For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಇಂತಹ ಆಹಾರಗಳನ್ನು ಮಿಸ್ ಮಾಡಲೇಬಾರದು!

|

ಗರ್ಭಾವಸ್ಥೆಯಲ್ಲಿರುವಾಗ ತಾಯಿ ತನ್ನ ದೇಹಕ್ಕೆ ಪೂರಕವಾದಂತೆ ಮಗುವಿನ ಬೆಳವಣಿಗೆಗೆ ಅಗತ್ಯವಾದ ಆಹಾರ ಪದಾರ್ಥಳನ್ನು ಸಹ ಸ್ವೀಕರಿಸಬೇಕು. ಇದು ಗರ್ಭಿಣಿಯ ಆರೋಗ್ಯ ರಕ್ಷಣೆಗೂ ಸಹಕರಿಸುವುದು. ಸೇವಿಸುವ ಆಹಾರ ಪದಾರ್ಥಗಳಲ್ಲಿ ಸಾಕಷ್ಟು ಗ್ಲುಕೋಸ್, ಕೊಬ್ಬು, ಪ್ರೋಟೀನ್, ಖನಿಜ ಹಾಗೂ ಜೀವಸತ್ವಗಳು ಇರಬೇಕು. ಇವು ತಾಯಿಯ ದೇಹದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಮಗುವಿನ ಬೆಳವಣಿಗೆಗೂ ಪೂರಕ ರೀತಿಯಲ್ಲಿ ಸಹಕರಿಸುತ್ತವೆ.

ಗರ್ಭಾವಸ್ಥೆಯಲ್ಲಿರುವಾಗ ತಾಯಿಯ ದೇಹದಲ್ಲಿ ಹಾರ್ಮೋನ್‍ಗಳ ಬದಲಾವಣೆಗಳು ಗಣನೀಯವಾಗಿ ಉಂಟಾಗುತ್ತಲೇ ಇರುತ್ತವೆ. ಇವು ದೇಹದಲ್ಲಿ ಕೆಲವು ಬದಲಾವಣೆಯನ್ನು ಸೃಷ್ಟಿಸುವುದಲ್ಲದೆ ನಾಲಿಗೆಯ ರುಚಿಯಲ್ಲೂ ವ್ಯತ್ಯಾಸವನ್ನುಂಟು ಮಾಡುವುದು. ಅಂತಹ ಸಮಯದಲ್ಲಿ ತಾಯಿಗೆ ವಿವಿಧ ಬಗೆಯ ವಿಭಿನ್ನ ರುಚಿಯ ಆಹಾರ ಸೇವಿಸಬೇಕೆನ್ನುವ ಬಯಕೆ ಉಂಟಾಗುವುದು.

ಬಯಕೆಯ ಕಾರಣದಿಂದ ಗರ್ಭಿಣಿ ತನ್ನ ಆಹಾರ ಕ್ರಮದಲ್ಲಿ ಭಿನ್ನತೆಯನ್ನು ಬಯಸುತ್ತಾಳೆ. ತಾಯಿ ತನ್ನ ನಾಲಿಗೆ ರುಚಿಯಲ್ಲಿ ವ್ಯತ್ಯಾಸವನ್ನು ಕಂಡುಕೊಂಡರೂ ಆಹಾರ ಸ್ವೀಕರಿಸುವಾಗ ಕೆಲವು ಸೂಕ್ತ ಆಹಾರವನ್ನು ತಪ್ಪದೆ ಸೇವಿಸಬೇಕು. ಇದು ಗರ್ಭಿಣಿಯ ಆರೋಗ್ಯ ರಕ್ಷಣೆ ಹಾಗೂ ಮಗುವಿನ ಬೆಳವಣಿಗೆಗೆ ಸಹಕರಿಸುತ್ತದೆ ಎನ್ನಲಾಗುವುದು. ಈ ಕುರಿತು ಹೆಚ್ಚಿನ ವಿವರಣೆಯನ್ನು ಮುಂದೆ ವಿವರಿಸಲಾಗಿದೆ.....

ತರಕಾರಿಗಳು

ತರಕಾರಿಗಳು

ನಿಯಮಿತವಾಗಿ ಹಸಿ ತರಕಾರಿಗಳನ್ನು ಸೇವಿಸುವುದರಿಂದ ಆರೋಗ್ಯವು ಉತ್ತಮವಾಗಿರುವುದು. ತರಕಾರಿಯನ್ನು ಸ್ವಚ್ಛವಾಗಿ ತೊಳೆಯುವುದು ಅಥವಾ ಬೇಯಿಸಿ ತಿನ್ನುವುದರಿಂದ ಸುರಕ್ಷಿತ ಆಹಾರವನ್ನು ಹೊಂದಬಹುದು. ಶುಚಿಯಾಗಿಸಿ ಸೇವಿಸುವುದರಿಂದ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕಬಹುದು.

ಹಣ್ಣುಗಳು

ಹಣ್ಣುಗಳು

ಗರ್ಭಿಣಿಯಿರುವಾಗ ವಿಶೇಷವಾಗಿ ಕಿತ್ತಳೆ ಹಣ್ಣನ್ನು ಸೇವಿಸಬೇಕು. ಇದರಲ್ಲಿ ಸಾಕಷ್ಟು ವಿಟಮಿನ್ ಸಿ ಇರುವುದರಿಂದ ಆರೋಗ್ಯಕ್ಕೆ ಅತ್ಯುತ್ತಮವಾಗಿರುತ್ತದೆ. ಸಂಸ್ಕರಿಸಿದ ಆಹಾರಗಳನ್ನು ಸೇವಿಸುವ ಬದಲು ವಿಟಮಿನ್ ಭರಿತ ಹಣ್ಣುಗಳನ್ನು ಸೇವಿಸುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ.

ಮೀನು

ಮೀನು

ಪ್ರತಿದಿನ ಒಂದು ತುಂಡು ಮೀನನ್ನು ಸೇವಿಸಬೇಕು. ಇದು ಹೇರಳವಾಗಿ ಪ್ರೋಟೀನ್‍ಗಳನ್ನು ಒಳಗೊಂಡಿರುತ್ತದೆ. ಮೀನನ್ನು ಶುಚಿಗೊಳಿಸಿ ಆಹಾರ ಪದಾರ್ಥಗಳನ್ನು ತಯಾರಿಸಬೇಕು. ಗರ್ಭಾವಸ್ಥೆಯಲ್ಲಿ ಇದು ಸುರಕ್ಷಿತವಾದ ಆರೋಗ್ಯ ಪೂರ್ಣ ಆಹಾರ ಎಂದು ಹೇಳಬಹುದು.

ಬೀಜಗಳು

ಬೀಜಗಳು

ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಒಣದ್ರಾಕ್ಷಿ, ಮಗುವಿನ ಅತ್ಯುತ್ತಮ ಬೆಳವಣಿಗೆಗೆ ಬಾದಾಮಿಯನ್ನು ಸೇವಿಸಬಹುದು. ಗೋಡಂಬಿ, ಪಿಸ್ತಾ, ಅಂಜೂರ ಸೇರಿದಂತೆ ಇನ್ನಿತರ ಒಣ ಹಣ್ಣುಗಳು ಹಾಗೂ ಬೀಜಗಳಲ್ಲಿ ಅಧಿಕ ಪ್ರಮಾಣದ ಪೋಷಕಾಂಶಗಳು ಒಳಗೊಂಡಿರುತ್ತವೆ. ನಿತ್ಯವೂ ನಿಯಮಿತವಾಗಿ ಸೇವಿಸುವುದರಿಂದ ಉತ್ತಮ ಆರೋಗ್ಯ ಹೊಂದಬಹುದು.

ಲೀನ್ ಮೀಟ್

ಲೀನ್ ಮೀಟ್

ಈ ಮಾಂಸಗಳಲ್ಲಿ ಪ್ರೋಟೀನ್‍ಗಳು ಅಧಿಕ ಪ್ರಮಾಣದಲ್ಲಿ ಇರುತ್ತದೆ. ಕೊಬ್ಬು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಲೀನ್ ಮೀಟ್ ಸೇವಿಸಬಹುದು ಎಂದು ಹೇಳಲಾಗುವುದು. ಗರ್ಭಿಣಿಯಾಗಿರುವಾಗ ಆದಷ್ಟು ಕೆಂಪು ಮಾಂಸವನ್ನು ಸೇವಿಸುವುದನ್ನು ನಿರಾಕರಿಸಿ. ಅಧಿಕ ಕೊಬ್ಬು ಹೊಂದಿರುವುದರಿಂದ ಆರೋಗ್ಯಕ್ಕೆ ಅದು ಅಷ್ಟು ಸುರಕ್ಷಿತವಾಗಿರುವುದಿಲ್ಲ.

ರಾಗಿ

ರಾಗಿ

ರಾಗಿ ಗಂಜಿ ಸೇವಿಸುವುದು ಗರ್ಭಾವಸ್ಥೆಯಲ್ಲಿ ಪರಿಪೂರ್ಣ ಆಹಾರ ಎನಿಸಿಕೊಳ್ಳುತ್ತದೆ. ಸಮೃದ್ಧವಾದ ಪ್ರೋಟೀನ್ ಹೊಂದಿರುವುದರಿಂದ ಮಗುವಿನ ಬೆಳವಣಿಗೆಗೂ ಉತ್ತಮವಾದ ಆಹಾರ ಇದು. ರಾಗಿಯನ್ನು ಹಾಲು ಅಥವಾ ನೀರನ್ನು ಸೆರಿಸಿ ಗಂಜಿ ಮಾಡಿದರೆ ಅದರ ಶಕ್ತಿಯು ದ್ವಿಗುಣವಾಗುವುದು.

ಪಾನೀಯಗಳು

ಪಾನೀಯಗಳು

ದಿನಕ್ಕೆ ಕೇವಲ ಒಂದು ಕಪ್ ಗ್ರೀನ್ ಟೀ ಸೇವಿಸಿ. ಕೃತಕ ಪಾನೀಯಗಳಿಂದ ದೂರ ಇರಬೇಕು. ಹಾಗೊಮ್ಮೆ ಬಯಕೆ ಉಂಟಾದರೆ ಆದಷ್ಟು ತಾಜಾ ಹಣ್ಣುಗಳಿಂದ ತಯಾರಿಸಿದ ಜ್ಯೂಸ್‍ಗಳನ್ನು ಸೇವಿಸಿ.

ದಿನಕ್ಕೊಂದು ಕಪ್ ಮೊಸರು

ದಿನಕ್ಕೊಂದು ಕಪ್ ಮೊಸರು

ದಿನಕ್ಕೊಂದು ಕಪ್ ಮೊಸರು ಸೇವಿಸಿ ಹೆಚ್ಚು ಖಾರವಾಗಿರುವ ಆಹಾರವನ್ನು ತಿಂದ ಬಳಿಕ ಮೊಸರನ್ನು ತಿಂದರೆ ದೇಹವು ತಂಪಾಗಿರುವುದು. ಗರ್ಭಿಣಿ ಮಹಿಳೆಯರಿಗೆ ಹೆಚ್ಚಾಗಿ ಖಾರದ ಆಹಾರವನ್ನು ತಿನ್ನಬೇಕೆಂಬ ಹಂಬಲ ಹೆಚ್ಚಿರುತ್ತದೆ. ಖಾರದ ಪದಾರ್ಥಗಳಿಂದ ಆಸಿಡಿಟಿ ಮತ್ತು ಎದೆಯುರಿ ಉಂಟಾಗಬಹುದು. ಇದರಿಂದ ಖಾರದ ಆಹಾರದ ಜತೆಗೆ ಮೊಸರನ್ನು ಸೇವಿಸುವುದು ತುಂಬಾ ಒಳ್ಳೆಯದು.

ದಿನಕ್ಕೆ ಒಂದೆರಡು ಗ್ಲಾಸ್ ಬಾರ್ಲಿ ನೀರು ಮಾಡಿ ಕುಡಿಯಿರಿ

ದಿನಕ್ಕೆ ಒಂದೆರಡು ಗ್ಲಾಸ್ ಬಾರ್ಲಿ ನೀರು ಮಾಡಿ ಕುಡಿಯಿರಿ

ಬಾರ್ಲಿ ಬಾರ್ಲಿಯಲ್ಲಿ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟುಗಳಿದ್ದು ಗರ್ಭಿಣಿಯ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಅಲ್ಲದೇ ಮಗುವಿನ ಬೆಳವಣಿಗೆಗೂ ಸಹಕರಿಸುತ್ತದೆ...

ಬಾರ್ಲಿ ನೀರನ್ನು ತಯಾರಿಸುವುದು ಹೇಗೆ? ಸುಮಾರು ಒಂದು ದೊಡ್ಡ ಚಮಚ ಬಾರ್ಲಿಯನ್ನು ತೊಳೆದು ಮೂರು ಅಥವಾ ನಾಲ್ಕು ಕಪ್ ನೀರಿನಲ್ಲಿ ಸುಮಾರು ಇಪ್ಪತ್ತು ನಿಮಿಷಗಳವರೆಗೆ ನಿಧಾನ ಉರಿಯಲ್ಲಿ ಕುದಿಸಿ ಬಳಿಕ ಹಾಗೇ ತಣಿಯಲು ಬಿಡಿ. ತಣಿದ ಬಳಿಕ ಸೋಸಿ ಇದಕ್ಕೆ ಕೊಂಚ ಲಿಂಬೆರಸವನ್ನು ಸೇರಿಸಿ. (ಉತ್ತಮ ಪರಿಣಾಮಕ್ಕೆ ಅರ್ಧ ಲಿಂಬೆ ಇದ್ದರೆ ಉತ್ತಮ, ಕೊಂಚ ಹುಳಿಯಾಗುತ್ತದೆ ಅಷ್ಟೇ). ಲಿಂಬೆಯ ಬದಲಿಗೆ ಕಿತ್ತಳೆ ರಸವನ್ನೂ ಬಳಸಬಹುದು. ಈ ನೀರನ್ನು ದಿನವೆಲ್ಲಾ ನೀರಿನ ಬದಲು ಕುಡಿಯುತ್ತಾ ಹೋಗಬೇಕು. ಪ್ರತಿ ಗಂಟೆಗೂ ಒಂದು ಚಿಕ್ಕ ಲೋಟದಷ್ಟು ಕುಡಿಯುವುದು ಇನ್ನೂ ಉತ್ತಮ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಒಂದು ದೊಡ್ಡ ಚಮಚದಷ್ಟು ಬಾರ್ಲಿಯನ್ನು ಒಂದು ಲೀಟರ್ ನೀರಿನಲ್ಲಿ ಇಡಿಯ ರಾತ್ರಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ಮತ್ತು ಸಂಜೆ ಅರ್ಧ ಅರ್ಧ ಲೀಟರ್ ಕುಡಿಯಬೇಕು.

ಕೇಸರಿ ಹಾಲು

ಕೇಸರಿ ಹಾಲು

ಮಗುವಿನ ಚಲನವಲನಗಳು ಗರ್ಭಿಣಿ ಮಹಿಳೆಯರು 5 ತಿಂಗಳ ನಂತರ ಮಗುವಿನ ಚಲನವಲನವನ್ನು ತಮ್ಮ ಹೊಟ್ಟೆಯಲ್ಲಿಯೇ ಅನುಭವಿಸಬಹುದು. ಕೇಸರಿಯನ್ನು ಹಾಲಿನಲ್ಲಿ ಬೆರೆಸಿಕೊಂಡು ಸೇವಿಸುವುದರಿಂದ ಇದರ ಪರಿಣಾಮ ಉತ್ತಮವಾಗಿರುತ್ತದೆ. ಆದರೆ ಇದು ದೇಹದ ಉಷ್ಣಾಂಶವನ್ನು ಅಧಿಕ ಮಾಡುವುದರಿಂದ, ಗರ್ಭಿಣಿಯರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳಲು ಹೋಗಬಾರದು.

ಹಸಿರು ಸೊಪ್ಪು

ಹಸಿರು ಸೊಪ್ಪು

ಹಸಿರು ಸೊಪ್ಪುಗಳಲ್ಲಿ ಸಮೃದ್ಧವಾದ ಸತುವಿನ ಅಂಶವಿರುತ್ತದೆ. ಸತುವು ಮಗುವಿನ ಅಂಗಾಂಗಗಳ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುವ ಅಂಶವಾಗಿರುತ್ತದೆ. ಪಾಲಕ್ ಸೊಪ್ಪುಗಳು, ಲೆಟ್ಯೂಸ್ ಮತ್ತು ಫೆನುಗ್ರೀಕ್‍ಗಳಲ್ಲಿ ಸಹ ಸತುವಿನ ಅಂಶ ಯಥೇಚ್ಛವಾಗಿರುತ್ತದೆ. ಇದರ ಜೊತೆಗೆ ಇದರಲ್ಲಿ ಮ್ಯಾಂಗನೀಸ್, ನಾರಿನಂಶ ಮತ್ತು ಇನ್ನಿತರ ವಿಟಮಿನ್‍ಗಳು ಸಹ ಇರುವುದರಿಂದ ಗರ್ಭಿಣಿಯರು ಇವುಗಳನ್ನು ತಪ್ಪದೆ ಸೇವಿಸಬೇಕಾಗುತ್ತದೆ.

ಹಾಲಿಗೆ ಒಂದು ಚಮಚ ಜೇನು ಹಾಕಿ ಕುಡಿಯಿರಿ

ಹಾಲಿಗೆ ಒಂದು ಚಮಚ ಜೇನು ಹಾಕಿ ಕುಡಿಯಿರಿ

ಹಾಲು ಹಾಲಿನಲ್ಲಿ ಉತ್ತಮ ಪ್ರಮಾಣದ ಪ್ರೋಟೀನು, ಖನಿಜಗಳು ಮತ್ತು ಕ್ಯಾಲ್ಸಿಯಂ ಇದೆ. ಹಾಲಿನೊಂದಿಗೆ ಕೊಂಚ ಜೇನು ಬೆರೆಸಿ ನಿತ್ಯವೂ ಕುಡಿಯುವ ಮೂಲಕ ಗರ್ಭಿಣಿಯ ಆರೋಗ್ಯ ಉತ್ತಮವಾಗಿರುತ್ತದೆ.

English summary

list-of-safe-foods-during-pregnancy

There is no doubt that you will have bouts of food cravings, but it is only sensible to make sure that you avoid any kind of food that is harmful to your child. Street foods, sushi and processed foods are harmful to the child. Extra care should be taken to ensure that you are eating right and healthy foods as this will help in the overall growth and development of your child. It will also keep you healthy. The following are a few of the safe foods during pregnancy.
X
Desktop Bottom Promotion