For Quick Alerts
ALLOW NOTIFICATIONS  
For Daily Alerts

ವಯಸ್ಸಿನ ಜೊತೆಗೇ ಪ್ರೇಮವೂ ಪಕ್ವಗೊಳ್ಳಲು ವಿವಾಹ ಸಂಬಂಧ ಈ ಏಳು ಘಟ್ಟಗಳಲ್ಲಿ ಸಾಗಲಿ

|

ಬದಲಾವಣೆಯೇ ಜೀವನದ ನಿರಂತರ ಶಾಶ್ವತ ಎಂಬುದೊಂದು ಆಂಗ್ಲ ಸುಭಾಷಿತವಾಗಿದೆ. ಈ ವಾಕ್ಯವನ್ನು ಹೇಳಿದವರು ಗ್ರೀಕ್ ತತ್ವಜ್ಞಾನಿ ಹೆರಾಕ್ಲಿಟಸ್. ಹೆಚ್ಚಿನವರಿಗೆ ಇದೇ ಜೀವನದ ಮೂಲಮಂತ್ರವಾಗಿದೆ. ಜೀವನದಲ್ಲಿ ಬದಲಾವಣೆ ಅನಿವಾರ್ಯ ಎಂದು ನಾವೆಲ್ಲರೂ ಒಪ್ಪುತ್ತೇವೆ. ಈ ಬದಲಾವಣೆಗೆ ಒಗ್ಗಿಕೊಂಡು ಜೀವನದಲ್ಲಿ ಮುಂದುವರೆಯುವುದೇ ಎಲ್ಲರಿಗೂ ಅನಿವಾರ್ಯ ಸಹಾ.

ಆದರೆ ವಿವಾಹಬಂಧನದಲ್ಲಿಯೂ ಬದಲಾವಣೆಯಾಗುವುದು ಮಾತ್ರ ನಮಗೆ ಒಗ್ಗದ ಸಂಗತಿ. ಸಮಯದೊಂದಿಗೆ ಬಹುತೇಕ ಎಲ್ಲವೂ ಬದಲಾವಣೆಗೆ ಒಳಪಟ್ಟಾಗ ಕೆಲವು ಸುಟ್ಟರೆ ಕೆಲವು ಪಕ್ವಗೊಳ್ಳುತ್ತವೆ. ಅನಿವಾರ್ಯವಾಗಿ ನಾವು ಇಷ್ಟವಾದರೂ ಸರಿ, ಇಲ್ಲವಾದರೂ ಸರಿ, ಒಗ್ಗಿಕೊಳ್ಳಲೇಬೇಕಾಗುತ್ತದೆ. ಸಂಬಂಧ ತಜ್ಞರ ಪ್ರಕಾರ, ವಿವಾಹಬಂಧನವೂ ಸಮಯದೊಂದಿಗೇ ಪಕ್ವಗೊಳ್ಳುವುದು ಅಗತ್ಯವಾಗಿದೆ. ಬನ್ನಿ, ವಿವಾಹ ಪಕ್ವಗೊಳ್ಳಲು ಅಗತ್ಯವಾದ ಏಳು ಸಂಗತಿಗಳ ಬಗ್ಗೆ ಅರಿಯೋಣ...

 ಮೊದಲ ವರ್ಷ ಪರಸ್ಪರ ಅರಿತುಕೊಳ್ಳಲು ಮತ್ತು ಭವಿಷ್ಯದ ಬಗ್ಗೆ ಚಿಂತಿಸಲು ಇರಲಿ

ಮೊದಲ ವರ್ಷ ಪರಸ್ಪರ ಅರಿತುಕೊಳ್ಳಲು ಮತ್ತು ಭವಿಷ್ಯದ ಬಗ್ಗೆ ಚಿಂತಿಸಲು ಇರಲಿ

ಯಾವುದೇ ವಿವಾಹದ ಪ್ರಥಮ ವರ್ಷಗಳು ಅತ್ಯಂತ ಪ್ರಮುಖವಾಗಿದ್ದು ಪರಸ್ಪರರನ್ನು ಅರಿತುಕೊಳ್ಳಲು ಹಾಗೂ ಮುಂದಿನ ಜೀವನ ಸುಖಕರವಾಗಿರಲು ಭದ್ರ ಅಡಿಪಾಯವಾಗಿದೆ. ಹಾಗಾಗಿ ಈ ವರ್ಷಗಳಲ್ಲಿ ಪರಸ್ಪರರನ್ನು ಅರಿತುಕೊಳ್ಳುವ ಜೊತೆಗೇ ಭವಿಷ್ಯದ ಬಗ್ಗೆ ಚಿಂತನೆಯನ್ನು ನಡೆಸುವುದು ಅಗತ್ಯವಾಗಿದೆ. ಒಂದು ವೇಳೆ ದಂಪತಿಗಳಿಬ್ಬರ ಜೀವನದ ಗುರಿ ಬೇರೆಬೇರೆಯಾಗಿದ್ದರೂ ಸರಿ, ದಾಂಪತ್ಯಕ್ಕೇನೂ ಇದಕ್ಕೆ ಅಡ್ಡಿಯಾಗುವುದಿಲ್ಲ, ಅಡ್ಡಿಯಾಗಬಾರದು. ಬದಲಿಗೆ ಇಬ್ಬರ ಗುರಿಗಳೂ ತಲುಪುವಂತೆ ಪರಸ್ಪರರಿಗೆ ಸಹಕಾರ ನೀಡುವ ಬಗ್ಗೆ ಯೋಜನೆ ರೂಪಿಸಬೇಕು. ಭವಿಷ್ಯದಲ್ಲಿ ವಾಸವಾಗಲಿರುವ ಮನೆ, ಸ್ಥಳ, ಮಗುವಿನ ಬಗ್ಗೆ ಚಿಂತನೆ ನಡೆಸಬೇಕು. ಒಂದು ವೇಳೆ ಯಾವುದೋ ವಿಷಯ ಸಂಗಾತಿಗೆ ಇಷ್ಟವಾಗದು ಎಂದು ಅನ್ನಿಸಿ ಈ ಬಗ್ಗೆ ಚಕಾರವೆತ್ತದೇ ಇದ್ದರೆ ಇದು ತಜ್ಞರ ಪ್ರಕಾರ ತಪ್ಪು, ಏಕೆಂದರೆ ಮನದಾಳದಲ್ಲಿ ಉಳಿದಿರುವ ಇಂತಹ ಸಂಗತಿಗಳೇ ಮುಂದೆಂದೋ ಮೊಳಕೆಯೊಡೆದು ದಾಂಪತ್ಯದಲ್ಲಿ ಹುಳಿಹಿಂಡಬಹುದು. ಹಾಗಾಗಿ ಪ್ರಾರಂಭಿಕ ವರ್ಷದಲ್ಲಿಯೇ ಇಷ್ಟವಾಗುವ ಇಷ್ಟವಾಗದ ಎಲ್ಲಾ ವಿಷಯಗಳನ್ನು ಪರಸ್ಪರರೊಂದಿಗೆ ಹೇಳಿಕೊಂಡು ಮನಸ್ಸನ್ನು ತೆರೆದಿಡಬೇಕು.

ಯಾವುದೇ ಭಿನ್ನಾಭಿಪ್ರಾಯವಿದ್ದರೆ ಸ್ಪಷ್ಟಪಡಿಸಿ

ಯಾವುದೇ ಭಿನ್ನಾಭಿಪ್ರಾಯವಿದ್ದರೆ ಸ್ಪಷ್ಟಪಡಿಸಿ

ಭಿನ್ನಾಭಿಪ್ರಾಯವಿಲ್ಲದ ಇಬ್ಬರು ವ್ಯಕ್ತಿಗಳೇ ಈ ಜಗತ್ತಿನಲ್ಲಿಲ್ಲ. ಹೀಗಿದ್ದಾಗ ದಂಪತಿಗಳ ನಡುವೆಯೂ ಭಿನ್ನಾಭಿಪ್ರಾಯ ಇಲ್ಲದೇ ಇರುವುದಿಲ್ಲ. ಹಾಗಾಗಿ ನಿಮ್ಮಲ್ಲಿರುವ ಎಲ್ಲಾ ಅಭಿಪ್ರಾಯಗಳನ್ನು ಪ್ರಕಟಿಸಿ ಇವುಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಚರ್ಚಿಸಿ ಪ್ರಾರಂಭಿಕ ವರ್ಷಗಳಲ್ಲಿಯೇ ಇವನ್ನು ಬದಲಿಸಿ ಕೊಳ್ಳುವುದು ಅಥವಾ ಇದಕ್ಕೆ ಒಗ್ಗಿಕೊಳ್ಳುವುದೇ ಜಾಣತನದ ಕ್ರಮ. ಭಿನ್ನಾಭಿಪ್ರಾಯಗಳೇ ವಾಗ್ವಾದಕ್ಕೆ ಕಾರಣವಾದರೂ ಇದೇ ಅನ್ಯೋನ್ಯತೆಗೂ ಮೂಲ ಎಂಬುದನ್ನು ಮರೆಯಲು ಸಾಧ್ಯವಿಲ್ಲ. ತನ್ನ ಭಿನ್ನಾಭಿ ಪ್ರಾಯವನ್ನು ನನ್ನಲ್ಲಿ ಪ್ರಾಮಾಣಿಕವಾಗಿ ಪ್ರಕಟಿಸಿದ್ದಾನೆ/ಳೆ ಎಂಬ ಭಾವನೆ ಸಂಗಾತಿಯ ಬಗ್ಗೆ ಅಭಿಮಾನ ಪಡಲಿಕ್ಕೆ ಸಾಕು. ಹಾಗಾಗಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಇದನ್ನು ರಾತ್ರಿ ಮಲಗುವ ಮುನ್ನ ಸರಿಪಡಿಸುವುದು ಅಗತ್ಯ.

ಹೆಚ್ಚು ಹೆಚ್ಚಾಗಿ ಒಗ್ಗಿಕೊಳ್ಳುವತ್ತ ಒಲವು ತೋರಿ

ಹೆಚ್ಚು ಹೆಚ್ಚಾಗಿ ಒಗ್ಗಿಕೊಳ್ಳುವತ್ತ ಒಲವು ತೋರಿ

ಪ್ರಾರಂಭಿಕ ವರ್ಷಗಳು ಮುಂದುವರೆಯುತ್ತಿದ್ದಂತೆಯೇ, ಸಾಮಾನ್ಯವಾಗಿ ದಂಪತಿಗಳು ಮಾತಾಪಿತರೂ ಆಗುತ್ತಾರೆ. ಇದರೊಂದಿಗೆ ವೃತ್ತಿಜೀವನದಲ್ಲಿ ಪಡೆಯಬೇಕಾದ ಏಳ್ಗೆಯೂ ಅಪೇಕ್ಷೆಯಷ್ಟು ಮುನ್ನಡೆ ಪಡೆಯದೇ ಹೋಗಬಹುದು ಅಥವಾ ನೀವು ಕಂಡ ಕನಸು ಇನ್ನೂ ದೂರದ ಬೆಟ್ಟವಾಗಿಯೇ ತೋರಬಹುದು. ಪ್ರಾರಂಭಿಕ ವರ್ಷಗಳಂತಲ್ಲದೇ ಮುಂದಿನ ವರ್ಷಗಳಲ್ಲಿ ಈ ಈಡೇರದ ಕೋರಿಕೆ, ಕನಸುಗಳು ಅಸಹನೆಯಾಗಿ ಮಾರ್ಪಾಡು ಹೊಂದಬಹುದು. ಹಾಗಾಗಿ ಈ ವರ್ಷಗಳಲ್ಲಿ ಪರಸ್ಪರಿಗೆ ಒಗ್ಗಿಕೊಳ್ಳುವುದು ಕಷ್ಟಕರವಾಗಬಹುದಾದರೂ ಒಗ್ಗಿಕೊಳ್ಳುವ ಮೂಲಕವೇ ದಾಂಪತ್ಯ ಸುಖಕರವಾಗಿ ಮುಂದುವರೆಯಲು ಸಾಧ್ಯ.

ವಿವಾಹದಲ್ಲಿ ಇತರ ಜವಾಬ್ದಾರಿಗಳಿಗೂ ಪ್ರಮುಖ ಸ್ಥಾನವಿದೆ

ವಿವಾಹದಲ್ಲಿ ಇತರ ಜವಾಬ್ದಾರಿಗಳಿಗೂ ಪ್ರಮುಖ ಸ್ಥಾನವಿದೆ

ಸಾಮಾನ್ಯವಾಗಿ ವಿವಾಹದ ಪ್ರಾರಂಭಿಕ ವರ್ಷಗಳಲ್ಲಿ ಸಂಗಾತಿಗಳು ಪರಸ್ಪರರಿಗೆ ನೀಡುವ ನೆರವು, ಸಹಕಾರವನ್ನು ತಡ ಮೂವತ್ತರ ಅಥವಾ ನಲವತ್ತರ ಪ್ರಾರಂಭಿಕ ವರ್ಷಗಳಲ್ಲಿ ಪಡೆದುಕೊಳ್ಳಲು ಸಾಧ್ಯವಾಗದೇ ಹೋಗಬಹುದು. ಏಕೆಂದರೆ ಈ ವರ್ಷಗಳಲ್ಲಿ ಇತರ ಜವಾಬ್ದಾರಿಗಳು ಇಬ್ಬರ ಮೇಲೂ ಹೇರಲ್ಪಟ್ಟು ಪರಸ್ಪರರಿಗೆ ನೀಡುವ ಸಮಯ, ಗಮನ ಅನಿವಾರ್ಯವಾಗಿ ಕಡಿಮೆಯಾಗುತ್ತದೆ. ಮಕ್ಕಳ ಶಿಕ್ಷಣ, ಮದುವೆ, ಇತರ ಸಾಂಸಾರಿಕ ಜವಾಬ್ದಾರಿಗಳು ಮೊದಲಾದವು ದಂಪತಿಗಳನ್ನು ಪರಸ್ಪರ ಹತ್ತಿರವಿದ್ದರೂ ದೈಹಿಕವಾಗಿ ದೂರಾಗಿಸುತ್ತವೆ. ಒಂದು ವೇಳೆ ದೈಹಿಕ ಸಂಬಂಧದಿಂದ ದೂರವೇ ಆಗುತ್ತಾ ಹೋದರೆ ಮುಂದಿನ ವರ್ಷಗಳಲ್ಲಿ ಇನ್ನೂ ಜಟಿಲತೆ ಎದುರಿಸಬೇಕಾಗಿ ಬರಬಹುದು. ಹಾಗಾಗಿ ಈ ವಯಸ್ಸಿನಲ್ಲಿ ಹಿಂದಿನ ವರ್ಷಗಳಂತೆಯೇ ಲೈಂಗಿಕ ಜೀವನಕ್ಕೂ ಸಮಯ ಮೀಸಲಾಗಿಡುವುದು ಅಗತ್ಯ. ಹಾಗಾಗಿ ಸಂಬಂಧ ಪಕ್ವಗೊಳ್ಳಲು ಲೈಂಗಿಕ ತೃಪ್ತಿ ಅಗತ್ಯವಾಗಿದ್ದು ಇದರ ಕೊರತೆಯಿಂದ ಜೀವನದ ಇತರ ವಿಷಯಗಳತ್ತ ಗಮನ ನೀಡುವುದು ಕಡಿಮೆಯಾಗಬಾರದು.

ವಿವಾಹವನ್ನು ರಕ್ಷಿಸಿ

ವಿವಾಹವನ್ನು ರಕ್ಷಿಸಿ

ಸಾಮಾನ್ಯವಾಗಿ ನಡುವಯಸ್ಸು ದಾಟಿದ ಬಳಿಕ ದಂಪತಿಗಳು ಪರಸ್ಪರ ಕಚ್ಚಾಡುವುದು ಕಂಡುಬರುತ್ತದೆ. ವಿಶೇಷವಾಗಿ ಐವತ್ತರ ಪ್ರಾರಂಭಿಕ ಅಥವಾ ನಲವತ್ತರ ಕೊನೆಯ ವರ್ಷಗಳಲ್ಲಿ ಈ ಕಚ್ಚಾಟ ಕಾಣಬರುತ್ತದೆ. ಹಲವರ ಮನದಲ್ಲಿ ಈ ಜಗಳ ದಾಂಪತ್ಯ ತೊರೆದು ಹೋಗುವ ಅಥವಾ ಜಗಳದಲ್ಲಿ ಸೋಲೊಪ್ಪದೇ ಮಣಿಸಲು ಏನು ಮಾಡಬೇಕೆಂಬ ಪ್ರತೀಕಾರದ ಮನೋಭಾ ವವನ್ನು ಹುಟ್ಟುಹಾಕುತ್ತದೆ. ಇವೆರಡೂ ಅತ್ಯಂತ ಭಯಾನಕ ನಿರ್ಣಯಗಳಾಗಿದ್ದು ವಿವಾಹ ಬಿರುಕು ಬಿದ್ದು ಪ್ರತ್ಯೇಕವಾಗಲು ನೇರವಾಗಿ ಕಾರಣವಾಗುತ್ತವೆ. ದಂಪತಿಗಳ ನಡುವೆ ಕಲಹ, ಜಗಳ ಮೊದಲಾದವು ಎಷ್ಟಿದ್ದರೂ ಸರಿ, ನಿಮ್ಮ ಸಂಗಾತಿ ನಿಮ್ಮೊಂದಿಗೇ ಇಷ್ಟು ವರ್ಷಗಳನ್ನು ಕಳೆದಿದ್ದು ಈಗ ಈ ಪರಿಯಾಗಿ ಯೋಚಿಸುವುದು ಸಲ್ಲದು. ಬದಲಿಗೆ, ಇಬ್ಬರೂ ಪರಸ್ಪರ ಸೋಲೊಪ್ಪಿಕೊಂಡು ಪರಸ್ಪರ ಕ್ಷಮಿಸಿ ಮನಸ್ಸಿಗೆ ನೋವಾಗದ ಮಾತುಗಳನ್ನು ಮತ್ತೊಮ್ಮೆ ಉಲ್ಲೇಖಿಸದೇ ವಿವಾಹವನ್ನು ಉಳಿಸಿಕೊಳ್ಳಲು ಯತ್ನಿಸಬೇಕು.

ಹೊಸ ಯೋಜನೆಗಳನ್ನು ರೂಪಿಸಿ

ಹೊಸ ಯೋಜನೆಗಳನ್ನು ರೂಪಿಸಿ

ಸಾಮಾನ್ಯವಾಗಿ ರೆಕ್ಕೆ ಬಲಿತ ಮರಿಗಳು ಗೂಡನ್ನು ಬಿಟ್ಟು ಹಾರಿಹೋಗುವುದೇ ಪ್ರಕೃತಿಯ ನಿಯಮವಾಗಿದೆ. ಇದು ನಿಮ್ಮ ಮಕ್ಕಳಿಗೂ ಅನ್ವಯಿಸುತ್ತದೆ. ಹೆಣ್ಣು ಮಕ್ಕಳು ಮದುವೆಯಾಗಿ ತನ್ನ ಪತಿಯ ಮನೆಗೆ ತೆರಳಿದರೆ ಗಂಡುಮಕ್ಕಳು ಹೊಸಜೀವನಕ್ಕಾಗಿ ಬೇರೆ ಊರು, ಸ್ಥಳಕ್ಕೆ ಹೋಗಬಹುದು. ಅಥವಾ ತಂದೆ ತಾಯಿ ಯರೊಂದಿಗೇ ಇರಲು ಇಚ್ಛಿಸಬಹುದು. ಈಗ ನಿಮ್ಮ ಜೀವನ ಯಾವ ರೀತಿಯಲ್ಲಿ ಮುಂದುವರೆಯಬೇಕೆಂದು ನೀವು ಹೊಸ ಯೋಜನೆ ಗಳನ್ನು ಹಾಕಿಕೊಂಡು ಆ ಪ್ರಕಾರ ಮುಂದುವರೆಯ ಬೇಕು. ಸಾಮಾನ್ಯವಾಗಿ ಜೀವನದಲ್ಲಿ ಮಾಡಬೇಕಾದ ಹತ್ತು ಹಲವು ಕನಸುಗಳನ್ನು ನಾವು ನಮ್ಮ ವೃತ್ತಿ ಅಥವಾ ಇತರ ಕಾರಣಗಳಿಂದ ನೆರವೇರಿಸದೇ ಹೋಗಿರುತ್ತೇವೆ. ಐವತ್ತು ಮತ್ತು ಅರವತ್ತರ ನಡುವೆ ಈ ಕನಸುಗಳನ್ನು ಪೂರ್ಣಗೊಳಿಸಲು ಯತ್ನಿಸಬೇಕು. ಇದನ್ನೇ ಬಕೆಟ್ ಲಿಸ್ಟ್ ಎಂದು ಕರೆಯುತ್ತಾರೆ. ಹೊಸ ಯೋಜನೆಗಳನ್ನು ನಿಮ್ಮ ಸಾಮರ್ಥ್ಯಾನುಸಾರ ಯೋಜಿಸಿ ಅರವತ್ತು ತಲುಪುವ ಮೊದಲೇ ಇವನ್ನು ಪೂರ್ಣಗೊಳಿಸಲು ಯತ್ನಿಸಬೇಕು.

ಅನ್ಯೋನ್ಯತೆಯ ಅತ್ಯುತ್ತಮ ಕಾಲ

ಅನ್ಯೋನ್ಯತೆಯ ಅತ್ಯುತ್ತಮ ಕಾಲ

ದಂಪತಿಗಳ ನಡುವಣ ಅನ್ಯೋನ್ಯತೆಯನ್ನು ಅಳೆಯಲು ಸಾಧ್ಯವೇ? ತಜ್ಞರ ಪ್ರಕಾರ ಅರವತ್ತರ ಬಳಿಕವೇ ಅನ್ಯೋನ್ಯತೆಯ ಬೆಲೆ ಅರಿವಿಗೆ ಬರುತ್ತದೆ. ಸಾಮಾನ್ಯವಾಗಿ ವೃದ್ದಾಪ್ಯಕ್ಕೆ ಕಾಲಿಟ್ಟ ಬಳಿಕವೇ ವಿವಾಹವೂ ಅತ್ಯುತ್ತಮ ಘಟ್ಟದಲ್ಲಿರುತ್ತದೆ. ಜಗಳ ಕದನಕ್ಕೆ ಅವಕಾಶವೇ ಇಲ್ಲ, ಹಳೆಯ ಹಗೆತನ ವೈಷಮ್ಯಗಳು ನೆನಪೇ ಇರುವುದಿಲ್ಲ ಹಾಗೂ ಕೇವಲ ನಿಷ್ಕಲ್ಮಶ ಪ್ರೇಮ ಮಾತ್ರವೇ ಉಳಿದುಕೊಳ್ಳುತ್ತದೆ. ಪರಸ್ಪರರ ಆರೋಗ್ಯ, ಬೇಕು ಬೇಡಗಳ ಬಗ್ಗೆ ಕಾಳಜಿ ವಹಿಸುವುದೂ ಈ ವಯಸ್ಸಿನಲ್ಲಿ ಅತಿ ಹೆಚ್ಚಾಗಿದ್ದು ದಾಂಪತ್ಯವನ್ನು ಅತ್ಯಂತ ಸುಖಕರವಾಗಿಸುತ್ತದೆ.

English summary

These 7 Ways Your Marriage Should Evolve With Age

We all accept the role change plays in our life, we may not be very welcome to the thought that marriage too is included in this cycle of change. Things evolve with time because of change and whoever resists it, will have to bear its brunt in some way or the other. According to relationship experts, a marriage needs to evolve with time. So, let’s look at seven ways in which the conjugal relationship of a couple needs to evolve and adapt for a brighter future.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more