For Quick Alerts
ALLOW NOTIFICATIONS  
For Daily Alerts

ಸಂಗಾತಿಯಲ್ಲಿ ನನ್ನ ಬಿಟ್ಟುಹೋಗಬೇಡ ಅಂತ ಬೇಡಲೇಬೇಡಿ

|

ಸಂಬಂಧದಲ್ಲಿ ನನ್ನ ಬಿಟ್ಟು ಹೋಗಬೇಡ ಎಂದು ಬೇಡಲೇಬಾರದು ಆತನ ವರ್ತನೆಯಲ್ಲಿ ಇತ್ತೀಚೆಗೂ ಏನೋ ಬದಲಾವಣೆ, ಪ್ರೀತಿಯಿಂದ ಅಪ್ಪಿಕೊಳ್ಳುತ್ತಿದ್ದ ತೋಳುಗಳಿಗೆ ಬಲವೇ ಇಲ್ಲವೇನೋ ಎಂಬಂತೆ ಆತನ ಸಮೀಪ ಕೂತರೂ ಸುಮ್ಮನೆ ಇರುತ್ತಾನೆ. ಏನಾದರೂ ಕೇಳಿದರೆ ಸಿಡುಕು, ಆತನ ಕಣ್ಣುಗಳಲ್ಲಿ ಒಲವಿನ ಭಾಷೆ ನೋಡಿ ಅದೆಷ್ಟು ದಿನಗಳಾಯಿತೋ, ಸದಾ ತನ್ನ ಗುಂಗಿನಲ್ಲಿ ಇರುತ್ತಾನೆ. ತಾನಾಯಿತು, ತನ್ನ ಮೊಬೈಲ್ ಆಯ್ತು. ಸಮೀಪ ಇದ್ದರೂ ವಿರಹದ ನೋವು.

Marital Relationship

ಅಷ್ಟೊಂದು ಪ್ರೀತಿ ತೋರಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಏಕೆ ಹೀಗೆ ಆಡುತ್ತಿದ್ದಾನೆ, ನಾನು ಬೇಡವಾಯಿತೇ? ಎಂದು ಯೋಚಿಸುವಾಗ ಎದೆಯಲ್ಲಿ ಭಯ ಉಂಟಾಗುತ್ತದೆ. ಈತನಿಗೆ ನಾನು ಬೇಡವಾದರೆ ಮುಂದೇನು ಮಾಡುವುದು? ಎಂದು ಯೋಚಿಸಿದಷ್ಟೂ ಆತಂಕ ಹೆಚ್ಚಾಗುತ್ತದೆ. ಆತನ ಬಳಿ ಈ ಕುರಿತು ಮಾತನಾಡಲೇಬೇಕೆಂದು ತೀರ್ಮಾನಿಸಿ ಮಾನಾಡುತ್ತಾಳೆ. ಆತ 'ನಂಗೆ ನಿನ್ನ ಜೊತೆ ಇರಲು ಇಷ್ಟವಿಲ್ಲ' ಎಂದು ಬಿಡುತ್ತಾನೆ. ನನ್ನ ಬಿಟ್ಟು ಹೋಗಬೇಡ ಎಂದೆಲ್ಲಾ ಗೋಗೆರೆಯುತ್ತಾಳೆ ಅದಕ್ಕೆ ಆತನೇ ಮೌನವೇ ಉತ್ತರವಾಗಿರುತ್ತದೆ...

ಸಂಬಂಧ ಎಂದ ಮೇಲೆ ಎರಡು ಜೀವಗಳ ನಡುವೆ ಬಾಂಧವ್ಯ ಇದ್ದರೆ ಮಾತ್ರ ಆ ಸಂಬಂಧ ಉಸಿರಾಡುತ್ತದೆ, ಇಲ್ಲದಿದ್ದರೆ ಅಂತಹ ಸಂಬಂಧದಲ್ಲಿಇದ್ದರೂ ಅದರಿಂದ ದುಃಖವಲ್ಲದೆ ಬೇರೇನೂ ಸಿಗಲ್ಲ. ಒಬ್ಬ ವ್ಯಕ್ತಿಗೆ ನಾವು ಬೇಡವಾದ ಎಂದ ಮೇಲೆ ಆ ವ್ಯಕ್ತಿ ಬಳಿ ನನ್ನ ಬದುಕಿಗೆ ನೀನು ಬೇಕೇ ಬೇಕು ಎಂದು ಕಾಡಿ ಬೇಡುವುದರಲ್ಲಿ ಯಾವುದೇ ಅರ್ಥವಿಲ್ಲ. ನಮ್ಮನ್ನು ಬೇಡವಾದ ವ್ಯಕ್ತಿಯ ಜೊತೆ ನಮ್ಮೊಂದಿಗೆ ಇರು ಎಂದು ಬೇಡಲೇಬಾರದು ಎಂಬುವುದು ಇದೇ ಕಾರಣಕ್ಕೆ ನೋಡಿ...

1. ಆತ್ಮಗೌರವ ಇಲ್ಲವಾಗುವುದು

1. ಆತ್ಮಗೌರವ ಇಲ್ಲವಾಗುವುದು

ಪ್ರತಿಯೊಬ್ಬ ವ್ಯಕ್ತಿಗೆ ಆತ್ಮಗೌರವ ಎಂಬುವುದು ಇದ್ದೇ ಇರುತ್ತದೆ. ಅದಕ್ಕೆ ಯಾರಾದರೂ ಧಕ್ಕೆ ಮಾಡಿದರೆ ಅದನ್ನು ಸಹಿಸಿಕೊಂಡರೆ ಅದರಿಂದ ನಿಮ್ಮ ಗೌರವಕ್ಕೆ ನೀವೇ ಚ್ಯುತಿ ತಂದಂತೆ. ನಿಮ್ಮ ಸಂಗಾತಿಗೋಸ್ಕರ ನೀವು ನಿಮ್ಮ ಆತ್ಮ ಗೌರವ ಬಿಟ್ಟು ಅವರೊಂದಿಗೆ ಹೊಂದಿಕೊಂಡು ಹೋಗಲು ತೀರ್ಮಾನಿಸಿದರೂ ಅವರಿಂದ ನಿಮಗೆ ಗೌರವ ಸಿಗುವುದಿಲ್ಲ. ಹಾಗಾಗಿ ನೀವು ನೋವು, ಅವಮಾನ ಅನುಭವಿಸಬೇಕೇ ಹೊರತು ಅವರಿಂದ ಬದಲಾವಣೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.

2. ನಿಮ್ಮ ಸಂಬಂಧ ಕೊನೆಯ ಹಂತದಲ್ಲಿದೆ

2. ನಿಮ್ಮ ಸಂಬಂಧ ಕೊನೆಯ ಹಂತದಲ್ಲಿದೆ

ಸಂಬಂಧ ಕೊನೆಯ ಹಂತದಲ್ಲಿದೆ ಎಂದಾದರೆ ಆ ಸಂಬಂಧಕ್ಕೆ ಮತ್ತೆ ಜೀವ ಕೊಡು ಎಂದು ಸಂಗಾತಿಯಲ್ಲಿ ಬೇಡುವುದರಿಂದ ಏನೂ ಪ್ರಯೋಜನವಿಲ್ಲ. ಒಂದು ವೇಳೆ ನೀವು ನಿಮ್ಮ ಸಂಬಂಧ ಉಳಿಸಲು ಪ್ರಯತ್ನಿಸಿದರೂ ಅದು ತಾತ್ಕಾಲಿಕವಾಗಿರುತ್ತದೆ. ನಿಮ್ಮನ್ನು ಇಷ್ಟವಿಲ್ಲದಿರುವ ಆ ಸಂಗಾತಿಯಿಂದ ಪ್ರೀತಿ, ಖುಷಿ ದೊರೆಯಲು ಸಾಧ್ಯವೇ ಇಲ್ಲ. ಸಂಬಂಧ ಉಳಿಸಿಕೊಂಡು ಹೋಗಲು ನೀವೊಬ್ಬರೇ ಪ್ರಯತ್ನ ಮಾಡಿದರೆ ಅದರಿಂದ ಪ್ರಯೋಜನ ಸಿಗುವುದಿಲ್ಲ. ಆ ಕಡೆಯಿಂದಲೂ ಪ್ರತಿಕ್ರಿಯೆ ಬರಬೇಕು.

3. ನಿಮ್ಮ ಸಂಗಾತಿ ನಿಮ್ಮನ್ನು ಲೆಕ್ಕಕೇ ತಗೋಳಲ್ಲ

3. ನಿಮ್ಮ ಸಂಗಾತಿ ನಿಮ್ಮನ್ನು ಲೆಕ್ಕಕೇ ತಗೋಳಲ್ಲ

ನಿಮ್ಮ ಸಂಬಂಧ ಉಳಿಸಿಕೊಳ್ಳಲು ನೀವು ಏನು ಮಾಡಲೂ ಸಿದ್ಧ ಎಂದು ಅವರಿಗೆ ಗೊತ್ತಾದರೆ ಅದನ್ನು ಅವರು ಬ್ಲ್ಯಾಕ್‌ಮೇಲ್‌ ಅಸ್ತ್ರವನ್ನಾಗಿ ಬಳಸಬಹುದು. ಕೆಲವರು ಹೆಂಡತಿಗೆ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪೀಡಿಸುತ್ತಾರೆ. ನನ್ನ ಬಿಟ್ಟು ಹೋಗಲ್ಲ, ನನ್ನ ಜೊತೆ ಇರಲು ಆಕೆ ನಾನು ಹೇಳಿದ್ದನ್ನು ಪಾಲಿಸುತ್ತಾಳೆ ಎಂಬ ಅವಳ ವೀಕ್ನೆಸ್ ಅರ್ಥ ಮಾಡಿಕೊಂಡು ಆ ರೀತಿ ಹಿಂಸೆ ಕೊಡುತ್ತಿರುತ್ತಾನೆ. ಇನ್ನು ಕೆಲವರು ಸಂಗಾತಿಯ ಅಭಿಪ್ರಾಯಕ್ಕೇ ಬೆಲೆನೇ ಕೊಡುವುದಿಲ್ಲ. ಅವರ ಯಾವುದೇ ಪ್ಲಾನ್, ಖುಷಿ, ಸಮಸ್ಯೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿಲ್ಲ ಎಂದಾದ ಮೇಲೆ ಅರ್ಥವಿಲ್ಲದ ಆ ಸಂಬಂಧದಿಂದ ಹೊರ ಬಂದರೆ ಮಾತ್ರ ಜೀವನಕ್ಕೊಂದು ಅರ್ಥ ಸಿಗುತ್ತದೆ.

4.ಸಾಕಷ್ಟು ಅವಮಾನ, ನೋವು

4.ಸಾಕಷ್ಟು ಅವಮಾನ, ನೋವು

ನಿಮ್ಮ ಸಂಗಾತಿ ನಿಮ್ಮನ್ನು ಬಿಟ್ಟು ಹೋಗಬಾರದೆಂದು ನೀವು ಒತ್ತಾಯ ಮಾಡುವುದರಿಂದ ಅವರು ಮತ್ತೆ ನಿಮ್ಮೊಂದಿಗೆ ಖುಷಿ-ಖುಷಿಯಾಗಿ ಜೀವನ ಮಾಡುತ್ತಾರೆ ಎಂದು ನೀವು ಭಾವಿಸಿದರೆ ಅದು ತಪ್ಪು. ಏಕೆಂದರೆ ನಿಮ್ಮನ್ನು ಇಷ್ಟ-ಪಡದ ವ್ಯಕ್ತಿಯಿಂದ ನಿಮಗೆ ಸಿಗುವುದು ನೋವು, ಅವಮಾನ ಮಾತ್ರ. ಸಂಗಾತಿ ಬಳಿ ನೀನು ನನಗೆ ಬೇಕೇ ಬೇಕು, ದಯವಿಟ್ಟು ನನ್ನ ಬಿಟ್ಟು ಹೋಗಬೇಡ ಎಂದು ಬೇಡಿಕೊಂಡಷ್ಟೂ ಅವರೂ ನಿಮ್ಮನ್ನು ಮತ್ತಷ್ಟು ತುಳಿಯುವ ಪ್ರಯತ್ನ ಮಾಡುತ್ತಾರೆ. ನಿಮ್ಮ ಭಾವನೆಗಳಿಗೆ ಬೆಲೆ ಕೊಡುವುದಿಲ್ಲ.

5. ಅವರು ನಿಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಳ್ಳಬಹುದು

5. ಅವರು ನಿಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಳ್ಳಬಹುದು

ನಿಮ್ಮನ್ನು ಇಷ್ಟವಿಲ್ಲದೆ, ಬೇರೆ ಯಾರದೋ ಅಥವಾ ಯಾವುದೋ ಒತ್ತಾಯಕ್ಕೆ ನಿಮ್ಮೊಂದಿಗೆ ಇದ್ದಾರೆ ಎಂದಾದರೆ ಅವರನ್ನು ಅವರ ಪಾಡಿಗೆ ಹೋಗಲು ಹೇಳಿ. ಏಕೆಂದರೆ ಆ ವ್ಯಕ್ತಿ ಎಂದಿಗೂ ನಿಮ್ಮ ಭಾವನೆಗಳಿಗೆ ಸ್ಪಂದಿಸುವುದಿಲ್ಲ. ನೀವು ಮಾಡುವ ಪ್ರತಿಯೊಂದು ಕೆಲಸವೂ ಅವನು/ ಅವಳಿಗೆ ಕಿರಿಕಿರಿ ಅನಿಸಲಾರಂಭಿಸುವುದರಿಂದ ನಿಮ್ಮೊಂದಿಗೆ ತುಂಬಾ ನಿಷ್ಠೂರವಾಗಿ ನಡೆದುಕೊಳ್ಳುತ್ತಾರೆ. ಇದರಿಂದ ನೋವು ಅನುಭವಿಸುವಂತಾಗುವುದು.

6. ಸಂತೋಷವಾಗಿ ಇರಲು ಸಾಧ್ಯವಿಲ್ಲ

6. ಸಂತೋಷವಾಗಿ ಇರಲು ಸಾಧ್ಯವಿಲ್ಲ

ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಖುಷಿಯಾಗಿ ಬಾಳಿದರೆ ಮಾತ್ರ ಸಂಬಂಧದಲ್ಲಿ ಖುಷಿ ಇರಲು ಸಾಧ್ಯ. ಒತ್ತಾಯದ ಸಂಬಂಧದಲ್ಲಿ ಎಂದೂ ಖುಷಿ ಕಾಣಲು ಸಾಧ್ಯವಿಲ್ಲ. ನಿಮ್ಮ ನೋವಿಗೆ ಸ್ಪಂದನೆ ಸಿಗುವ ಬದಲು ನಿಮ್ಮನ್ನು ನೋಯಿಸುವುದರಲ್ಲಿಯೇ ಖುಷಿ ಕಾಣುತ್ತಾರೆ. ಅವನು ಅಥವಾ ಅವಳು ನಿಮ್ಮ ಹಣ, ನಿಮ್ಮ ಆಸ್ತಿ ಎಲ್ಲವನ್ನೂ ಕಿತ್ತುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಆತ/ ಆಕೆಯ ಈ ವರ್ತನೆ ನಿಮ್ಮನ್ನು ಮತ್ತಷ್ಟು ದುಃಖಕ್ಕೆ ದೂಡುತ್ತದೆ.

7. ಅಸಹಾಯಕ/ಳು ಅನಿಸುವುದು

7. ಅಸಹಾಯಕ/ಳು ಅನಿಸುವುದು

ನಿಮ್ಮನ್ನು ಬೇಡದ ವ್ಯಕ್ತಿಗೆ ನೀವು ಏನು ಮಾಡಿದರೂ ಖುಷಿಯಾಗುವುದಿಲ್ಲ. ಅವರ ಬೇಡಿಕೆಗಳಿಗೆ ನೀವು ಸ್ಪಂದಿಸಿದಷ್ಟೂ ಅವರ ಬೇಡಿಕೆ ಪಟ್ಟಿ ಬೆಳೆಯುತ್ತದೆ ಹೊರತೂ ಅದರಿಂದ ನಿಮ್ಮ ಮೇಲೆ ಪ್ರೀತಿ ಮೂಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನೀನು ನನಗೆ ಆಸ್ತಿ ಕೊಡು, ಹಣ ಕೊಡು ಎಂಬ ಬೇಡಿಕೆ ಮುಂದಿಟ್ಟಾಗ ಅದನ್ನು ಪೂರೈಸಿದರೆ ಮತ್ತೆ ಆತ/ ಅವಳು ನನ್ನ ಜೊತೆ ಚೆನ್ನಾಗಿರುತ್ತಾಳೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಅವರು ಆ ಕ್ಷಣ ನಿಮ್ಮ ಜೊತೆ ಚೆನ್ನಾಗಿರುವಂತೆ ನಟಿಸುತ್ತಾರೆ ಹೊರತು ನಿಜವಾಗಿಯೂ ನಿಮ್ಮನ್ನು ಪ್ರೀತಿಸುವುದರಿಲ್ಲ. ಇದರಿಂದಾಗಿ ಮುಂದೊಂದು ದಿನ ಅಸಹಾಯಕ ಭಾವನೆ ಮೂಡುವುದು.

ನಿಮ್ಮಲ್ಲಿರುವ ಒಳ್ಳೆಯ ಗುಣಗಳಾಗಲಿ, ನಿಮ್ಮ ಪ್ರೀತಿಯಾಗಲಿ ಅರ್ಥ ಮಾಡಿಕೊಳ್ಳಲು ಒಂದು ಚಿಕ್ಕ ಪ್ರಯತ್ನವೂ ಮಾಡುವುದಿಲ್ಲ. ಮುಂದೆ ಹೋಗ್ತಾ-ಹೋಗ್ತಾ ಸಂಬಂಧ ಮತ್ತಷ್ಟು ಹಾಳಾಗಿ ನೆಮ್ಮದಿ, ಖುಷಿ ಎನ್ನುವುದು ಇಲ್ಲವಾಗುವುದು.

ಆದ್ದರಿಂದ ಇಷ್ಟವಿಲ್ಲದ ವ್ಯಕ್ತಿಯನ್ನು ಸಂಬಂಧದಲ್ಲಿ ಇರು ಅಂತ ಬಲವಂತ ಮಾಡುವ ಬದಲು ಅವರನ್ನು ಅವರ ಪಾಡಿಗೆ ಬಿಡುವುದೇ ಒಳಿತು ಉಂಟು ಮಾಡುವುದು. ಈ ಕುರಿತು ನೀವು ಏನು ಅಂತೀರಿ?

English summary

Don't Beg Your Partner To Stay In A Relationship

There are numerous other reasons that can help you to know why is it foolish to beg someone to stay in the relationship when they wanted to leave you.
X
Desktop Bottom Promotion