ಮದುವೆ ಬಳಿಕ ಮಹಿಳೆಯರು ಸಂಪೂರ್ಣವಾಗಿ ಬದಲಾಗಿ ಬಿಡುತ್ತಾರೆ! ಯಾಕೆ ಗೊತ್ತೇ?

Posted By: Hemanth
Subscribe to Boldsky

ಇಲ್ಲ, ನೀನು ಮೊದಲಿನ ಹಾಗಿಲ್ಲ, ಮದುವೆ ಬಳಿಕ ತುಂಬಾ ಬದಲಾಗಿಬಿಟ್ಟಿದ್ದೀಯಾ ಎಂದು ಗಂಡ ಮನೆಯಲ್ಲಿ ಹೇಳಿದರೆ, ಸ್ನೇಹಿತೆಯರು ಮನೆಯ ಹೊರಗಡೆ ಮಹಿಳೆಯರಿಗೆ ಹೇಳುವುದಿದೆ. ಅದರಲ್ಲೂ ಪ್ರೀತಿಸಿ ಮದುವೆಯಾದವರಿಗೆ ತನ್ನ ಸಂಗಾತಿ ಮದುವೆ ಬಳಿಕ ತುಂಬಾ ಬದಲಾಗಿರುವುದು ಅಚ್ಚರಿ ಮೂಡಿಸುತ್ತದೆ. ಆದರೆ ಬದಲಾವಣೆ ಪ್ರಕೃತಿ ಸಹಜ. ಇದನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ. ಪ್ರತಿಯೊಂದು ಸಂಬಂಧದಲ್ಲೂ ಪುರುಷ ಮತ್ತು ಮಹಿಳೆ ಬದಲಾಗುತ್ತಾರೆ. ಇದರಲ್ಲಿ ಹೆಚ್ಚಾಗಿ ಧನಾತ್ಮಕವಾದ ಫಲಿತಾಂಶವೇ ಸಿಗುತ್ತದೆ.

ಆದರೆ ಕೆಲವೊಂದು ಸಲ ಇದು ನಕಾರಾತ್ಮಕವಾಗಿರಲೂ ಬಹುದು. ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟ ಮತ್ತು ಮಹಿಳೆಯರು ತಾವು ಯಾರನ್ನು ಮದುವೆಯಾಗಿದ್ದೇವೆ ಎನ್ನುವುದನ್ನು ಅವಲಂಬಿಸಿ ಬದಲಾಗುವರು. ಪುರುಷರಂತೆ ಮಹಿಳೆಯರು ಕೂಡ ಬದಲಾಗುವರು. ಆದರೆ ಕೆಲವೊಂದು ಅಂಶಗಳ ಪ್ರಕಾರ ಮದುವೆ ಮಹಿಳೆಯರನ್ನು ಸಂಪೂರ್ಣವಾಗಿ ಬದಲಾಯಿಸಿ ಬಿಡುತ್ತದೆ. ಇದರ ಬಗ್ಗೆ ಓದಿಕೊಳ್ಳಿ. ಮದುವೆ ಬಳಿಕ ಮಹಿಳೆ ಬದಲಾಗಲು ಕಾರಣಗಳು...

ಮಹಿಳೆ ರಾಜಿ ಮಾಡಕೊಳ್ಳಲು ಆರಂಭಿಸುವಳು

ಮಹಿಳೆ ರಾಜಿ ಮಾಡಕೊಳ್ಳಲು ಆರಂಭಿಸುವಳು

ಮದುವೆ ಬಳಿಕ ಮಹಿಳೆಗೆ ಹಲವಾರು ರೀತಿಯ ಜವಾಬ್ದಾರಿಗಳು ಬರುವುದು. ಮದುವೆ ಬಳಿಕ ಕಳಕೊಂಡಿರುವ ಭಾವನೆಗಳನ್ನು ತುಂಬಿಸಿಕೊಳ್ಳಲು ಮಹಿಳೆಯು ಸಾಕಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ತನ್ನ ಪತಿಯೊಂದಿಗೆ ಹಂಚಿಕೊಂಡಿರುವ ಸಂಬಂಧದಲ್ಲಿ ರಾಜಿ ಮಾಡಿಕೊಂಡು ಹೊಂದಿಕೊಳ್ಳಲು ಪ್ರಯತ್ನಿಸಬೇಕು. ರಾಜಿ ಮಾಡಿಕೊಳ್ಳುವುದು ಮತ್ತು ಹೊಂದಾಣಿಕೆ ಮಹಿಳೆಯ ಜೀವನದ ಅವಿಭಾಜ್ಯ ಅಂಗವಾಗಿರುವುದು. ಮದುವೆಗೆ ಮೊದಲು ಯಾವುದೇ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿಲ್ಲ. ಆದರೆ ಮದುವೆ ಬಳಿಕ ಬದಲಾವಣೆ ಅಗತ್ಯ.

 ಜವಾಬ್ದಾರಿ ಹೆಚ್ಚಾಗುವುದು

ಜವಾಬ್ದಾರಿ ಹೆಚ್ಚಾಗುವುದು

ಮದುವೆ ಬಳಿಕ ಮಹಿಳೆಯ ಜವಾಬ್ದಾರಿಯು ಹೆಚ್ಚಾಗುವುದು. ಇದಕ್ಕೆ ಮೊದಲು ಅವರು ಎದರಿಸದೇ ಇರುವಂತಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಅವರು ಮೊದಲು ಕುಟುಂಬವನ್ನು ನೋಡಿಕೊಳ್ಳಬೇಕು. ಇದು ದೊಡ್ಡ ಬದಲಾವಣೆ. ಕುಟುಂಬವು ಬದಲಾಗುವುದು ಮಹಿಳೆ ಮೇಲೆ ಪರಿಣಾಮ ಬೀರುವುದು. ಮದುವೆಗೆ ಮೊದಲು ಅವರು ಇದ್ದ ಕುಟುಂಬದಲ್ಲಿ ಮಗಳಾಗಿ, ತುಂಬಾ ಪ್ರೀತಿಯಿಂದ, ಯಾವುದೇ ಜವಾಬ್ದಾರಿಗಳಿಲ್ಲದೆ ವಾಸಿಸುತ್ತಿದ್ದಳು. ಆದರೆ ಮದುವೆ ಬಳಿಕ ಎಲ್ಲವೂ ಬದಲಾಗುವುದು. ಕುಟುಂಬದ ಜವಾಬ್ದಾರಿಯು ಆಕೆಯ ಮೇಲೆ ಬೀಳುವ ಕಾರಣ ಹೆಚ್ಚು ಜವಾಬ್ದಾರಿಯುತವಾಗಬೇಕಾಗುತ್ತದೆ. ಮಹಿಳೆಯು ಕುಟುಂಬದ ಆಧಾರಸ್ತಂಭವಿದ್ದಂತೆ. ಆಕೆ ಪ್ರತಿಯೊಬ್ಬರ ಬೇಕುಬೇಡಗಳನ್ನು ಅರಿತುಕೊಂಡು ಅದನ್ನು ನಿಭಾಯಿಸುವಳು. ಇದು ಮದುವೆ ಬಳಿಕ ಮಹಿಳೆಗೆ ಬರುವ ದೊಡ್ಡ ಜವಾಬ್ದಾರಿ.

ಹತಾಶೆ

ಹತಾಶೆ

ಮದುವೆಯು ದೊಡ್ಡ ಮಟ್ಟದ ಒತ್ತಡವನ್ನು ಉಂಟು ಮಾಡುವುದು. ಮೊದಲು ತಾನಾಯಿತು ಮತ್ತು ತನ್ನ ಸಮಸ್ಯೆಯಾಯಿತು ಎನ್ನುವಂತಿತ್ತು. ಆದರೆ ಈಗ ಅದು ಸಂಪೂರ್ಣವಾಗಿ ಬದಲಾಗಿ ಬಿಡುತ್ತದೆ. ಈಗ ಪತಿ, ಆತನ ಕುಟುಂಬ, ತವರು ಮನೆ ಮತ್ತು ನಿಮ್ಮ ಸ್ವಂತ ಜೀವನ ಎಲ್ಲವನ್ನೂ ನಿಭಾಯಿಸಬೇಕು. ಇದು ನಿಮಗೆ ಬೇಡವಿದ್ದರೂ ನಿಭಾಯಿಸಬೇಕಾಗಿರುವ ಕಾರಣದಿಂದ ಹತಾಶೆ ಮೂಡಿಸುವುದು. ಜವಾಬ್ದಾರಿಗಳು ಜೀವನದ ತುಂಬಾ ಕಠಿಣ ಭಾಗವಾಗುವುದು ಮತ್ತು ಇದರಿಂದಾಗಿ ಹತಾಶೆಯಾಗುವುದು. ನಿಮ್ಮ ಕಡೆ ಗಮನ ನೀಡಲು ಸಾಧ್ಯವಿರುವುದಿಲ್ಲ ಮತ್ತು ಇದರಿಂದ ಒಳಗೊಳಗೆ ನಿಮ್ಮತನ ಸತ್ತು ಹೋಗುವುದು ಮತ್ತು ಮನಸ್ಸಿನ ಶಾಂತಿ ಕೆಡುವುದು. ಮದುವೆ ಎನ್ನುವುದು ಒಂದು ದೊಡ್ಡ ಹೊರೆ, ಬೇರೇನೂ ಅಲ್ಲ ಎನ್ನುವ ಭಾವನೆ ನಿಮ್ಮಲ್ಲಿ ಮೂಡುವುದು. ಇದರಿಂದ ನಿಮಗೆ ತುಂಬಾ ಕೆಟ್ಟ ಭಾವನೆ ಉಂಟಾಗಿ ಹತಾಶೆಯು ಹೆಚ್ಚಾಗುವುದು.ಮದುವೆಯಲ್ಲಿ ಸಮಸ್ಯೆಗಳನ್ನು ನಿವಾರಣೆ ಮಾಡಲು ಮಹಿಳೆಯು ಯಾವಾಗಲೂ ತುಂಬಾ ಸರಳವಾಗಿ ತನ್ನ ಜವಾಬ್ದಾರಿ ತೆಗೆದುಕೊಳ್ಳಬೇಕು. ಪತಿ ಕೂಡ ಕೆಲವು ಜವಾಬ್ದಾರಿ ತೆಗೆದುಕೊಳ್ಳಬೇಕು. ಇದರಿಂದ ಸಂಬಂಧವು ಒಳ್ಳೆಯದಾಗುವುದು.

ಒತ್ತಡ

ಒತ್ತಡ

ಒಳ್ಳೆಯ ಪತ್ನಿ, ಒಳ್ಳೆಯ ಸೊಸೆ, ಒಳ್ಳೆಯ ತಾಯಿ, ಒಳ್ಳೆಯ ಮಗಳು ಇತ್ಯಾದಿಗಳ ಒತ್ತಡವು ಒಳಗಿಂದೊಳಗೆ ನಿಮ್ಮನ್ನು ತಿಂದು ಹಾಖುವುದು. ಮಹಿಳೆಯರು ಒತ್ತಡದಲ್ಲಿ ಭಯಬೀಳುತ್ತಾರೆ. ಇದು ಮದುವೆಯ ಸಂಬಂಧದಲ್ಲಿ ಒಳ್ಳೆಯ ವಿಚಾರವಲ್ಲ. ಇಂತಹ ಸಂದರ್ಭದಲ್ಲಿ ಮಹಿಳೆಯು ಒತ್ತಡಕ್ಕೆ ಒಳಗಾಗುವಳು. ಒತ್ತಡವು ಮಹಿಳೆಯರನ್ನು ಅಸ್ಥಿರಗೊಳಿಸುವುದು.

ಜಾಗ್ರತೆ

ಜಾಗ್ರತೆ

ಮದುವೆ ಬಳಿಕ ಮಹಿಳೆಯು ಹೆಚ್ಚು ಜಾಗ್ರತಳಾಗುವಳು. ಅತ್ತೆ-ಮಾವ ನಿಮ್ಮ ಮೊದಲ ಆಘಾತವಾಗುವರು. ಅತ್ತೆಮಾವನ ಜತೆಗೆ ಒಳ್ಳೆಯವಳಾಗಿರುವುದು ನಿಮ್ಮ ಅಜಾಗರೂಕ ವ್ಯಕ್ತಿಯಿಂದ ಜಾಗರೂಕರನ್ನಾಗಿ ಮಾಡುವುದು. ನಾನು ಇದನ್ನು ಸರಿಯಾಗಿ ಮಾಡಿದ್ದೇನೆ ಎನ್ನುವ ಪ್ರಶ್ನೆಯು ನಿಮ್ಮನ್ನು ಯಾವಾಗಲೂ ಜಾಗರೂಕರನ್ನಾಗಿರಿಸಿರುವುದು.

English summary

Reasons Why Women Change After Marriage

Marriage can be a pivotal experience and the nature of the changes seen in a woman largely depends on who they are married to. Women are individuals, just as men. Individuals can change at any time. But there are certain facts that make women change after marriage. Let's read through.
Story first published: Saturday, March 31, 2018, 15:10 [IST]