For Quick Alerts
ALLOW NOTIFICATIONS  
For Daily Alerts

ಅರೇಂಜ್‌ ಮ್ಯಾರೇಜ್‌ಯಾಗುವ ಹುಡುಗಿಯರಲ್ಲಿ ಕಾಣ ಸಿಗುವ ಗುಣಗಳಿವು

|

ಲವ್‌ ಮ್ಯಾರೇಜ್‌ ಆಗುವುದಾದರೆ ನಮ್ಮ ಹುಡುಗಿಯ ಸ್ವಭಾವವೇನು ಎಂಬುವುದರ ಬಗ್ಗೆ ಒಂದು ಐಡಿಯಾ ಹುಡುಗನಲ್ಲಿ ಇರುತ್ತದೆ. ಆದರೆ ಕೆಲ ಹುಡಗಿಯರು ಲವ್‌ ಮಾಡುವಾಗ ಒಂದು ಸ್ವಭಾವ ಮದುವೆಯಾದ ಮೇಲೆ ಮತ್ತೊಂದು ಸ್ವಭಾವ ತೋರಿಸುತ್ತಾರೆ, ಆ ರೀತಿ ಕೆಲವರಷ್ಟೇ ಇರುತ್ತಾರೆ. ಇನ್ನು ಅರೇಂಜ್ ಮ್ಯಾರೇಜ್‌ ಆಗುವುದಾದರೆ ಅವಳ ಸ್ವಭಾವವೇನು? ಎಂಬುವುದರ ಬಗ್ಗೆ ಯಾವುದೇ ಐಡಿಯಾ ಇರುವುದಿಲ್ಲ.

Types Of Girls Arranged Marriage

ಒಬ್ಬರಂತೆ ಮತ್ತೊಬ್ಬರು ಇರಲ್ಲ, ಆ ರೀತಿ ಹೋಲಿಕೆ ಮಾಡುವುದು ಕೂಡ ಸರಿಯಲ್ಲ, ಒಬ್ಬೊಬ್ಬರಲ್ಲಿ ಒಂದೊಂದು ಗುಣವಿರುತ್ತದೆ. ಇನ್‌ ಜನರಲ್‌ ಆಗಿ ನೋಡುವುದಾದರೆ ಅರೇಂಜ್‌ ಮ್ಯಾರೇಜ್‌ ಆಗುತ್ತಿರುವ ಹುಡುಗಿಯರು ನಾವಿಲ್ಲಿ ಹೇಳಿರುವ ಸ್ವಭಾವದಲ್ಲಿ ಒಂದು ಸ್ವಭಾವವನ್ನು ಖಂಡಿತ ಹೋಲುತ್ತಾರೆ, ಆ ಸ್ವಭಾವಗಳೇನು ಎಂದು ತಿಳಿಯುವ ಕುತೂಹಲವೇ ಹಾಗಾದರೆ ಮುಂದೆ ಓದಿ:

 ನಾನು ಮ್ಯಾರೇಜ್‌ ಮೆಟೀರಿಯಲ್ ಅಲ್ಲ

ನಾನು ಮ್ಯಾರೇಜ್‌ ಮೆಟೀರಿಯಲ್ ಅಲ್ಲ

ಅವಳು ಸ್ವಾತಂತ್ರವಾಗಿ ಇರಲು ಬಯಸುತ್ತಾಳೆ. ಆದರೆ ಮನೆಯವರು ಒತ್ತಾಯ ಮಾಡಿದಾಗ ಸಾಕಾಗಿ ನಿಮ್ಮನ್ನು ನೋಡಲು ಒಕೆ ಅಂದಿರುತ್ತಾಳೆ, ಅದು ಅವಳು ವರ್ತಿಸುವ ರೀತಿಯಿಂದಲೇ ತಿಳಿಯಬಹುದು. ನೀವು ಅವಳನ್ನು ಭೇಟಿ ಮಾಡಲು ಹೋದಾಗ ಯಾವುದೇ ಆಸಕ್ತಿ ತೋರಿಸದೇ ಇರಬಹುದು. ಮನೆಯವರ ಒತ್ತಾಯದ ಕಾರಣಕ್ಕೆ ನಿಮ್ಮನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿರುತ್ತಾಳೆ.

ಇಂಥ ಹುಡುಗಿಯರ ಬಗ್ಗೆ ತುಂಬಾನೇ ಎಚ್ಚರ ಏಕೆಂದರೆ ಕೆಲವರಿಗೆ ಪ್ರಾರಂಭದಲ್ಲಿ ಮದುವೆಯಾಗಲು ಯಾವುದೇ ಆಸಕ್ತಿ ಇರುವುದಿಲ್ಲ, ಆದರೆ ನಿಮ್ಮ ಜೊತೆ ಬೆರೆಯಲು ಪ್ರಾರಂಭಿಸಿದ ಮೇಲೆ ಆಸಕ್ತಿ ತೋರಬಹುದು, ಇಲ್ಲ ಅವಳು ನಿಮ್ಮ ಮೇಲೆ ಯಾವುದೇ ಆಸಕ್ತಿ ಹೊಂದಿಲ್ಲ ಎಂದಾದರೆ ಅಂಥ ಪ್ರಪೋಸ್ ಮುಂದೆಕ್ಕೆ ತೆಗೆದುಕೊಂಡು ಹೋಗದಿರುವುದೇ ನಿಮಗೆ ಒಳ್ಳೆಯದು.

ನನಗೆ ಎಲ್ಲವೂ ದಿ ಬೆಸ್ಟ್‌ ಬೇಕು

ನನಗೆ ಎಲ್ಲವೂ ದಿ ಬೆಸ್ಟ್‌ ಬೇಕು

ಇಂಥ ಹುಡುಗಿಯರು ಸಾಮಾನ್ಯ ಹುಡುಗನಿಗೆ ಒಕೆ ಹೇಳಲ್ಲ, ಅವರಿಗೆ ಎಲ್ಲವೂ ಬೆಸ್ಟ್‌ ಬೇಕು, ಲಕ್ಷುರಿ, ಶೋಆಫ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅವಳನ್ನು ಬೆಳೆಸಿರುವ ರೀತಿಯಿಂದ ಅವಳು ಹಾಗಾಗಿರುತ್ತಾಳೆ. ಈ ರೀತಿ ಇದ್ದವರು ನಂತರ ಬದಲಾಗಬಹುದು, ಬದಲಾಗದೇ ಹೋಗಬಹುದು.

ಮದುವೆಯಾಗುವವನು ಇವರು ಬಯಸಿದಂತೆ ಎಲ್ಲಾ ರೀತಿಯಿಂದ ಇದ್ದರೆ ಏನೂ ತೊಂದರೆಯಾಗಲ್ಲ, ಸಂಸಾರ ಚೆನ್ನಾಗಿಯೇ ಇರುತ್ತದೆ. ಅವರ ಬಯಕೆಗಳನ್ನು ಪೂರೈಸಲು ಸಾಧ್ಯವಾಗದೇ ಹೋದರೆ ಸಮಸ್ಯೆ ಶುರುವಾಗಬಹುದು. ಆದ್ದರಿಂದ ಇಂಥ ಹುಡುಗಿಯನ್ನು ಮದುವೆಯಾಗುವ ಮುನ್ನ ಇವಳನ್ನು ಖುಷಿಯಾಗಿಡಲು ನನ್ನಿಂದ ಸಾಧ್ಯ ಎಂದಾದರೆ ಮಾತ್ರ ಈ ಸಂಬಂಧದಲ್ಲಿ ಮುಂದುವರೆಯಿರಿ.

ಲಕ್ಷುರಿ ಬೇರೆ, ಅತಿಯಾಸೆ ಬೇರೆ, ಲಕ್ಷುರಿ , ಹೈಫೈ ಜೀವನ ನಿಮಗೆ ನೀಡಲು ಸಾಧ್ಯವಾದರೆ ಇಂಥವರ ಜೊತೆ ಜೀವನ ಕಷ್ಟವಾಗಲ್ಲ, ಅದೇ ಆಸೆ ಬುರುಕರು ಆದರೆ ಮಾತ್ರ ಎಷ್ಟು ಸಿಕ್ಕರು ಸಾಧ್ಯವಾಗಲಿಲ್ಲ.

 ಒಮ್ಮೆ ಮದುವೆಯಾದರೆ ಸಾಕು

ಒಮ್ಮೆ ಮದುವೆಯಾದರೆ ಸಾಕು

ಕೆಲವರು ಇರುತ್ತಾರೆ ಅವರು ಮದುವೆಯಾಗಲು ತುದಿಗಾಲಿನಲ್ಲ ನಿಂತಿರುತ್ತಾರೆ. ಡೇಟಿಂಗ್ ಆ್ಯಪ್‌, ಮ್ಯಾಟ್ರಿಮೋನಿಯಲ್ ಸೈಟ್‌, ಪೋಷಕರು ತೋರಿಸಿದ ಹುಡುಗ ಹೀಗೆ ಯಾರೇ ಆದರೂ ಒಕೆ ಒಬ್ಬ ಹುಡುಗ ಸಿಕ್ಕರೆ ಸಾಕು ಮದುವೆಯಾಗುತ್ತೇನೆ ಎಂದು ಕಾಯ್ತಾ ಇರುತ್ತಾರೆ.

ಇವರಲ್ಲಿ ಮದುವೆ ಬಗ್ಗೆ ಸಾಕಷ್ಟು ಕನಸುಗಳಿರುತ್ತದೆ. ಮದವೆಯಾದ ಮೇಲೆ ಹಾಗೇ ಇರುತ್ತೇನೆ, ಹೀಗೆ ಇರುತ್ತಾರೆ, ಗಂಡನ ಹೇಗೆ ನೋಡಿಕೊಳ್ಳಬೇಕು, ಅತ್ತೆ- ಮಾವನ ಜೊತೆ ತುಂಬಾ ಚೆನ್ನಾಗಿರಬೇಕು ಹೀಗೆ ಮದುವೆ ಬಗ್ಗೆ ಒಂದು ರಾಶಿ ಕನಸು ಇರುತ್ತದೆ.... ನನಗೆ ಒಂದು ಸಂಬಂಧ ಕೂಡ ಬರಲಿಯಪ್ಪಾ ಎಂದು ತುಂಬಾನೇ ಬಯಸುತ್ತಿರುತ್ತಾರೆ.

ಈ ರೀತಿ ಅರ್ಜೆಂಟ್‌ನಿಂದಾಗಿ ಹುಡುಗನ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಗುಂಡಿಗೆ ಬೀಳುವ ಸಾಧ್ಯತೆ ಇದೆ.

 ನನ್ನ ಕನಸು ಯಾವುದೇ ಕಾರಣಕ್ಕೆ ತ್ಯಾಗ ಮಾಡಲ್ಲ

ನನ್ನ ಕನಸು ಯಾವುದೇ ಕಾರಣಕ್ಕೆ ತ್ಯಾಗ ಮಾಡಲ್ಲ

ಇವರು ಮಹತ್ವಾಕಾಂಕ್ಷೆ ಹೊಂದಿರುವವರು ಆಗಿರುತ್ತಾರೆ. ಅವರಿಗೆ ಜೀವನದಲ್ಲಿ ಗುರಿ ಇರುತ್ತದೆ, ಗುರಿ ತಲುಪಲು ಪ್ರಯತ್ನಿಸುತ್ತಿರುತ್ತಾರೆ. ಆಗ ಮದುವೆಯಾದರೆ ಎಲ್ಲಿ ನನ್ನ ಗುರಿಗೆ ಅಡ್ಡವಾಗಬಹುದೋ ಎಂಬ ಭಯ ಅವರಲ್ಲಿ ಇರುತ್ತದೆ ಜೊತೆಗೆ ಮದುವೆನಾ ಅಥವಾ ನಿನ್ನ ಗುರಿನಾ ಎಂದು ಕೇಳಿದರೆ ಅವರು ತಮ್ಮ ಗುರಿಯನ್ನೇ ಆಯ್ಕೆ ಮಾಡುತ್ತಾರೆ.

ಇಂಥ ಹೆಣ್ಣು ಮಕ್ಕಳು ತಮ್ಮ ಕನಸುಗಳಿಗೆ ಒತ್ತಾಸೆಯಾಗಿ ನಿಲ್ಲುವವ ಸಿಕ್ಕರೆ ಖಂಡಿತ ಮದುವೆಯಾಗಲು ಒಪ್ಪಿಗೆ ಸೂಚಿಸುತ್ತಾರೆ.

 ನನಗೆ ಪರ್ಫೆಕ್ಟ್‌ ಲವ್‌ ಬೇಕು

ನನಗೆ ಪರ್ಫೆಕ್ಟ್‌ ಲವ್‌ ಬೇಕು

ಇಂಥ ಹೆಣ್ಣು ಮಕ್ಕಳು ಈ ಹಿಂದೆ ಮೋಸ ಹೋಗಿ ನೋವು ಅನುಭವಿಸಿರುತ್ತಾರೆ ಹಾಗಾಗಿ ಇನ್ನು ನಾನು ಮದುವೆಯಾಗುವುದಾದರೆ ಪರ್ಫೆಕ್ಟ್ ಪ್ರೀತಿ ನೀಡಬೇಕು, ಅವನು ನನ್ನನ್ನು ಗೌರವಿಸಬೇಕು, ನನ್ನ ಭಾವನೆಗಳನ್ನು ಗೌರವಿಸಬೇಕು ಎಂದೆಲ್ಲಾ ಬಯಸುತ್ತಾರೆ. ಅಂಥ ವ್ಯಕ್ತಿ ಸಿಗುವವರೆಗೆ ಕಾಯಲು ಸಿದ್ಧಳಿರುತ್ತಾಳೆ. ಅವಳು ಮದುವೆಯಾದ ಮೇಲೆ ತಾನು ಬಯಸಿದ ಪ್ರೀತಿ ಸಿಕ್ಕರೆ ಖುಷಿಯಾಗಿರುತ್ತಾಳೆ, ಇಲ್ಲಾಂದ್ರೆ ಖಿನ್ನತೆ ಕಾಡಬಹುದು ಅಥವಾ ಆ ಸಂಬಂಧದಿಂದ ಹೊರಬರಬಹುದು. ಏಕೆಂದರೆ ಅವಳು ನಿಮ್ಮನ್ನು ಶೇ. 100ರಷ್ಟು ನಂಬಿರುತ್ತಾಳೆ.....

English summary

Types Of Girls You'll Meet If You're Going For An Arranged Marriage in Kannada

Types Of Girls You'll Meet If You're Going For An Arranged Marriage in Kannada, read on...
Story first published: Monday, May 30, 2022, 22:29 [IST]
X
Desktop Bottom Promotion