Just In
Don't Miss
- Automobiles
ಬಿಡುಗಡೆಗೆ ಸಜ್ಜಾಗುತ್ತಿದೆ 2021ರ ಮಾರುತಿ ಎಕ್ಸ್ಎಲ್5 ಕಾರು
- Sports
ನೇಥನ್ ಲಿಯಾನ್ಗೆ ಅವಿಸ್ಮರಣೀಯ ಉಡುಗೊರೆ ಕೊಟ್ಟ ಅಜಿಂಕ್ಯ ರಹಾನೆ
- News
ನಮಗೆ ಮಾತ್ರ ಏಕೆ ಕೋವ್ಯಾಕ್ಸಿನ್ ಲಸಿಕೆ?: ಸರ್ಕಾರಕ್ಕೆ ನಿವಾಸಿ ವೈದ್ಯರ ಪ್ರಶ್ನೆ
- Movies
ಪ್ರಭಾಸ್ ನಟನೆಯ 'ಆದಿಪುರುಷ್' ಚಿತ್ರತಂಡದಿಂದ ಪ್ರಮುಖ ಅಪ್ಡೇಟ್
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗುರೂಜಿ ಪ್ರವಚನಕ್ಕೆ ತಲೆಬಾಗುವ ಮುನ್ನ ಇದನ್ನು ಓದಿ
ಅಂತಿಮ ದಿನಗಳಲ್ಲಿ ಶಾಂತಿಗಾಗಿ, ನೆಮ್ಮದಿಗಾಗಿ, ಪ್ರೀತಿಗಾಗಿ ಹಂಬಲಿಸುವ ಬದಲು, ಯಾವುದೋ ಗುರೂಜಿಯ ಪ್ರವಚನಕ್ಕೆ ತಲೆಬಾಗುತ್ತಾ ಹಣ ಚೆಲ್ಲುವ ಬದಲು ಕುಟುಂಬವನ್ನು ಕಟ್ಟಿಕೊಳ್ಳುವತ್ತ ಹೆಜ್ಜೆ ಹಾಕಬೇಕಿದೆ.
ಜ್ವರ ಬಂದು ಮಲಗಿದ್ದರೂ ಅಮ್ಮ, ಮಕ್ಕಳು ಹಸಿದಿರುತ್ತಾರೆ ಎಂಬ ಕಾಳಜಿಯಿಂದ ಅಡುಗೆ ಮಾಡುವುದು, ಮಕ್ಕಳ ಮುಂದಿನ ಭವಿಷ್ಯಕ್ಕೆ ಹಣ ಕೂಡಿಡಲು ಅಪ್ಪ ಆಫೀಸಿಗೆ ನಡೆದೇ ಹೋಗುವುದು, ತಮ್ಮನ ಪರೀಕ್ಷೆಗೆ ತೊಂದರೆಯಾಗುತ್ತದೆ ಎಂದು ಅಣ್ಣ ತನ್ನ ಸಂಗೀತದ ತಾಲೀಮನ್ನು ಮುಂದೂಡುವುದು, ಅಕ್ಕನಿಗೆ ಇಷ್ಟವಾದ ಜಿಲೇಬಿ ಮಾಡಲು ತಂಗಿ ತನ್ನಿಡೀ ದಿನ ಕಳೆಯುವುದು ತ್ಯಾಗ ಅಥವಾ ಕಾಳಜಿ ಎನಿಸಿಕೊಳ್ಳದೇ 'ಟೈಂ ವೇಸ್ಟ್' ಎನಿಸಿಕೊಂಡಿದೆ.
ಕೈ ತುಂಬಾ ದುಡಿದರೂ ಹೊಟ್ಟೆ ತುಂಬಾ ನೆಮ್ಮದಿಯಾಗಿ ತಿನ್ನದ ಜೀವನವನ್ನೇ ಕ್ರಿಯಾಶೀಲತೆ, ವೃತ್ತಿಪರತೆ ಎಂದೆಲ್ಲಾ ಹೊಗಳಿಕೊಂಡು ಬದುಕುವ ಮನಸ್ಸುಗಳು ಬೆಳೆಯುತ್ತಿವೆ. ಯಾವ ಕೆಲಸದಿಂದ ಆರ್ಥಿಕವಾಗಿ ಲಾಭ ಇಲ್ಲವೋ ಅದು ಕೆಲಸವೇ ಅಲ್ಲ ಎಂಬ ಇವರ ಯೋಚನೆಯಂತೂ ಅಸಹ್ಯ ಹುಟ್ಟಿಸುತ್ತದೆ.
ಸಂಬಂಧ, ವಿದ್ಯೆ, ಬದುಕನ್ನು ಆರ್ಥಿಕ ದೃಷ್ಟಿಕೋನದಿಂದ ನೋಡಲು ಆರಂಭಿಸಿರುವ ಯುವಜನರು ಈ ದಾರಿಯಲ್ಲಿ ತುಂಬಾ ದೂರ ಹೋಗುವ ಮೊದಲೇ ಶೈಕ್ಷಣಿಕವಾಗಿ ಅವರನ್ನು ಸರಿದಾರಿಗೆ ತರಬೇಕಿದೆ.
ಆಧುನಿಕ ಜಗತ್ತಿಗೆ ತೆರೆದುಕೊಂಡಂತೆಲ್ಲಾ ಮನಸ್ಸು ಕಟುವಾಸ್ತವವನ್ನು ಯೋಚಿಸುವುದು ಸಹಜ. ಅಲ್ಲಿ ಭಾವನೆಗಳಿಗೆ ಜಾಗ ಕಡಿಮೆ. ಭಾವನೆಗಳೇ ಇಲ್ಲದೇ ಹೋದರೆ ಸಂತಸಕ್ಕೆ ಎಡೆ ಇರುವುದಿಲ್ಲ. ಅದರಿಂದ ಅನುಕರಿಸುವ ಗೋಜಿನಿಂದ ಹೊರಬಂದು ಸಹಜ ಭಾವನೆಗಳನ್ನು ಸ್ಥಾಪಿಸಿಕೊಳ್ಳುವತ್ತ ಮನಸ್ಸು ಹರಿಸಬೇಕಿದೆ.