂದ ಸುಟ್ಟ ಗಾಯದ ಮೇಲೆ ಲೋಳೆರಸ ಲೇಪಿಸುವುದರಿಂದ ಉರಿ ಕಡಿಮೆಗೊಳಿಸಿ ಮೊದಲಿನ ಬಣ್ಣ ತಂದುಕೊಡುತ್ತದೆ.

5. ಸುಟ್ಟು ಕೊಂಡ ಕೆಲವೇ ಕ್ಷಣಗಳಲ್ಲಿ ಅಡುಗೆ ಸೋಡವನ್ನು ಹಚ್ಚುವುದರಿಂದ ಬೊಬ್ಬೆ ಇಲ್ಲದಂತಾಗಿ ಗಾಯ ಬೇಗ ವಾಸಿಯಾಗುತ್ತದೆ.

6. ಎಲ್ಲ ರೀತಿಯ ಚರ್ಮ ರೋಗಗಳನ್ನು ವಾಸಿ ಮಾಡುವ ಗುಣವಿರುವ ವಿಟಮಿನ್ ಕೆ ಇರುವ ತರಕಾರಿಗಳನ್ನು ಉಪಯೋಗಿಸುವುದರಿಂದ ಸುಟ್ಟ ಗಾಯ ಬೇಗ ಮಾಯವಾಗಿ ಕಲೆಯೂ ಉಳಿಯದಂತೆ ಮಾಡುತ್ತದೆ. ತರಕಾರಿಯ ರಸವನ್ನು ಇದರ ಮೇಲೆ ಲೇಪಿಸಿದರೆ ಅಥವಾ ಹಸಿರು ತರಕಾರಿಗಳ ಸೇವನೆಯಿಂದಲೂ ಸುಟ್ಟ ಗಾಯದ ಕಲೆ ಇಲ್ಲದಂತೆ ಮಾಡಬಹುದು.

English summary

Burn scars problem | Heal your burn scars quick | ಸುಟ್ಟ ಗಾಯ | ಸುಟ್ಟ ಗಾಯದ ಕಲೆ ಹೋಗಿಸಲು ಸಲಹೆ

The burn scar looks so deep that you almost conclude that you can never get rid of it. The fact is that burn scar is nothing but dead tissues and the natural healing process of the body. Here are some burn scars home remedies. Take a look.
Story first published: Wednesday, August 10, 2011, 17:05 [IST]
X
Desktop Bottom Promotion