For Quick Alerts
ALLOW NOTIFICATIONS  
For Daily Alerts

ನಿಮ್ಮಲ್ಲೇ ಇದೆ ದಾಂಪತ್ಯದಲ್ಲಿನ ಸಾಮರಸ್ಯದ ಗುಟ್ಟು

By Cm Prasad
|

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ತಮ್ಮ ದಾಂಪತ್ಯದಲ್ಲಿ ಸಾಮರಸ್ಯ ಮೂಡುವುದಕ್ಕಿಂದ ಬಿರುಕು ಮೂಡಿ ವಿಚ್ಛೇದನ ಪ್ರಕರಣಗಳು ದಿನಕಳೆದಂತೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಸಣ್ಣ ಪುಟ್ಟ ಮನಸ್ತಾಪಗಳೂ ಸಹ ವಿಚ್ಛೇದನಕ್ಕೆ ದಾರಿಮಾಡಿಕೊಡುತ್ತಿವೆ. ಇದಕ್ಕೆ ಕಾರಣ ದಾಂಪತ್ಯದಲ್ಲಿ ನೀವು ಇರಿಸಬೇಕಾದ ಕೆಲವು ಅವಶ್ಯಕ ಜವಾಬ್ದಾರಿಗಳ ಮೂಲ ಕೊರತೆ, ಸಹಬಾಳ್ವೆಯ ಬಗ್ಗೆ ಮತ್ತು ದಂಪತಿಗಳಲ್ಲಿ ಇರಬೇಕಿರುವ ಸಾಂಗತ್ಯದ ಸಾರದ ಬಗ್ಗೆ ಈಗಾಗಲೇ ಹಲವಾರು ಸಂಗತಿಗಳನ್ನು ಈ ತಾಣದಲ್ಲಿ ನೀಡಲಾಗಿದೆ. ಆದ್ದರಿಂದ ಯಾವುದೇ ಸಲಹೆ ನೀಡಲು ಬಯಸುವುದಿಲ್ಲ. ಈ ಲೇಖನದಲ್ಲಿ ಮದುವೆಯ ನಿಜವಾದ ಅರ್ಥವನ್ನು ಕಳೆದುಕೊಳ್ಳದೆ ದಾಂಪತ್ಯದಲ್ಲಿ ಬಾಂಧವ್ಯವನ್ನು ಹೆಚ್ಚಿಸುವ ಸಂಗತಿಗಳನ್ನು ನಿಮಗಾಗಿ ನೀಡಲಾಗಿದೆ.

ಒಬ್ಬರಿಗೊಬ್ಬರು ಗಮನಕೊಡಿ

Top habits of successful couples
ಯಾವುದನ್ನು ಸಲಿಗೆಯಿಂದ ತೆಗೆದುಕೊಳ್ಳಬೇಡಿ. ಕಾಲಾನಂತರ ನಿಮ್ಮಿಬ್ಬರು ಒಬ್ಬರಿಗೊಬ್ಬರು ಆರಾಮವಾಗಿ ಈ ರೀತಿ ಹೇಳಬಹುದು " ಅವನು/ಅವಳಿಗೆ ಅರ್ಥವಾಗುತ್ತದೆ. ಏಕೆಂದರೆ ಅವರಿಗೆ ನಾನು ಏನೆಂಬುದು ಚೆನ್ನಾಗಿ ಗೊತ್ತು". ಈ ರೀತಿಯ ಪೂರ್ವನಿರ್ಧರಿತ ಅಂಶಗಳನ್ನು ಇಟ್ಟುಕೊಳ್ಳಬೇಡಿ. ಏಕೆಂದರೆ ನಿಮ್ಮ ಸಂಗಾತಿಯು ಸದಾ ಕಾಲ ನಿಮ್ಮ ಆರೈಕೆ, ಕೆಲಸಕ್ಕೆ ತೆರಳುವ ಮುನ್ನ ಒಂದು ಚುಂಬನ, ರಾತ್ರಿ ಮಲಗುವ ಮುನ್ನ ಆನಂದದ ಚುಂಬನ, ಹೀಗೆ ಅನೇಕ ರೀತಿಯ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಿದ್ದು, ಇದು ನಿಜಕ್ಕೂ ನಿಮ್ಮ ಬಾಂದವ್ಯವನ್ನು ಕಡೆಯವರೆಗೂ ಕಾಪಾಡುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ.

ನಿಮ್ಮ ಸಹಧರ್ಮಿಣಿಯೇ ಮೊದಲು ಬರುವುದು

ಹೌದು ನಿಮ್ಮ ಮಕ್ಕಳೂ ಸಹ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಬಹುದು. ನಿಮ್ಮ ಮದುವೆ ನಿಮಗೆ ಹಲವಾರು ರೀತಿಯಲ್ಲಿ ನೋವನ್ನು ಉಂಟು ಮಾಡಬಹುದು. ಈ ಕಹಿ ಸತ್ಯವನ್ನು ನೀವು ನಂಬಲೇಬೇಕು. ನೆನಪಿಡಿ, ನಿಮ್ಮ ಪೋಷಕರು, ಸ್ನೇಹಿತರು ಮತ್ತು ನಿಮ್ಮ ಮಕ್ಕಳು ನಿಮ್ಮಿಂದ ಕಣ್ಮರೆಯಾದ ಮೇಲೆ ನಿಮಗೆ ಕೊನೆಯಲ್ಲಿ ಉಳಿಯುವುದು ನಿಮ್ಮ ಸಂಗಾತಿಯೊಬ್ಬಳೇ. ಆದ್ದರಿಂದ ಕೊನೆಯವರೆವಿಗೂ ಈ ಬಾಂಧವ್ಯ ಆನಂದದಿಂದಿರುವಂತೆ ಸದಾ ಕಾಲ ನೀವು ನೋಡಿಕೊಳ್ಳಬೇಕು. ದಂಪತಿಗಳ ಸುಖ ಸಂಸಾರಕ್ಕೆ ಇಲ್ಲಿದೆ ಸುಲಭ ಸಲಹೆಗಳು!

ಪ್ರೀತಿ ನೀಡಿ

ಮದುವೆ ಆದ ಕೆಲವು ವರ್ಷಗಳಾದ ನಂತರ ಎರಡು ಮಕ್ಕಳಾಗಿ ಮತ್ತು ಪೋಷಕರು ನಿಮ್ಮೊಂದಿಗೆ ಜೀವನ ನಡೆಸುವ ಒಂದೇ ಕಾರಣಕ್ಕೆ ಆಗಿಂದಾಗ್ಗೆ ಕೂಡುವುದನ್ನು ತಪ್ಪಿಸದಿರಿ. ವಾರಕ್ಕೊಮ್ಮೆಯಂತೆ ಕೂಡುವ ಅಭ್ಯಾಸವನ್ನು ರೂಢಿಸಿಕೊಳ್ಳದಿರಿ. ಸಮಯಾನುಸಾರ ಹೊಸ ಹೊಸ ಉಪಾಯಗಳನ್ನು ಮತ್ತು ತಕ್ಷಣವೇ ಹೊಂದುವಂತಹ ಕೂಡುವಿಕೆಯ ವಿಧಾನಗಳನ್ನು ಅನುಸರಿಸಿ. ಉತ್ತಮ ಮದುವೆಯ ಫಲಿತಾಂಶಕ್ಕೆ ಪ್ರೇಮದ ದಾಹ ತೀರದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯೇ ಸರಿ.

ಒಬ್ಬರಿಗೊಬ್ಬರು ಸಮ ಎಂಬುದನ್ನು ಪ್ರಯತ್ನಿಸದಿರಿ

ಮದುವೆಯ ವಿಚಾರಕ್ಕೆ ಬಂದರೆ ಯಾವುದೇ ಕಾರಣಕ್ಕೆ ಗಂಡು ಅಥವಾ ಹೆಣ್ಣು ಮೇಲುಗೈಯೆಂದು ವಾದಿಸಬೇಡಿ. ಇದರ ಅರ್ಥವೇನೆಂದರೆ ನೀವು ಕಸ ಒರೆಸುವ ವಸ್ತ್ರಕ್ಕೆ ಹೋಲಿಸಿದ ಪತ್ನಿಯೆಂದು ಅಲ್ಲ. ಸ್ವತಂತ್ರವಾಗಿರಿ ಆದರೆ ಅತ್ಯಂತ ಸ್ತ್ರೀವಾದಿಗಳಾಗಬೇಡಿ. ಒಂದೊಮ್ಮೆ ನೀವು ಮೂರು ದಿನಗಳ ಕಾಲ ನಿಮ್ಮ ಮಕ್ಕಳ ಮನೆಪಾಠವನ್ನು ಕಲಿಯಲು ಸಹಾಯ ಮಾಡಿ ಇನ್ನುಳಿದ ದಿನಗಳು ನಿಮ್ಮ ಅಡುಗೆ ತಯಾರಿ ಕಾರ್ಯದಿಂದ ದೂರ ಉಳಿಯಬೇಡಿ. ಏಕೆಂದರೆ ನೀವಿಬ್ಬರೂ ಸಮ ಎನ್ನುವ ಬದಲು ನೀವು ಒಟ್ಟಾಗಿರುವುದು ಬಹಳ ಮುಖ್ಯವಾದ ವಿಷಯ.

English summary

Top habits of successful couples

You may have heard enough advice and counseling on things you can do to make your marriage work. No, we are not going to give you further suggestions on it. You make a marriage work when you have problems. This post is all about how a happy couple like you can avoid losing the warmth and love in your relationship.
X
Desktop Bottom Promotion