For Quick Alerts
ALLOW NOTIFICATIONS  
For Daily Alerts

ಬಾಬ್ ಕಟ್ ಮಾಡಿದ ಹುಡುಗಿ ಏಕೆ ಕಟುಮಾತು ಆಲಿಸಬೇಕಾಗುತ್ತದೆ?

|

ಹೆಣ್ಣಿನ ಸಿಂಗಾರದಲ್ಲಿ ಕೇಶ ಶೃಂಗಾರ ಪ್ರಮುಖ ಪಾತ್ರ ವಹಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಉದ್ದನೆಯ ಕೂದಲು ಬೆಳೆಸಿಕೊಳ್ಳುವುದು ಎಲ್ಲರ ಅಪೇಕ್ಷೆಯಾಗಿದೆ. ದಂತಕಥೆಯೊಂದರ ನಾಯಕಿ ರಪುಂಜೆಲ್‌ಳ ತಲೆಗೂದಲು ಆಕೆಯ ಐದುಪಟ್ಟು ಉದ್ದವಿದ್ದು ಈ ಕೂದಲಿನಿಂದಲೇ ಆಕೆ ತನ್ನ ಮಲತಾಯಿಯನ್ನು ನೆಲ ಅಂತಸ್ತಿನಿಂದ ಮೇಲಿನ ಅಂತಸ್ತಿಗೆ ಹತ್ತಿಸಿಕೊಳ್ಳುತ್ತಾಳೆ.

ಒಂದು ವೇಳೆ ಇದರ ಬದಲಾಗಿ ತಲೆಗೂದಲನ್ನು ಹುಡುಗಿಯರು ಕತ್ತರಿಸಿಕೊಂಡು ಹುಡುಗರಂತೆ ಕಾಣತೊಡಗಿದರೆ ಥಟ್ಟನೇ ನೋಡುವವರ ದೃಷ್ಟಿಕೋನವೂ ಬದಲಾಗಿ ಬಿಡುತ್ತದೆ. ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರೂ ಬಾಬ್ ಕಟ್ ಹೊಂದಿದ್ದರು. ಆದರೆ ಅವರ ವಿರುದ್ಧವಾಗಿ ಮಾತನಾಡಲು ಯಾರಿಗೂ ಧೈರ್ಯವಿರಲಿಲ್ಲ. ಆದರೆ ಇದೇ ಕೇಶಶೈಲಿಯನ್ನು ಯುವತಿಯರು ಅನುಸರಿಸಿದರೆ ಸಮಾಜದಿಂದ ಹಲವು ಕಟುಮಾತುಗಳನ್ನು ಕೇಳಬೇಕಾಗಿ ಬರುತ್ತದೆ.

ಇಂದಿನ ಯುವತಿಯರು ಹಿಂದಿನ ಪೀಳಿಗೆಗಿಂತ ಹೆಚ್ಚಾಗಿ ಮನೆಗಳಿಂದ ಹೊರಬರುತ್ತಿದ್ದಾರೆ, ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಪಡೆಯುತ್ತಿದ್ದಾರೆ, ಯುವಕರಿಗೆ ಸರಿಸಮಾನರಾಗಿ ಮುಂದೆ ಬರುತ್ತಿದ್ದಾರೆ. ನೈಜತೆಯ ಅನುಭವವನ್ನು ನೀಡುವ 15 ಕಾರ್ಟೂನ್ ಪಾತ್ರಗಳು

ಕಾಲಾಯ ತಸ್ಮೈ ನಮಃ ಎಂಬಂತೆ ಅವರ ಜೀವನ ಶೈಲಿಯು ಬದಲಾವಣೆಯಾಗುತ್ತಿವೆ. ಅನುಕೂಲದ ದೃಷ್ಟಿಯಿಂದ ಪುರುಷರ ಪೋಷಾಕುಗಳಲ್ಲಿಯೇ ಕೊಂಚ ಮಾರ್ಪಾಡು ಹೊಂದಿರುವ ತೊಡುಗೆಗಳು ಇಂದಿನ ಫ್ಯಾಷನ್ ಆಗಿದೆ. ಅಂತೆಯೇ ಉದ್ದ ತಲೆಗೂದಲಿನ ಬದಲಿಗೆ ಪುರುಷರಂತೆಯೇ ಗಿಡ್ಡವಾಗಿ ಕತ್ತರಿಸಿಕೊಳ್ಳುತ್ತಾರೆ. ಆದರೆ ನಮ್ಮ ಹಿರಿಯರಿಗೆ ಸಾಂಪ್ರಾದಾಯಿಕವಾಗಿ ಬಂದಿರುವ ಉಡುಗೆ ತೊಡುಗೆ, ವಸ್ತ್ರ ವಿನ್ಯಾಸಗಳಿಂದ ಭಿನ್ನವಾಗಿದ್ದುದು ಏನಾದರೂ ಕಂಡುಬಂದರೆ ಅದನ್ನು ಸುಲಭವಾಗಿ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ.

ಇದಕ್ಕೆ ಕಾರಣವೂ ಇದೆ. ಅಪ್ಪಟ ಭಾರತೀಯ ಸಂಸ್ಕೃತಿಯು ಬ್ರಿಟಿಷರ ಆಳ್ವಿಕೆಯ ಬಳಿಕ ಪಾಶ್ಚಾಚ್ಯ ಶೈಲಿಯ ಪ್ರಭಾವಕ್ಕೆ ಒಳಗಾಗಿ ಬದಲಾಗಿದ್ದನ್ನು ಅವರು ಕಂಡಿದ್ದಾರೆ. ಇದೊಂದು ಗುಲಾಮಗಿರಿಯ ಸಂಕೇತ ಎಂದು ಅವರು ಭಾವಿಸುತ್ತಾರೆ. ಈ ಸಮಾಧಾನವೇ ಕಟುಮಾತುಗಳಾಗಿ ಹೊರಬರುತ್ತವೆ. ಹಿರಿಯರು ಹಾಗೂ ಅಕ್ಕಪಕ್ಕದವರು ಸಾಮಾನ್ಯವಾಗಿ ನೀಡುವ ಹತ್ತು ಕಟುಟೀಕೆಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ನೀನು ಅಪ್ಪಟ ಹುಡುಗನಾಗಿ ಕಂಡುಬರುತ್ತಿರುವೆ

ನೀನು ಅಪ್ಪಟ ಹುಡುಗನಾಗಿ ಕಂಡುಬರುತ್ತಿರುವೆ

ಇದೊಂದು ಅಪ್ಪಟ ಅಸೂಯೆಯ ಟೀಕೆಯಾಗಿದೆ. ನಿಮ್ಮ ಆಧುನಿಕ ಶೈಲಿ, ವಸ್ತ್ರ ವಿನ್ಯಾಸ ಹಾಗೂ ತೊಡುಗೆಗಳನ್ನು ಗಮನಿಸಿದವರು ಹೊಟ್ಟೆಕಿಚ್ಚಿಗೆ ಒಳಗಾಗಿ ಏನಾದರೊಂದು ಹೇಳಿ ತಮ್ಮ ಅಸಮಾಧಾನವನ್ನು ಹೊರಹಾಕಲು ಪ್ರಯತ್ನಿಸುತ್ತಾರೆ. ಕೇವಲ ಕೇಶ ಕತ್ತರಿಸಿಕೊಳ್ಳುವ ಮೂಲಕ ಯಾರಾದರೂ ಹುಡುಗರಾಗಿದ್ದರೆ ಇಂದಿರಾ ಗಾಂಧಿ ಮತ್ತು ಕ್ರಿಸ್ಟೀಯವರನ್ನು ಶ್ರೀ ಎಂದು ಸಂಬೋಧಿಸಬೇಕಿತ್ತು.

ನಿನಗೆಂದೂ ಒಳ್ಳೆಯ ಹುಡುಗ ಸಿಗಲಾರ

ನಿನಗೆಂದೂ ಒಳ್ಳೆಯ ಹುಡುಗ ಸಿಗಲಾರ

ಉದ್ದ ಕೂದಲಿದ್ದರೆ ಮಾತ್ರ ನಿನಗೆ ಯೋಗ್ಯನಾದ ವರ ದೊರಕುತ್ತಾನೆ, ಈ ಪರಿಯ ಕೇಶವಿನ್ಯಾಸದಲ್ಲಿ ಯಾವ ಹುಡುಗನೂ ನಿನ್ನನ್ನು ಮೆಚ್ಚಲಾರ ಎಂಬ ಟೀಕೆ ಮುಸುಕಿನೊಳಗಿನ ಗುದ್ದಿನಂತೆ ಬಂದೆರಗುತ್ತದೆ. ಅಂದರೆ ಹುಡುಗರು ತಮ್ಮ ಸಂಗಾತಿಯಾಗುವವಳಲ್ಲಿ ಏನನ್ನು ಬಯಸುತ್ತಾನೆ ಎಂಬ ವಿಷಯದ ಬಗ್ಗೆ ಎಲ್ಲಾ ತಿಳಿದವರಂತೆ ಮಾತನಾಡುತ್ತಾರೆ. ವಾಸ್ತವವಾಗಿ ಹುಡುಗಿಯ ಕೇಶವಿನ್ಯಾಸಕ್ಕಿಂತ ಆಕೆಯ ಗುಣಗಳೇ ಯುವಕರು ಪ್ರಮುಖವಾಗಿ ಇಷ್ಟಪಡುವುದು ಇವರಿಗೆ ತಿಳಿದಿದ್ದರೂ ಹೊಟ್ಟೆಕಿಚ್ಚಿನ ಉರಿ ಈ ವಿಷಯವನ್ನು ಮರೆಮಾಚುತ್ತದೆ.

ನಿನ್ನಲ್ಲಿ ಹೆಣ್ತನವೇ ಕಾಣುತ್ತಿಲ್ಲ

ನಿನ್ನಲ್ಲಿ ಹೆಣ್ತನವೇ ಕಾಣುತ್ತಿಲ್ಲ

ಈ ಪರಿಯಲ್ಲಿ ಗಿಡ್ಡ ಕೂದಲು ಬಿಟ್ಟುಕೊಳ್ಳುವ ಮೂಲಕ ನಿನ್ನ ಹೆಣ್ತನವನ್ನೆಲ್ಲಾ ಕಳೆದುಬಿಟ್ಟಿದ್ದೀ ಎಂದು ಕಟುವಾದ ಮಾತುಗಳು ನಿಮ್ಮನ್ನು ಕಂಗೆಡಿಸಬಹುದು. ವಾಸ್ತವವಾಗಿ ನಿಜವಾದ ಸೌಂದರ್ಯ ಯಾವುದೇ ವ್ಯಕ್ತಿಯ ಹೃದಯದಲ್ಲಿದೆ. ಮಹಾತ್ಮಾ ಗಾಂಧೀಜಿಯವರು ತಮ್ಮ ಹೃದಯದಿಂದ ವಿಶ್ವವನ್ನು ಗೆದ್ದಿದ್ದರೇ ಹೊರತು ತಮ್ಮ ರೂಪದಿಂದ ಖಂಡಿತಾ ಅಲ್ಲ. ಕಟುಮಾತನ್ನಾಡಿದವರಿಗೆ ಅವರ ಶಿಕ್ಷಕರು ಈ ಪಾಠವನ್ನು ಖಂಡಿತಾ ಹೇಳಿರಲಿಕ್ಕಿಲ್ಲ ಅಥವಾ ಪಾಠ ಮಾಡಿದ್ದ ದಿನ ಇವರು ಚಕ್ಕರ್ ಹೊಡೆದಿದ್ದಿರಬಹುದು.

ನಿನ್ನ ಉದ್ದ ಕೂದಲೇ ತುಂಬಾ ಚೆನ್ನಾಗಿತ್ತು

ನಿನ್ನ ಉದ್ದ ಕೂದಲೇ ತುಂಬಾ ಚೆನ್ನಾಗಿತ್ತು

ಉದ್ದ ಕೂದಲಿದ್ದಷ್ಟೂ ಅದರ ಪೋಷಣೆಗೆ ಹೆಚ್ಚಿನ ಸಮಯ ಮತ್ತು ಕಾಳಜಿಯ ಅಗತ್ಯವಿದೆ. ಗಿಡ್ಡ ಕೂದಲಿದ್ದರೆ ಕನಿಷ್ಟ ಪೋಷಣೆ ಮತ್ತು ಸಮಯ ಸಾಕು. ಇದೇ ಕಾರಣಕ್ಕಾಗಿ ನೀವು ಕೂದಲನ್ನು ಗಿಡ್ಡ ಮಾಡಿಕೊಂಡಿದ್ದು ಹಲವರಿಗೆ ಸರಿಬರುವುದಿಲ್ಲ. ಆಗ ಇಂತಹ ಕಟುಮಾತುಗಳನ್ನು ಕೇಳಬೇಕಾಗಿ ಬರುತ್ತದೆ. ಆದರೆ ಹುಡುಗರಂತೆ ಕೇಶವಿನ್ಯಾಸ ಮಾಡುವುದರಿಂದ ಹುಡುಗರನ್ನೂ ಮೀರಿ ಬೆಳೆಯಲು ಆತ್ಮವಿಶ್ವಾಸ ಬೆಳೆಯುತ್ತದೆಂದು ಅವರಿಗೇನು ಗೊತ್ತು?

ನಿನಗೇನು ಹುಚ್ಚು ಹಿಡಿದಿದೆಯೇ?

ನಿನಗೇನು ಹುಚ್ಚು ಹಿಡಿದಿದೆಯೇ?

ಕೆಲವರ ಪ್ರಕಾರ ಕೇವಲ ಹುಚ್ಚು ಹಿಡಿದವರು ಮಾತ್ರ ಕೂದಲನ್ನು ಗಿಡ್ಡವಾಗಿ ಕತ್ತರಿಸಿಕೊಳ್ಳುತ್ತಾರೆ. ಹುಚ್ಚಿಗೂ ಕೂದಲಿನ ಅಳತೆಗೂ ಯಾವ ಸಂಬಂಧವಿದೆ ಎಂದು ಯಾರಾದರೂ ನಿರೂಪಿಸಿದ್ದರೆ ಚೆನ್ನಾಗಿತ್ತು. ವಾಸ್ತವವಾಗಿ ಹೆಣ್ಣು ಎಂದರೆ ಉದ್ದ ಕೂದಲೇ ಇರಬೇಕು ಎಂಬ ಪೂರ್ವಾಗ್ರಹ ಪೀಡಿತರಿಗೆ ಇದರಲ್ಲಿ ಯಾವುದೇ ಒಂದು ವ್ಯತ್ಯಾಸ ಕಂಡುಬಂದರೂ ಸಹಿಸಲಾಗದೇ ಹುಚ್ಚಿನ ನೆವ ನೀಡುತ್ತಾರೆ. ಈ ಮಾತುಗಳಿಗೆ ಕಿವಿಕೊಟ್ಟರೇ ಹುಚ್ಚು ಹಿಡಿಯುವುದು ಮಾತ್ರ ಖಂಡಿತ.

ಕತ್ತರಿಸಿದ್ದು ಮತ್ತೆ ಬೆಳೆಯುತ್ತದೆಯೋ ಇಲ್ಲವೋ?

ಕತ್ತರಿಸಿದ್ದು ಮತ್ತೆ ಬೆಳೆಯುತ್ತದೆಯೋ ಇಲ್ಲವೋ?

ನಮಗೆ ಬೇಡವೆಂದೇ ಕತ್ತರಿಸಿಕೊಂಡಿರುವಾಗ ಮತ್ತೆ ಬೆಳೆಯುತ್ತದೆಯೋ ಇಲ್ಲವೋ ಎಂಬ ಕಾಳಜಿ ಇವರಿಗೆ ಏಕೆ? ವಾಸ್ತವವಾಗಿ ಕತ್ತರಿಸಿದ ಕೂದಲು ಮತ್ತೆ ಬೆಳೆಯುತ್ತಲೇ ಇರುತ್ತದೆ. ನಮ್ಮ ಆತ್ಮವಿಶ್ವಾಸ ಹೆಚ್ಚಿಸಲು ಈ ಗಿಡ್ಡ ಕೂದಲು ನಮಗೆ ಅಗತ್ಯವಿರುವಾಗ ಉದ್ದವಾಗಿರುವ ಕೂದಲನ್ನೂ ಮತ್ತೆ ಕತ್ತರಿಸಿಕೊಳ್ಳುವ ಅಗತ್ಯವಿದೆ ಎಂದು ಇವರಿಗೆ ಗೊತ್ತಿಲ್ಲ.

ಇದರಿಂದ ನೀನು ನಮ್ಮ ಸಂಗ ಕಳೆದುಕೊಳ್ಳಬೇಕಾಗುತ್ತದೆ

ಇದರಿಂದ ನೀನು ನಮ್ಮ ಸಂಗ ಕಳೆದುಕೊಳ್ಳಬೇಕಾಗುತ್ತದೆ

ಒಳ್ಳೆಯದೇ ಆಯಿತು. ಇಡಿಯ ದಿನ ಕೇವಲ ಋಣಾತ್ಮಕವಾಗಿ ಯೋಚಿಸುತ್ತಾ ಸಮಾಜವನ್ನು ದುರ್ಬಲಗೊಳಿಸುವ ಈ ಹಳೆಯ ಮನೋಭಾವದ ಆಂಟಿಯರಿಂದ ದೂರವಿದ್ದಂತೆ ಆಯಿತು.

ಕೂದಲಿನ ಆರೈಕೆಗೆ ಸಮಯ ನೀಡಲು ಸೋಮಾರಿತನ

ಕೂದಲಿನ ಆರೈಕೆಗೆ ಸಮಯ ನೀಡಲು ಸೋಮಾರಿತನ

ಉದ್ದಕೂದಲಿನ ಅಥವಾ ಗಿಡ್ಡ ಕೂದಲಿನ ಆರೈಕೆಗೆ ತೆಗೆದುಕೊಳ್ಳುವ ಸಮಯಕ್ಕಿಂತಲೂ ಸಮಯದ ಸದುಪಯೋಗಪಡಿಸಿಕೊಳ್ಳುವತ್ತ ನಮ್ಮ ಚಿತ್ತ. ಕೂದಲ ಆರೈಕೆಗೆ ಸಮಯ ನೀಡದೇ ಇರುವುದು ಸೋಮಾರಿಯಾಗುವ ಲಕ್ಷಣವಲ್ಲ ಎಂದು ಇವರು ಎಂದು ಅರಿಯುವರು?

 ಇದು ನಿನ್ನ ಆ ಹುಚ್ಚ ಪ್ರಿಯತಮನ ಸಲಹೆಯೇ?

ಇದು ನಿನ್ನ ಆ ಹುಚ್ಚ ಪ್ರಿಯತಮನ ಸಲಹೆಯೇ?

ಇದು ಹುಡುಗಿಯಾಗಿ ನೀವೇ ಪಡೆದುಕೊಂಡ ಕೇಶವಿನ್ಯಾಸ ಎಂಬುದನ್ನು ಹೆಚ್ಚಿನವರು ನಂಬುವುದಿಲ್ಲ. ಇದಕ್ಕೆ ಪ್ರೇರಣೆ ನಿಮ್ಮ ಪ್ರಿಯತಮನಿರಬಹುದು ಎಂಬ ತಮ್ಮ ಊಹೆಯನ್ನು ಸಾರ್ವಜನಿಕವಾಗಿಯೇ ಅವರು ಪ್ರಕಟಿಸುತ್ತಾರೆ. ಪಾಪ, ಮಾಡದ ಪಾಪಕ್ಕಾಗಿ ಪ್ರಿಯತಮ ಬಕರಾವಾಗಬೇಕಾಯಿತು. ನಿಮ್ಮ ಪತಿಯಂದಿರು ಬಯಸುವುದನ್ನು ಚಾಚೂ ತಪ್ಪದೇ ಪೂರೈಸುವ ನಿಮ್ಮ ಗುಣಗಳೇ ನಮ್ಮಲ್ಲಿಯೂ ಇರಬೇಕೆಂದರೆ ಹೇಗೆ?

ದೇವರೇ, ನಮ್ಮ ಹುಡುಗಿಯ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ?

ದೇವರೇ, ನಮ್ಮ ಹುಡುಗಿಯ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ?

ಇದೊಂದು ಪಲಾಯನವಾದದ ಪರಮಾವಧಿಯಾಗಿದೆ. ಸಾಮಾನ್ಯವಾಗಿ ತನ್ನ ಎಚ್ಚರವನ್ನು ಮೀರಿದ ಮಗಳ ಬಗ್ಗೆ ತಾಯಿ ನೀಡುವ ಅಸಹಾಯಕ ಮೊರೆಯಾಗಿದೆ. ಯಾರದ್ದೋ ಕೆಟ್ಟ ದೃಷ್ಟಿ ಬಿದ್ದಾಕ್ಷಣ ಕೂದಲು ಕತ್ತರಿಸಿಕೊಳ್ಳಬೇಕೆಂಬ ಪೂರ್ವಾಗ್ರಹ ಏಕೆ? ಒಂದು ವೇಳೆ ಇದು ನಿಜವಾಗಿದ್ದಿದ್ದರೆ ಪುಟ್ಟ ಪುಟ್ಟ ಮಕ್ಕಳೆಲ್ಲಾ ಬೋಳು ತಲೆಯಲ್ಲಿರಬೇಕಿತ್ತು. ಏಕೆಂದರೆ ಅತಿ ಹೆಚ್ಚು ದೃಷ್ಟಿ ಬೀಳುವುದು ಅವರಿಗೆ ತಾನೇ?

English summary

10 Things A Girl With Boy Cut Has To Hear

Are you repulsive to sweet princess Rapunzel's long mane and falling head over heels for your just found love for short, cool boy cuts. Hey! It's in and very happening. People around you surely have some kind of serious disorder not to accept your chic boy cut style
X
Desktop Bottom Promotion