For Quick Alerts
ALLOW NOTIFICATIONS  
For Daily Alerts

ಸಂಗಾತಿಯನ್ನು ಓವರ್‌ ಕೇರಿಂಗ್‌ ಮಾಡಿದರೆ ಸಂಸಾರದಲ್ಲಿ ಸಮಸ್ಯೆ ಗ್ಯಾರಂಟಿ!

|

ಗಂಡ ಹೆಂಡತಿಯನ್ನು ಕೇರ್‌ ಮಾಡಬೇಕು, ಹೆಂಡತಿ ಗಂಡನನ್ನು ಕೇರ್ ಮಾಡಬೇಕು ಆದರೆ ಓವರ್‌ ಕೇರ್‌ ನೋ.... ನೋ ಮಾಡಲೇಬಾರದು. ಅತಿಯಾದರೆ ಅಮೃತವೂ ವಿಷವಾಗುತ್ತೆ ಅಂತಾರಲ್ಲ ಹಾಗೇ ಕೇರಿಂಗ್‌ ತುಂಬಾ ಆದರೆ ಆ ಸಂಸಾರ ಒಂದು ರೀತಿ ಉಸಿರುಕಟ್ಟಿದಂತಾಗುವುದು. ಯಾರು ಯಾರನ್ನೇ ಆಗಲಿ ತುಂಬಾನೇ ಕೇರ್ ಮಾಡಬಾರದು , ಹಾಗೇ ಮಾಡಿದ್ದೇ ಆದರೆ ಅದರಿಂದ ನಿಮಗೂ ಬೇಸರ ಅವರಿಗೂ ಹಿಂಸೆ.

caring In Relationship

ಗಂಡ-ಹೆಂಡತಿ ಪರಸ್ಪರ ಒಬ್ಬರನ್ನೊಬ್ಬರು ಕೇರ್‌ ಮಾಡಬೇಕು, ಆದರೆ ಆ ಕೇರ್‌ ಅತಿಯಾದರೆ ಇಷ್ಟೆಲ್ಲಾ ತೊಂದರೆಗಳಿವೆ ನೋಡಿ:

ಅವರಿಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಇಲ್ಲದಂತಾಗುವುದು

ಅವರಿಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಇಲ್ಲದಂತಾಗುವುದು

ನೀವು ಮಾಡುತ್ತಿರುವುದು ನಿಮಗೆ ಅವರ ಮೇಲಿನ ಪ್ರೀತಿಯಿಂದ ಅನಿಸಬಹುದು ಆದರೆ ಅವರಿಗೆ ನನ್ನ ಸ್ವಾತಂತ್ರ್ಯ ಕಡಿಮೆಯಾಗುತ್ತಿದೆ ಅನಿಸಬಹುದು. ಅಲ್ಲದೆ ಕೇರ್‌ನಿಂದ ಪ್ರತಿಯೊಂದನ್ನು ನಾವೇ ಮಾಡುತ್ತಾ ಹೋದರೆ ಅವರು ಪ್ರತಿಯೊಂದು ವಿಷಯಕ್ಕೆ ನಿಮ್ಮನ್ನೇ ಅವಲಂಬಿಸುತ್ತಾರೆ. ಯಾವುದೋ ಒಂದು ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದ ಸಮಯದಲ್ಲಿ ನೀವಿಲ್ಲದೆ ಅವರಿಗೆ ಸ್ವತಃ ಒಂದು ನಿರ್ಧಾರ ತೆಗೆದುಕೊಳ್ಳಲೂ ಸಾಧ್ಯವಾಗುವುದಿಲ್ಲ ಅಂತ ಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಇಬ್ಬರೂ ಅವರವರ ಸ್ಪೇಸ್ ನೀಡಬೇಕು. ನೀವು ಮಾಡುವ ಅತಿಯಾದ ಕಾಳಜಿಯಿಂದಾಗಿ ಒಳಿತಾಗುವುದಕ್ಕಿಂತ ಕೆಡುಕು ಅಧಿಕ. ಹಾಗಂತ ಕಾಳಜಿ ಮಾಡದಿದ್ದರೂ ಕಷ್ಟ. ಆದ್ದರಿಂದ ಕಾಳಜಿ ಎಂಬುವುದು ಸಾರಿಗೆ ಹಾಕುವ ಉಪ್ಪಿನಂತಿರಬೇಕು, ಅತಿಯಾದರೂ ತಿನ್ನಲು ಆಗಲ್ಲ, ಕಡಿಮೆಯಾದರೂ ರುಚಿಸಲ್ಲ ಹದವಿದ್ದರನೇ ರುಚಿ, ಹಾಗೆಯೇ ಸಂಸಾರದಲ್ಲಿ ಕಾಳಜಿ ಕೂಡ.

ಓವರ್‌ಕೇರ್‌ ಮಾಡಿದರೆ ಪ್ರೀತಿ ಕಡಿಮೆಯಾಗುವುದು

ಓವರ್‌ಕೇರ್‌ ಮಾಡಿದರೆ ಪ್ರೀತಿ ಕಡಿಮೆಯಾಗುವುದು

ಇದನ್ನು ಉದಾಹರಣೆಯೊಂದಿಗೆ ಹೇಳುವುದಾದರೆ ನಿಮ್ಮ ಸಂಗಾತಿ ಹೊರಗಡೆ ಹೋಗಿರುತ್ತಾರೆ ನೀವು ದಿನದಲ್ಲಿ ಒಂದೆರಡು ಬಾರಿ ಕಾಲ್ ಮಾಡಿ ಅವರನ್ನು ಮಾತನಾಡಿಸಿದರೆ ಒಕೆ ಆದರೆ ಅರ್ಧ ಗಂಟೆಗೊಮ್ಮೆ ನೀವು ಕರೆ ಮಾಡುತ್ತಿದ್ದರೆ ಅವರಿಗೆ ತುಂಬಾನೇ ಕಿರಿಕಿರಿ ಅನಿಸುವುದು. ನಿಮ್ಮ ಕರೆ ಸ್ವೀಕರಿಸಲು ಇಷ್ಟವಿಲ್ಲ, ಸ್ವೀಕರಿಸದೆ ಇರಲು ಸಾಧ್ಯವಿಲ್ಲದೆ ನಿಮ್ಮ ಮೇಲೆ ತುಂಬಾನೇ ಕೋಪಿಸಿಕೊಳ್ಳುತ್ತಾರೆ. ನೀವು ತೋರಿಸಿರುವುದು ಪ್ರೀತಿ, ಕಾಳಜಿಯಾದರೂ ಅವರಿಗೆ ಅದು ಹಿಂಸೆಯಾಗುವುದು.

ನಿಮ್ಮ ಓವರ್‌ಕೇರಿಂಗ್‌ನಿಂದಾಗಿ ನಿಮ್ಮಿಂದ ದೂರಾಗುವ ಸಾಧ್ಯತೆ ಇದೆ

ನಿಮ್ಮ ಓವರ್‌ಕೇರಿಂಗ್‌ನಿಂದಾಗಿ ನಿಮ್ಮಿಂದ ದೂರಾಗುವ ಸಾಧ್ಯತೆ ಇದೆ

ಮೊದಲೇ ಹೇಳಿದಂತೆ ತುಂಬಾ ಓವರ್‌ಕೇರ್ ಮಾಡಿದಾಗ ತುಂಬಾನೇ ಹಿಂಸೆ ಆಗುವುದು. ನಂತರ ಇದೇ ಕಾರಣಕ್ಕೆ ಅವರು ನಿಮ್ಮ ಮೇಲೆ ರೇಗಬಹುದು, ಅದರಿಂದ ನಿಮ್ಮ ಮನಸ್ಸಿಗೆ ನೋವಾಗುತ್ತೆ. ಹೀಗೆ ವಿನಾಕಾರಣಕ್ಕೆ ನಿಮ್ಮಿಬ್ಬರ ಮಧ್ಯ ದ್ವೇಷ ಬೆಳೆದು ದೂರ-ದೂರಾಗುವ ಸಾಧ್ಯತೆ ಕೂಡ ಇದೆ.

ಆದರೆ ಕಾಳಜಿ ಇರಲಿ, ಆದರೆ ಅತಿಯಾದ ಕಾಳಜಿ ಬೇಡ್ವೆ ಬೇಡ.....

 ಅತಿಯಾದ ಕಾಳಜಿ ಮಾಡುತ್ತಿದ್ದಾಗ ಏನು ಮಾಡಬೇಕು?

ಅತಿಯಾದ ಕಾಳಜಿ ಮಾಡುತ್ತಿದ್ದಾಗ ಏನು ಮಾಡಬೇಕು?

* ನಿಮ್ಮ ಸಂಗಾತಿ ನಿಮ್ಮನ್ನು ಮಿತಿಮೀರಿ ಕಾಳಜಿ ಮಾಡುತ್ತಿದ್ದು ಅದರಿಂದ ನಿಮಗೆ ಹಿಂಸೆಯಾಗುತ್ತಿದ್ದರೆ ಒಮ್ಮೆ ಅವರೊಂದಿಗೆ ಅಷ್ಟೇ ಪ್ರೀತಿಯಿಂದ ಕೂತು ಮಾತನಾಡಿ. ನಿಮ್ಮ ಕಾಳಜಿ ಬೇಕು ಆದರೆ ಅತಿಯಾದಾಗ ಯಾವ ರೀತಿ ಅನಿಸುತ್ತದೆ ಎಂಬುವುದನ್ನು ಹೇಳಿ.

* ಒಬ್ಬರಿಗೊಬ್ಬರು ಬೆಂಬಲವಾಗಿರಿ

ಸಂಸಾರವೆಂದ ಮೇಲೆ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲಬೇಕು. ಪ್ರೀತಿಯಿಂದ ನೋಡಿಕೊಳ್ಳಿ ಆದರೆ ನಿಮ್ಮ ಪ್ರೀತಿಯಿಂದ ಅವರಿಗೆ ಯಾವುದೇ ತೊಂದರೆ ಅನಿಸಬಾರದು, ಆ ರೀತಿ ವರ್ತಿಸಿ.

English summary

Does Over caring May Cause More problem In Relationship in kannada

vercaring In Relationship: It may cause problem in your relationship, be careful...
X
Desktop Bottom Promotion