For Quick Alerts
ALLOW NOTIFICATIONS  
For Daily Alerts

ನೀವು ಮದುವೆಯಾಗುವ ಹುಡುಗ ಒಳ್ಳೆಯವನೇ, ತಿಳಿಯುವುದು ಹೇಗೆ?

|

ಎಷ್ಟೋ ಹೆಣ್ಮಕ್ಕಳ ಜೀವನ ಮದುವೆಯಾದ ಮೇಲೆ ನರಕವಾಗಿರುತ್ತದೆ. ಮದುವೆಯಾಗುವಾಗ ಅವನ ಸ್ವಭಾವ, ಗುಣಗಳ ಬಗ್ಗೆ ತಿಳಿದಿರುವುದಿಲ್ಲ, ಮದುವೆಯಾಗಿ ಸ್ವಲ್ಪ ದಿನ ಕಳೆಯುತ್ತಿದ್ದಂತೆ ಅವನ ಒಂದೊಂದೇ ಮುಖವಾಡ ಕಳಚಲಾರಂಭಿಸುವುದು, ಆಗ ಛೇ... ಇವನನ್ನು ಮದುವೆಯಾಗಿ ನನ್ನ ಬಾಳು ಹಾಳಾಯ್ತಲ್ಲಾ, ನನ್ನ ಜೀವನ ಸಂಗಾತಿ ಆಯ್ಕೆ ಮಾಡುವಾಗ ಸ್ವಲ್ಪ ಎಚ್ಚರವಹಿಸಬೇಕಾಗಿತ್ತು ಎಂದು ಹೆಣ್ಮಕ್ಕಳಿಗೆ ಅನಿಸಲಾರಂಭಿಸುವುದು.

ಕೆಲವರು ಮದುವೆಯಾಯ್ತು, ಮಕ್ಕಳಾಯ್ತು ಇನ್ನೇನು ಮಾಡುವುದು, ನನ್ನ ತಲೆ ಬರಹ ಎಂದು ಎಲ್ಲವನ್ನು ಸಹಿಸಿಕೊಂಡು ಜೀವನ ನಡೆಸಿದರೆ ಇನ್ನು ಕೆಲವರು ವಿಚ್ಛೇದನ ಮೂಲಕ ಆ ನರಕದಿಂದ ಪಾರಾಗಲು ಬಯಸುತ್ತಾರೆ. ಮದುವೆ ಬಳಿಕ ಜೀವನ ಹೇಗಿರುತ್ತೆ ಎಂದು ಹೇಳಲು ಯಾರಿಗೂ ಸಾಧ್ಯವಿಲ್ಲ, ಆದರೆ ಹೆಣ್ಮಕ್ಕಳು ತಾವು ಮದುವೆಗೆ ಒಕೆ ಎನ್ನುವ ಮುನ್ನ ಅವನ ಬಗ್ಗೆ ಸ್ವಲ್ಪ ತಿಳಿದುಕೊಂಡರೆ ತಪ್ಪಾದ ಸಂಗಾತಿಯ ಆಯ್ಕೆಯನ್ನು ತಪ್ಪಿಸಬಹುದು.

ಹೌದು, ಮದುವೆಯಾಗುವ ಹುಡುಗನ ಆಸ್ತಿ, ಅಂತಸ್ತು, ಹುದ್ದೆಗಿಂತ ಅವನ ಗುಣ ಚೆನ್ನಾಗಿರಬೇಕು, ಆಗ ಮಾತ್ರ ಅವನ ಕೈ ಹಿಡಿದವಳು ಸುಖವಾಗಿರಲು ಸಾಧ್ಯ. ಆದರೆ ಅವನ ಗುಣ ಒಳ್ಳೆಯದಿದೆ ಎಂದು ತಿಳಿಯುವುದು ಹೇಗೆ? ಇಲ್ಲಿ ನೀಡಿರುವ ಕೆಲ ಟಿಪ್ಸ್ ನಿಮ್ಮ ಹುಡುಗನ ಗುಣಗಳ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳಲು ಸಹಾಯ ಮಾಡುವುದು ನೋಡಿ:

1. ಸಂವಹನ

1. ಸಂವಹನ

ನೀವು ಅವನ ಜೊತೆ ಮನಸ್ಸು ಬಿಚ್ಚಿ ಮಾತನಾಡಬೇಕು, ಅವನಾಡುವ ಮಾತುಗಳ ಬಗ್ಗೆಯೂ ಗಮನಿಸಬೇಕು. ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ಚರ್ಚಿಸಿ ಆಗ ಅವನ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುವುದು. ಡೇಟಿಂಗ್‌ ಮಾಡುವಾಗ, ಲವ್ ಮಾಡುವಾಗ ಅಥವಾ ಅರೇಂಜ್ ಮ್ಯಾರೇಜ್‌ ಗೊತ್ತಾದಾಗ ಅವನ ಮಾತುಗಳು ನಿಮ್ಮನ್ನು ಮತ್ತೊಂದು ಲೋಕಕ್ಕೆ ಕೊಂಡೊಯ್ಯಬಹುದು, ಆದರೆ ಅದುವೇ ವಾಸ್ತವ ಆಗಿರಬೇಕೆಂದು ಇಲ್ವಲ್ಲ, ಅವರ ಜೊತೆ ಕೆಲವೊಂದು ಸೀರಿಯಸ್‌ ವಿಷಯ ಕುರಿತು ಕೂಡ ಮಾತನಾಡಿ, ಅವರ ಬಾಡಿ ಲಾಂಗ್ವೇಜ್ , ಅವರ ಬೇರೆಯವರ ಜೊತೆ ಮಾತನಾಡುವ ರೀತಿ ಇವೆಲ್ಲವನ್ನು ನೋಡಿ ಅವರ ಬಗ್ಗೆ ಅಲ್ಪಸ್ವಲ್ಪ ತಿಳಿಯಬಹುದು.

2. ಅವರ ನಡವಳಿಕೆಯನ್ನು ಗಮನಿಸಿ

2. ಅವರ ನಡವಳಿಕೆಯನ್ನು ಗಮನಿಸಿ

ಒಬ್ಬ ವ್ಯಕ್ತಿಯನ್ನು ಮೊದಲ ನೋಟದಲ್ಲಿ ಅಂದಾಜು ಮಾಡುವುದು ತಪ್ಪು, ಅವರ ಬಗ್ಗೆ ಹೆಚ್ಚು ತಿಳಿಯಬೇಕಾದರೆ ಅವರ ಜೊತೆ ಹೆಚ್ಚು ಬೆರೆಯಬೇಕು. ಅವರ ನಡವಳಿಕೆ, ನಿಮ್ಮ ಜೊತೆ ವರ್ತಿಸುವ ರೀತಿ, ಹೆಣ್ಣಿನ ಬಗ್ಗೆ ಅವರಿಗಿರುವ ಅಭಿಪ್ರಾಯ ಎಲ್ಲವೂ ನಿಧಾನಕ್ಕೆ ತಿಳಿಯುವುದು. ಆದ್ದರಿಂದ ಅವರ ನಡವಳಿಕೆ ಗಮನಿಸಿ, ಆಗ ನಿಮಗೆ ಅವರ ಸ್ವಭಾವ ತಿಳಿಯುವುದು.

3. ಅವರ ಗುರಿಗಳೇನು ತಿಳಿಯಿರಿ

3. ಅವರ ಗುರಿಗಳೇನು ತಿಳಿಯಿರಿ

ಕೆಲವವರು ಅಪ್ಪ ಮಾಡಿದ ದುಡ್ಡಿನಲ್ಲಿ ಮಜಾ ಮಾಡ್ತಾ ಇರುತ್ತಾರೆ, ಅವರದ್ದು ಅಂತ ಒಂದು ದುಡಿಮೆ ಇರುವುದಿಲ್ಲ ಅಂಥ ಹುಡುಗನ್ನು ಮದುವೆಯಾದರೆ ಮುಂದೆ ಅವನು ಯಾವುದೇ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ, ಇದರಿಂದಾಗಿ ನೀವು ಸಾಕಷ್ಟು ಕಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಅವನ ಗುರಿಗಳ ಬಗ್ಗೆ ತಿಳಿಯಿರಿ. ಅಪ್ಪನ ವ್ಯವಹಾರ ನೋಡಿಕೊಳ್ಳುತ್ತಿದ್ದರೆ ಅದನ್ನು ಬೆಳೆಸಲು ಅವನ ಪ್ರಯತ್ನಗಳೇನು ಎಂಬುವುದನ್ನು ಗಮನಿಸಿ.

4. ಅವನ ಕುಟುಂಬ, ಮನೆತನ ನೋಡಿ

4. ಅವನ ಕುಟುಂಬ, ಮನೆತನ ನೋಡಿ

ಮದುವೆ ಅಂತ ಬಂದಾಗ ಅವನ ಮತೆತನ ಕೂಡ ನೋಡಬೇಕಾಗುತ್ತದೆ, ಅವನ ಮನೆಯವರು ಒಳ್ಳೆಯವರೇ, ಕುಟುಂಬದ ಜೊತೆ ಅವನ ಸಂಬಂಧ ಹೇಗಿದೆ? ಅವನ ಕುಟುಂಬದ ಮೌಲ್ಯಗಳೇನು ಎಂಬುವುದೆಲ್ಲ ತಿಳಿದುಕೊಳ್ಳಿ. ಅಲ್ಲದೆ ಆರ್ಥಿಕ ವಿಷಯದಲ್ಲಿ ಆತ ನಿಮ್ಮನ್ನೇ ಅವಲಂಬಿಸಿದ್ದಾನಾ ಎಂಬುವುದನ್ನು ಕೂಡ ಗಮನಿಸಿ, ಅವನ ಕುಟುಂಬವದರು ವರದಕ್ಷಿಣೆ ಕೇಳಿದರೆ ಅಂಥ ಸಂಬಂಧ ಮುಲಾಜಿಲ್ಲದೆ ತಿರಸ್ಕರಿಸಿ.

5. ನಿಮ್ಮನ್ನು ಹೇಗೆ ನೋಡಿಕೊಳ್ಳುತ್ತಿದ್ದಾನೆ ಎಂಬುವುದನ್ನು ಗಮನಿಸಿ

5. ನಿಮ್ಮನ್ನು ಹೇಗೆ ನೋಡಿಕೊಳ್ಳುತ್ತಿದ್ದಾನೆ ಎಂಬುವುದನ್ನು ಗಮನಿಸಿ

ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾನಾ? ನಿಮ್ಮನ್ನು ಹೇಗೆ ನೋಡಿಕೊಳ್ಳುತ್ತಿದ್ದಾನೆ ಎಂಬುವುದನ್ನು ಗಮನಿಸಿ. ಹಾಗಂತ ಈ ವಿಷಯದಲ್ಲಿ ನೀವು ಅವರನ್ನು ಜಡ್ಜ್‌ ಮಾಡುವುದು ಕೆಲವೊಮ್ಮೆ ತಪ್ಪಾಗಲೂಬಹುದು. ಮಾತು-ಮಾತಿಗೆ ಐ ಲವ್‌ ಯೂ ಬೇಬಿ ಅಂತ ಹೇಳುವುದು, ನೀವು ರೆಸ್ಟೋರೆಂಟ್‌ಗೆ ಹೋಗುವಾಗ ಅವರೇ ಡೋರ್‌ ತೆಗೆಯುವುದು, ನಿಮಗೆ ಒಂದು ಚಿಕ್ಕ ನೋವಾದಾಗ ಸಹಿಸದೆ ಇರುವುದು ಇವುಗಳನ್ನು ಕೆಲವರು ಮನಸ್ಸಿನಿಂದ ಮಾಡಿದರೆ ಇನ್ನು ಕೆಲವರು ಫೇಕ್ ಆಗಿರುತ್ತಾರೆ. ಇನ್ನು ಕೆಲವರು ಈ ರೀತಿಯ ತೋರ್ಪಡಿಕೆಯ ಪ್ರೀತಿ ತೋರಿಸದೇ ಇರಬಹುದು, ಐ ಲವ್‌ ಯೂ ಅಂತ ಹೇಳದೇ ಇರಬಹುದು ಆದರೆ ಅವರ ಮನಸ್ಸಿನಲ್ಲಿ ನಿಮ್ಮ ಅಗಾಧ ಪ್ರೀತಿ ಇರುತ್ತದೆ. ಆದ್ದರಿಂದ ನಿಜವಾದ ಪ್ರೀತಿಯನ್ನು ಗುರುತಿಸಲು ಪ್ರಯತ್ನಿಸಿ, ಇನ್ನೊಬ್ಬರ ಬದುಕಿಗೆ ಹೋಲಿಕೆ ಮಾಡಲು ಹೋಗಬೇಡಿ.

English summary

Tips On How To Choose The Right Man for Marriage in Kannada

Tips On How To Choose The Right Man for Marriage in Kannada, Read on...
X
Desktop Bottom Promotion