For Quick Alerts
ALLOW NOTIFICATIONS  
For Daily Alerts

  ನಿಮ್ಮ ಪ್ರೀತಿಪಾತ್ರರನ್ನು ನಂಬುವ ಮೊದಲು ಅವರು ಕಳುಹಿಸಿರುವ ಸಂದೇಶ ನೋಡಿ...

  |

  ಪ್ರೀತಿ, ಪ್ರೇಮಾ, ಪ್ರಣಯ ಎನ್ನುವುದು ವ್ಯಕ್ತಿಯ ಬದುಕಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಪ್ರೀತಿಗಾಗಿ ಎಂತಹ ಕೆಲಸ ಮಾಡಲು ಸಹ ಜನರು ಮುಂದಾಗುತ್ತಾರೆ. ಪ್ರೀತಿಗಾಗಿಯೇ ಎಷ್ಟೋ ಇತಿಹಾಸದ ಕಥೆಗಳು ನಡೆದು ಹೋಗಿರುವುದನ್ನು ಸಹ ನಾವು ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಪ್ರೀತಿಯ ವಿಚಾರವಾಗಿ ಹಲವರು ಮೋಸ ಹಾಗೂ ಅಪರಾಧ ಕೃತ್ಯ ಎಸಗುವುದು ಸಹ ಹೆಚ್ಚಾಗುತ್ತಿವೆ. ಅದೇನೇ ಇರಲಿ ವಿರುದ್ಧ ಲಿಂಗದವರು ಪರಸ್ಪರ ಆಕರ್ಷಣೆಗೆ ಒಳಗಾಗುವುದು, ಕಣ್ಣಿನ ಸನ್ನೆಯಲ್ಲಿ ಸ್ನೇಹ ಬೆಳೆಸುತ್ತಾ, ವಿವಾಹದ ಬಂಧನದಲ್ಲಿ ತೊಡಗಿಸಿಕೊಳ್ಳುವುದು ಇಂದಿನ ಯುವ ಜನತೆಯಲ್ಲಿ ಹೆಚ್ಚಿದೆ ಎಂದು ಹೇಳಬಹುದು.

  ಒಬ್ಬ ವ್ಯಕ್ತಿಯ ಗುಣಗಳು ಹಾಗೂ ವರ್ತನೆಗಳು ನಮ್ಮ ಮನಸ್ಸಿಗೆ ಇಷ್ಟವಾಗಬೇಕು ಎಂದರೆ ಅದೇನೂ ಸಾಮಾನ್ಯದ ಸಂಗತಿಯಲ್ಲ. ನಮ್ಮ ಬಯಕೆಗಳು ಹಾಗೂ ಆಸೆಗಳು ಆ ವ್ಯಕ್ತಿಯಿಂದ ಈಡೇರುತ್ತದೆ ಅಥವಾ ಆ ವ್ಯಕ್ತಿಯೇ ನಮ್ಮ ಜೀವನದ ಪಾಲುದಾರನಾಗಲು ಸೂಕ್ತವಾದ ವ್ಯಕ್ತಿ ಎನಿಸಿದಾಗ ಮನಸ್ಸು ಒಪ್ಪಿಗೆಯ ಸಹಿ ಹಾಕುವುದು. ಆಗಲೇ ಪ್ರೀತಿ ಹುಟ್ಟುವುದು. ನಾವು ಪ್ರೀತಿಸಿದ ವ್ಯಕ್ತಿ ನಮ್ಮನ್ನು ಇಷ್ಟಪಡುತ್ತಾನೆಯೇ? ನಮ್ಮ ಇಷ್ಟಕ್ಕೆ ಅವರು ಒಪ್ಪಿಗೆಯನ್ನು ಸೂಚಿಸುತ್ತಾರೆಯೇ? ಎನ್ನುವುದು ಬಹಳ ಮುಖ್ಯ. ಅಲ್ಲದೆ ಈ ಪ್ರಶ್ನೆಗಳು ಅನೇಕ ಬಾರಿ ಗೊಂದಲವನ್ನುಂಟುಮಾಡುವುದು ಇದೆ.

  Guy Texts

  ವಿದ್ಯಾಭ್ಯಾಸ ಮಾಡುವಾಗ ಅಥವಾ ವೃತ್ತಿ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿ ನಮ್ಮನ್ನು ವಿಶೇಷವಾಗಿ ಗಮನಿಸುತ್ತಾನೆ ಅಥವಾ ವಿಶೇಷವಾದ ಕಾಳಜಿ ತೋರುತ್ತಾನೆ ಎಂದರೆ ಅವರಿಗೆ ನಮ್ಮ ಮೇಲೆ ಮನಸ್ಸಿದೆ ಅಥವಾ ನಮಗೆ ಅವರ ಜೀವನದಲ್ಲಿ ವಿಶೇಷ ಸ್ಥಾನ ನೀಡಲು ಬಯಸುತ್ತಾರೆ ಎನ್ನುವುದನ್ನು ಸೂಚಿಸುತ್ತದೆ. ಒಬ್ಬ ವ್ಯಕ್ತಿ ನಮ್ಮನ್ನು ಇಷ್ಟಪಟ್ಟಾಗ ಯಾವೆಲ್ಲಾ ಬಗೆಯ ಪ್ರೀತಿ ಸ್ನೇಹವನ್ನು ತೋರುತ್ತಾನೆ? ಯಾವ ಬಗೆಯಲ್ಲಿ ಸಂದೇಶ ರವಾನಿಸುತ್ತಾನೆ ಎನ್ನುವುದನ್ನು ತಿಳಿಯಲು ನೀವು ಬಯಸುತ್ತೀರಾ ಎಂದಾದರೆ ಮುಂದಿರುವ ವಿವರಣೆಯನ್ನು ಅರಿಯಿರಿ...

  ಒಂದು ಸಾಮಾಜಿಕ ವಲಯದಲ್ಲಿ ಪರಿಚಯವಾದ ವ್ಯಕ್ತಿ ಇದ್ದಕ್ಕಿದ್ದಂತೆ ಆಸಕ್ತಿ ತೋರುತ್ತಾನೆ/ತೋರುತ್ತಾಳೆ ಎಂದಾದರೆ ಈಗಾಗಲೇ ಅವರ ಮನಸ್ಸಿನಲ್ಲಿ ನೆಲೆಯೂರಿದ್ದೇವೆ ಎಂದು ತಿಳಿದುಕೊಳ್ಳಬಹುದು. ಸಾಂದರ್ಭಿಕ ಸಭೆಯ ನಂತರ ಅವರು ಅಂತಿಮವಾಗಿ ಪ್ರೀತಿಯ ವಿಚಾರವಾಗಿ ಪೀಠಿಕೆ ಇಡಬಹುದು ಅಥವಾ ಅಭಿಪ್ರಾಯ ಮುಂದಿಡಬಹುದು. ಎಲ್ಲಾ ವಿಚಾರದಲ್ಲೂ ಸೈ ಎನಿಸಿದೆ ಅಥವಾ ನಿಮ್ಮ ಮನಸ್ಸೂ ಅವರನ್ನು ಒಪ್ಪಿಕೊಂಡಿದೆ ಎಂದಾದರೆ ಪ್ರೇಮ ಸಂಭಾಷಣೆಗಳು ಆರಂಭವಾಗುವುದು.

  Guy Texts

  ಅತಿಯಾದ ಸಲುಗೆ ಹಾಗೂ ಪ್ರೀತಿಯ ಗುಂಗಿನಲ್ಲಿ ಮಹಿಳೆಯರು ಮೈ ಮರೆಯಬಾರದು. ಏಕೆಂದರೆ ಮಹಿಳೆಯರಿಗೆ ಶೀಲ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಮಹಿಳೆಯರ ಜೀವನ ಒಂದು ಸೀರೆ ಇದ್ದಂತೆ ಸೀರೆ ಮುಳ್ಳಿನ ಮೇಲೆ ಬಿದ್ದರೆ ಅಥವಾ ಮಳ್ಳೇ ಸೀರೆಯ ಮೇಲೆ ಬಿದ್ದರೆ ಹರಿಯುವುದು ಸೀರೆಯೇ ಹೊರತು ಮುಳ್ಳಲ್ಲಾ. ಹಾಗಾಗಿ ಯಾರೋ ಒಬ್ಬ ನಿಮ್ಮನ್ನು ಇಷ್ಟ ಪಡುತ್ತಾನೆ ಅಥವಾ ಪ್ರೀತಿಸುತ್ತಾನೆ ಎಂದ ಮಾತ್ರಕ್ಕೆ ಅದು ನಿಜವಾಗುವ ಸಾಧ್ಯತೆಗಳು ಕಡಿಮೆ ಇರಬಹುದು. ಹಾಗಾಗಿ ವ್ಯಕ್ತಿ ಕೇವಲ ಸಮಯ ಕಳೆಯುವ ಉದ್ದೇಶಕ್ಕಾಗಿ ನಿಮ್ಮನ್ನು ಪ್ರೇರೇಪಿಸುತ್ತಿದ್ದಾನೆಯೇ ಅಥವಾ ಆತನ ಜೀವನದ ಒಂದು ಭಾಗವಾಗಿ ನಿಮ್ಮನ್ನು ಪಡೆದುಕೊಳ್ಳಲು ಒಪ್ಪಿಕೊಂಡಿದ್ದಾನೆಯೇ? ಎನ್ನುವುದನ್ನು ಮಹಿಳೆಯರು ಮೊದಲು ಅರಿತುಕೊಳ್ಳಬೇಕು. ಇಲ್ಲವಾದರೆ ಜೀವನದಲ್ಲಿ ಮೋಸ ಹೋಗುವ ಸಾಧ್ಯತೆಗಳು ಇರುತ್ತವೆ.

  ವ್ಯಕ್ತಿ ಯಾವ ಉದ್ದೇಶಕ್ಕಾಗಿ ನಿಮ್ಮನ್ನು ಒಪ್ಪಿಕೊಂಡಿದ್ದಾನೆ ಎನ್ನುವುದನ್ನು ಆತ ಬರೆಯುವ ಮೆಸೇಜ್ ಅಥವಾ ಸಂದೇಶದ ಆಧಾರದ ಮೇಲೆ ನೀವು ಅವರ ಮನಸ್ಸಿನ ಭಾವನೆಯನ್ನು ತಿಳಿಯಬಹುದು. ಆಗ ನಿಮಗೂ ನಿಮ್ಮ ಸಂಬಂಧ ಹಾಗೂ ಪ್ರೀತಿಯ ಬಗ್ಗೆ ಒಂದಷ್ಟು ಸ್ಪಷ್ಟತೆ ದೊರೆಯುವುದು. ಹೌದು, ಸಂಬಂಧ ಬೆಳೆಸಲು ಬಯಸಿದ ವ್ಯಕ್ತಿಗಳು ತಮ್ಮ ಪ್ರೀತಿ ಪಾತ್ರರಿಗಾಗಿ ಅನೇಕ ಸಂದೇಹಗಳನ್ನು ಕಳುಹಿಸುತ್ತಾರೆ. ಆ ಸಂದೇಹದಲ್ಲಿ ಬಳಸಿದ ಪದಗಳು ಹಾಗೂ ಭಾವನೆಗಳ ಆಧಾರದ ಮೇಲೆಯೇ ಅವರ ಆಂತರ್ಯದ ವಿಚಾರವನ್ನು ಅರಿಯಬಹುದು.

  Guy Texts

  ನಿಮ್ಮ ವ್ಯಕ್ತಿ ನಿಮ್ಮನ್ನು ಇಷ್ಟಪಟ್ಟಿರುವಾಗ ಈ ರೀತಿಯ ಸಂದೇಶಗಳು ಇರುವುದು:

  1. ಅವರು ನಿಮಗೆ ನಿತ್ಯವೂ ಉತ್ತಮ ಸಂದೇಶದೊಂದಿಗೆ ಶುಭೋದಯ ಹಾಗೂ ಶುಭರಾತ್ರಿಯ ಶುಭಾಷಯ ಕೋರುವುದನ್ನು ಮರೆಯುವುದಿಲ್ಲ.

  2. ನಿಮ್ಮ ಇನ್ ಬಾಕ್ಸ್ ಗಳಲ್ಲಿ "ಐ ಮಿಸ್ ಯೂ", ನಿನ್ನನ್ನು ನೋಡಲು ನಿರೀಕ್ಷಿಸುತ್ತಿದ್ದೇನೆ", "ನಿನ್ನ ಬಗ್ಗೆಯೇ ಚಿಂತಿಸುತ್ತಿದ್ದೇನೆ" ಎನ್ನುವಂತಹ ಸಂದೇಶಗಳು ದಿನದಲ್ಲಿ ಹಲವುಬಾರಿ ಮರುಕಳಿಸುತ್ತಲೇ ಇರುತ್ತವೆ.

  3. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ತೋರುವುದು ಹಾಗೂ ಸೂಕ್ತ ಸಮಯಕ್ಕೆ ಊಟ-ತಿಂಡಿ ಮಾಡುತ್ತಿದ್ದೀರಾ? ಎನ್ನುವುದನ್ನು ತಿಳಿದುಕೊಳ್ಳುವ ಸಂದೇಶ ಕಳುಹಿಸುತ್ತಿರುತ್ತಾರೆ.

  Guy Texts

  4. ಅವರು ಎಂತಹದ್ದೇ ಸನ್ನಿವೇಶದಲ್ಲಿ ಅಥವಾ ಕೆಲಸದಲ್ಲಿ ಇದ್ದರೂ ನಿಮ್ಮ ಸಂದೇಶಗಳಿಗೆ ಸದಾ ಪ್ರತ್ಯುತ್ತರ ನೀಡುತ್ತಾರೆ.

  5. ಅವರು ಸದಾ ನಿಮಗೆ ಪ್ರೋತ್ಸಾಹ ನೀಡುವ ಸಂದೇಶಗಳಿಂದ ನಿಮ್ಮನ್ನು ಹುರಿದುಂಬಿಸುತ್ತಾರೆ. ಒಬ್ಬ ವ್ಯಕ್ತಿ ನಿಮ್ಮನ್ನು ಬಯಸುತ್ತಿದ್ದಂತೆ ಹೇಳಿ, ನಿಮ್ಮನ್ನು ಮೋಸಗೊಳಿಸುವ ಹವಣಿಕೆಯಲ್ಲಿದ್ದರೆ ಅವರ ಸಂದೇಶ ಹೀಗೆ ಇರುವುದು:

  1. ಅವರ ಚಾಟ್ ಗಳು"ಹಾಯ್ ಸೆಕ್ಸಿ" ಎನ್ನುವ ಶಬ್ದಗಳಿಂದಲೇ ಪ್ರಾರಂಭವಾಗುತ್ತದೆ. ಅವರು ರಾತ್ರಿಯ ತನಕವೂ ನಿಮ್ಮೊಂದಿಗೆ ಚಾಟ್ ಮುಂದುವರಿಸಲು ಸಿದ್ಧರಿರುತ್ತಾರೆ.

  Guy Texts

  2. ಇವರು ಪ್ರಣಯಕ್ಕೆ ಸಂಬಂಧಿಸಿದ ವಿಚಾರವನ್ನೇ ಹೆಚ್ಚು ಮಾತನಾಡುವುದು ಹಾಗೂ ಅದಕ್ಕಾಗಿ ಹೆಚ್ಚು ಪ್ರೋತ್ಸಾಹ ನೀಡುತ್ತಾರೆ.

  3. ಅವರು ನೀವು ಸ್ನಾನ ಮಾಡುವ ಫೋಟೋ ಹಾಗೂ ಬಟ್ಟೆ ಬದಲಿಸುವ ಪೋಟೋಗಳನ್ನು ಕಳುಹಿಸಿಕೊಡಲು ಕೋರುತ್ತಾರೆ.

  4. ಅವರ ಸಂದೇಶದಲ್ಲಿ "ನನಗೆ ನೀನು ಬೇಕು," "ಈಗಲೇ ನಿನ್ನನ್ನು ಹೊಂದಬೇಕು" ಎನ್ನುವಂತಹ ಸಲುಗೆಯ ಸಂದೇಹವನ್ನು ರವಾನಿಸುತ್ತಾರೆ.

  5. ಅವರು ನಿಮಗೆ ದಿನದ ಎಲ್ಲಾ ಸಮಯದಲ್ಲೂ ರೀಚೇಬಲ್ ಆಗಿರುವುದಿಲ್ಲ. ಬದಲಿಗೆ ತಡರಾತ್ರಿಯಲ್ಲಿ ನಿಮಗೆ ಪ್ರತ್ಯುತ್ತರ ನೀಡುತ್ತಾರೆ.

  English summary

  How A Guy Texts When He Wants You

  For all the ladies out there, when you enter into a new relationship, it is always good to look for signs which suggest that your partner is just interested in you physically. Read on!
  Story first published: Tuesday, February 27, 2018, 8:33 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more