For Quick Alerts
ALLOW NOTIFICATIONS  
For Daily Alerts

ಹಿಂದೂ ಧರ್ಮದಲ್ಲಿ ಮದುವೆಯ ಮುಂಚೆ ನಡೆಯುವ ಶಾಸ್ತ್ರ ಸಂಪ್ರದಾಯಗಳೇನು?

|

ನಮ್ಮ ಹಿಂದೂ ವಿವಾಹ ಪದ್ಧತಿಯಲ್ಲಿ ನಾವು ಹಲವಾರು ವಿಧಿ ವಿಧಾನಗಳನ್ನು ಅನುಸರಿಸುತ್ತೇವೆ. ಯಾವುದೇ ಧರ್ಮ ಜಾತಿಯೇ ಇರಲಿ ಒಂದೊಂದು ಪಂಗಡದವರು ಒಂದೊಂದು ವಿಧವಾದ ವೈವಾಹಿಕ ವಿಧಾನಗಳನ್ನು ಅನುಸರಿಸುತ್ತಾರೆ. ಮದುವೆಯ ಈ ಪವಿತ್ರ ಬಂಧನದಲ್ಲಿ ಪ್ರತಿಯೊಂದು ಶಾಸ್ತ್ರ ಸಂಪ್ರದಾಯಗಳಿಗೂ ಅದರದ್ದೇ ಆದ ಮೌಲ್ಯವಿದ್ದು ಈ ಮೌಲ್ಯವು ವಿವಾಹದ ಪ್ರಮುಖ ಸೂತ್ರವಾಗಿದೆ.

pre-marriage Rituals follows in Hindu Culture

ವಿವಾಹವೆಂದರೆ ಬರಿಯ ಗಂಡು ಹೆಣ್ಣಿನ ಪವಿತ್ರ ಬಂಧನ ಮಾತ್ರವಲ್ಲ ಎರಡು ಕುಟುಂಬಗಳ ಮಿಲನವಾಗಿದೆ. ವಿವಾಹದಿಂದಾಗಿ ಪರಸ್ಪರ ಕುಟುಂಬಗಳು ಒಂದಾಗುತ್ತವೆ ಮತ್ತು ಎರಡೂ ಕುಟುಂಬಗಳಲ್ಲಿ ಸಾಮರಸ್ಯ ಉಂಟಾಗುತ್ತದೆ. ಮದುವೆ ಏಳೇಳು ಜನ್ಮಗಳ ಅನುಬಂಧ, ವಧು ಮತ್ತು ವರನ ಸಂಬಂಧವನ್ನು ದೇವರೇ ನಿರ್ಧರಿಸುತ್ತಾನೆ ಎನ್ನುವ ನಂಬಿಕೆ ಕೂಡ ಇದೆ. ವರ ಮತ್ತು ವಧು ಸಂಪೂರ್ಣವಾಗಿ ಒಪ್ಪಿಗೆ ಸೂಚಿಸಿದ ಬಳಿಕ ಮದುವೆ ಕಾರ್ಯಗಳು ನಡೆಯುತ್ತದೆ. ಮದುವೆಯು ಮುಗಿದು ಗ್ರಹಸ್ಥಾಶ್ರಮಕ್ಕೆ ಕಾಲಿಡುವ ವರ ಮತ್ತು ಮಧುವಿಗೆ ಹೊಸ ಜೀವನ ಆರಂಭಿಸುವ ತವಕ. ಅದರಲ್ಲೂ ವಧು ಮಾತ್ರ ಹುಟ್ಟಿನಿಂದ ಬೆಳೆದು ಬಂದ ಮನೆ, ತಂದೆ-ತಾಯಿ, ಸೋದರ-ಸೋದರಿಯನ್ನು ಬಿಟ್ಟು ಬಂದು, ಗಂಡನ ಮನೆಯಲ್ಲಿ ಹೊಸ ಜೀವನವನ್ನು ಆರಂಭಿಸುತ್ತಾಳೆ. ಇನ್ನು ಮದುವೆಯಾಗುವ ಗಂಡು ತನ್ನ ಮನೆ ಮನವನ್ನು ತುಂಬುವ ಒಡತಿಯ ಬಗ್ಗೆ ಸಾಕಷ್ಟು ಕನಸು ಕಾಣುತ್ತಾನೆ. ಮದುವೆಯ ಮುಂಚೆ ನಡೆಯುವ ವಿಧಿ ವಿಧಾನಗಳೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ನಿಶ್ಚಿತಾರ್ಥ

ನಿಶ್ಚಿತಾರ್ಥ

ಮದುವೆಯ ಸಿದ್ಧತೆಯನ್ನು ಉಂಗುರ ಬದಲಾವಣೆ ಇಲ್ಲವೇ ನಿಶ್ಚಿತಾರ್ಥದ ಮೂಲಕ ನಡೆಸಲಾಗುತ್ತದೆ.

ಹಿಂದೂ ಪುರೋಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಮದುವೆಯ ಕೆಲವು ದಿನಗಳ ಮುನ್ನ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಅಂತೆಯೇ ವಿವಾಹದ ದಿನಾಂಕವನ್ನು ಈ ಸಂದರ್ಭದಲ್ಲಿಯೇ ನಿಗದಿ ಪಡಿಸಲಾಗುತ್ತದೆ. ಎರಡೂ ಮನೆಯವರು ಸಿಹಿ ಮತ್ತು ಬಟ್ಟೆ ಹಾಗೂ ಆಭರಣಗಳನ್ನು ಇಲ್ಲಿ ವಿನಿಮಯ ಮಾಡುತ್ತಾರೆ. ವಿವಾಹದ ದಿನವನ್ನು ಈ ಸಮಯದಲ್ಲಿ ಗೊತ್ತುಪಡಿಸಲಾಗುತ್ತದೆ ಮತ್ತು ಹಿರಿಯರು ಹುಡುಗ ಹುಡುಗಿಯನ್ನು ಆಶೀರ್ವದಿಸುತ್ತಾರೆ.

Most Read: ದಪ್ಪ ಹೆಣ್ಣನ್ನು ಮದುವೆಯಾದರೆ ಅವರ ಜೀವನದಲ್ಲಿ ಖುಷಿ ಜಾಸ್ತಿ ಅಂತೆ!

ತಿಲಕ

ತಿಲಕ

ಮದುವೆಯ ಮುನ್ನ ತಿಲಕ ಶಾಸ್ತ್ರವನ್ನು ನಡೆಸಲಾಗುತ್ತದೆ. ಹುಡುಗನ ಹಣೆಗೆ ಸಿಂಧೂರವನ್ನು ಹಚ್ಚುವುದು. ಎಲ್ಲಾ ವಿವಾಹ ಕಾರ್ಯಗಳಲ್ಲಿ ಈ ವಿಧಾನಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಭಾರತದ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ವರನ ಮನೆಯಲ್ಲಿ ಇದನ್ನು ನಡೆಸುತ್ತಾರೆ ಮತ್ತು ಹುಡುಗನ ಮನೆಯವರು ಈ ಕಾರ್ಯಕ್ರಮದಲ್ಲಿರುತ್ತಾರೆ. ವಧುವಿನ ತಂದೆ ಯಾ ಸಹೋದರ ವರನ ಹಣೆಗೆ ತಿಲಕವನ್ನು ಇಡುತ್ತಾರೆ. ತಾವು ವರನನ್ನು ತಮ್ಮ ಹುಡುಗಿಗಾಗಿ ಮೆಚ್ಚಿರುವುದಾಗಿ ಮತ್ತು ಭವಿಷ್ಯದಲ್ಲಿ ತಂದೆಯಾಗಿ ಪತಿಯಾಗಿ ತಮ್ಮ ಜವಬ್ದಾರಿಯನ್ನು ವರನು ನಿರ್ವಹಿಸುತ್ತಾರೆ ಎಂಬುದು ಈ ತಿಲಕದ ಹಿಂದಿರುವ ಸಿದ್ಧಾಂತವಾಗಿದೆ.

ಹಳದಿ ಕಾರ್ಯಕ್ರಮ

ಹಳದಿ ಕಾರ್ಯಕ್ರಮ

ಭಾರತೀಯ ಸಂಪ್ರದಾಯದಲ್ಲಿ ಹಳದಿ ಕಾರ್ಯಕ್ರಮವನ್ನು ವಿವಾಹ ಪೂರ್ವದಲ್ಲಿ ನಡೆಸುತ್ತಾರೆ. ವರ

ಮತ್ತು ವಧುವಿನ ಮನೆಯಲ್ಲಿ ಇದನ್ನು ನಡೆಸುತ್ತಾರೆ. ಅರಶಿನವನ್ನು ಶ್ರೀಗಂಧ, ಹಾಲು ಮತ್ತು ರೋಸ್

ವಾಟರ್‌ನಲ್ಲಿ ಮಿಶ್ರ ಮಾಡಿ ಇದನ್ನು ತಯಾರಿಸುತ್ತಾರೆ. ನಂತರ ಇದನ್ನು ವಧು ಮತ್ತು ವರನ ಮುಖ ಹಾಗೂ ದೇಹಕ್ಕೆ ಹಚ್ಚುತ್ತಾರೆ. ಇದು ವರ ಮತ್ತು ವಧುವಿನ ತ್ವಚೆಯ ಬಣ್ಣವನ್ನು ವರ್ಧಿಸುತ್ತದೆ ಎಂದು ನಂಬಲಾಗಿದೆ ಅಂತೆಯೇ ಇದು ಎಲ್ಲಾ ರೀತಿಯ ಅಲರ್ಜಿಗಳಿಂದ ಇಬ್ಬರನ್ನು ಕಾಪಾಡುತ್ತದೆ. ಕೆಟ್ಟ ಕಣ್ಣುಗಳಿಂದ ಜೋಡಿಯನ್ನು ಸಂರಕ್ಷಿಸುತ್ತದೆ ಎಂಬುದು ಇದರ ಹಿಂದಿರುವ ತತ್ವವಾಗಿದೆ.

ಗಣೇಶ ಪೂಜೆ

ಗಣೇಶ ಪೂಜೆ

ಯಾವುದೇ ಧಾರ್ಮಿಕ ಕಾರ್ಯದ ಮುಂದೆ ಗಣೇಶ ಪೂಜೆ ನಡೆಸುವುದು ವಾಡಿಕೆಯಾಗಿದೆ. ಹಿಂದೂ

ಮನೆಗಳಲ್ಲಿ ಈ ಪೂಜೆಯನ್ನು ನಡೆಸುತ್ತಾರೆ ಮತ್ತು ವಿವಾಹದ ಮುನ್ನ ದೇವರ ಆಶೀರ್ವಾದವನ್ನು

ಪಡೆಯಲು ಈ ಪೂಜೆಯನ್ನು ಮಾಡುತ್ತಾರೆ. ಯಾವುದೇ ವಿಘ್ನಗಳು ಸಂಭವಿಸದೇ ಇರಲಿ ಎಂಬುದು

ಈ ಪೂಜೆಯ ಹಿಂದಿರುವ ಉದ್ದೇಶವಾಗಿದೆ. ದಂಪತಿಗಳ ಹೊಸ ಜೀವನಕ್ಕೆ ಈ ಪೂಜೆಯು ಅವರನ್ನು ಸಿದ್ಧ ಪಡಿಸುತ್ತದೆ. ಗಣೇಶ ಪೂಜೆ ಇಲ್ಲದೆಯೇ ವಿವಾಹ ಸಂಪನ್ನವಾಗುವುದಿಲ್ಲ.

Most Read: ಒನ್ ಸೈಡ್ ಲವ್ ಸಮಸ್ಯೆಯಲ್ಲಿ ಸಿಲುಕಿದ್ದೀರಾ? ಹಾಗಾದರೆ ಹೀಗೆ ಮಾಡಿ ನೋಡಿ

ಮೆಹೆಂದಿ

ಮೆಹೆಂದಿ

ವಧುವಿನ ಮನೆಯಲ್ಲಿ ಮೆಹೆಂದಿ ಶಾಸ್ತ್ರವನ್ನು ನಡೆಸುತ್ತಾರೆ. ಆಕೆಯ ಮನೆಯ ಎಲ್ಲಾ ಕುಟುಂಬ ಸದಸ್ಯರು ಇದರಲ್ಲಿ ಪಾಲ್ಗೊಳ್ಳುತ್ತಾರೆ ಅಂತೆಯೇ ವಧುವಿನ ಕೈಗೆ ಮತ್ತು ಕಾಲಿಗೆ ಮೆಹೆಂದಿಯನ್ನು ಹಚ್ಚಿ ಸಂಭ್ರಮಿಸುತ್ತಾರೆ. ಮನೆಯ ಎಲ್ಲಾ ಸದಸ್ಯರು ಈ ಸಂದರ್ಭದಲ್ಲಿ ಹಾಡಿ ನಲಿಯುತ್ತಾರೆ. ಮೆಹೆಂದಿಯ ಬಣ್ಣ ಗಾಢ ಮತ್ತು ಸುಂದರವಾಗಿದ್ದರೆ, ಪ್ರೀತಿ ಪಾತ್ರ ಪತಿ ಅವರಿಗೆ ದೊರೆಯುತ್ತಾರೆ ಎಂಬುದು ನಂಬಿಕೆಯಾಗಿದೆ. ಈ ಕಾರ್ಯಕ್ರಮದ ನಂತರ ವಧು ತನ್ನ ವಿವಾಹಕ್ಕಾಗಿ ಮನೆಯಿಂದ ಹೊರಗೆ ಕಾಲಿಡುತ್ತಾರೆ.

ಸಂಗೀತ್

ಸಂಗೀತ್

ಸಂಗೀತ್ ಕಾರ್ಯಕ್ರಮವು ಸಂಗೀತ ಮತ್ತು ನೃತ್ಯದ ಸಮ್ಮಿಳಿತವಾಗಿದೆ. ಉತ್ತರ ಭಾರತದಲ್ಲಿ ಸಂಗೀತ್ ಅನ್ನು ನಡೆಸುತ್ತಾರೆ. ಅಂತೆಯೇ ಪಂಜಾಬಿ ವಿವಾಹ ಕಾರ್ಯಕ್ರಮದಲ್ಲಿ ಕೂಡ ಇದು ಪ್ರಮುಖವಾದುದು. ಎಲ್ಲಾ ಕಾರ್ಯಕ್ರಮಗಳಿಗಿಂತ ಸಂಗೀತ್ ಕಾರ್ಯಕ್ರಮ ಹೆಚ್ಚು ಮನರಂಜನೆಯನ್ನು ನೀಡುವಂತಹದ್ದು ಮೆಹೆಂದಿ ಕಾರ್ಯಕ್ರಮದ ಜೊತೆಗೆ ಇಲ್ಲವೇ ಪ್ರತ್ಯೇಕವಾಗಿ ಸಂಗೀತ್ ಕಾರ್ಯಕ್ರಮವನ್ನು ನಡೆಸುತ್ತಾರೆ.

English summary

pre-marriage Rituals follows in Hindu Culture

Marriage in Hindu culture is a sacred ceremony that unites two people to start their lives together. In the Vedas (the oldest scriptures of Hinduism), a hindu marriage is for life and is considered as a union between two families, not just the couple. A Hindu marriage involves many rituals, which extends over several days, but differs from community to community.Every Hindu pre-wedding ritual prepares the bride and groom, and their respective families, for their big wedding day.
X
Desktop Bottom Promotion