Just In
Don't Miss
- Movies
ಭಾರತದ ಎರಡು ಡಾಕ್ಯುಮೆಂಟರಿಗಳ ಜೊತೆ ಆಸ್ಕರ್ ಹೊತ್ತಿಲಿಗೆ ಬಂದ 'ನಾಟು ನಾಟು'
- News
ನವದೆಹಲಿಗೆ ಬಂದಿಳಿದ ಗಣರಾಜ್ಯೋತ್ಸವದ ಮುಖ್ಯ ಅತಿಥಿ
- Automobiles
ವಧುವನ್ನು ಮನೆಗೆ ಕರೆದೊಯ್ಯಲು ತಂದೆಯ ಹಳೆಯ ಮಾರುತಿ 800 ಕಾರು ಬಳಿಸಿದ ಕೆನಡಾದ ಎನ್ಆರ್ಐ
- Sports
IND vs NZ: 3 ಪಂದ್ಯಗಳ ODI ಸರಣಿಯಲ್ಲಿ ಬಾಬರ್ ಅಜಂ ದಾಖಲೆ ಸರಿಗಟ್ಟಿದ ಶುಭ್ಮನ್ ಗಿಲ್
- Finance
Launched Jio 5G Network: ಭಾರತದಲ್ಲಿ ಜ.24 ರಿಂದಲೇ ಜಿಯೊ 5ಜಿ ನೆಟ್ವರ್ಕ್ ಸೇವೆ ಆರಂಭ
- Technology
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಾಣಕ್ಯ ಪ್ರಕಾರ ನಿಜವಾದ ಫ್ರೆಂಡ್ ಅಂತ ಗುರುತಿಸುವುದು ಹೇಗೆ ಗೊತ್ತಾ?
ಚಾಣಕ್ಯ ಬರೀ ಅರ್ಥಶಾಸ್ತ್ರಜ್ಞ ಮಾತ್ರವಲ್ಲ ಮಹಾನ್ ಮೇಧಾವಿ, ಬದುಕಿನ ಪ್ರತಿಯೊಂದು ಹಂತದ ಬಗ್ಗೆ ತುಂಬಾನೇ ಚೆನ್ನಾಗಿ ವಿವರಿಸಿದ್ದಾರೆ. ಇವರು ಹೇಳಿರುವ ಮಾತುಗಳು ಸುಳ್ಳಾಗಲು ಸಾಧ್ಯವೇ ಇಲ್ಲ, ಅಷ್ಟು ನಿಖರವಾಗಿವೆ ಅವರ ಅವರು ಹೇಳಿರುವ ವಿಚಾರಗಳು. ಚಾಣಕ್ಯನ ಪ್ರಕಾರ ನಿಜವಾದ ಫ್ರೆಂಡ್‌ನ ಗುರುತಿಸುವುದು ಹೇಗೆ ಎಂದು ನೋಡೋಣ....
ನಿಜವಾದ ಸ್ನೇಹಿತ/ಸ್ನೇಹಿತೆ ಅಮೂಲ್ಯವಾದ ಆಸ್ತಿ
ಸ್ನೇಹಿತರಿಲ್ಲದ ವ್ಯಕ್ತಿಗಳಿರಲ್ಲ, ಆದರೆ ನಿಜವಾದ ಸ್ನೇಹಿತರನ್ನು ಪಡೆದಿರುವವರೇ ಪುಣ್ಯವಂತರು. ಬರೀ ಖುಷಿಯಲ್ಲಿ ಜೊತೆಯಲ್ಲಿ ಇರುವವರು ಸ್ನೇಹಿತರಲ್ಲ, ಕಷ್ಟದಲ್ಲಿ ಯಾರು ನಮ್ಮ ಜೊತೆ ಇರುತ್ತಾರೋ ಅವರೇ ನಿಜವಾದ ಸ್ನೇಹಿತರು.
ಆದರೆ ಅದನ್ನು ತಿಳಿಯಲು ಕಷ್ಟ ಬರುವವರೆಗೆ ಕಾಯಬೇಕೆ? ಬೇಡ, ಚಾಣಕ್ಯ ಹೇಳಿರುವ ಈ ಅಂಶಗಳನ್ನು ಗಮನಿಸಿದರೆ ಸಾಕು ನಿಮಗೆ ನಿಮ್ಮ ಫ್ರೆಂಡ್ ಫೇಕಾ ಅಥವಾ ರಿಯಲಾ? ಎಂದು ಗೊತ್ತಾಗುವುದು ನೋಡಿ:

ಈ ವ್ಯಕ್ತಿ ಬಗ್ಗೆ ತುಂಬಾ ಎಚ್ಚರ
ನಿಮ್ಮ ಜೊತೆ ತುಂಬಾ ಚೆನ್ನಾಗಿ ಮಾತನಾಡಿ ಹಿಂದೆಯಿಂದ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ವ್ಯಕ್ತಿಯನ್ನು ಎಂದಿಗೂ ಫ್ರೆಂಡ್ ಅಂತ ಭಾವಿಸಬೇಡಿ. ಇವರರು ಹೇಗೆಂದರೆ ಒಂದು ಪಾತ್ರೆಯಲ್ಲಿ ಮೇಲೆ ಹಾಲನ್ನು ತುಂಬಿ ಅದಕ್ಕೆ ವಿಷ ಬೆರೆಸಿರುವವರು. ನಿಮ್ಮ ಜೊತೆ ತುಂಬಾ ನೈಸಾಗಿ ಮಾತನಾಡುವ ಫ್ರೆಂಡ್ ಜೊತೆ ತುಂಬಾನೇ ಎಚ್ಚರದಿಂದಿರಿ. ನಿಜವಾದ ಫ್ರೆಂಡ್ ಎಲ್ಲಾ ವಿಷಯದಲ್ಲಿ ನಿಮ್ಮನ್ನು ಒಪ್ಪಬೇಕೆಂದಿಲ್ಲ, ನೀವು ಮಾಡಿದ್ದು ಸರಿಯಿಲ್ಲ, ಅದರಿಂದ ನಿಮಗೆ ಬೇಸರವಾಗುತ್ತಿದೆ ಎಂದು ಅವನು/ಅವಳು ಸುಮ್ಮನಾಗುವುದಿಲ್ಲ, ಅವರಿಗೆ ನಿಮ್ಮ ಬೇಸರಕ್ಕಿಂತ ನಿಮ್ಮ ಒಳಿತು ಮುಖ್ಯವಾಗುವುದು.

ಎಂಥವರನ್ನು ನೀವು ನಿರ್ಲಕ್ಷ್ಯ ಮಾಡಬಾರದು
ನಿಮಗೆ ಏನಾದರೂ ತೊಂದರೆಯಾದರೆ ಯಾರು ಮುಂದೆ ಬಂದು ನಿಮ್ಮ ಸಹಾಯಕ್ಕೆ ಬರುತ್ತಾರೋ ಅವರೇ ನಿಮ್ಮ ನಿಜವಾದ ಸ್ನೇಹಿತರು. ಇನ್ನು ಇಡೀ ಜಗತ್ತು ನಿಮ್ಮನ್ನು ದೂಷಿಸುವಾಗ ನಿಮ್ಮ ಜೊತೆ ನಿಂತು ಸರಿ ದಾರಿಯಲ್ಲಿ ನಡೆಸುವವರೇ ನಿಜವಾದ ಸ್ನೇಹಿತರು. ನಿಜವಾದ ಸ್ನೇಹಿತ ನಾವು ಸತ್ತು ಸ್ಮಶಾನದಲ್ಲಿದ್ದರೂ ಸ್ಮಶಾನಕ್ಕೆ ಬಂದು ನಮ್ಮನ್ನು ಮಾತನಾಡಿಸುತ್ತಾನೆ, ಅಂಥವನೇ ನಿಜವಾದ ಸ್ನೇಹಿತ.

ಇವರು ನಿಮ್ಮ ಸ್ನೇಹಿತರು ಎಂದು ಭಾವಿಸಬೇಡಿ
ನಿಜವಾದ ಸ್ನೇಹಿತ ನಿಮ್ಮ ರಹಸ್ಯವನ್ನಾಗಲಿ ಅಥವಾ ನಿಮ್ಮ ಖಾಸಗಿ ಬದುಕಿನ ಕುರಿತಾಗಲಿ ಬೇರೆಯವರ ಜೊತೆ ಮಾತನಾಡುವುದಿಲ್ಲ. ನೀವು ಸ್ನೇಹಿತರು ಎಂದು ಭಾವಿಸಿದ ವ್ಯಕ್ತಿ ನಿಮ್ಮ ಖಾಸಗಿ ವಿಷಯಗಳನ್ನು ಬೇರೆಯವರ ಜೊತೆ ಹೇಳುತ್ತಾರೆ ಎಂದಾದರೆ ಅವರು ನಿಮ್ಮ ಸ್ನೇಹಿರರಾಗಿರಲ್ಲ, ನಿಮ್ಮಿಂದ ಏನೋ ಬಯಸಿ ನಿಮ್ಮ ಜೊತೆಯಲ್ಲಿರುತ್ತಾರೆ ಅಷ್ಟೇ.

ಹಣವಿದ್ದಾಗ ಜೊತೆಗಿರುವವರು
ಹಣ, ಪದವಿ ಅಂತ ಬಂದಾಗ ತುಂಬಾ ಸ್ನೇಹಿತರು ನಮ್ಮ ಜೊತೆ ಇರುತ್ತಾರೆ. ಆದರೆ ನಮಗೆ ಕಷ್ಟ ಬಂದಾಗ ಕೆಲವೇ ಕೆಲವರಷ್ಟೇ ಇರುತ್ತಾರೆ. ಸಾಕಷ್ಟು ಬಾರಿ ಇವರನ್ನು ನಾವು ಗುರುತಿಸದೇ ತಪ್ಪು ಮಾಡುತ್ತೇವೆ. ಏನಾದರೂ ಅವಶ್ಯಕತೆ ಮಾತ್ರ ಬರುವ ಫ್ರೆಂಡ್ ನಿಮಗಿದ್ದರೆ ಆದಷ್ಟೂ ಅವನಿಂದ ದೂರವಿರಿ.

ಎಂಥವರನ್ನು ಫ್ಯಾಮಿಲಿ ಫ್ರೆಂಡ್ ಮಾಡಬೇಕು?
ಎಲ್ಲರಿಗೂ ಫ್ಯಾಮಿಲಿ ಫ್ರೆಂಡ್ ಇರುತ್ತಾರೆ, ಆದರೆ ಫ್ಯಾಮಿಲಿ ಫ್ರೆಂಡ್ ಅನ್ನು ಆಯ್ಕೆ ಮಾಡುವಾಗ ತುಂಬಾ ಹುಷಾರಾಗಿರಬೇಕು
ಶಾಲೆಯಲ್ಲಿ, ಕಾಲೇಜಿನಲ್ಲಿ, ವರ್ಕ್ ಪ್ಲೇಸ್‌ನಲ್ಲಿ ಫ್ರೆಂಡ್ಸ್ ಸಿಗುತ್ತಾರೆ, ಆದರೆ ಫ್ಯಾಮಿಲಿ ಫ್ರೆಂಡ್ ಅಂತ ಕೆಲವೇ ಕೆಲವು ಜನರು ಇರುತ್ತಾರೆ. ಚಾಣಕ್ಯ ಹೇಳುತ್ತಾರೆ ಈ ಫ್ಯಾಮಿಲಿ ಫ್ರೆಂಡ್ಸ್ ಆಯ್ಕೆ ಮಾಡುವಾಗ ತುಂಬಾನೇ ಹುಷಾರಾಗಿರಬೇಕು.
ಅದರಲ್ಲೂ ಕೆಟ್ಟ ಚಟುವಟಿಕೆಯಲ್ಲಿ ತೊಡಗಿರುವವರನ್ನು, ಕೆಟ್ಟ ಹವ್ಯಾಸ ಇರುವವರನ್ನು ದೂರವಿಡಬೇಕು. ಏಕೆಂದರೆ ಅವರು ನಾಶವಾಗುವುದು ಮಾತ್ರವಲ್ಲ ಅವರ ಸಂಗದಿಂದ ನಾವೂ ನಾಶವಾಗುತ್ತೇವೆ, ಆದ್ದರಿಂದ ಅವರನ್ನು ದೂರವಿಡಬೇಕು.
ಯಾವಾಗಲೂ ಒಳ್ಳೆಯ ಸ್ನೇಹ ಮಾಡಿ. ಆ ಸ್ನೇಹಿತರು ನಮ್ಮ ಸುಖದಲ್ಲಿ ಮಾತ್ರವಲ್ಲ, ಕಷ್ಟದಲ್ಲೂ ಭಾಗಿಯಾಗುವವರು ಆಗಿರಬೇಕು.

ನಿಮ್ಮ ಸ್ನೇಹಿತರಲ್ಲಿ ಈ 4 ಗುಣಗಳಿವೆಯೇ ಎಂದು ಪರೀಕ್ಷಿಸಿ
1. ನಿಮಗಾಗಿ ತ್ಯಾಗ ಮಾಡುತ್ತಾರಾ?
ನಿಮಗೆ ಅವಶ್ಯಕತೆ ಬಿದ್ದಾಗ ನಿಮಗಾಗಿ ಅವರು ತ್ಯಾಗ ಮಾಡಲು ಸಿದ್ಧರಿದ್ದಾರಾ? ನಿಮ್ಮ ಕಷ್ಟಕ್ಕೆ ಜೊತೆಯಾಗಿ ನಿಲ್ಲುತ್ತಾರಾ ಅಥವಾ ಅವರ ವಿಷಯವೇ ಅವರಿಗೆ ದೊಡ್ಡದು ಎಂಬಂತೆ ಇರುತ್ತಾರಾ?ಈ ರೀತಿ ಇದ್ದರೆ ಖಂಡಿತ ಅವರು ನಂಬಿಕೆಗೆ ಅರ್ಹರಲ್ಲ.
2. ಮೊದಲೇ ಒಬ್ಬರ ಬಗ್ಗೆ ನಿರ್ಧಾರಕ್ಕೆ ಬರಬೇಡಿ
ನಾವು ಕೆಲವರನ್ನು ಕೆಲವು ಭೇಟಿಯಲ್ಲಿಯೇ ನಮ್ಮ ಫ್ರೆಂಡ್ ಅಂತ ಒಪ್ಪಿಕೊಳ್ಳುತ್ತೇವೆ, ಆದರೆ ಕೆಲವರು ಒಳ್ಳೆಯವರಾಗಿರುತ್ತಾರೆ, ಆದರೆ ತಕ್ಷಣವೇ ಒಬ್ಬರು ಒಳ್ಳೆಯವರು ಅಥವಾ ಕೆಟ್ಟವರು ಎಂಬ ನಿರ್ಧಾರಕ್ಕೆ ಬರಬೇಡಿ, ಸಮಯ ಬಂದಾಗ ಮಾತ್ರ ಗೊತ್ತಾಗುವುದು.
3. ನಿಮ್ಮ ಒಳಿತನ್ನು ಬಯಸುತ್ತಿದ್ದಾನಾ /ಳಾ
ನಿಜವಾದ ಸ್ನೇಹಿತರು ನಿಮ್ಮ ಒಳಿತನ್ನು ಬಯಸುತ್ತಾರೆ. ಅವರು ನಿಮ್ಮನ್ನು ಹೊಗಳುವುದು ಮಾತ್ರವಲ್ಲ ಸರಿಯಿಲ್ಲ ಎಂದು ಕಂಡರೆ ಸರಿಯಿಲ್ಲ ಅಂತ ಹೇಳುತ್ತಾರೆ. ಆದ್ದರಿಂದ ನಿಮ್ಮ ಒಳಿತಿಗಾಗಿ ಬಯಸುವವರು ಮಾತ್ರ ಒಳ್ಳೆಯ ಸ್ನೇಹಿತರಾಗಿರಲು ಸಾಧ್ಯ.
4. ನಿಮ್ಮನ್ನು ಕೇರ್ ಮಾಡುವವ
ಆ ವ್ಯಕ್ತಿ ನೋಡೋಕೆ ಚೆನ್ನಾಗಿದ್ದಾನೆ, ಒಳ್ಳೆ ಯ ಪದವಿಯಲ್ಲಿದ್ದಾನೆ ಎಂದ ಮಾತ್ರಕ್ಕೆ ನಿಮ್ಮ ಸ್ನೇಹಿತ ಅಂತ ಒಪ್ಪಿಕೊಳ್ಳಬೇಡಿ, ನಿಮ್ಮ ಬಗ್ಗೆ ಕೇರ್ ಮಾಡುತ್ತಾನಾ ಗಮನಿಸಿ ಅಂಥವರು ಮಾತ್ರ ಒಳ್ಲೆಯ ಸ್ನೇಹಿತರಾಗಲು ಸಾಧ್ಯ.