For Quick Alerts
ALLOW NOTIFICATIONS  
For Daily Alerts

ನಿಮ್ಮ ಹೆಂಡತಿ ಮಾತು ಕೇಳದೆ ಹೋದರೆ ಏನಾಗುತ್ತೆ ಗೊತ್ತಾ?

|

ಪ್ರೀತಿ ಮಾಡಿ ಮದುವೆಯಾಗಿರಿ ಇಲ್ಲಾ ಅರೇಂಜ್ ಮ್ಯಾರೇಜ್ ಆಗಿರಿ ಮದುವೆಗೆ ಮೊದಲು ನಿಮ್ಮ ಹುಡುಗಿ ಏನು ಹೇಳಿದರೂ ನಮಗೆ ಚೆಂದನೇ, ಅವಳ ಒಂದು ಧ್ವನಿಗಾಗಿ ನೀವು ಕಾಯುತ್ತಿರುತ್ತೀರಿ, ಅವಳು ಪೆದ್ದು-ಪೆದ್ದಾಗಿ ಏನಾದರೂ ಹೇಳಿದರೂ ಚೆಂದನೇ ಕಾಣಿಸುತ್ತಾಳೆ, ನಕ್ಕು ಅವಳ ಕಣ್ಣುಗಳನ್ನೇ ದಿಟ್ಟಿಸಿ ಅವಳ ಮಾತಿಗೆ ಸ್ಪಂದಿಸಿರುತ್ತೀರಿ, ಹೌದು ತಾನೆ?

ಆದರೆ ಮದುವೆಯಾಗಿ ಕೆಲವು ವರ್ಷಗಳು ಕಳೆಯುತ್ತಿದ್ದಂತೆ ನೀವು ನಿಮ್ಮದೇ ಲೋಕದಲ್ಲಿ ಮುಳುಗಿ ಹೋಗುವಿರಿ, ಅವಳು ಏನಾದರೂ ಹೇಳಲು ಬಂದರೆ ಕೇಳುತ್ತಿದ್ದಂತೆ ಫೋನ್ ಮೇಲೆ ಕಣ್ಣಾಡಿಸುತ್ತೀರಿ, ಇಲ್ಲಾ ರೇಗುತ್ತೀರಿ ಏಕೆ ಹಾಗೆ? ಏನೇ ಇರಲಿ ನೀವು ಈ ರೀತಿ ಮಾಡುತ್ತಿದ್ದರೆ ಅದನ್ನು ಬದಲಾಯಿಸುವುದು ಒಳ್ಳೆಯದು, ಇಲ್ಲದಿದ್ದರೆ ನಿಮ್ಮ ಸಂಸಾರದಲ್ಲಿ ತೊಂದರೆ ಗ್ಯಾರಂಟಿ, ಹೇಗೆ ಅಂತನಾ? ಈ ಲೇಖನ ಓದಿ....

ಒಂದು ಸುಂದರವಾದ ಸಂಸಾರ ಬೇಕೆಂದರೆ ಗಂಡ ಹೆಂಡತಿ ಮಾತನ್ನು ಕೇಳಿಕೊಳ್ಳುವ ಗುಣ ಬೆಳೆಸಬೇಕು, ಕೆಲವರು ನಾನು ಹೆಂಡತಿ ಮಾತು ಕೇಳುತ್ತಿದ್ದರೆ ಅಮ್ಮನವರ ಗಂಡ ಅಂತ ಬೇರೆಯವರು ಆಡಿ ಕೊಳ್ಳುತ್ತಾರೋ ಎಂದು ಅವಳ ಯಾವ ಅಭಿಪ್ರಾಯವೂ ಕೇಳುವುದಿಲ್ಲ, ನಾನು ಹೇಳಿದ್ದನ್ನು ನೀನು ಪಾಲಿಸಬೇಕು ಏಕೆಂದರೆ ನಾನು ಗಂಡಸು ಅಹಂ ತೋರಿಸುತ್ತಾರೆ. ಇನ್ನು ಕೆಲರು ಇರುತ್ತಾರೆ ಹೊರಗಡೆ ಜನರ ಜೊತೆ ನಗು-ನಗುತ್ತಾ ಮಾತನಾಡುತ್ತಾರೆ, ಅದೇ ಮನೆಗೆ ಬಂದ ತಕ್ಷಣ ಗಂಭೀರ ವದನದವರಾಗಿ ಕುಳಿತು ಬಿಡುತ್ತಾರೆ. ಮತ್ತೆ ಕೆಲವರು ಹೆಂಡತಿ ಜೊತೆ ಸ್ವಲ್ಪ ಹೊತ್ತು ಮಾಡುವುದಕ್ಕಿಂತ ಮೊಬೈಲ್, ಟಿವಿಯೇ ನಮ್ಮ ಪ್ರಪಂಚ ಎಂದು ಕುಳಿತು ಬಿಡುತ್ತಾರೆ.

ಹೆಂಡತಿ ಮಾತು ಕೇಳದೇ ಹೋದರೆ ಸಂಸಾರದಲ್ಲಿ ಏನೆಲ್ಲಾ ಆಗುವ ಸಾಧ್ಯತೆಗಳಿವೆ ನೋಡಿ:

1. ಹೆಂಡತಿ ನಿಮ್ಮಿಂದ ಅಂತರ ಕಾಯ್ದುಕೊಳ್ಳುತ್ತಾಳೆ

1. ಹೆಂಡತಿ ನಿಮ್ಮಿಂದ ಅಂತರ ಕಾಯ್ದುಕೊಳ್ಳುತ್ತಾಳೆ

ಅವಳಿಗೆ ಅವಳ ಭಾವನೆಯನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಗೊತ್ತಾದ ತಕ್ಷಣ ನಿಮ್ಮ ಜೊತೆ ಏನೂ ಹೇಳದೆ ಅಂತರ ಕಾಯ್ದುಕೊಳ್ಳುತ್ತಾಳೆ. ಹೆಂಡತಿ ಎಂದರೆ ನಮಗೆ ಭಾವನೆಯೇ ಇಲ್ಲವೇ ಎಂಬ ಹತಾಶೆ ಅವಳಲ್ಲಿ ಇರುತ್ತದೆ. ಈ ಕಾರಣಕ್ಕೆ ಅವಳಿಗೆ ಒಂಟಿತನ ಕಾಡಲಾರಂಭಿಸುತ್ತದೆ. ಅದೇ ಅವಳನ್ನು ಖಿನ್ನತೆಗೆ ದೂಡಬಹುದು. ಇದರಿಂದ ಸಂಸಾರ ಹಾಳಾಗುವುದು.

2. ವಿಚಿತ್ರವಾಗಿ ವರ್ತಿಸಲಾರಂಭಿಸುತ್ತಾಳೆ

2. ವಿಚಿತ್ರವಾಗಿ ವರ್ತಿಸಲಾರಂಭಿಸುತ್ತಾಳೆ

ನಿಮಗೆ ಇತ್ತೀಚೆಗೆ ಪತ್ನಿಯ ವರ್ತನೆ ವಿಚಿತ್ರ ಹಾಗೂ ಕಿರಿಕಿರಿ ಅನಿಸುತ್ತಿದೆಯೇ ಹಾಗಾದರೆ ಅದಕ್ಕೆ ನೀವೇ ಕಾರಣವಾಗಿರಬಹುದು. ನೀವು ಏನಾದರೂ ಹೇಳಿದರೆ ಅದಕ್ಕೆ ತುಂಬಾ ನೀರಸ ಪ್ರತಿಕ್ರಿಯೆ ಅಥವಾ ಕೋಪದಿಂದ ವರ್ತಿಸುವುದು ಇವೆಲ್ಲಾ ನೀವು ಅವಳ ಮನಸ್ಸನ್ನು ಅರಿಯುತ್ತಿಲ್ಲ ಎಂದು ಅವಳು ವ್ಯಕ್ತಪಡಿಸುತ್ತಿರುವ ರೀತಿಯಾಗಿರುತ್ತದೆ.

ಅವಳ ವರ್ತನೆ ವಿಚಿತ್ರ ಅನಿಸಿದಾಗ ಅವಳ ಮೇಲೆ ಕೋಪಗೊಳ್ಳುವ ಬದಲು ಕುಳಿತು ಅವಳ ಜೊತೆ ಮಾತನಾಡಿ, ಅವಳ ಮಾತುಗಳಿಗೆ ಕಿವಿಗೊಡಿ ಆಗ ಎಲ್ಲವೂ ಸರಿಯಾಗುತ್ತದೆ.

3. ಅವಳು ನಿಮ್ಮ ಮೇಲಿನ ಆಸೆ ಕಳೆದುಕೊಳ್ಳಬಹುದು

3. ಅವಳು ನಿಮ್ಮ ಮೇಲಿನ ಆಸೆ ಕಳೆದುಕೊಳ್ಳಬಹುದು

ನೀವು ಅವಳ ಮಾತಿಗೆ ಕಿವಿಗೊಡದೆ ಹೋದರೆ ಕ್ರಮೇಣ ಆಕೆಗೂ ನಿಮ್ಮ ಮೇಲಿನ ಆಸಕ್ತಿ ಕಡಿಮೆಯಾಗುವುದು. ಅವಳು ದೈಹಿಕವಾಗಿ ಹಾಗೂ ಮಾನಸಿಕ ಆಗಿ ನಿಮ್ಮಿಂದ ದೂರ ಹೋಗುತ್ತಾಳೆ. ಅವಳ ಆತ್ಮವಿಶ್ವಾಸ ಕುಗ್ಗುತ್ತದೆ. ನಿಮ್ಮ ಹೆಂಡತಿ ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ ಎಂದು ದೂರುವ ಬದಲು ನೀವು ಆಕೆ ಜೊತೆ ಮಾತನಾಡುವುದು ಮಾಡಿ, ಆಕೆ ಏನಾದರೂ ಹೇಳಿದರೆ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ. ಹೀಗೆ ಮಾಡಿದ್ದೇ ಆದರೆ ಖಂಡಿತ ಆಕೆ ನಿಮ್ಮ ಮೆಚ್ಚಿನ ಮಡದಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

4. ಅನೈತಿಕ ಸಂಬಂಧ ಬೆಳೆಸಬಹುದು

4. ಅನೈತಿಕ ಸಂಬಂಧ ಬೆಳೆಸಬಹುದು

ನಿಮ್ಮಿಂದ ಸಿಗದ ಭಾವನಾತ್ಮ ಬೆಂಬಲ, ಪ್ರೀತಿ, ಮೆಚ್ಚುಗೆ ನುಡಿ ಆಕೆಗೆ ಬೇರೆಯವರಿಂದ ಸಿಕ್ಕರೆ ಅವರ ಜೊತೆ ಅನೈತಿಕ ಸಂಬಂಧ ಬೆಳೆಸಬಹುದು. ಇಲ್ಲದಿದ್ದರೆ ನಿಮ್ಮ ಜೊತೆ ಸಮಯ ಕಳೆಯುವ ಬದಲು ಮನೆಯವರ ಜೊತೆ ಅಥವಾ ಸ್ನೇಹಿತ ಜೊತೆ ಸಮಯ ಕಳೆಯಬಹುದು. ಕೆಲಸಕ್ಕೆ ಹೋಗುತ್ತಿದ್ದರೆ ಬೇಗನೆ ಮನೆಗೆ ಬಂದು ನಿಮ್ಮ ಜೊತೆ ಸಮಯ ಕಳೆಯುವ ಬದಲು ಆಫೀಸ್‌ ಸಹೋದ್ಯೋಗಿಗಳ ಜೊತೆ ಹೆಚ್ಚು ಸಮಯ ಕಳೆಯ ಬಯಸಬಹುದು.

ಟ್ರೈನ್ ಹೋದ ಮೇಲೆ ಟಿಕೆಟ್‌ ತಗೋಬಾರದು ಅಂತಾರೆ, ಹಾಗೆಯೇ ಸಂಸಾರ ಹಳಿ ತಪ್ಪಿದ ಮೇಲೆ ಬಾಯಿಬಾಡ್ಕೋ ಬದಲು ಸಂಸಾರವನ್ನು ಸುಂದರವಾಗಿಸಲು ಇಬ್ಬರು ಪ್ರಯತ್ನಿಸಬೇಕು. ಹೆಂಡತಿಯ ಮಾತು ಕೇಳಿದ ತಕ್ಷಣ ಅಮ್ಮವರ ಗಂಡ ಆಗಲ್ಲ, ನೀವು ಆಕೆಯ ಮಾತುಗಳಿಗೆ ಸ್ಪಂದಿಸಲು ಪ್ರಾರಂಭಿಸಿದರೆ ನಿಮಗೆ ಸರಿ ಅನಿಸಿದೇ ಇರುವ ವಿಷಯವನ್ನು ಆಕೆಗೆ ಹೇಳಿ ತಿದ್ದಬಹುದು, ಅವರು ನಿಮ್ಮ ಮನಸ್ಸಿಗೆ ನೋವು ಉಂಟು ಮಾಡಲು ಬಯಸುವುದಿಲ್ಲ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸುಖವಾಗಿ ಜೀವನ ನಡೆಸಬಹುದು. ನಾವು ಹೇಳುತ್ತಿರುವುದು ಸರಿ ತಾನೆ?

English summary

What Happens When You Don’t Listen to Your Wife in Kannada

What happens when you don't listen to your wife, have a look....
Story first published: Thursday, February 4, 2021, 13:35 [IST]
X
Desktop Bottom Promotion