For Quick Alerts
ALLOW NOTIFICATIONS  
For Daily Alerts

ಸಂಗಾತಿ ಮೋಸ ಮಾಡುತ್ತಿದ್ದಾರೆ ಎನ್ನುವ ಐದು ಸುಳಿವುಗಳು

|

ಮೋಸ ಮಾಡುವುದು ಸಂಬಂಧದಲ್ಲಿ ಕಂಡುಬರುವಂತಹ ಸಾಮಾನ್ಯ ಸಂಗತಿಯಾಗಿದೆ. ಇದು ಸಂಬಂಧವನ್ನು ಹಾಳು ಮಾಡುತ್ತದೆ. ಇದು ಯಾವ ರೀತಿಯ ಗೊಂದಲದಲ್ಲಿ ಸಿಲುಕಿಸುತ್ತದೆಯೆಂದರೆ ಮುಂದೆ ಏನು ಮಾಡಬೇಕು ಎನ್ನುವುದೇ ತೋಚದಂತೆ ಆಗುತ್ತದೆ. ಕೆಲವು ಆಫೇರ್ ಗಳು ಖಾಸಗಿಯಾಗಿ ನಡೆಯುತ್ತಿರುತ್ತದೆ ಮತ್ತು ಇದರ ಬಗ್ಗೆ ನಿಮಗೆ ಸ್ವಲ್ಪವೂ ಮಾಹಿತಿ ಸಿಗುವುದಿಲ್ಲ. ಆದರೆ ಕೆಲವೊಂದು ಸಂಕೇತಗಳಿಂದ ಸಂಗಾತಿಯು ನಿಮಗೆ ಮೋಸ ಮಾಡುತ್ತಿದ್ದಾರೆ ಎಂದು ತಿಳಿಯಬಹುದು. ಈ ಸುಳಿವುಗಳನ್ನು ನೀವು ಕಡೆಗಣಿಸಬಹುದು. ಆದರೆ ಇದು ನಿಮಗೆ ಸಂಗಾತಿಯ ಬಗ್ಗೆ ಮಾಹಿತಿ ನೀಡುವುದು. ಈ ಎಲ್ಲಾ ಸುಳಿವುಗಳು ಯಾವುದು ಎಂದು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಸಂಗಾತಿಯ ವರ್ತನೆ ಮತ್ತು ನಡವಳಿಕೆಯನ್ನು ನೀವು ಗಮನಿಸಬೇಕು. ಇದರಿಂದ ನಿಮಗೆ ಭವಿಷ್ಯದಲ್ಲಿ ಪರಿಸ್ಥಿತಿಯನ್ನು ತುಂಬಾ ಸುಲಭವಾಗಿ ನಿಭಾಯಿಸಲು ಸಾಧ್ಯವಾಗುವುದು.

ಮೋಸ ಮಾಡುವುದು ಸಂಬಂಧದಲ್ಲಿ ಕಂಡುಬರುವಂತಹ ಸಾಮಾನ್ಯ ಸಂಗತಿಯಾಗಿದೆ. ಇದು ಸಂಬಂಧವನ್ನು ಹಾಳು ಮಾಡುತ್ತದೆ. ಇದು ಯಾವ ರೀತಿಯ ಗೊಂದಲದಲ್ಲಿ ಸಿಲುಕಿಸುತ್ತದೆಯೆಂದರೆ ಮುಂದೆ ಏನು ಮಾಡಬೇಕು ಎನ್ನುವುದೇ ತೋಚದಂತೆ ಆಗುತ್ತದೆ. ಕೆಲವು ಆಫೇರ್ ಗಳು ಖಾಸಗಿಯಾಗಿ ನಡೆಯುತ್ತಿರುತ್ತದೆ ಮತ್ತು ಇದರ ಬಗ್ಗೆ ನಿಮಗೆ ಸ್ವಲ್ಪವೂ ಮಾಹಿತಿ ಸಿಗುವುದಿಲ್ಲ. ಆದರೆ ಕೆಲವೊಂದು ಸಂಕೇತಗಳಿಂದ ಸಂಗಾತಿಯು ನಿಮಗೆ ಮೋಸ ಮಾಡುತ್ತಿದ್ದಾರೆ ಎಂದು ತಿಳಿಯಬಹುದು.

Signs your partner might be cheating on you

ಈ ಸುಳಿವುಗಳನ್ನು ನೀವು ಕಡೆಗಣಿಸಬಹುದು. ಆದರೆ ಇದು ನಿಮಗೆ ಸಂಗಾತಿಯ ಬಗ್ಗೆ ಮಾಹಿತಿ ನೀಡುವುದು. ಈ ಎಲ್ಲಾ ಸುಳಿವುಗಳು ಯಾವುದು ಎಂದು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಸಂಗಾತಿಯ ವರ್ತನೆ ಮತ್ತು ನಡವಳಿಕೆಯನ್ನು ನೀವು ಗಮನಿಸಬೇಕು. ಇದರಿಂದ ನಿಮಗೆ ಭವಿಷ್ಯದಲ್ಲಿ ಪರಿಸ್ಥಿತಿಯನ್ನು ತುಂಬಾ ಸುಲಭವಾಗಿ ನಿಭಾಯಿಸಲು ಸಾಧ್ಯವಾಗುವುದು.

ದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆ

ಸಂಗಾತಿಯ ದೈನಂದಿನ ಚಟುವಟಿಕೆ ಬಗ್ಗೆ ನಿಮಗೆ ಸರಿಯಾಗಿ ತಿಳಿದಿರುವುದು. ಯಾವುದೇ ಕಾರಣವಿಲ್ಲದೆ ದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆ ಕಂಡುಬಂದರೆ ಆಗ ನೀವು ಇದರ ಬಗ್ಗೆ ಅನುಮಾನದಿಂದ ನೋಡಬೇಕು. ಬದಲಾವಣೆಗಳು ಈ ರೀತಿಯಾಗಿ ಇರಬಹುದು.
*ನಿಮ್ಮ ಸಂಗಾತಿಯು ಯಾವುದೇ ಭಾವನೆ ವ್ಯಕ್ತಪಡಿಸದೆ ಇರಬಹುದು.
*ಸಾಮಾನ್ಯಕ್ಕಿಂತಲೂ ಹೆಚ್ಚು ಗಮನಹರಿಸುವುದು
*ಯಾವುದೇ ಹೊಸ ಹವ್ಯಾಸ ಬೆಳೆಸಿಕೊಳ್ಳುವುದು.
*ನಿಮ್ಮಿಬ್ಬರ ಮಧ್ಯೆ ಸಂವಹನದ ಕೊರತೆ.
*ಏಕಾಂಗಿಯಾಗಿ ಪ್ರಯಾಣಿಸಲು ಯೋಜನೆ ಹಾಕಿಕೊಳ್ಳುವುದು.
*ನಿಮ್ಮೊಂದಿಗೆ ಹೆಚ್ಚು ಜಗಳವಾಡುವುದು.

ತುಂಬಾ ರಕ್ಷಣಾತ್ಮಕ ನಡವಳಿಕೆ

ದೈನಂದಿಕ ಚಟುವಟಿಕೆಗಳಲ್ಲಿ ಬದಲಾವಣೆಯ ಜತೆಗೆ ನಿಮ್ಮ ಸಂಗಾತಿಯ ವರ್ತನೆಯಲ್ಲಿ ಗಮನಾರ್ಹ ಬದಲಾವಣೆ ಆಗಬಹುದು. ನಿಮ್ಮ ಸಂಗಾತಿಯು ತುಂಬಾ ರಕ್ಷಣಾತ್ಮಕವಾಗಿ ಇರಬಹುದು. ಆಕೆ ಅಥವಾ ಆತ ತುಂಬಾ ರಹಸ್ಯ ಮಾಡುತ್ತಿರಬಹುದು.

ಫೋನ್ ನ ನಡವಳಿಕೆ ಬದಲಾವಣೆ

ಸಂಗಾತಿಯ ಫೋನ್ ನಲ್ಲಿ ಹೆಚ್ಚಿನ ಚಟುವಟಿಕೆಗಳು ಕಂಡುಬಂದರೆ ಆಗ ನಿಮಗೆ ಅವರು ಮೋಸ ಮಾಡುತ್ತಿದ್ದಾರೆ ಎಂದು ತಿಳಿಯಿರಿ. ಸಾಮಾನ್ಯಕ್ಕಿಂತಲೂ ಹೆಚ್ಚು ಅವರು ಫೋನ್ ನಲ್ಲಿ ಸಮಯ ಕಳೆಯುತ್ತಿದ್ದರೆ ಇದನ್ನು ಗಮನಿಸಿ. ಮೊದಲಿಗಿಂತಲೂ ಈಗ ನಿಮ್ಮ ಸಂಗಾತಿಯು ಫೋನ್ ಬಗ್ಗೆ ಹೆಚ್ಚು ರಕ್ಷಣಾತ್ಮಕವಾಗಿ ಇದ್ದರೆ ನೀವು ಅನುಮಾನ ಪಡಬೇಕು. ಮೊಬೈಲ್ ಪಾಸ್ ವರ್ಡ್ ಬದಲಾಯಿಸಿಕೊಂಡಿದ್ದರೆ, ಸಾಮಾಜಿಕ ಜಾಲತಾಣದಲ್ಲಿ ನಿಮಗೆ ಬದಲಾವಣೆಗಳು ಕಂಡುಬಂದರೆ, ಆತ/ಆಕೆಯ ಮೊಬೈಲ್ ನ್ನು ಮುಟ್ಟಿದ ಕೂಡಲೇ ಹೆಚ್ಚು ಆಕ್ರಮಣಕಾರಿ ಆಗುವುದು.

ಹೆಚ್ಚು ಆಸಕ್ತಿ ತೋರಿಸದೆ ಇರುವುದು

ನಿಮ್ಮೊಂದಿಗೆ ಮಾತನಾಡುತ್ತಿರುವ ವೇಳೆ ಅಥವಾ ನಿಮ್ಮೊಂದಿಗೆ ಸಮಯ ಕಳೆಯುತ್ತಿರುವ ವೇಳೆ ಸಂಗಾತಿಯು ಹೆಚ್ಚು ಆಸಕ್ತಿ ತೋರಿಸದೆ ಇರಬಹುದು. ಯಾಕೆಂದರೆ ಈ ಸಮಯದಲ್ಲಿ ಅವರ ಮನಸ್ಸು ಬೇರೆಲ್ಲೋ ಇರುತ್ತದೆ. ನಿಮ್ಮೊಂದಿಗೆ ಅವರು ಮೊದಲಿನಂತೆ ಬೆರೆಯದೆ ಇರಬಹುದು. ಆತ/ಆಕೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ನಿಮಗೆ ನೆರವಾಗದೆ ಇರಬಹುದು.

ತಮ್ಮ ಬಗ್ಗೆ ಈಗ ಅವರೇ ಕಾಳಜಿ ವಹಿಸುವರು

ಸಂಗಾತಿಯು ನಿಮಗೆ ಮೋಸ ಮಾಡುತ್ತಲಿದ್ದರೆ ಆಗ ಅವರು ಖಂಡಿವಾಗಿಯೂ ತುಂಬಾ ಸುಂದರವಾಗಿ ಕಾಣಲು ಹೆಚ್ಚು ಪ್ರಯತ್ನ ಮಾಡುವರು. ಯಾರೊಂದಿಗಾದರೂ ಸಂಬಂಧವಿದ್ದರೆ ಆಗ ಹಿಂದಿಗಿಂತಲೂ ತುಂಬಾ ಚೆನ್ನಾಗಿ ಬಟ್ಟೆ ಧರಿಸುವರು. ಫ್ಯಾಶನ್ ಮತ್ತು ಪಫ್ಯೂಮ್ ನಲ್ಲಿ ಹಠಾತ್ ಬದಲಾವಣೆ ಮೋಸದ ಸೂಚನೆಯಾಗಿದೆ.

ಮೋಸವನ್ನು ಹಿಡಿಯಲು ಏನು ಮಾಡಬೇಕು?

ಸಂಗಾತಿಯು ನಿಮಗೆ ಮೋಸ ಮಾಡುತ್ತಲಿರುವುದು ಸ್ಪಷ್ಟವಾಗಿದ್ದರೆ ಆಗ ನೀವು ಇದನ್ನು ಸಾಬೀತು ಮಾಡಲು ಪ್ರಯತ್ನಿಸಿ. ಯಾವುದೇ ಸಾಕ್ಷಿ ಇಲ್ಲದೆ ಸಂಗಾತಿಯನ್ನು ದೂಷಿಸುವಂತಿಲ್ಲ.
ನಿಮಗೆ ಇದು ಸ್ಪಷ್ಟವಾಗಿದ್ದರೆ ಆಗ ನೀವು ಅದರಂತೆ ನಿರ್ಧಾರ ಮಾಡಬಹುದು.
ನೀವು ತುಂಬಾ ಸಮಾಧಾನದಿಂದ ಮಾತುಕತೆ ನಡೆಸಿ, ಯಾಕೆಂದರೆ ಅವರಿಗೂ ತಮ್ಮ ಪಕ್ಷವನ್ನು ಇಡಲು ಅವಕಾಶ ಸಿಗಬೇಕು.
ಪರಿಸ್ಥಿತಿಗೆ ತಕ್ಕಂತೆ ನೀವು ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು. ಯಾವುದೇ ಮಹತ್ವದ ನಿರ್ಧಾರ ಮಾಡುವ ಮೊದಲು ತುಂಬಾ ಎಚ್ಚರಿಕೆ ವಹಿಸಿ.

English summary

5 Signs your partner might be cheating on you

Do you think that your partner is cheating on you? There are certain signs which can clearly tell that your partner is cheating on you. Read on to know these signs.
Story first published: Wednesday, July 17, 2019, 13:55 [IST]
X
Desktop Bottom Promotion