Just In
Don't Miss
- News
ಹಸನಾಗದ ಅರಳಿಕಟ್ಟೆಹುಂಡಿ ಗ್ರಾಮದ ಜನರ ಬದುಕು!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Movies
ಗಬ್ಬಾ ನಲ್ಲಿ ಆಸ್ಟ್ರೇಲಿಯಾದ ಗರ್ವಭಂಗ: ಕುಣಿದ ಬಾಲಿವುಡ್
- Sports
ನಾಲ್ಕೇ ಸಾಲಿನಲ್ಲಿ ಭಾರತ ತಂಡದ ಅಷ್ಟೂ ಸಾಧನೆ ಹೇಳಿದ ಅಶ್ವೆಲ್ ಪ್ರಿನ್ಸ್!
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮದರ್ಸ್ ಡೇ, ಫಾದರ್ಸ್ ಡೇ ಮಧ್ಯೆ ಅನಾಥ ಪ್ರಜ್ಞೆ ನಮಗೆ ಬೇಕಾ?
ಕುಟುಂಬ ವ್ಯವಸ್ಥೆಯಿಂದ ದೂರವಾಗುವ ಅವರು 'ಮದರ್ಸ್ ಡೇ', 'ಫಾದರ್ಸ್ ಡೇ'ಗಳನ್ನು ಅತೀವ ಸಂತಸದಿಂದ ಆಚರಿಸುತ್ತಾರೆ. ದಿನವಿಡೀ ಅಪ್ಪ ಅಮ್ಮನ ಮುಖ ನೋಡುವ ನಾವೂ ಕೂಡ ಅವುಗಳನ್ನು ಆಚರಿಸಿ ಅನುಕರಣೆಯ ಗೀಳಿಗೆ ಜೈ ಎನ್ನುತ್ತಿದ್ದೇವೆ.
ಹೀಗೆ ಕುಟುಂಬದಿಂದ ದೂರವಾಗಿ ಬೇಕಾದಷ್ಟು ಹಣ, ಕೀರ್ತಿ ಸಂಪಾದಿಸಿ ಬದುಕಿನ ಕೊನೆಯಲ್ಲಿ ನೆಮ್ಮದಿಗಾಗಿ ಅಧ್ಯಾತ್ಮದ ಮೊರೆ ಹೋಗುವ ವಿದೇಶಿಯರನ್ನು ಕಂಡೇ ಇರುತ್ತೇವೆ. ಅವರಿಗೆ ನಿಜವಾಗಿ ಬೇಕಿರುವುದು ಆಧ್ಯಾತ್ಮಿಕ ಶಾಂತಿಯಲ್ಲ.
ಸೂಕ್ತ ವಯಸ್ಸಿನಲ್ಲಿ ಸಿಗದ ಕೌಟುಂಬಿಕ ಪ್ರೀತಿ. ಅದನ್ನು ಅವರು ಬದುಕಿನುದ್ದಕ್ಕೂ ಅರಸಿ ಸೋತು ಕಡೆಯದಾಗಿ ಮಾನಸಿಕ ನೆಮ್ಮದಿಯತ್ತ ಹೊರಳಿರುತ್ತಾರೆ. ಅಂಥ ಅನಾಥ ಪ್ರಜ್ಞೆಯನ್ನು ಭಾರತೀಯರು ಕೈಯ್ಯಾರೆ ಬರಮಾಡಿಕೊಳ್ಳಬೇಕೇ?
ತಂದೆ ತಾಯಿಯೊಂದಿಗೆ ಬದುಕು ಪೂರ್ತಿ ಇರಲು ನಮ್ಮ ಸಮಾಜ ಸಮ್ಮತಿ ನೀಡಿದೆ. ಅಂಥದ್ದರಲ್ಲಿ ಪಾಶ್ಚಾತ್ಯ ಸಮಾಜವನ್ನು ಅನುಕರಿಸುವ ಅಗತ್ಯ ನಮಗೇಕೆ? ಅನುಕರಣೆಗಳಿಗೆ ಕಟ್ಟುಬಿದ್ದು ಸಂಬಂಧಗಳ ಸುಳಿಗಳಿಂದ ಹೊರಬರುವ ಪ್ರಯತ್ನದಲ್ಲಿ ಒಂಟಿಯಾಗುವತ್ತ ಹೊರಡುವ ಆತುರವೇಕೆ?
ಉದ್ಯೋಗದ ಅನಿವಾರ್ಯತೆಯಿಂದ ಕುಟುಂಬದಿಂದ ದೂರವಾಗುವವರು, ಅವಿಭಕ್ತ ಕುಟುಂಬದಿಂದ ಬೇರೆಯಾಗಿ ಗಂಡ-ಹೆಂಡತಿ ಇಬ್ಬರೇ ಬದುಕುವ ನಿರ್ಧಾರ ಮಾಡುವವರ ಸಂಖ್ಯೆ ಹೆಚ್ಚಿದಂತೆ ಅಂತರ್ಜಾತಿ ವಿವಾಹವಾದ ದಂಪತಿಗಳು ಸಂಬಂಧಿಗಳಿಂದ ದೂರವಾಗಿ ಬದುಕುವುದು ಅನಿವಾರ್ಯವಾಗಿದೆ. ಆದರೆ ಅವುಗಳ ನಡುವೆಯೇ ಸಂಬಂಧಗಳನ್ನು ನಿಭಾಯಿಸುವ ಮನಸ್ಸು ಮಾಡಬೇಕಿದೆ.