For Quick Alerts
ALLOW NOTIFICATIONS  
For Daily Alerts

  ಹಳೆಯ ವಿಷಯ ಕೆದಕಿ, ಸಂಬಂಧ ಹಾಳು ಮಾಡಿಕೊಳ್ಳಬೇಡಿ!

  By Deepu
  |

  ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ತಮ್ಮ ದಾಂಪತ್ಯದಲ್ಲಿ ಸಾಮರಸ್ಯ ಮೂಡುವುದಕ್ಕಿಂದ ಬಿರುಕು ಮೂಡಿ ವಿಚ್ಛೇದನ ಪ್ರಕರಣಗಳು ದಿನಕಳೆದಂತೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಸಣ್ಣ ಪುಟ್ಟ ಮನಸ್ತಾಪಗಳೂ ಸಹ ವಿಚ್ಛೇದನಕ್ಕೆ ದಾರಿಮಾಡಿಕೊಡುತ್ತಿವೆ. ಇದಕ್ಕೆ ಕಾರಣ ದಾಂಪತ್ಯದಲ್ಲಿ ನೀವು ಇರಿಸಬೇಕಾದ ಕೆಲವು ಅವಶ್ಯಕ ಜವಾಬ್ದಾರಿಗಳ ಮೂಲ ಕೊರತೆ, ಸಹಬಾಳ್ವೆಯ ಬಗ್ಗೆ ಮತ್ತು ದಂಪತಿಗಳಲ್ಲಿ ಇರಬೇಕಿರುವ ಸಾಂಗತ್ಯದ ಸಾರದ ಬಗ್ಗೆ ಈಗಾಗಲೇ ಹಲವಾರು ಸಂಗತಿಗಳನ್ನು ಈ ತಾಣದಲ್ಲಿ ನೀಡಲಾಗಿದೆ.

  ಆದ್ದರಿಂದ ಯಾವುದೇ ಸಲಹೆ ನೀಡಲು ಬಯಸುವುದಿಲ್ಲ. ಈ ಲೇಖನದಲ್ಲಿ ಮದುವೆಯ ನಿಜವಾದ ಅರ್ಥವನ್ನು ಕಳೆದುಕೊಳ್ಳದೆ ದಾಂಪತ್ಯದಲ್ಲಿ ಬಾಂಧವ್ಯವನ್ನು ಹೆಚ್ಚಿಸುವ ಸಂಗತಿಗಳನ್ನು ನಿಮಗಾಗಿ ನೀಡಲಾಗಿದೆ... 

  ಪ್ರೇಮದ ದಾಹ ಎಂದೂ ತೀರದಿರಲಿ

  ಪ್ರೇಮದ ದಾಹ ಎಂದೂ ತೀರದಿರಲಿ

  ಮದುವೆ ಆದ ಕೆಲವು ವರ್ಷಗಳಾದ ನಂತರ ಎರಡು ಮಕ್ಕಳಾಗಿ ಮತ್ತು ಪೋಷಕರು ನಿಮ್ಮೊಂದಿಗೆ ಜೀವನ ನಡೆಸುವ ಒಂದೇ ಕಾರಣಕ್ಕೆ ಆಗಿಂದಾಗ್ಗೆ ಕೂಡುವುದನ್ನು ತಪ್ಪಿಸದಿರಿ. ವಾರಕ್ಕೊಮ್ಮೆಯಂತೆ ಕೂಡುವ ಅಭ್ಯಾಸವನ್ನು ರೂಢಿಸಿಕೊಳ್ಳದಿರಿ. ಸಮಯಾನುಸಾರ ಹೊಸ ಹೊಸ ಉಪಾಯಗಳನ್ನು ಮತ್ತು ತಕ್ಷಣವೇ ಹೊಂದುವಂತಹ ಕೂಡುವಿಕೆಯ ವಿಧಾನಗಳನ್ನು ಅನುಸರಿಸಿ. ಉತ್ತಮ ಮದುವೆಯ ಫಲಿತಾಂಶಕ್ಕೆ ಪ್ರೇಮದ ದಾಹ ತೀರದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯೇ ಸರಿ.

  ಸಣ್ಣ ಸಣ್ಣ ವಿಷಯಕ್ಕೆಲ್ಲಾ ಜಗಳವಾಡಬೇಡಿ

  ಸಣ್ಣ ಸಣ್ಣ ವಿಷಯಕ್ಕೆಲ್ಲಾ ಜಗಳವಾಡಬೇಡಿ

  ಎಲ್ಲರಿಗು ತಿಳಿದಿರುವ ಸತ್ಯವೆಂದರೆ ಸಂಬಂಧಗಳ ಒಂದಲ್ಲ ಒಂದು ಭಿನ್ನಾಭಿಪ್ರಾಯದ ಸಲುವಾಗಿ ಮುರಿದುಬೀಳುತ್ತದೆ ಎಂಬುದು. ಇದು ಒಂದೇ ಬಾರಿ ಉದ್ಭವಿಸುವ ಭಿನ್ನಾಭಿಪ್ರಾಯದ ಸಲುವಾಗಿರಬಹುದು ಅಥವಾ ಪದೇ ಪದೇ ಉದ್ಭವಿಸುವ ಭಿನ್ನಾಭಿಪ್ರಾಯದ ಸಲುವಾಗಿರಬಹುದು. ಎಲ್ಲಾ ದಂಪತಿಗಳ ಪ್ರಕಾರ ಇದು ದಾಂಪತ್ಯದ ಅವಿಭಾಜ್ಯ ಅಂಗವಂತೆ. ಹಾಗೆಂದು ಈ ಮನಸ್ತಾಪವನ್ನು ಸಾರ್ವಜನಿಕವಾಗಿ ಜಗಳವಾಡಲು ಬಳಸಿಕೊಳ್ಳಬೇಡಿ. ಜಗಳವಾಡಲು ನೂರೊಂದು ಕಾರಣಗಳು ಇದ್ದರೆ, ಕೂಡಿ ಬಾಳಲು ಕೋಟಿ ಕಾರಣಗಳು ಇರುತ್ತವೆ ಎಂಬುದನ್ನು ಮರೆಯಬೇಡಿ. ಯಾವುದೇ ಕಾರಣಕ್ಕು ನಿಮ್ಮ ನಡುವಿನ ಅಸಮಾಧಾನವನ್ನು ಬೀದಿಗೆ ತರಬೇಡಿ, ಯಾವುದೇ ಭಿನ್ನಾಭಿಪ್ರಾಯಗಳಿದ್ದರು ಅದನ್ನು ಕುಳಿತು ಮನೆಯಲ್ಲಿ ಚರ್ಚೆ ಮಾಡಿ ಬಗೆಹರಿಸಿಕೊಳ್ಳಿ

  ಎಷ್ಟೇ ಬ್ಯೂಸಿ ಇದ್ದರೂ ಅವರಿಗೂ ಸ್ವಲ್ಪ ಸಮಯ ನೀಡಿ!

  ಎಷ್ಟೇ ಬ್ಯೂಸಿ ಇದ್ದರೂ ಅವರಿಗೂ ಸ್ವಲ್ಪ ಸಮಯ ನೀಡಿ!

  ಸಂಗಾತಿಗಳ ನಡುವಣ ಆಕರ್ಷಣೆಗೆ ರೂಪ, ಲಾವಣ್ಯ, ಬಣ್ಣ, ಹಣ, ಅಂತಸ್ತು ಮೊದಲಾದ ಹಲವು ಮಾಧ್ಯಮಗಳಿದ್ದರೂ ಅವುಗಳಿಗಿಂತ ಮಿಗಿಲಾದದ್ದು, ಅಪೂರ್ವವಾದದ್ದು ಮತ್ತು ಬೆಲೆಕಟ್ಟಲಾಗದಂತಹದ್ದು ಎಂದರೆ ಅಪ್ಪಟ ಪ್ರೀತಿಯಾಗಿದೆ. ನಿಮ್ಮ ಸಂಗಾತಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಅವರಿಗಾಗಿ ನೀವು ಏನು ಮಾಡುತ್ತೀರಿ ಎಂದು ಹೇಳಿದರೆ ಅದರಂತೆ ನಡೆದುಕೊಳ್ಳಿ. ನಿಮ್ಮ ಸಂಗಾತಿಗಾಗಿ ಸಮಯವನ್ನು ಮೀಸಲಿರಿಸಿ. ಅವರೊಂದಿಗೆ ಕಳೆಯುವ ಕಾಲವನ್ನು ನಿಗದಿಪಡಿಸಿದರೆ ಯಾವುದೇ ಕಾರಣಕ್ಕೂ ಅದನ್ನು ಕಳೆದುಕೊಳ್ಳಬೇಡಿ, ನಿಗದಿತ ಸಮಯಕ್ಕೆ ಸ್ಥಳಕ್ಕೆ ಆಗಮಿಸಿ.

  ಕಷ್ಟ ಸುಖವನ್ನು ಜೊತೆಯಾಗಿ ನಿಭಾಯಿಸಿ

  ಕಷ್ಟ ಸುಖವನ್ನು ಜೊತೆಯಾಗಿ ನಿಭಾಯಿಸಿ

  ಪ್ರತಿಯೊಬ್ಬರ ಜೀವನದಲ್ಲಿ ಕಷ್ಟಕಾಲಗಳು ಬಂದೆ ಬರುತ್ತವೆ. ಅದು ಮುಂದೆ ಕೆಲವೊಂದು ಸಂಕೀರ್ಣ ಸನ್ನಿವೇಶಗಳಿಗೆ ಎಡೆಮಾಡಿಕೊಡುವುದು ಸಹಜ. ನಿಮ್ಮ ಜೀವನದ ಕೆಲವೊಂದು ಕಾಲ ಘಟ್ಟಗಳಲ್ಲಿ ನೀವೂ ಕೆಲವೊಂದು ಒತ್ತಡಗಳು ಕಂಡು ಬರುತ್ತವೆ. ನೀವು ನಿಮ್ಮ ಸಂಗಾತಿಯ ಎಲ್ಲಾ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರ ವಿಚಾರದಲ್ಲಿ ಅಲ್ಲಿ ಏನು ನಡೆದಿದೆಯೋ ನಿಮಗೆ ಗೊತ್ತಿರಬಹುದು ಅಥವಾ ಗೊತ್ತಿಲ್ಲದೆಯು ಇರಬಹುದು. ಅದಕ್ಕಾಗಿ ನಿಮ್ಮ ಸಂಗಾತಿಯೇ ಇದಕ್ಕೆ ವಿರುದ್ಧವಾಗಿ ಹೋರಾಡಲು ಬಿಟ್ಟು ಬಿಡಿ. ಇಡೀ ಸನ್ನಿವೇಶವನ್ನು ನೀವು ವೈಯುಕ್ತಿಕವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಡಿ. ಆದರೆ ನೈತಿಕ ಬೆಂಬಲವೊ ಅಥವಾ ಸಲಹೆ ಸೂಚನೆಗಳು ಬೇಕಾಗಿದ್ದಲ್ಲಿ, ಧನಾತ್ಮಕ ನೆಲೆಗಟ್ಟಿನಲ್ಲಿ ಅಗತ್ಯವಾಗಿ ಒದಗಿಸಿ.

  ಪ್ರಾಮಾಣಿಕತೆ

  ಪ್ರಾಮಾಣಿಕತೆ

  ಪ್ರಾಮಾಣಿಕತೆಯೂ ಗಂಡ ಹೆಂಡತಿಯರ ಸಂಸಾರದ ದೋಣಿ ಸಾಗಲು ಮುಖ್ಯ. ಹಿಂದೆ ನಡೆದ ಘಟನೆಗಳು ಸಂಗಾತಿಯ ಗಮನಕ್ಕೆ ತರದೇ ಅದು ಬೇರೆ ಯಾರದ್ದೋ ಮೂಲಕ ಅವರಿಗೆ ತಿಳಿದರೆ ಜೀವನ ನರಕವೇ ಸರಿ. ಮುಚ್ಚುಮರೆ ಎನ್ನುವುದು ಗಂಡ ಹೆಂಡತಿಯರ ನಡುವೆ ಯಾವುದೇ ಕಾರಣಕ್ಕೂ ಉಳಿದುಕೊಳ್ಳಬಾರದು. ಇದರಿಂದ ಸಂಸಾರದಲ್ಲಿ ಕಲಹಗಳು ಉಂಟಾಗುವ ಎಲ್ಲಾ ಸಾಧ್ಯತೆಗಳೂ ಇರುತ್ತವೆ. ಆದ್ದರಿಂದ 'be honest' |

  ಕ್ಷಮಿಸುವುದು ಅತ್ಯಂತ ದೊಡ್ಡ ವಿಚಾರ

  ಕ್ಷಮಿಸುವುದು ಅತ್ಯಂತ ದೊಡ್ಡ ವಿಚಾರ

  ಒಬ್ಬರ ತಪ್ಪನ್ನು ಮತ್ತೊಬ್ಬರು ಕ್ಷಮಿಸುವಂತಹ ದಂಪತಿಗಳು ತುಂಬಾ ದೀರ್ಘಕಾಲ ಜೊತೆಯಾಗಿರುತ್ತಾರೆ. ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬನು ಪರಿಪೂರ್ಣನಲ್ಲ ಎಂಬುದನ್ನು ಮರೆಯಬಾರದು. ದಾಂಪತ್ಯದಲ್ಲಿ ಇಬ್ಬರು ತಪ್ಪುಗಳನ್ನು ಮಾಡುತ್ತೀರಿ, ಕ್ಷಮಿಸುವ ದೊಡ್ಡತನವನ್ನು ಮಾಡಿ. ಕಳೆದು ಹೋದದ್ದು, ಕಳೆದು ಹೋಯಿತು ಎಂಬುದನ್ನು ಮೊದಲು ಅರಿಯಿರಿ. ಒಬ್ಬರನ್ನೊಬ್ಬರು ವಿಶ್ವಾಸಕ್ಕೆ ತೆಗೆದುಕೊಳ್ಳಿ, ನಿಮ್ಮ ಸಂಗಾತಿಯ ಎಲ್ಲಾ ನ್ಯೂನತೆಗಳ ಜೊತೆಗೆ ಅವರನ್ನು ಒಪ್ಪಿಕೊಳ್ಳಿ. ಒಂದು ವೇಳೆ ನೀವು ಹಿಂದಿನ ಕೆಲವು ತಪ್ಪುಗಳನ್ನು ನಿಮ್ಮ ಆಯುಧಗಳಾಗಿ ಹಿಡಿದುಕೊಂಡರೆ, ನಿಮ್ಮ ಈಗಿನ ಪ್ರೀತಿಯು ಬೆಂದು ಹೋಗುತ್ತದೆ. ಅದಕ್ಕಾಗಿ ಪ್ರೀತಿಯನ್ನು ಅನುಭವಿಸಲು ಹಳೆಯ ತಪ್ಪುಗಳನ್ನು ಕ್ಷಮಿಸಿಬಿಡಿ. ಕ್ಷಮಿಸುವುದಕ್ಕಿಂತ ದೊಡ್ಡ ಶಿಕ್ಷೆಯಿಲ್ಲ.

   ಹಿಂದೆ ನಡೆದುಹೋದ ಸಂಗತಿಗಳನ್ನು ತರಬೇಡಿ

  ಹಿಂದೆ ನಡೆದುಹೋದ ಸಂಗತಿಗಳನ್ನು ತರಬೇಡಿ

  ಹಿಂದೆ ನಡೆದುಹೋದ ಸಂಗತಿಗಳನ್ನು ಮತ್ತೆ ಚರ್ಚಿಸಿದರೆ ಅನಗತ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಹಳ ದಿನಗಳ ಅಥವ ವಾರಗಳ ಅಥವ ತಿಂಗಳಗಳ ಹಿಂದೆ ಜರುಗಿದ ಕಲಹಗಳ ಬಗ್ಗೆ ಹೊಡೆದಾಡುವುದು ಖಂಡಿತವಾಗಿಯೂ ಒಂದು ಅನಗತ್ಯ ಕಲ್ಪನೆ. ಹಾಗೆ ಮಾಡಿದಾಗ ಅದು ಸಂಬಂಧಗಳನ್ನು ನಾಶಮಾಡುತ್ತದೆ ಮತ್ತು ಒಳ್ಳೆಯ ಸಂಬಂಧಗಳನ್ನು ಮುಂದುವರಿಸಲು ಅಡ್ಡಬರುತ್ತದೆ.

  ಕರುಣೆಯು ಪವಾಡಗಳನ್ನು ಮಾಡುತ್ತದೆ

  ಕರುಣೆಯು ಪವಾಡಗಳನ್ನು ಮಾಡುತ್ತದೆ

  'ಕರುಣೆಯೆ ಕುಟುಂಬದ ಕಣ್ಣು" ಎಂಬ ಸಿನಿಮಾ ಬಂದಿತ್ತು. ನಿಜ ಕರುಣೆ ಕುಟುಂಬದ ಕಣ್ಣಾಗಿದ್ದರೆ ಚೆನ್ನ. ಇತ್ತೀಚಿನ ದಿನಗಳಲ್ಲಿ ಕರುಣೆ ಎಂಬುದು ಕಣ್ಮರೆಯಾಗಿ ಬಿಟ್ಟಿದೆ. ಅದಕ್ಕೆ ಆಧುನಿಕ ಜೀವನದ ಒತ್ತಡವಿರಬಹುದು, ಅಥವಾ ವೈಯುಕ್ತಿಕ ಕಾರಣಗಳು ಇರಬಹುದು. ಕರುಣೆ ತೋರಿಸಲು ಕಾಸು ಚೆಲ್ಲಬೇಕಾಗಿಲ್ಲ. ಇದು ಉಚಿತ, ಉಚಿತ, ಈ ಮಾತು ಖಚಿತ. ಈ ಉಚಿತವಾಗಿ ದೊರೆಯುವ ಕರುಣೆಯನ್ನು ನಿಮ್ಮ ಕುಟುಂಬದ ಸದಸ್ಯರ ಮೇಲೆ ವಿಶೇಷವಾಗಿ ನಿಮ್ಮ ಸಂಗಾತಿಯ ಮೇಲೆ ತೋರಿಸಿ, ಆಗ ನೋಡಿ ನಿಮ್ಮ ಸಂಬಂಧ ಹೇಗೆ ಗಾಢವಾಗುತ್ತದೆಯೆಂದು. ಕರುಣೆಯು ಒಬ್ಬರ ಮೇಲಿನ ಕಾಳಜಿಯ ಪ್ರತೀಕ ನಿಮ್ಮ ಸಹೃದಯತೆಯು ನಿಮ್ಮ ಸಂಗಾತಿಯ ಹೃದಯವನ್ನು ಅನಾಯಾಸವಾಗಿ ಗೆಲ್ಲುತ್ತದೆ.

  English summary

  how to make strong relationship with your partner

  You may have heard enough advice and counseling on things you can do to make your marriage work. No, we are not going to give you further suggestions on it. You make a marriage work when you have problems. This post is all about how a happy couple like you can avoid losing the warmth and love in your relationship.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more