For Quick Alerts
ALLOW NOTIFICATIONS  
For Daily Alerts

ನಿಮ್ಮ ಸ್ನೇಹವನ್ನು ಯಾವಾಗ ಕೊನೆಗೊಳಿಸಬೇಕು ಎಂಬುದನ್ನು ತಿಳಿಸಲು ಇಲ್ಲಿದೆ ಸಲಹೆಗಳು

|

ಸ್ನೇಹ ಬಹಳ ಅಪೂರ್ವವಾದ ಬಂಧನ, ಬಹಳ ಗಾಢವಾದ ಸ್ನೇಹದಲ್ಲಿ ಯಾವುದೇ ಕಲ್ಮಶ, ನಿಸ್ವಾರ್ಥ ಇರುವುದಿಲ್ಲ. ಆದರೆ ಕೆಲವು ಸ್ನೇಹಗಳು ಮಾತ್ರ ಎಷ್ಟೇ ಗಾಢವಾಗಿದ್ದರೂ ಕಾಲ ಅಥವಾ ಸನ್ನಿವೇಶಗಳ ಆಕ್ರಮಣಕ್ಕೆ ಒಳಗಾಗಿ ಸ್ನೇಹದ ಸಾರ ಕಳೆದುಹೋಗುತ್ತದೆ. ಇಂಥವರು ನೋಟಕ್ಕೆ ಮಾತ್ರ ಸ್ಮೇಹಿತರಾಗಿದ್ದರೂ ಭಾವುಕವಾಗಿ, ಆತ್ಮದ ಗೆಳೆಯರಾಗಿ ತಮ್ಮ ಸ್ನೇಹಕ್ಕೆ ಯಾವುದೇ ಬೆಲೆ ನೀಡುವುದಿಲ್ಲ ಎಂದೇ ಹೇಳಬಹುದು.

ನಿಮ್ಮ್ ಸ್ನೇಹದಲ್ಲೂ ಇಂತಹದ್ದೇ ಲಕ್ಷಣಗಳ ಮುನ್ಸೂಚನೆ ಇದೆಯೇ?, ಕಾಲಾನಂತರದಲ್ಲಿ ನಿಮ್ಮ ಸ್ನೇಹ ಬದಲಾಗಿದೆಯೇ?, ನಿಮ್ಮ ಸ್ನೇಹಿತರು ನಿಮ್ಮೊಂದಿಗೆ ಸಮಯ ಕಳೆಯಲು ಹೆಚ್ಚು ಆಸಕ್ತಿ ಹೊಂದಿಲ್ಲವೇ? ಅಥವಾ ನಿಮಗೆ ಅಗತ್ಯವಿದ್ದಾಗ ನಿಮ್ಮ ಸ್ನೇಹಿತ/ಸ್ನೇಹಿತೆ ಕಣ್ಮರೆಯಾಗುತ್ತಾರೆಯೇ?, ಹಾಗಿದ್ದರೆ ಇವೆಲ್ಲವೂ ನಿಮ್ಮ ಸ್ನೇಹಿತರಿಂದ ನಿಮ್ಮನ್ನು ದೂರವಿರಿಸಬೇಕೆಂಬ ಸಂಕೇತವಾಗಿರಬಹುದು.

ಇಂಥ ಸಂದರ್ಭಗಳಲ್ಲಿ ನಿಮ್ಮ ಅಮೂಲ್ಯವಾದ ಸಮಯವನ್ನು ನಿಮ್ಮ ಗುರಿಗಳತ್ತ ಗುರಿ ಇಡಲು ಅಥವಾ ಅರ್ಥಪೂರ್ಣ ಸಂಬಂಧವನ್ನು ಹುಡುಕಲು ಏಕೆ ಯತ್ನಿಸಬಾರದು ನಿಮಗೆ ಅನಿಸಿರಬಹುದು?. ಇದರ ನಡುವೆ ನಿಮ್ಮ ಸ್ನೇಹವನ್ನು ಮುಂದುವರಿಸಬೇಕೆ ಅಥವಾ ಕೊನೆಗೊಳಿಸಬೇಕೆ ಎಂಬ ಗೊಂದಲದಲ್ಲಿದ್ದರೆ, ದೃಢವಾದ ನಿರ್ಧಾರವನ್ನು ಕೈಗೊಳ್ಳಲು ನಾವು ನಿಮಗಾಗಿ ಕೆಲವು ಕಾರಣಗಳನ್ನು ನೀಡಿದ್ದೇವೆ, ಮುಂದೆ ಓದಿ.

1. ನಿಮ್ಮ ಸ್ನೇಹಿತ/ಸ್ನೇಹಿತೆ ನಿಮ್ಮ ಭಾವನೆಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ

1. ನಿಮ್ಮ ಸ್ನೇಹಿತ/ಸ್ನೇಹಿತೆ ನಿಮ್ಮ ಭಾವನೆಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ

ನಿಮ್ಮ ಆತ್ಮದ ಸ್ನೇಹಿತರು ಎಂದಿಗೂ ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಕಾಳಜಿ ವಹಿಸುತ್ತಾರೆ. ನೀವು ತುಂಬಾ ಹತಾಶರಾದಾಗ ನಿಮ್ಮ ಮನಸ್ಥಿತಿಯನ್ನು ಹೇಗೆ ಹಗುರಗೊಳಿಸಬೇಕು ಎಂಬುದು ಅವರಿಗೆ ಚೆನ್ನಾಗಿಯೇ ತಿಳಿದಿರುತ್ತದೆ. ಆದರೆ ನಿಮಗೆ ಬಹಳ ಆತ್ಮೀಯ ಎನಿಸಿದ್ದ ಸ್ನೇಹಿತ ಕೆಲವು ಸಮಯದಿಂದ ನಿಮ್ಮ ಭಾವನೆಗಳನ್ನು ನಿರ್ಲಕ್ಷಿಸುತ್ತಿದ್ದರೆ ಅಥವಾ ನಿಮ್ಮ ಮೇಲಿದ್ದ ಕಾಳಜಿ ಕಡಿಮೆಯಾಗಿದ್ದರೆ ಖಂಡಿತವಾಗಿಯೂ ನೀವು ನಿಮ್ಮ ಗೆಳೆತನದಿಂದ ಹೊರನಡೆಯಬೇಕು. ಅಕಸ್ಮಾತ್ ನಿಮ್ಮ ಸ್ನೇಹಿತರು ನಿಮ್ಮ ಜತೆ ಉತ್ತಮ ಸ್ನೇಹವನ್ನು ಹೊಂದಿರುವಂತೆ ತೋರಿಕೆಗೆ ಕಾಣಿಸಿಕೊಂಡರೂ ಆ ವ್ಯಕ್ತಿಯೊಂದಿಗಿನ ನಿಮ್ಮ ಸ್ನೇಹವನ್ನು ಕೊನೆಗೊಳಿಸುವುದು ಉತ್ತಮ.

2. ನಿಮ್ಮ ಸ್ನೇಹದ ಆದ್ಯತೆ ಕ್ಷೀಣಿಸಿದಾಗ

2. ನಿಮ್ಮ ಸ್ನೇಹದ ಆದ್ಯತೆ ಕ್ಷೀಣಿಸಿದಾಗ

ನೀವು ನಿಮ್ಮ ಸ್ನೇಹಿತರಿಗಾಗಿ ಸಮಯವನ್ನು ಮೀಸಲಿರಿಸಿ ಮೊದಲೇ ತಿಳಿಸಿದ್ದರೂ ಕೊನೆಯ ಕ್ಷಣದಲ್ಲಿ ತಮ್ಮ ಸಂಗಾತಿಯ/ ಪ್ರಿಯಕರನ ಭೇಟಿಗಾಗಿ ನಿಮ್ಮ ಭೇಟಿಯನ್ನು ರದ್ದುಗೊಳಿಸಿದರೇ. ಇಂತಹ ಸಂದರ್ಭಗಳು ಅಪರೂಪಕ್ಕೆ ಘಟಿಸಿದರೆ ತಪ್ಪೆನಿಸದು, ಆದರೆ ಆಗಾಗ್ಗೆ ಇಂತಹ ಘಟನೆಗಳು ಮರುಕಳಿಸಿದರೆ ಈ ಬಗ್ಗೆ ನೀವು ಚಿಂತನೆ ನಡೆಸುವುದು ಅತ್ಯಗತ್ಯ. ಇಂತಹ ಸ್ನೇಹದಲ್ಲಿ ಯಾವುದೇ ಹುರುಳಿರುವುದಿಲ್ಲ, ನಿಮ್ಮನ್ನು ದೂರ ಸರಿಸುವ ಉದ್ದೇಶದಿಂದಲೇ ಇವರು ಹೀಗೆ ವರ್ತಿಸುವ ಸಾಧ್ಯತೆ ಹೆಚ್ಚಿದೆ, ಆದ್ದರಿಂದ ನಾವೇ ಹಿಂದೆ ಸರಿಯುವುದು ಒಳಿತು.

3. ನಿಮ್ಮ ಸ್ನೇಹಿತರಿಗೆ ನಿಮ್ಮ ಬೆನ್ನ ಹಿಂದೆ ಮಾತನಾಡುವ ಛಾಳಿ ಇದೆಯೇ

3. ನಿಮ್ಮ ಸ್ನೇಹಿತರಿಗೆ ನಿಮ್ಮ ಬೆನ್ನ ಹಿಂದೆ ಮಾತನಾಡುವ ಛಾಳಿ ಇದೆಯೇ

ಉತ್ತಮ ಸ್ನೇಹಿತ ಎಂದರೆ ಅವರಿಗೆ ನಮ್ಮ ಎಲ್ಲಾ ದೌರ್ಬಲ್ಯ ಮತ್ತು ಸಾಮರ್ಥ್ಯಗಳು ಚೆನ್ನಾಗಿಯೇ ತಿಳಿದಿರುತ್ತದೆ. ನಿಮ್ಮದು ನಿಜವಾದ ಸ್ನೇಹವಾಗಿದ್ದರೆ, ನಿಮ್ಮ ಸ್ನೇಹಿತ ನಿಮ್ಮ ಆತ್ಮದ ಗೆಳೆಯರಾಗಿದ್ದರೆ ಎಂದಿಗೂ ನಿಮ್ಮ ದೌರ್ಬಲ್ಯಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತಾರೆ ಹಾಗೂ ನಿಮ್ಮ ಸಾಮರ್ಥ್ಯಕ್ಕೆ ಬೆಂಬಲ ನೀಡುತ್ತಾನೆ. ಆದರೆ ಎಂದಿಗೂ ನಿಮ್ಮ ಬೆನ್ನ ಹಿಂದೆ ಮಾತನಾಡುವುದಿಲ್ಲ. ಆದರೆ ನಿಮ್ಮ ಸ್ನೇಹಿತ ನಿಮ್ಮ ಬೆನ್ನಿನ ಹಿಂದೆ ನಿಮ್ಮ ಬಗ್ಗೆಯೇ ಕೆಟ್ಟದ್ದನ್ನು ಮಾತನಾಡುತ್ತಿದ್ದರೆ, ಬಯಸುತ್ತಿದ್ದರೆ ಅದು ಆರೋಗ್ಯಕರ ಸ್ನೇಹವಲ್ಲ ಎಚ್ಚರ. ನಿಜವಾದ ಸ್ನೇಹಿತ ಎಂದಿಗೂ ನಿಮ್ಮ ಜತೆಯೇ ಇರುತ್ತಾನೆ ಮತ್ತು ಬೆನ್ನ ಹಿಂದೆ ಎಂದಿಗೂ ಕೆಟ್ಟದಾಗಿ ಮಾತನಾಡುವುದಿಲ್ಲ.

4. ಸದಾ ನಿಮ್ಮ ಸಮಯಕ್ಕಾಗುವ ಸ್ನೇಹಿತ

4. ಸದಾ ನಿಮ್ಮ ಸಮಯಕ್ಕಾಗುವ ಸ್ನೇಹಿತ

ಸ್ನೇಹದ ಬಗ್ಗೆ ಒಂದು ಅತ್ಯುತ್ತಮ ಹೇಳಿಕೆ ಇದೆ, "ಸಮಯಕ್ಕಾಗುವ ಸ್ನೇಹಿತ ನಿಜವಾದ ಸ್ನೇಹಿತ'' (a friend in need is a friend indeed) ಎಂದು. ಹಾಗೆಯೇ ಸ್ನೇಹ ಎಂದರೆ ಒಬ್ಬರಿಗೊಬ್ಬರು ಕಷ್ಟ ಹಾಗೂ ಸುಖ ಎರಡೂ ಸಮಯದಲ್ಲಿ ಜತೆಯಾಗುವವರಾಗಿರುತ್ತಾರೆ. ಆದರೆ ನಿಮ್ಮ ಸ್ನೇಹಿತ ನಿಮ್ಮಿಂದ ಏನನ್ನಾದರೂ ಬಯಸಿದಾಗ ಮಾತ್ರ ನಿಮ್ಮ ಬಳಿ ಬಂದು ನಂತರ ನಿರ್ಲಕ್ಷಿಸುತ್ತಾರಾದರೆ ನಿಮ್ಮ ಸ್ನೇಹದಲ್ಲಿ ಅರ್ಥವೇ ಇಲ್ಲ ಎಂದರ್ಥ.

5. ನಿಮ್ಮ ಸ್ನೇಹಿತ ತಮ್ಮ ಯೋಜನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಿಲ್ಲವೇ

5. ನಿಮ್ಮ ಸ್ನೇಹಿತ ತಮ್ಮ ಯೋಜನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಿಲ್ಲವೇ

ಕೆಲವು ಸಂದರ್ಭಗಳಲ್ಲಿ ನಿಮ್ಮ ಸ್ನೇಹಿತನು ತಮ್ಮ ಯೋಜನೆ/ಚಿಂತನೆಗಳಲ್ಲಿ ನಿಮ್ಮನ್ನು ಸೇರಿಸಿಕೊಳ್ಳುವುದೇ ಇಲ್ಲ, ಇದು ಅಪರೂಪಕ್ಕೆ ಒಮ್ಮೆಯಾದರೆ ಸಮ್ಮತವೇ. ಆದರೆ ತಮ್ಮ ಪ್ರತಿ ಯೋಜನೆಯಲ್ಲೂ ನಿಮ್ಮನ್ನು ನಿರ್ಲಕ್ಷಿಸಿದರೆ, ಆಗಾಗ್ಗೆ ಇಂತಹ ಸಂದರ್ಭಗಳು ಎದುರಾಗುತ್ತಿದ್ದರೆ, ನೀವು ಅದರಲ್ಲಿ ಸೇರ್ಪಡೆಗೊಳ್ಳಲು ಎದುರು ನೋಡುತ್ತಿದ್ದರೂ ಸಹ ಈ ಬಗ್ಗೆ ಅವರಲ್ಲಿ ಕಿಂಚಿತ್ತೂ ಗಮನವಿರದೇ ಇದ್ದರೆ ನೀವು ಇಂಥವರ ಸ್ನೇಹವನ್ನು ಅಲಕ್ಷಿಸುವುದೇ ಉತ್ತಮ. ಅನವಶ್ಯಕ ಅವರ ಸ್ನೇಹಕ್ಕಾಗಿ ಹಾತೊರೆಯುವ ಬದಲು ನಿಮ್ಮ ಪ್ರಾಮುಖ್ಯತೆ ಅರಿತ ಹಾಗೂ ನಿಮ್ಮ ಜತೆ ಅವರ ಯೋಜನೆಗಳನ್ನು ಹಂಚಿಕೊಳ್ಳಲು ಬಯಸುವ ಸ್ನೇಹಿತರ ಸ್ನೇಹಕ್ಕೆ ನೀವು ಆದ್ಯತೆ ನೀಡಿ.

6. ನಿಮ್ಮನ್ನೇ ಅವಮಾನಿಸುವ ಗುಣ ನಿಮ್ಮ ಸ್ಮೇಹಿತರಲ್ಲಿದೆಯೇ?

6. ನಿಮ್ಮನ್ನೇ ಅವಮಾನಿಸುವ ಗುಣ ನಿಮ್ಮ ಸ್ಮೇಹಿತರಲ್ಲಿದೆಯೇ?

ನೀವು ಮಾನಸಿಕವಾಗಿ ಕುಗ್ಗಿರುವ ಸಂದರ್ಭದಲ್ಲಿ ಅಥವಾ ಉತ್ಸಾಹ ಕಳೆದುಕೊಂಡಿರುವಂಥ ಸಂದರ್ಭಗಳಲ್ಲಿ ಯಾವುದೇ ಆತ್ಮೀಯ ಸ್ನೇಹಿತರಾಗಲಿ ನಿಮ್ಮಲ್ಲಿ ಉತ್ಸಾಹವನ್ನು ತುಂಬಲು ಹಾಗೂ ನಿಮ್ಮನ್ನು ಪ್ರೇರೇಪಿಸಲು ಮುಂದೆ ಬರುತ್ತಾರೆ. ಆದರೆ ನೀವು ಇದಕ್ಕೆ ವಿರುದ್ಧವಾದ ಪ್ರತಿಕ್ರಿಯೆಯನ್ನು ನಿಮ್ಮ ಸ್ನೇಹಿತರಿಂದ ಅನುಭವಿಸುತ್ತಿದ್ದರೆ, ಇಂತಹ ಸಂದರ್ಭದಲ್ಲಿ ನಿಮ್ಮ ಜತೆಯಾಗಿ ನಿಲ್ಲುವ ಬದಲು ನಿಮ್ಮ ಕಾಲೆಳೆಯುತ್ತಿದ್ದರೆ ಅಂತಹ ಸ್ನೇಹದಿಂದ ಮೊದಲು ಹೊರನಡೆಯಿರಿ, ಇದಕ್ಕೆ ಹೆಚ್ಚಿನ ಅವಕಾಶ ನೀಡಲೇಬೇಡಿ. ನಿಮ್ಮ ಸ್ನೇಹಿತನು ಇತರರ ಮುಂದೆ ನಿಮ್ಮನ್ನು ಅವಮಾನಿಸಲು ಪ್ರಯತ್ನಿಸಿದರೆ, ಅವರೊಂದಿಗೆ ಉಳಿಯುವುದರಲ್ಲಿ ಯಾವುದೇ ಅರ್ಥವಿಲ್ಲ.

7. ಕಷ್ಟದ ಸಮಯದಲ್ಲಿ ಸ್ನೇಹಿತ ನಿಮ್ಮನ್ನು ಒಂಟಿಯಾಗಿ ಬಿಡುತ್ತಾರೆಯೇ?

7. ಕಷ್ಟದ ಸಮಯದಲ್ಲಿ ಸ್ನೇಹಿತ ನಿಮ್ಮನ್ನು ಒಂಟಿಯಾಗಿ ಬಿಡುತ್ತಾರೆಯೇ?

ಕಷ್ಟದ ಸಮಯದಲ್ಲಿ ನಿಮ್ಮನ್ನು ಬೆಂಬಲಿಸುವವನು ನಿಜವಾದ ಸ್ನೇಹಿತ ಎಂದು ಹೇಳಲಾಗುತ್ತದೆ. ಆದರೆ ನಿಮ್ಮ ಕಷ್ಟದ ಸಮಯದಲ್ಲಿ ಏಕಾಂಗಿಯಾಗಿ ಒಬ್ಬರೇ ಕಷ್ಟವನ್ನು ಎದುರಿಸಲು ಬಿಟ್ಟರೆ, ನಿಮ್ಮನ್ನು ಒಬ್ಬಂಟಿಯಾಗಿ ಬಿಟ್ಟುಬಿಟ್ಟರೆ ನಿಮ್ಮ ಸ್ನೇಹಿತರ ಆಯ್ಕೆಯೇ ತಪ್ಪಾಗಿಸುವ ಸಾಧ್ಯತೆ ಇದೆ. ಅಂತಹ ವ್ಯಕ್ತಿಯೊಂದಿಗೆ ಇರುವ ಬದಲು, ಅಂತಹ ಸ್ನೇಹದಿಂದ ಹೊರಗುಳಿಯುವುದೇ ಉತ್ತಮ.

ಅಂತೆಯೇ ಸುದೀರ್ಘ ಕಾಲದಿಂದ ಜತೆಯಾಗಿ ಸ್ಪಂದಿಸುತ್ತಾ ಬಂದಿದ್ದ ಸ್ನೇಹ ಹಳಸಿದಾಗ ಕೊನೆಗೊಳಿಸುವುದು ಅಷ್ಟು ಸುಲಭವಲ್ಲ. ಆದರೆ ನೀವು ಸಂತೋಷವಾಗಿರದಿದ್ದರೆ ಮತ್ತು ಸ್ನೇಹವು ನಿಮಗೆ ಭಾವನೆಗಳಿಗೆ ಕಿವಿಗೊಡದೇ ಇದ್ದರೆ ಯಾವುದೇ ಪ್ರಯೋಜನವಿಲ್ಲ. ಅನ್ಯತಾ ದೂರಾದ ಸ್ನೇಹದ ಬಗ್ಗೆ ಚಿಂತಿಸುತ್ತಾ ಸಮಯ ಕಳೆಯುವುದರಲ್ಲಿ ಯಾವುದೇ ಅರ್ಥವಿಲ್ಲ. ನಿಮ್ಮ ಸ್ನೇಹಿತರಂತೆ ನೀವು ಸಹ ಬದಲಾಗಿ, ನಿಮ್ಮ ಆದ್ಯತೆಗಳ ಮೇಲೆ ಕೇಂದ್ರೀಕರಿಸಿ ಮತ್ತು ನಿಮ್ಮ ಸಮಯವನ್ನು ಅರ್ಥಪೂರ್ಣವಾಗಿಸುವೆಡೆ ಗಮನವಹಿಸಿ.

English summary

Ways To Figure Out When To End Your Friendship

Do you feel your friendship has changed over time? Are you no more interested in spending time with your friends? Also, does your friend disappear when you need him or her the most? Well, then this might be a sign that you should distance yourself from your friend. You should make a choice here not because your friend is evil or conspiring against you, but because you can invest your time is something productive rather than wallowing in self-pity and letting your broken friendships affect you.
X