Just In
Don't Miss
- Movies
ನಟಿ ಶರ್ಮಿಳಾ ಟ್ಯಾಗೋರ್ ಬಿಕಿನಿ ಫೋಟೋ ವೈರಲ್; ಜನ ನನ್ನನ್ನು ಮರೆಯಲು ಬಿಡುವುದಿಲ್ಲ ಎಂದ ಸೈಫ್ ತಾಯಿ
- News
ಆರೋಗ್ಯ ಸೇತು ಆಪ್: ದತ್ತಾಂಶ ಹಂಚಿಕೊಳ್ಳದಂತೆ ಹೈಕೋರ್ಟ್ ತಡೆ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Automobiles
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ನೀವು ನಿಮ್ಮ ಅತ್ತೆಗೆ ಹೇಳಲೇಬೇಕಾದ ವಿಷಯಗಳು
ವಿವಾಹವೆಂದರೆ ಅದು ಕೇವಲ ಹೆಣ್ಣು ಮತ್ತು ಗಂಡಿನ ನಡುವಿನ ಬಂಧನವಲ್ಲ, ಅದು ಎರಡು ಕುಟುಂಬಗಳನ್ನು ಜತೆ ಸೇರಿಸುವುದು. ಕೆಲವೊಂದು ಸಲ ಪರಿಚಯವೇ ಇಲ್ಲದೆ ಇರುವಂತಹ ಕುಟುಂಬಗಳು ಒಂದಾಗುವುದು. ಹೀಗಾಗಿ ವೈವಾಹಿಕ ಜೀವನ ಎನ್ನುವುದು ಅತೀ ಮಹತ್ವದ್ದಾಗಿದೆ. ಹುಡುಗಿಗೆ ತನ್ನ ಅತ್ತೆ, ಮಾವ, ನಾದಿನಿ ಭಾಮೈದ ಇತ್ಯಾದಿ ಸಂಬಂಧಗಳು ಬೆಸೆದುಕೊಳ್ಳುವುದು. ಹುಡುಗನಿಗೂ ಭಾವ, ನಾದಿನಿ ಹೀಗೆ ಒಂದೊಂದು ಸಂಬಂಧಗಳು ಬೆಸೆಯುವುದು. ವಿವಾಹದ ಆರಂಭದಲ್ಲಿ ಅತ್ತೆ ಹಾಗೂ ಸೊಸೆ ನಡುವಿನ ಸಂಬಂಧವು ಹಾಲು ಹಾಗೂ ಜೇನಿನಂತೆ ಇರುವುದು. ಆದರೆ ಸಮಯ ಕಳೆಯುತ್ತಾ ಸಾಗಿದಂತೆ ಇದು ಹಾಲು ಮತ್ತು ಹುಳಿಯಂತೆ ಆಗುವುದು.
ಸಂಬಧಗಳು ಹಳಸದಂತೆ ಉತ್ತಮವಾಗಿರಲು, ಅಗ್ತೆಯೊಂದಿಗೆ ಆರೋಗ್ಯಕಾರಿ ಸಂಬಂಧವನ್ನು ಮುಂದುವರೆಸಲು ಕೆಲವು ಮುಕ್ತ ಚರ್ಚೆಗಳು ಅತೀ ಅವಶ್ಯ. ವಿವಾಹದ ಬಳಿಕ ಕೆಲವೊಂದು ವಿಚಾರಗಳನ್ನು ಸೊಸೆಯು ತನ್ನ ಅತ್ತೆಗೆ ಹೇಳಬೇಕು. ಇಂತಹ ವಿಚಾರಗಳು ಯಾವುದು ಎಂದು ನೀವು ಲೇಖನದ ಮೂಲಕ ತಿಳಿಯಿರಿ.

ಅತ್ತೆಗೆ ಯಾಕೆ ಕೆಲವು ವಿಚಾರಗಳನ್ನು ಹೇಳಬೇಕು
ಅತ್ತೆ-ಸೊಸೆಯ ಸಂಬಂಧವು ಯಾವಾಗಲೂ ತುಂಬಾ ಜಟಿಲವಾಗಿರುವುದು. ನೀವು ನಿಮ್ಮ ಪತಿಯನ್ನು ತುಂಬಾ ದೀರ್ಘ ಸಮಯದಿಂದ ತಿಳಿದಿದ್ದರೂ ಅತ್ತೆ ಜತೆಗಿನ ಸಂಬಂಧವನ್ನು ನೀವು ತುಂಬಾ ಎಚ್ಚರಿಕೆಯಿಂದ ನಿರ್ವಹಿಸುವುದು ಅಗತ್ಯವಾಗಿದೆ. ಈ ಬಗ್ಗೆ ನಾವು ನಿಮಗೆ ಹತ್ತು ಸಲಹೆಗಳನ್ನು ನೀಡಲಿದ್ದೇವೆ.

1. ನಾನು ನಿಮ್ಮ ಮಗನನ್ನು ಪ್ರೀತಿಸುತ್ತೇನೆ
ನಾನು ನಿಮ್ಮ ಮಗನನ್ನು ಆತನನ್ನು ಪ್ರೀತಿಸುತ್ತಿರುವ ಕಾರಣದಿಂದಾಗಿಯೇ ಅವರನ್ನು ಮದುವೆ ಆಗಿರುವುದು. ಆದರೆ ನಾನು ಅವರೊಂದಿಗೆ ನಿಮಗಿಂತಲೂ ತುಂಬಾ ಭಿನ್ನವಾದ ಸಂಬಂಧ ಹೊಂದಿದ್ದೇನೆ. ಇದನ್ನು ನೀವು ಗೌರವಿಸಿ, ಅಂತೇಯೇ ನಾನು ಸಹ ನಿಮ್ಮನ್ನು ತುಂಬಾ ಗೌರವಿಸುತ್ತೇನೆ.

2. ನಿಮ್ಮ ಸ್ಥಾನ ಪಡೆಯಲು ಬಂದಿಲ್ಲ
ನಿಮ್ಮ ಮಗನ ಜೀವನದಲ್ಲಿ ಇನ್ನೊಬ್ಬಳು ಹೆಣ್ಣಿನ ಪ್ರವೇಶವಾಗಿದೆ. ಆದರೆ ನಿಮಗೋಸ್ಕರ ಅವರಿಗೆ ಇರುವ ಪ್ರೀತಿಯು ಕಡಿಮೆ ಆಗುವುದು ಎಂದಲ್ಲ. ಅವರು ಈಗಲೂ ನಿಮ್ಮನ್ನು ಪ್ರೀತಿಸುವರು ಮತ್ತು ಅದನ್ನು ಬದಲಿಸಲು ಸಾಧ್ಯವೇ ಇಲ್ಲ ಮತ್ತು ಅವರ ಜೀವನದ ಮೊದಲು ಹೆಣ್ಣು ನೀವಾಗಿಯೇ ಇರುತ್ತೀರಿ.

3. ನಿಮ್ಮ ಮಾರ್ಗದರ್ಶನದ ಅಗತ್ಯವಿದೆ
ನನಗೆ ನನ್ನದೇ ಆಗಿರುವಂತಹ ಖಾಸಗಿತನ ಬೇಕು. ಆದರೆ ಇದರರ್ಥ ನೀವು ನನ್ನ ಜೀವನದಲ್ಲಿ ಬರಲೇಬಾರದು ಎಂದೇನಲ್ಲ. ಕೆಲವೊಂದು ಸಂದರ್ಭದಲ್ಲಿ ನಾನು ಸಮಸ್ಯೆಗೆ ಸಿಲುಕಿರಬಹುದು. ಇದು ಅಡುಗೆ ಮನೆ ಅಥವಾ ಮಕ್ಕಳ ಪೋಷಣೆ ವಿಚಾರವಾಗಿರಬಹುದು. ನನಗೆ ಅತೀ ಅಗತ್ಯವಿರುವ ವೇಳೆ ನೀವು ಮಾರ್ಗದರ್ಶನ ನೀಡಬೇಕು.

4. ನಾವು ಪರಸ್ಪರ ಪ್ರತಿಯೊಂದನ್ನು ಒಪ್ಪಿಕೊಳ್ಳಲು ಆಗದು
ಹೌದು, ನಾವಿಬ್ಬರು ಕೆಲವೊಂದು ವಿಚಾರಗಳ ಬಗ್ಗೆ ಸಹಮತ ವ್ಯಕ್ತಪಡಿಸಲು ಆಗದು. ಆದರೆ ನೀವು ಇಂತಹ ಸಮಸ್ಯೆಯನ್ನು ಆದಷ್ಟು ಬೇಗನೆ ನಿವಾರಣೆ ಮಾಡಬೇಕು.

5. ನಾನು ಪರಿಪೂರ್ಣಳಲ್ಲ
ನಾನು ಪರಿಪೂರ್ಣಳಲ್ಲ ಎಂದು ಒಪ್ಪಿಕೊಳ್ಳುತ್ತೇನೆ. ನಾನು ದೊಡ್ಡ ಮಟ್ಟದಲ್ಲಿ ಅಡುಗೆ ಕಲಿತ್ತಿಲ್ಲ ಮತ್ತು ಎಲ್ಲವೂ ಸರಿಯಾಗಿ ಇರದು. ಆದರೆ ಕೆಲವೊಂದು ಅಪರಿಪೂರ್ಣತೆಯು ನನ್ನನ್ನು ನಿರ್ಮಿಸಿದೆ. ನಿಮ್ಮ ಮಗನಲ್ಲಿ ಕೆಲವೊಂದು ತಪ್ಪುಗಳು ಇರಬಹುದಾದರೆ, ನನ್ನಲ್ಲು ಅದು ಇರುವುದು.

6. ನಾನು ನಿಮ್ಮನ್ನು ಗೌರವಿಸುತ್ತೇನೆ
ಮಗನನ್ನು ಸಾಕಲು ಮತ್ತು ಅವರನ್ನು ಈ ಸ್ಥಿತಿಗೆ ತರಲು ನೀವು ತುಂಬಾ ಕಷ್ಟಪಟ್ಟಿದ್ದೀರಿ ಎಂದು ನನಗೆ ತಿಳಿದಿದೆ. ಇದಕ್ಕಾಗಿ ನಾನು ನಿಮ್ಮನ್ನು ಗೌರವಿಸುತ್ತೇವೆ. ನನ್ನ ತಾಯಿಯ ಜತೆಗೆ ಹತ್ತಿರವಾದಷ್ಟು ನಾನು ನಿಮ್ಮ ಜತೆಗೆ ಇರಲು ಸಾಧ್ಯವಾಗದೆ ಇರಬಹುದು. ಆದರೆ ಇದರರ್ಥ ನಾನು ನಿಮ್ಮನ್ನು ಗೌರವಿಸುವುದಿಲ್ಲವೆಂದಲ್ಲ. ನನ್ನ ಜೀವನದಲ್ಲಿ ನಿಮಗೆ ವಿಶೇಷ ಸ್ಥಾನವಿದೆ.

7. ನಂಬಿಕೆ ಇಡಿ
ಹಠಾತ್ ಆಗಿ ನಿಮ್ಮ ಜೀವನದಲ್ಲಿ ಅಪರಿಚಿತ ವ್ಯಕ್ತಿಯನ್ನು ಸ್ವೀಕರಿಸುವುದು ತುಂಬಾ ಕಷ್ಟವೆಂದು ನನಗೆ ತಿಳಿದಿದೆ. ಆದರೆ ನಂಬಿಕೆಯು ಎಲ್ಲವನ್ನು ಸರಿಗೊಳಿಸುವುದು. ಇದು ನಮಗೆ ತುಂಬಾ ಕಷ್ಟದ ವಿಚಾರ. ಯಾಕೆಂದರೆ ನೀವು ಒಬ್ಬ ವ್ಯಕ್ತಿಯನ್ನು ಸ್ವೀಕರಿಸಬೇಕು, ಆದರೆ ನಾನು ಸಂಪೂರ್ಣ ಕುಟುಂಬವನ್ನು ಸ್ವೀಕರಿಸಬೇಕಾಗುತ್ತದೆ ಮತ್ತು ಹೊಂದಿಕೊಳ್ಳಬೇಕು.

8. ನಮ್ಮ ಪೋಷಣೆಯು ತುಂಬಾ ಭಿನ್ನವಾಗಿ ಇರಬಹುದು
ನೀವು ನಿಮ್ಮದೇ ಆಗಿರುವಂತಹ ರೀತಿಯಲ್ಲಿ ಮಕ್ಕಳನ್ನು ಬೆಳೆಸಿರಬಹುದು. ಆದರೆ ನಾನು ಕೂಡ ಅದೇ ರೀತಿಯಲ್ಲಿ ಬೆಳೆಸಬೇಕು ಎಂದೇನಿಲ್ಲ. ನಿಮ್ಮ ಸಲಹೆಯನ್ನು ನಾನು ಯಾವಾಗಲೂ ಸ್ವಾಗತಿಸುತ್ತೇನೆ. ಆದರೆ ನಮಗೆ ಕಲಿಯಲು ಸಮಯ ನೀಡಿ ಮತ್ತು ಅದು ಕಠಿಣದ ಹಾದಿಯಾಗಿದ್ದರೂ ಪರವಾಗಿಲ್ಲ.

9. ನನ್ನ ಹೆತ್ತವರು ಕೂಡ ನಮಗೆ ಮುಖ್ಯ
ನಾವು ಅವರನ್ನು ಪ್ರತಿನಿತ್ಯವೂ ನೋಡದೆ ಇರಬಹುದು. ಆದರೆ ನಮ್ಮ ಜೀವನದಲ್ಲಿ ಅವರ ಪ್ರಾಮುಖ್ಯತೆಯು ಕಡಿಮೆ ಆಗುತ್ತದೆ ಎಂದೇನಲ್ಲ. ನಾವು ಅವರನ್ನು ಅದೇ ರೀತಿಯಾಗಿ ಎಂದಿಗೂ ಪ್ರೀತಿಸುತ್ತೇವೆ ಮತ್ತು ಅಗತ್ಯದ ಸಂದರ್ಭದಲ್ಲಿ ಅವರಿಗೆ ನೆರವಾಗುತ್ತೇವೆ.

10. ಅಂತಿಮವಾಗಿ ನಾನು ಕೂಡ ನಿಮ್ಮ ಕುಟುಂಬದವಳು
ನಿಮ್ಮ ಮಗಳು ಯಾವಾಗಲೂ ನಿಮ್ಮ ಮಗಳೇ. ಆದರೆ ನೀವು ನನ್ನನ್ನು ಕೂಡ ನಿಮ್ಮ ಕುಟುಂಬದವಳಂತೆ ಭಾವಿಸಿದರೆ ತುಂಬಾ ಒಳ್ಳೆಯದು. ನಾನು ಒಂದು ಹೆಜ್ಜೆ ಇಟ್ಟರೆ, ನೀವು ಕೂಡ ಒಂದು ಹೆಜ್ಜೆ ಇಡಬೇಕು ಎಂದು ನಾನು ಬಯಸುತ್ತೇನೆ.